ಟಾಟಾ ಮೋಟಾರ್ಸ್ ಕಂಪನಿಯು Tata Nexon iCNG ಕಾರು ಸುಧಾರಿತ ಟ್ವಿನ್-ಸಿಲಿಂಡರ್ ತಂತ್ರಜ್ಞಾನದೊಂದಿಗೆ 8 ಟ್ರಿಮ್ಗಳಲ್ಲಿ ಲಭ್ಯವಿದೆ
ಟಾಟಾ ಮೋಟಾರ್ಸ್(Tata Motors) ತನ್ನ ನೆಕ್ಸಾನ್ ಕಾರು ಶ್ರೇಣಿಯನ್ನು ವಿಸ್ತರಿಸುತ್ತಾ, ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ, ಈಗ ಮಾರುಕಟ್ಟೆಯಲ್ಲಿ ಹೊಸ ಟಾಟಾ ನೆಕ್ಸಾನ್ ಐಸಿಎನ್ಜಿ (Tata Nexon iCNG) ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇತರ ಸಿಎನ್ಜಿ ಎಸ್ಯುವಿಗಳಿಗಿಂತ ಹೆಚ್ಚಿನ ಶಕ್ತಿಯನ್ನು ಹೊಂದಿರುವ ಈ ಕಾರು, ರೂ. 9 ಲಕ್ಷದಿಂದ ರೂ. 14.50 ಲಕ್ಷದ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳ ಜೊತೆಗೆ, ಈ ಹೊಸ ಸಿಎನ್ಜಿ ಮಾದರಿಯು ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುತ್ತದೆ.
Tata Nexon iCNG ನಿಮ್ಮ ಅನುಕೂಲಕ್ಕೆ ತಕ್ಕಂತೆ ಎಂಟು ವಿಭಿನ್ನ ಮಾದರಿಗಳಲ್ಲಿ ಲಭ್ಯವಿದೆ. ಸ್ಮಾರ್ಟ್ (O), Smart +, Smart +S, ಪ್ಯೂರ್, ಪ್ಯೂರ್ S, ಕ್ರಿಯೇಟಿವ್, ಕ್ರಿಯೇಟಿವ್ + ಮತ್ತು ಫಿಯರ್ಲೆಸ್ + PS ಈ ಮಾದರಿಗಳಲ್ಲಿ ಸೇರಿವೆ. ಸಿಎನ್ಜಿ ಮಾದರಿಗಳ ಬೆಲೆ, ಸಾಮಾನ್ಯ ಪೆಟ್ರೋಲ್ ಮಾದರಿಗಳಿಗೆ ಹೋಲಿಸಿದರೆ, ಸುಮಾರು ಒಂದು ಲಕ್ಷ ರೂಪಾಯಿ ಹೆಚ್ಚಾಗಿದೆ.
ಆರಂಭಿಕ ನೆಕ್ಸಾನ್ ಸ್ಮಾರ್ಟ್ ಪರ್ಸೋನಾ ರೂ. 9 ಲಕ್ಷಗಳಿಂದ ಪ್ರಾರಂಭವಾಗುತ್ತದೆ, ನಂತರ ಸ್ಮಾರ್ಟ್ + ರೂ. 9.69 ಲಕ್ಷಗಳು ಮತ್ತು ಸ್ಮಾರ್ಟ್ +S ರೂ. 10 ಲಕ್ಷಗಳಿಗೆ. ಟಾಟಾ ನೆಕ್ಸಾನ್ iCNG ಪ್ಯೂರ್ ಪರ್ಸೋನಾ ರೂ. 10.69 ಲಕ್ಷಗಳು ಮತ್ತು ಪ್ಯೂರ್ ಎಸ್ ರೂ. 11 ಲಕ್ಷಗಳಿಗೆ ಬೆಲೆ ನಿಗದಿಯಾಗಿದೆ. ಇದನ್ನು ಅನುಸರಿಸಿ ಕ್ರಿಯೇಟಿವ್ ಪರ್ಸೋನಾ ರೂ. 11.69 ಲಕ್ಷಗಳು ಮತ್ತು ಕ್ರಿಯೇಟಿವ್ + ರೂ. 12.19 ಲಕ್ಷಗಳಿಗೆ ಬೆಲೆ ನಿಗದಿಯಾಗಿದೆ. ಉನ್ನತ ಮಟ್ಟದ ಫಿಯರ್ಲೆಸ್ + ಪಿಎಸ್ ರೂ. 14.50 ಲಕ್ಷಗಳಿಗೆ ಬೆಲೆ ನಿಗದಿಯಾಗಿದೆ.
