ಹೊಸ ಎಕ್ಸ್ಕ್ಲೂಸಿವ್ Toyota Glanza ಫೆಸ್ಟಿವಲ್ ಲಿಮಿಟೆಡ್ ಎಡಿಷನ್ 20,567 ರೂ ಮೌಲ್ಯದ ಉಚಿತ ಆಕ್ಸೆಸರಿಗಳನ್ನು ಹೊಂದಿದೆ.
ಭಾರತದಲ್ಲಿ ಟೊಯೋಟಾ ಕಾರುಗಳ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ, ಟೊಯೋಟಾ ಗ್ಲಾಂಜಾ ಹ್ಯಾಚ್ಬ್ಯಾಕ್ ಕಾರು ಇದೀಗ ಹೊಸ ತಂತ್ರಜ್ಞಾನ ಮತ್ತು ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಯಲ್ಲಿ ಹೊಸ ಆಯಾಮವನ್ನು ಸೃಷ್ಟಿಸಿದೆ. ವಿಶೇಷವಾಗಿ ಟೊಯೊಟಾ ಭಾರತದಲ್ಲಿ ಗ್ಲಾಂಜಾ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ (Toyota Glanza Festival Limited Edition) ಅನ್ನು ಪರಿಚಯಿಸುವ ಮೂಲಕ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ.
ಈ ವಿಶೇಷ ಆವೃತ್ತಿಯು ರೂ. 20,567 ಮೌಲ್ಯದ ಟೊಯೊಟಾ ಜೆನ್ಯೂನ್ ಆಕ್ಸೆಸರಿಗಳೊಂದಿಗೆ ಬರುತ್ತದೆ. ಈ ಆಕರ್ಷಕ ಕೊಡುಗೆ ಅಲ್ಪಾವಧಿಗೆ ಮಾತ್ರ. ಹೌದು, ಅಕ್ಟೋಬರ್ 31, 2024 ರವರೆಗೆ ಗ್ಲಾಂಜಾ ಫೆಸ್ಟಿವಲ್ ಲಿಮಿಟೆಡ್ ಆವೃತ್ತಿಯನ್ನು ಖರೀದಿಸುವ ಗ್ರಾಹಕರು ಈ ವಿಶೇಷ ಪ್ಯಾಕೇಜ್ ಅನ್ನು ಉಚಿತವಾಗಿ ಪಡೆಯಬಹುದು. ಹೊಸ ಗ್ಲಾಂಜಾ ಪ್ರಿಮಿಯಂ ಕಾರನ್ನು ಕೇವಲ 11,000 ರೂಪಾಯಿಯ ಸಣ್ಣ ಮೊತ್ತದ ಬುಕಿಂಗ್ ಮೊತ್ತದೊಂದಿಗೆ ನಿಮ್ಮದಾಗಿಸಿಕೊಳ್ಳಬಹುದು. ಈ ಆಕರ್ಷಕ ಕಾರಿನನ್ನು ಆನ್ಲೈನ್ನಲ್ಲಿ ಅಥವಾ ಹತ್ತಿರದ ಡೀಲರ್ಶಿಪ್ನಲ್ಲಿ ತಕ್ಷಣವೇ ಬುಕ್ ಮಾಡಿಸಿಕೊಳ್ಳಿ.
