ಹೊಸ ವೈಶಿಷ್ಟ್ಯಗಳೊಂದಿಗೆ ಬಂದಿರುವ Yamaha RayZR Street Rally 125 ಹಳೆಯ ಮಾದರಿಗಿಂತ ರೂ. 2,000 ಬೆಲೆ ಹೆಚ್ಚಾಗಿದೆ
ಯಮಹಾ ಇಂಡಿಯಾ (Yamaha India) ತನ್ನ ಜನಪ್ರಿಯ ರೇಝಡ್ಆರ್ ಸ್ಟ್ರೀಟ್ ರ್ಯಾಲಿ 125 (Yamaha RayZR Street Rally 125) ಅನ್ನುಇನ್ನಷ್ಟು ಸುಧಾರಿಸಿದೆ. ಹೊಸ ಆವೃತ್ತಿಯು ಹೊಸ ಲುಕ್ ಮತ್ತು ಹಲವಾರು ಹೊಸ ವೈಶಿಷ್ಟ್ಯಗಳೊಂದಿಗೆ ಬಂದಿದೆ. ಈ ಬೈಕ್ನ ಬೆಲೆ ರೂ 98,130 (ಎಕ್ಸ್ ಶೋ ರೂಂ) ಆಗಿದ್ದು, ಹಿಂದಿನ ಆವೃತ್ತಿಗಿಂತ ಸ್ವಲ್ಪ ರೂ. 2,000 ಬೆಲೆ ಹೆಚ್ಚಾಗಿದೆ. ಆದರೆ, ಈ ಸ್ಕೂಟರ್ಗೆ ಮೋಟಾರ್ಸೈಕಲ್ನಂತಹ ಸ್ಪೋರ್ಟಿ ನೋಟವನ್ನು ನೀಡಲಾಗಿದೆ. ಈ ಬೈಕ್ನಲ್ಲಿರುವ ಹೊಸ ಬದಲಾವಣೆಗಳು ಖಂಡಿತವಾಗಿಯೂ ಗ್ರಾಹಕರನ್ನು ಸಂತೋಷಪಡಿಸಲಿವೆ.
ರೇಝಡ್ಆರ್ ಸ್ಟ್ರೀಟ್ ರ್ಯಾಲಿ: ವೈಶಿಷ್ಟ್ಯಗಳು
ಈ ಸ್ಕೂಟರ್ನಲ್ಲಿನ ಗಮನಾರ್ಹ ಬದಲಾವಣೆಯೆಂದರೆ, ನಂಬರ್ ಪ್ಲೇಟ್ನಲ್ಲಿ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ ಅನ್ನು ಸೇರಿಸಿರುವುದು. ಇದರಿಂದ ರಸ್ತೆಯಲ್ಲಿ ಸುರಕ್ಷತೆ ಹೆಚ್ಚಾಗಿದೆ. ಇನ್ನೊಂದು ಆಕರ್ಷಕ ವೈಶಿಷ್ಟ್ಯವೆಂದರೆ ‘ಆನ್ಸರ್ ಬ್ಯಾಕ್(Answer Back)’ ಕಾರ್ಯ. ಇದು ನಿಮ್ಮ ಸ್ಕೂಟರ್ ಅನ್ನು ಸುಲಭವಾಗಿ ಕಂಡುಹಿಡಿಯಲು ಸಹಾಯ ಮಾಡುವ ‘ಫೈಂಡ್ ಮೈ ಸ್ಕೂಟರ್’ ವೈಶಿಷ್ಟ್ಯದಂತಿದೆ. ಇಂಡಿಕೇಟರ್ಗಳನ್ನು ಆನ್ ಮಾಡಿ ಬೀಪ್ ಸೌಂಡ್ ಮಾಡುವ ಮೂಲಕ, ಜನಸಂದಣಿಯಲ್ಲಿ ನಿಮ್ಮ ಸ್ಕೂಟರ್ ಅನ್ನು ಸುಲಭವಾಗಿ ಗುರುತಿಸಬಹುದು. ನಿಮ್ಮ ಸ್ಮಾರ್ಟ್ಫೋನ್ನಲ್ಲಿರುವ ವೈ-ಕನೆಕ್ಟ್ ಅಪ್ಲಿಕೇಶನ್ನ ಮೂಲಕ ಈ ವೈಶಿಷ್ಟ್ಯವನ್ನು ನೀವು ಬಳಸಬಹುದು.
ಇದನ್ನೂ ಓದಿ: ಹೊಸ ಜುಪಿಟರ್ 110 ಸ್ಕೂಟರ್ ಬಿಡುಗಡೆ, ಈ ಬೆಲೆಗೆ ಇಷ್ಟೆಲ್ಲಾ ಫೀಚರ್ಸ್?

ಇದಲ್ಲದೆ, ಯಮಹಾ ರೇಝಡ್ಆರ್ ಸ್ಟ್ರೀಟ್ ರ್ಯಾಲಿ ಬೈಕು ಈಗ ಹೊಸ ನೋಟವನ್ನು ಪಡೆದುಕೊಂಡಿದ್ದು, ವಿಶೇಷವಾಗಿ ವಿನ್ಯಾಸಗೊಳಿಸಲಾದ ಡ್ಯುಯಲ್-ಟೋನ್ ಸೀಟುಗಳನ್ನು ಹೊಂದಿದೆ. ಇನ್ನು, ರೇಝಡ್ಆರ್ 125 ಫೈ ಬೈಕು ಐಸ್ ಫ್ಲೂ-ವರ್ಮಿಲಿಯನ್ ಮತ್ತು ಮ್ಯಾಟ್ ಬ್ಲ್ಯಾಕ್ ಎಂಬ ಎರಡು ಆಕರ್ಷಕ ಬಣ್ಣಗಳ ಜೊತೆಗೆ, ಹೊಸ ಸೈಬರ್ ಗ್ರೀನ್ ಬಣ್ಣದ ಆಯ್ಕೆಯನ್ನೂ ಪರಿಚಯಿಸಿದೆ.
