ಹೊಸ 45 kWh ಬ್ಯಾಟರಿ ಪ್ಯಾಕ್ ನೊಂದಿಗೆ Tata Nexon EV ಈಗ 489 ಕಿಮೀ ಮೈಲೇಜ್ ನೀಡಲು ಸಿದ್ಧವಾಗಿದೆ
ಟಾಟಾ ಮೋಟಾರ್ಸ್(Tata Motors) ತನ್ನ ಜನಪ್ರಿಯ ನೆಕ್ಸಾನ್ ಇವಿ (Tata Nexon EV) ಮಾದರಿಯನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಮಾಡಿದೆ! 45 kWh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ, ಈ ವಾಹನವು ಒಂದೇ ಚಾರ್ಜ್ನಲ್ಲಿ ಹೆಚ್ಚು ದೂರವನ್ನು ಕ್ರಮಿಸಲು ಸಮರ್ಥವಾಗಿದೆ. ಈ ಎಲೆಕ್ಟ್ರಿಕ್ ಕಾರು 13.99 ಲಕ್ಷ ರೂಪಾಯಿಗಳಿಂದ 16.99 ಲಕ್ಷ ರೂಪಾಯಿಗಳವರೆಗೆ (ಎಕ್ಸ್ ಶೋರೂಂ) ಲಭ್ಯವಿದೆ. ವಿವಿಧ ಆಯ್ಕೆಗಳೊಂದಿಗೆ, ನೀವು ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ನೆಕ್ಸಾನ್ ಇವಿ 45 kWh ಅನ್ನು ಆಯ್ಕೆ ಮಾಡಿಕೊಳ್ಳಬಹುದು.
ಕ್ರಿಯೇಟಿವ್ ವೇರಿಯೆಂಟ್ ಅನ್ನು ರೂ. 13.99 ಲಕ್ಷದಲ್ಲಿ ಪಡೆಯಬಹುದು. ಹೆಚ್ಚುವರಿ ವೈಶಿಷ್ಟ್ಯಗಳನ್ನು ಬಯಸಿದರೆ, ಫಿಯರ್ಲೆಸ್ ವೇರಿಯೆಂಟ್ ರೂ. 14.99 ಲಕ್ಷಕ್ಕೆ ಲಭ್ಯವಿದೆ. ಹೆಚ್ಚಿನ ಶಕ್ತಿಯನ್ನು ಹುಡುಕುತ್ತಿರುವವರಿಗೆ, ಎಂಪಾವರ್ಡ್ ವೇರಿಯೆಂಟ್ ರೂ. 15.99 ಲಕ್ಷದಲ್ಲಿ ದೊರೆಯುತ್ತದೆ. ಎಲ್ಲ ವೈಶಿಷ್ಟ್ಯಗಳು ಕೂಡಿದ ಟಾಪ್-ಆಫ್-ದ-ಲೈನ್ ಎಂಪಾವರ್ಡ್ ಪ್ಲಸ್ ವೇರಿಯೆಂಟ್ ಅನ್ನು ರೂ. 16.99 ಲಕ್ಷಕ್ಕೆ ನಿಮ್ಮದಾಗಿಸಬಹುದು. ಮತ್ತು ನೆಕ್ಸಾನ್ ಇವಿ ರೆಡ್ ಡಾರ್ಕ್ ಎಡಿಷನ್ (Nexon EV Red Dark Edition) ಅನ್ನು ಎಂಪವರ್ಡ್ ಪ್ಲಸ್ ರೂಪಾಂತರದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. ಈ ವಿಶೇಷ ಆವೃತ್ತಿಯ ಬೆಲೆ ರೂ.17.19 ಲಕ್ಷ (ಎಲ್ಲಾ ದರಗಳು, ಎಕ್ಸ್-ಶೋರೂಮ್).