ಇದನ್ನೂ ಓದಿ: ಹೊಸ ಫೀಚರ್ಸ್ ಗಳೊಂದಿಗೆ ಟಾಟಾ ಪಂಚ್ ಫೇಸ್ಲಿಫ್ಟ್ ಎಸ್ ಯುವಿ ಬಿಡುಗಡೆ

ಟಾಟಾ ನೆಕ್ಸಾನ್ ಇದೀಗ CNG ಆಯ್ಕೆಯೊಂದಿಗೆ ಲಭ್ಯವಿದ್ದು, ಟಿಯಾಗೊ, ಟಿಗೋರ್, ಪಂಚ್ ಮತ್ತು ಆಲ್ಟ್ರೋಜ್ನಂತಹ ಇತರ ಟಾಟಾ CNG ವಾಹನಗಳ ಸಾಲಿಗೆ ಸೇರಿಕೊಂಡಿದೆ. ಕಂಪನಿಯ ಪ್ರಕಾರ, CNG ವಾಹನಗಳು ಒಟ್ಟಾರೆ ಮಾರಾಟದಲ್ಲಿ ಸುಮಾರು 21% ಕೊಡುಗೆ ನೀಡುತ್ತಿದ್ದು, ನೆಕ್ಸಾನ್ಗೆ CNG ಆಯ್ಕೆ ನೀಡುವುದು ಇದಕ್ಕೆ ಮುಖ್ಯ ಕಾರಣ. ಭಾರತೀಯ ಗ್ರಾಹಕರು CNG ವಾಹನಗಳನ್ನು ಇಷ್ಟಪಡುವುದಕ್ಕೆ ಕಾರಣ ಅವುಗಳ ಆರ್ಥಿಕ ಪರಿಣಾಮಕಾರಿತ್ವ. ನೆಕ್ಸಾನ್ CNG ಮಾದರಿಯು ಶಕ್ತಿಶಾಲಿ ಡ್ರೈವಿಂಗ್ ಅನುಭವ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒದಗಿಸುತ್ತದೆ ಎಂದು ಟಾಟಾ ಮೋಟಾರ್ಸ್ ಹೇಳುತ್ತದೆ.
ನೆಕ್ಸಾನ್ ಸಿಎನ್ಜಿ ಫೀಚರ್ಸ್ಗಳು
ಹೊಸ ನೆಕ್ಸಾನ್ ಸಿಎನ್ಜಿ (Tata Nexon iCNG) ಕಾರು, ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಷ್ಟೇ ಆಧುನಿಕ ತಂತ್ರಜ್ಞಾನದಿಂದ ಸುಸಜ್ಜಿತವಾಗಿದೆ. ಉನ್ನತ ವರ್ಗದ ಮಾದರಿಗಳಲ್ಲಿ ಆಟೋ ಹೆಡ್ಲೈಟ್ಗಳು, ಕ್ಲೈಮೆಂಟ್ ಕಂಟ್ರೋಲ್ ಯುನಿಟ್, ವಾಯ್ಸ್ ಅಸಿಸ್ಟ್ ಪನೋರಮಿಕ್ ಸನ್ರೂಫ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ವೈರ್ಲೆಸ್ ಚಾರ್ಜಿಂಗ್, ಫ್ರೆಶ್ ಆಗಿರುವಂತೆ ಇರುವ ಮುಂಭಾಗದ ವೆಂಟಿಲೆಟೆಡ್ ಸೀಟುಗಳು, ಪ್ರೀಮಿಯಂ ಆಡಿಯೋ ಸಿಸ್ಟಂ ಮತ್ತು ಲೆದರ್ ಸೀಟುಗಳಂತಹ ಹಲವು ಆಧುನಿಕ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಇದರಿಂದ ನಿಮ್ಮ ಪ್ರಯಾಣವನ್ನು ಇನ್ನಷ್ಟು ಆರಾಮದಾಯಕ ಮತ್ತು ಆನಂದದಾಯಕವಾಗಿಸುತ್ತದೆ.