Yamaha RayZR Street Rally 125 ಸ್ಕೂಟರ್ನ ಅತ್ಯಂತ ಗಮನಾರ್ಹ ಲಕ್ಷಣವೆಂದರೆ ಅದರ ಸೀಟಿನ ಕೆಳಗೆ 21 ಲೀಟರ್ ಸಾಮರ್ಥ್ಯದ ಸ್ಟೋರೇಜ್,. ಇದರ ಜೊತೆಗೆ, ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಸ್ವಿಚ್, ಆಟೋಮೆಟಿಕ್ ಸ್ಟಾರ್ಟ್-ಸ್ಟಾಪ್ ವ್ಯವಸ್ಥೆ, ಬ್ರಷ್ ಗಾರ್ಡ್, ಸ್ಟೀಲ್ ಪ್ಯಾನಲ್ಗಳು ಮತ್ತು ವೈ-ಕನೆಕ್ಟ್ ಬ್ಲೂಟೂತ್ ಸಂಪರ್ಕದಂತಹ ಆಧುನಿಕ ವೈಶಿಷ್ಟ್ಯಗಳಿಂದ ಸುಸಜ್ಜಿತವಾಗಿದೆ. ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್ ಸವಾರಿ ಮಾಡುವ ಅನುಭವವನ್ನು ಇನ್ನಷ್ಟು ಆಹ್ಲಾದಕರವಾಗಿಸುತ್ತದೆ. ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಮೊನೊ-ಶಾಕ್ ಸಸ್ಪೆನ್ಷನ್ ವ್ಯವಸ್ಥೆಯು ಯಾವುದೇ ರಸ್ತೆಯಲ್ಲಿ ಸುಗಮವಾದ ಸವಾರಿಯನ್ನು ಖಚಿತಪಡಿಸುತ್ತದೆ. ಬ್ಲಾಕ್ ಮಾದರಿಯ ಟೈರ್ಗಳು ಮತ್ತು ಮುಂಭಾಗದ ಡಿಸ್ಕ್ ಬ್ರೇಕ್ನೊಂದಿಗೆ ಮತ್ತು ಡ್ರಮ್ ಬ್ರೇಕ್ನೊಂದಿಗೆ ಸುರಕ್ಷತೆಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಟಿವಿಎಸ್ ಜುಪಿಟರ್ 110 vs ಹೋಂಡಾ ಆಕ್ಟಿವಾ 6G: ಯಾವುದು ಉತ್ತಮ ಆಯ್ಕೆ?
ಯಮಹಾ ರೇಝಡ್ಆರ್ ಸ್ಟ್ರೀಟ್ ರ್ಯಾಲಿ 125: ಇಂಜಿನ್ ಪರ್ಫಾಮೆನ್ಸ್
ಯಮಹಾ ರೇಝಡ್ಆರ್ ಸ್ಕೂಟರ್ 125cc Fi ಬ್ಲೂ ಕೋರ್ ಎಂಜಿನ್ ಮತ್ತು ಹೈಬ್ರಿಡ್ ಪವರ್ ಅಸಿಸ್ಟ್ ತಂತ್ರಜ್ಞಾನದೊಂದಿಗೆ, ಬೈಕ್ನ ಪರ್ಫಾರ್ಮೆನ್ಸ್ ಮತ್ತು ಮೈಲೇಜ್ನಲ್ಲಿ ಗಮನಾರ್ಹವಾದ ಸುಧಾರಣೆಯನ್ನು ಕಾಣಬಹುದು. ಈ ಸ್ಕೂಟರ್ ಏರ್ ಕೂಲ್ಡ್ ಮತ್ತು ಫ್ಯುಯಲ್ ಇಂಜೆಕ್ಟೆಡ್, 125 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ನಲ್ಲಿ ಕಾರ್ಯನಿರ್ವಹಿಸುತ್ತದೆ, ಈ ಎಂಜಿನ್ ನಿಮಗೆ 6,500rpm ನಲ್ಲಿ 8.2hp ಮತ್ತು 5,000rpm ನಲ್ಲಿ 10.3Nm ಟಾರ್ಕ್ ಅನ್ನು ಹೈಬ್ರಿಡ್ ಪವರ್ ಸಹಾಯದಿಂದ ನೀಡುತ್ತದೆ. ಎಂಜಿನ್ನಲ್ಲಿ ಸ್ಮಾರ್ಟ್ ಮೋಟಾರ್ ಜನರೇಟರ್ ಇದೆ, ಇದು ಸಣ್ಣ ವಿದ್ಯುತ್ ಮೋಟಾರ್ ಆಗಿದ್ದು, ನೀವು ಸವಾರಿ ಮಾಡುವಾಗ ನಿಮಗೆ ತಾತ್ಕಾಲಿಕವಾಗಿ ಟಾರ್ಕ್ ಹೆಚ್ಚಿಸುತ್ತದೆ.