ಇದನ್ನೂ ಓದಿ: ಕೈಗೆಟುಕುವ ಬೆಲೆ, ಸಖತ್ ಮೈಲೇಜ್ನ ಟಾಟಾ ನೆಕ್ಸಾನ್ ಸಿಎನ್ಜಿ ಬಿಡುಗಡೆ

ಟಾಟಾ ನೆಕ್ಸಾನ್ ಇವಿ: ಬ್ಯಾಟರಿ ಪ್ಯಾಕ್, ರೇಂಜ್ (ಮೈಲೇಜ್)
ಟಾಟಾ ಮೋಟಾರ್ಸ್ ತನ್ನ Tata Nexon EV 45 kWh ಮಾದರಿಯಲ್ಲಿ ಕರ್ವ್ ಇವಿ ಮಾದರಿಯಲ್ಲಿ ಬಳಸಲಾದ ಅದೇ ಎಲ್ಎಫ್ಪಿ ಪ್ರಿಸ್ಮಾಟಿಕ್ (LFP prismatic) ಸೆಲ್ಗಳನ್ನು ಅಳವಡಿಸುವ ನಿರ್ಧಾರ ಕೈಗೊಂಡಿದೆ. ಟಾಟಾ ಮೋಟಾರ್ಸ್ ಪ್ರಕಾರ, 45 kWh ಬ್ಯಾಟರಿ ಪ್ಯಾಕ್ನೊಂದಿಗೆ ಸಜ್ಜಿತವಾದ ನೆಕ್ಸನ್ EV, ಒಂದು ಪೂರ್ಣ ಚಾರ್ಜ್ನಲ್ಲಿ ಗರಿಷ್ಠ 489 ಕಿಲೋಮೀಟರ್ಗಳ ರೇಂಜ್ ಅನ್ನು ನಿಮಗೆ ಒದಗಿಸಬಹುದು.
ಈ ಎಸ್ಯುವಿಯಲ್ಲಿ ಅಳವಡಿಸಲಾದ ವಿ2ಎಲ್ ಮತ್ತು ವಿ2ವಿ ಚಾರ್ಜಿಂಗ್ ತಂತ್ರಜ್ಞಾನವು ನಿಮ್ಮ ನೆಕ್ಸಾನ್ ಇವಿಯನ್ನು ಕೇವಲ ವಾಹನವಾಗಿ ಮಾತ್ರವಲ್ಲದೆ, ನೀವು ನಿಮ್ಮ ವಾಹನದ ಬ್ಯಾಟರಿಯ ಶಕ್ತಿಯನ್ನು ಬಳಸಿಕೊಂಡು ಇತರ ಎಲೆಕ್ಟ್ರಿಕ್ ಗ್ಯಾಜೆಟ್ಗಳು ಅಥವಾ ಇನ್ನೊಂದು ವಿದ್ಯುತ್ ವಾಹನವನ್ನು ಚಾರ್ಜ್ ಮಾಡಬಹುದು. ಇನ್ನು, ಟಾಟಾ ಮೋಟಾರ್ಸ್ನ ಪ್ರಕಾರ, 45 ಕಿಲೋವ್ಯಾಟ್ ವೇಗದ ಚಾರ್ಜರ್ ಬಳಸಿದರೆ ನೆಕ್ಸಾನ್ ಇವಿಯ ಬ್ಯಾಟರಿಯನ್ನು ಕೇವಲ 40 ನಿಮಿಷಗಳಲ್ಲಿ 10% ರಿಂದ 80% ವರೆಗೆ ಚಾರ್ಜ್ ಮಾಡಬಹುದು.
ಇದನ್ನೂ ಓದಿ: ಹೊಸ ಫೀಚರ್ಸ್ ಗಳೊಂದಿಗೆ ಟಾಟಾ ಪಂಚ್ ಫೇಸ್ಲಿಫ್ಟ್ ಎಸ್ ಯುವಿ ಬಿಡುಗಡೆ
ಟಾಟಾ ನೆಕ್ಸಾನ್ ಇವಿ: ಫೀಚರ್ಸ್ಗಳು
ಟಾಟಾ ನೆಕ್ಸಾನ್ ಇವಿ (Tata Nexon EV) ಹಲವಾರು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ. ಮುಂಭಾಗದಲ್ಲಿ 11.6 ಲೀಟರ್ ಫ್ರಂಕ್, 26.03 ಸೆಂ.ಮೀ. ಡಿಜಿಟಲ್, ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಏರ್ ಪ್ಯೂರಿಫೈಯರ್, ವಾಯ್ಸ್-ಅಸಿಸ್ಟೆಡ್ ಪ್ಯಾನೋರಮಿಕ್ ಸನ್ರೂಫ್, ವೈರ್ಲೆಸ್ ಚಾರ್ಜಿಂಗ್, ರಿಯರ್ ಎಸಿ ವೆಂಟ್ಸ್, ಕೂಲ್ಡ್ ಗ್ಲೋವ್ ಬಾಕ್ಸ್, 60:40 ರಿಯರ್ ಸೀಟ್ಸ್ ಮತ್ತು ಸೆಂಟರ್ ಆರ್ಮ್ರೆಸ್ಟ್, 9-ಸ್ಪೀಕರ್ ಜೆಬಿಎಲ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್ಗಳು, ಕ್ರೂಸ್ ಕಂಟ್ರೋಲ್ ಮತ್ತು 16-ಇಂಚಿನ ಅಲಾಯ್ ವೀಲ್ಗಳನ್ನು ನೀವು ಕಾಣಬಹುದು.