ಇದನ್ನೂ ಓದಿ: ಟಾಟಾ ಕರ್ವ್ ಇವಿ ರೂ. 17.49 ಲಕ್ಷಕ್ಕೆ ಲಾಂಚ್ ಆಗಿದೆ

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ವಾಹನದಲ್ಲಿ ದೀರ್ಘ ಪ್ರಯಾಣಗಳಿಗೆ ಅನುಕೂಲವಾಗುವಂತೆ 60 ಕೆಜಿ ತೂಕದ ಎರಡು ಸಿಎನ್ಜಿ ಸಿಲಿಂಡರ್ಗಳನ್ನು ಅಳವಡಿಸಲಾಗಿದೆ. ಇದು ಹೆಚ್ಚಿನ ಮೈಲೇಜ್ ನೀಡುವುದರ ಜೊತೆಗೆ ಸಾಕಷ್ಟು ಬೂಟ್ ಸ್ಪೇಸ್ ಅನ್ನು ಕಾಪಾಡಿಕೊಂಡಿದೆ. ಪೆಟ್ರೋಲ್ ಅಥವಾ ಡೀಸೆಲ್ ವಾಹನಗಳಿಗೆ ಹೋಲಿಸಿದರೆ 61 ಲೀಟರ್ಗಳಷ್ಟು ಕಡಿಮೆ ಬೂಟ್ ಸ್ಪೇಸ್ ಇದ್ದರೂ ಕೂಡ, 321 ಲೀಟರ್ಗಳಷ್ಟು ಬೂಟ್ ಸ್ಪೇಸ್ ಗ್ರಾಹಕರಿಗೆ ಸಾಕಷ್ಟು ಸಮರ್ಥವಾಗಿರುತ್ತದೆ ಎಂಬುದು ಗಮನಾರ್ಹ.
ಸುರಕ್ಷಿತವಾದ ಪ್ರಯಾಣಕ್ಕಾಗಿ, ವಾಹನದಲ್ಲಿ ಸ್ಟ್ಯಾಂಡರ್ಡ್ ಆಗಿ ಆರು ಏರ್ಬ್ಯಾಗ್ಗಳು, ಮಳೆ ಸೆನ್ಸರ್ ವೈಪರ್ಗಳು, ಸ್ವಯಂ ಚಾಲಿತ ಹೆಡ್ಲ್ಯಾಂಪ್ಗಳು, 360 ಡಿಗ್ರಿ ಕ್ಯಾಮೆರಾ, ಎಬಿಎಸ್ ಮತ್ತು ಇಬಿಡಿ ವ್ಯವಸ್ಥೆ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಐಸೊಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಗಳು, ಮುಂಭಾಗ ಪಾರ್ಕಿಂಗ್ ಸೆನ್ಸರ್ಗಳು, ಮತ್ತು ಸ್ವಯಂ ಡಿಮ್ಮಿಂಗ್ ಐಆರ್ವಿಎಂಗಳು ಸೇರಿದಂತೆ ಹಲವು ಪ್ರೀಮಿಯಂ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.
ಇದನ್ನೂ ಓದಿ: ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾದ ಟಾಟಾ ಕರ್ವ್ ಪೆಟ್ರೋಲ್, ಡೀಸೆಲ್
ನೆಕ್ಸಾನ್ ಸಿಎನ್ಜಿ: ಪವರ್ ಟ್ರೈನ್, ಮೈಲೇಜ್
ನೆಕ್ಸಾನ್ iCNG ಮಾದರಿಯಲ್ಲಿ 1.2 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ನಿಂದ ಕಾರ್ಯನಿರ್ವಹಿಸುತ್ತದೆ. ಈ ಎಂಜಿನ್ 98.6 ಬಿಹೆಚ್ಪಿ ಶಕ್ತಿ ಮತ್ತು 170 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಾರಿಗೆ 6-ಸ್ಪೀಡ್ ಮ್ಯಾನುವಲ್ ಗಿಯರ್ಬಾಕ್ಸ್ ಮಾತ್ರ ಲಭ್ಯವಿದೆ. ಆಟೋಮೆಟಿಕ್ ಗಿಯರ್ಬಾಕ್ಸ್ ಆಯ್ಕೆ ಇದರಲ್ಲಿ ಇನ್ನೂ ಲಭ್ಯವಿಲ್ಲ. ಕಂಪನಿಯ ಪ್ರಕಾರ, ಈ ಕಾರು ಪ್ರತಿ ಕಿಲೋಗ್ರಾಂ ಸಿಎನ್ಜಿಗೆ 24 ಕಿಲೋಮೀಟರ್ ಮೈಲೇಜ್ ನೀಡುತ್ತದೆ.