ಇದನ್ನೂ ಓದಿ: ಟೊಯೊಟಾ ಹೈರಿಡರ್ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಬಿಡುಗಡೆ
ಟೊಯೊಟಾ ಗ್ಲಾಂಜಾ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಬಿಡುಗಡೆ
ಪ್ರೀಮಿಯಂ ಕ್ರೋಮ್ ಫಿನಿಶಿಂಗ್ ಮತ್ತು ಬ್ಲ್ಯಾಕ್ ಬಾಡಿ ಸೈಡ್ ಮೋಲ್ಡಿಂಗ್ನೊಂದಿಗೆ ಹೊಸ ಗ್ಲಾಂಜಾ ಕಾರು ಇನ್ನಷ್ಟು ಆಕರ್ಷಕವಾಗಿ ಕಾಣುತ್ತದೆ. ರೇರ್ ಬಂಪರ್, ಫೆಂಡರ್ ಮತ್ತು ರೇರ್ ರಿಫ್ಲೆಕ್ಟರ್ಗಳ ಸಂಯೋಜನೆಯು ಕಾರಿಗೆ ಆಕರ್ಷಕ ಲುಕ್ ನೀಡಿದೆ. ಬ್ಯಾಕ್ ಡೋರ್ ಗಾರ್ನಿಷ್ ಕ್ರೋಮ್ ಮತ್ತು ಒಆರ್ವಿಎಂ ಗಾರ್ನಿಷ್ ಕ್ರೋಮ್ ಸ್ಟೈಲಿಶ್ ನೋಟವನ್ನು ಹೆಚ್ಚಿಸುತ್ತದೆ, ವೆಲ್ಕಮ್ ಡೋರ್ ಲ್ಯಾಂಪ್ಗಳು ಕಾರಿಗೆ ವಿಶೇಷ ಸ್ಪರ್ಶವನ್ನು ನೀಡುತ್ತವೆ. 3ಡಿ ಫ್ಲೋರ್ ಮ್ಯಾಟ್, ಬ್ಲಾಕ್ ಅಂಡ್ ಸಿಲ್ವರ್ ನೆಕ್ ಕ್ಯೂಷನ್ಸ್ ಮತ್ತು ಪ್ರೀಮಿಯಂ ಡೋರ್ ವೈಸರ್ಗಳಂತಹ ವಿಶೇಷ ವೈಶಿಷ್ಟ್ಯಗಳೊಂದಿಗೆ ಆಂತರಿಕ ಭಾಗವು ಇನ್ನಷ್ಟು ಆರಾಮದಾಯಕವಾಗಿದೆ. ಈ ಹೊಸ ಮಾದರಿಯ ಬೆಲೆ ಕೇವಲ 6.86 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ನಿಂದ ಪ್ರಾರಂಭವಾಗುತ್ತದೆ.

ಈ ಹಬ್ಬದ ಸೀಸನ್ನಲ್ಲಿ Toyota Glanza ಫೆಸ್ಟಿವಲ್ ಎಡಿಷನ್ ಕಾರನ್ನು ಖರೀದಿಸುವ ಗ್ರಾಹಕರಿಗೆ ವಿಶೇಷ ಆಫರ್ ಇದೆ. ಅಕ್ಟೋಬರ್ 31ರವರೆಗೆ ಟಿಜಿಎ ಪ್ಯಾಕೇಜ್ ಉಚಿತವಾಗಿ ನೀಡಲಾಗುತ್ತಿದೆ. ಅಷ್ಟೇ ಅಲ್ಲ, ನಿಮ್ಮ ಕಾರಿಗೆ ಬೇಕಾದ ಎಲ್ಲಾ ಆಕ್ಸೆಸರಿಗಳನ್ನು ಟೊಯೋಟಾದ ಅನುಭವಿ ತಂತ್ರಜ್ಞರು ಸರಿಯಾಗಿ ಅಳವಡಿಸಿಕೊಡುತ್ತಾರೆ. ಈ ವಿಶೇಷ ಆವೃತ್ತಿಯ ಗ್ಲಾಂಜಾ ಕಾರು ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದಲ್ಲದೆ, ಈ ಕಾರಿಗೆ ವಿಸ್ತೃತ ವಾರಂಟಿ, ಟೊಯೋಟಾದ ಮೂಲ ಬಿಡಿಭಾಗಗಳು ಮತ್ತು ಅತ್ಯುತ್ತಮ ಗುಣಮಟ್ಟದ ಸೇವೆ ಸಿಗುತ್ತದೆ.
ಇದನ್ನೂ ಓದಿ: ಟೊಯೋಟಾ ಟೈಸರ್ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಬಿಡುಗಡೆ
ಟೊಯೋಟಾ ಗ್ಲಾಂಜಾ (Toyota Glanza) ಫೆಸ್ಟಿವಲ್ ಲಿಮಿಟೆಡ್ ಆವೃತ್ತಿಯು ತನ್ನ ಎಂಜಿನ್ ವೈಶಿಷ್ಟ್ಯಗಳಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ. ಈ ಮಾದರಿಯು 1.2 ಲೀಟರ್ ಪೆಟ್ರೋಲ್ ಎಂಜಿನ್ನೊಂದಿಗೆ ಸಜ್ಜಿತವಾಗಿದ್ದು, 88 ಬಿಹೆಚ್ಪಿ ಶಕ್ತಿ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಗ್ರಾಹಕರು ತಮ್ಮ ಆದ್ಯತೆಯಂತೆ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಅನ್ನು ಆಯ್ಕೆ ಮಾಡಬಹುದು. ಸಿಎನ್ಜಿ ಆವೃತ್ತಿಯು 76 ಬಿಹೆಚ್ಪಿ ಶಕ್ತಿ ಮತ್ತು 98.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.