TVS Ronin Parakram: ಟಿವಿಎಸ್ ರೋನಿನ್ ಪರಾಕ್ರಮ್ ಬೈಕ್ ನಿಂದ ಕಾರ್ಗಿಲ್ ಯುದ್ಧ ವೀರ ಯೋಧರಿಗೆ ವಿಶಿಷ್ಟ ಗೌರವ ನಮನ

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಜನಪ್ರಿಯ ರೋನಿನ್ ಬೈಕ್‌ಗೆ ವಿಶೇಷ ಅಲಂಕಾರವನ್ನು ನೀಡಿ, ‘ಪರಾಕ್ರಮ’ ಆವೃತ್ತಿಯನ್ನು(TVS Ronin Parakram) ಬಿಡುಗಡೆ ಮಾಡಿದೆ. 1999ರ ಕಾರ್ಗಿಲ್ ಯುದ್ಧದಲ್ಲಿ ವೀರವಾಗಿ ಹೋರಾಡಿದ ಸೈನಿಕರನ್ನು ಗೌರವಿಸುವ ಉದ್ದೇಶದಿಂದ ಈ ವಿಶೇಷ ಬೈಕ್ ಅನ್ನು ರಚಿಸಲಾಗಿದೆ. ಈಸ್ಟ್ ಇಂಡಿಯಾ ಮೋಟಾರ್‌ಸೈಕಲ್ ರೆವೊಲ್ಯೂಷನ್ ಕಸ್ಟಮ್ಸ್‌ನ ಸಹಯೋಗದೊಂದಿಗೆ ನಿರ್ಮಾಣವಾಗಿರುವ ಈ ಬೈಕ್, ಮೂಲ ಬೈಕ್‌ನ ಯಾಂತ್ರಿಕ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡದೆ, ನೋಟದಲ್ಲಿ ಹಲವು ಆಕರ್ಷಕ ಬದಲಾವಣೆಗಳನ್ನು ಮಾಡಲಾಗಿದೆ.

ಟಿವಿಎಸ್ ರೋನಿನ್ ಪರಾಕ್ರಮ್ ಬೈಕ್ ವಿಶೇಷತೆಗಳು

ಟಿವಿಎಸ್ ರೋನಿನ್ ಪರಾಕ್ರಮ(TVS Ronin Parakram) ಆವೃತ್ತಿಯು ಕಾರ್ಗಿಲ್ ಯುದ್ಧದ ವೀರ ಸೈನಿಕರನ್ನು ಗೌರವಿಸುವ ಉದ್ದೇಶದಿಂದ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಬೈಕ್‌ನ ಇಂಧನ ಟ್ಯಾಂಕ್ ಆಲಿವ್ ಹಸಿರು ಬಣ್ಣದಲ್ಲಿದ್ದು, ಮೇಲ್ಭಾಗದಲ್ಲಿ ಬೆಳ್ಳಿಯ ವಿನ್ಯಾಸಗಳನ್ನು ಹೊಂದಿದೆ. ಹೆಡ್‌ಲೈಟ್‌ನಿಂದ ಇಂಧನ ಟ್ಯಾಂಕ್ ವರೆಗೆ ಭಾರತೀಯ ಧ್ವಜದ ರೇಖೆಯನ್ನು ಸೇರಿಸಲಾಗಿದೆ. ಹಿಂಭಾಗದ ಮಡ್ಡ ಗಾರ್ಡ್, ಮೊಣಕಾಲು ಭಾಗಗಳು ಮತ್ತು ಸೈಡ್ ಪ್ಯಾನಲ್ಗಳಲ್ಲಿ ಕಾರ್ಗಿಲ್ ಯುದ್ಧದ ಸೈನಿಕರನ್ನು ಚಿತ್ರಿಸುವ ಕಲಾಕೃತಿಗಳನ್ನು ಅಳವಡಿಸಲಾಗಿದೆ. ಎಡಭಾಗದ ಕವರ್‌ ಮೇಲೆ  ಹಳದಿ ಬಣ್ಣದಲ್ಲಿ ಪ್ರಕಾಶಿಸುವ ವೃತ್ತಾಕಾರದ ಒಳಗೆ 99 ಸಂಖ್ಯೆಯನ್ನು ಅಳವಡಿಸಲಾಗಿದೆ.