ಇದರಲ್ಲಿ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಆರು ಏರ್ಬ್ಯಾಗ್ಗಳು, ಎಬಿಎಸ್ ಜೊತೆ ಇಬಿಡಿ, ಟ್ರಾಕ್ಷನ್ ಕಂಟ್ರೋಲ್, ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಫ್ರಂಟ್ ಪಾರ್ಕಿಂಗ್ ಸೆನ್ಸರ್, ಆಟೋ ಹೋಲ್ಡ್, 360 ಡಿಗ್ರಿ ಕ್ಯಾಮೆರಾ, ಆಟೋ ಹೆಡ್ಲ್ಯಾಂಪ್ಗಳು, ಆಟೋ ಡಿಮ್ಮಿಂಗ್ ಐಆರ್ವಿಎಂ, ರೈನ್ ಸೆನ್ಸಿಂಗ್ ವೈಪರ್, ಎಲ್ಲಾ ಡಿಸ್ಕ್ ಬ್ರೇಕ್ಗಳು ಮತ್ತು ಹೊಸ 45kWh ಬ್ಯಾಟರಿಯಿಂದಾಗಿ ವಾಹನದ ತೂಕ ಸ್ವಲ್ಪ ಹೆಚ್ಚಿದ್ದರೂ, ಈ ವಾಹನವು 5-ಸ್ಟಾರ್ BNCAP ಕ್ರ್ಯಾಶ್ ಟೆಸ್ಟ್ನಲ್ಲಿ ಉತ್ತೀರ್ಣವಾಗಲಿದೆ ಎಂದು ಟಾಟಾ ಮೋಟಾರ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಟಾಟಾ ಕರ್ವ್ ಇವಿ ರೂ. 17.49 ಲಕ್ಷಕ್ಕೆ ಲಾಂಚ್ ಆಗಿದೆ
ಟಾಟಾ ನೆಕ್ಸಾನ್ ಇವಿ ರೆಡ್ ಡಾರ್ಕ್ ಎಡಿಷನ್ (Nexon EV Red Dark Edition) ಸಂಪೂರ್ಣ ಕಪ್ಪು ಬಣ್ಣದಲ್ಲಿ ಲಭ್ಯವಿದ್ದು, ಹೆಚ್ಹು ಆಕರ್ಷಕತೆಯನ್ನು ನೀಡಲು ಕೆಂಪು ಬಣ್ಣದ ಅಲಂಕಾರವನ್ನು ಹೊಂದಿದೆ. ಮುಂಭಾಗದ ಫೆಂಡರ್ಗಳಲ್ಲಿ ‘ರೆಡ್ ಡಾರ್ಕ್’ ಎಂಬ ವಿಶೇಷ ಬ್ಯಾಡ್ಜಿಂಗ್ ಹೊಂದಿದ್ದು, ಇದರ ವಿನ್ಯಾಸಕ್ಕೊಂದು ವೈಶಿಷ್ಟ್ಯತೆ ನೀಡುತ್ತದೆ. ಕೆಂಪು ಹೊಲಿಗೆ ಹೊಂದಿರುವ ಸ್ಟೈಲಿಶ್ ಆಲ್-ಬ್ಲ್ಯಾಕ್ ಡ್ಯಾಶ್ಬೋರ್ಡ್ ಮತ್ತು ಇನ್ಫೋಟೈನ್ಮೆಂಟ್ ಸಿಸ್ಟಮ್ಗಾಗಿ ವಿಶೇಷವಾದ ರೆಡ್ ಡಾರ್ಕ್-ಥೀಮ್ ಇಂಟರ್ಫೇಸ್ನಂತಹ ಗಮನಾರ್ಹ ನವೀಕರಣಗಳನ್ನು ನೀವು ಕಾಣಬಹುದು.