ಈ ಬೈಕ್ ನಲ್ಲಿ ಕಾರ್ಗಿಲ್ ಮತ್ತು ಪರಾಕ್ರಮ ಆವೃತ್ತಿಗಳು ನೋಡುವುದಕ್ಕೆ ವಿಶೇಷ ವಿನ್ಯಾಸಗಳನ್ನು ಹೊಂದಿದ್ದು. ಹೊಸದಾಗಿ ವಿನ್ಯಾಸಗೊಳಿಸಿದ ಸಬ್‌ಫ್ರೇಮ್‌ಗಳು, ಸಾಮಾನು ಸಾಗಿಸುವ ಸ್ಟೇನ್ಲೆಸ್ ಸ್ಟೀಲ್ ರಾಕ್‌ಗಳು ಮತ್ತು ಕಷ್ಟಕರ ರಸ್ತೆಗಳಿಗೆ ಆರಾಮಾಗಿ ಹೋಗಬಹುದಾದ ಗಟ್ಟಿಯಾದ ಟೈರ್‌ಗಳು ಇದರಲ್ಲಿ ಸೇರಿವೆ. ಕಾರ್ಗಿಲ್ ಆವೃತ್ತಿಯು ವಿಶೇಷ ಚಿತ್ರಗಳು, ಹಿತ್ತಾಳೆಯ ಗುಂಡಿನ ಆಕಾರದ ಟರ್ನ್ ಸಿಗ್ನಲ್‌ಗಳು ಮತ್ತು ಸೊಗಸಾದ ಬ್ರೌನ್ ಸುವೇಡ್ ಲೆದರ್ ವಿವರಗಳೊಂದಿಗೆ ಈ ಹೊಸ ವಿನ್ಯಾಸಗಳು ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸುತ್ತದೆ. ಮತ್ತೊಂದೆಡೆ, ಪರಾಕ್ರಮ ಮಾದರಿಯು ಒಬ್ಬರಿಗೆ ಸೀಮಿತವಾಗಿರುವಂತೆ ಲೆದರ್ ಸೀಟನ್ನು ಒಳಗೊಂಡಿದೆ ಮತ್ತು ಸೊಗಸಾದ ಸಿಲ್ವರ್ ಬಣ್ಣದ ವಿಂಡ್‌ಶೀಲ್ಡ್‌ನೊಂದಿಗೆ ಬರುತ್ತದೆ.

TVS Ronin Parakram ಇಂಜಿನ್

ಟಿವಿಎಸ್ ರೋನಿನ್ ಪರಾಕ್ರಮ (TVS Ronin Parakram) ನೋಟದಲ್ಲಿ ಹಲವು ಬದಲಾವಣೆಗಳಿದ್ದರೂ, ಬೈಕ್‌ನ ಯಾಂತ್ರಿಕ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ. 225.9 ಸಿಸಿ ಸಿಂಗಲ್ ಸಿಲಿಂಡರ್ ಇಂಜಿನ್ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಇಂಜಿನ್ 7,750 ಆರ್‌ಪಿಎಂನಲ್ಲಿ 20.4 ಹೆಚ್‌ಪಿ ಮತ್ತು 3,750 ಆರ್‌ಪಿಎಂನಲ್ಲಿ 19.93 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ ಬಾಕ್ಸ್ ನೊಂದಿಗೆ ಸ್ಮೂತ್ ಗೇರಿಂಗ್ ಅನ್ನು ಒದಗಿಸುತ್ತದೆ. ಸವಾರಿಯನ್ನು ಆರಾಮದಾಯಕವಾಗಿಸಲು, ಯುಎಸ್‌ಡಿ ಫೋರ್ಕ್ ಮತ್ತು ಮೋನೋ ಶಾಕ್ ಅನ್ನು ಅಳವಡಿಸಲಾಗಿದೆ. ಬ್ರೇಕಿಂಗ್‌ಗಾಗಿ ಎರಡೂ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳು ಮತ್ತು ಡ್ಯುಯಲ್-ಚಾನೆಲ್ ಎಬಿಎಸ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಈ ವಿಶೇಷ ಬೈಕ್ ಖರೀದಿಗೆ ಲಭ್ಯವಿಲ್ಲ. ಆದರೆ ಸಾಮಾನ್ಯ ರೋನಿನ್ ಬೈಕ್‌ನ ಬೆಲೆ 1.49 ಲಕ್ಷದಿಂದ 1.73 ಲಕ್ಷ ರೂಪಾಯಿವರೆಗೆ (ಎಕ್ಸ್-ಶೋರೂಮ್) ಇದೆ.

ಇದನ್ನೂ ಓದಿ: ಹೀರೋ ಎಕ್ಸ್‌ಟ್ರೀಮ್ 160R 4V ಹೊಸ ಅವತಾರದಲ್ಲಿ 1.38 ಲಕ್ಷ ರೂಪಾಯಿಗೆ ಬಿಡುಗಡೆ

Leave a Comment