ಭಾರತದ ಪ್ರಸಿದ್ದ ಕಾರು ಉತ್ಪಾದನ ಕಂಪನಿಯಾದ ಟಾಟಾ ಮೋಟಾರ್ಸ್ ಕಳೆದ ವಾರ, ಆಗಸ್ಟ್ 7 ರಂದು ಅಧಿಕೃತ ಬಿಡುಗಡೆಯಾಗಬೇಕಾಗಿರುವ ತನ್ನ ಹೊಸ ಟಾಟಾ ಕರ್ವ್ ಇವಿಯ(Tata Curvv EV) ಅಂತಿಮ ಆವೃತ್ತಿಯನ್ನು ಬಹಿರಂಗಪಡಿಸಿದೆ.
ಟಾಟಾ ಕಂಪನಿಯು ಕರ್ವ್ನ ಸಾಂಪ್ರದಾಯಿಕ(ಪೆಟ್ರೋಲ್& ಡೀಸೆಲ್) ಮತ್ತು ಎಲೆಕ್ಟ್ರಿಕ್ ಮಾಡೆಲ್ಗಳನ್ನು ಪರಿಚಯಿಸುವ ಯೋಜನೆಯನ್ನು ಇಟ್ಟುಕೊಂಡಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಇದರ ಎಲೆಕ್ಟ್ರಿಕ್ ಮಾಡೆಲ್ ಕಾರುಗಳು ಮೊದಲು ಶೋರೂಮ್ ತಲುಪುವ ನಿರೀಕ್ಷೆಯಿದೆ. ಹಾಗೂ ಇತ್ತೀಚೆಗೆ, ಟಾಟಾ ಕರ್ವ್ನ ಎಲೆಕ್ಟ್ರಿಕ್ ಮಾಡೆಲ್ ಬಗ್ಗೆ ಕೆಲವು ಅವಶ್ಯ ಹಾಗೂ ಉತ್ಸಾಹಕಾರಿ ಮಾಹಿತಿಯು ಅದರ ಅದ್ಭುತ ಪ್ರಾರಂಭಕ್ಕೆ ಮುನ್ನ ಆನ್ಲೈನ್ನಲ್ಲಿ ಹರಿದಾಡುತ್ತಿದೆ.
ಟಾಟಾ ಕರ್ವ್ ಇವಿ ಬ್ಯಾಟರಿ ಪ್ಯಾಕ್
ಇತ್ತೀಚಿನ ಮಾಧ್ಯಮ ವರದಿಯ ಪ್ರಕಾರ, ಟಾಟಾ ಮೋಟಾರ್ಸ್ ಕರ್ವ್ ಇವಿಯಲ್ಲಿ 40.5 kWh ಮತ್ತು 55 kWh ನ ಎರಡು ಬ್ಯಾಟರಿ ಆಯ್ಕೆಗಳನ್ನು ನೀಡಲು ಯೋಜಿಸಿದೆ. ಈ ಸಣ್ಣ ಬ್ಯಾಟರಿಯು ಈಗಾಗಲೇ ನೆಕ್ಸಾನ್ ಮಾಡೆಲ್ನ ಬೇಸಿಕ್ ವಷ೯ನ್ ನಲ್ಲಿ ಲಭ್ಯವಿದೆ, ಇದು ಸಣ್ಣ ಎಲೆಕ್ಟ್ರಿಕ್ ಎಸ್ಯುವಿ ವಿಭಾಗದಲ್ಲಿ 465 ಕಿಮೀ ರೇಂಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.
55 kWh ಬ್ಯಾಟರಿಯು ಒಂದು ಪೂರ್ಣ ಚಾರ್ಜ್ನಲ್ಲಿ 600 ಕಿಮೀ ಗಿಂತ ಹೆಚ್ಚಿನ ರೇಂಜ್ ನೀಡಬಹುದಾಗಿದೆ ಎಂದು ಹೇಳಲಾಗತ್ತಿದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಡಿಸಿ ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯದೊಂದಿಗೆ, ಕೂಪ್ ಎಸ್ಯುವಿಯು ಕೇವಲ ಆರಂಭಿಕ 10 ನಿಮಿಷಗಳ ಚಾರ್ಜ್ನಲ್ಲಿ 100 ಕಿಮೀ ರೇಂಜನ್ನು ಪಡೆಯಬಹುದು.

ಟಾಟಾ ಕರ್ವ್ ಇವಿ ಎರಡು ಮಾಡಲ್ ಗಳಲ್ಲಿ ಬರಲಿದ್ದು, ಈ ಕಾರಿನ ಮುಂಭಾಗದಲ್ಲಿ ವಿದ್ಯುತ್ ಮೋಟರನ್ನು ಅಳವಡಿಸಲಾಗಿದೆ. ಇನ್ನು ಹೆಚ್ಚಿನ ವಿವರವಾದ ವಿಶೇಷತೆಗಳನ್ನು ಟಾಟಾ ಶೀಘ್ರದಲ್ಲೇ ಘೋಷಿಸಲಾಗುವುದು. ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳ ಎರಡೂ ಬೆಲೆಗಳನ್ನು ಅದೇ ಸಮಯದಲ್ಲಿ ಬಹಿರಂಗಪಡಿಸಲಾಗುವುದು.
Tata Curvv EV ವೈಶಿಷ್ಟ್ಯಗಳು
ಈ ಕಾರಿನ ಕೆಲವು ವಿನ್ಯಾಸ ವೈಶಿಷ್ಟ್ಯಗಳು ಅದರ ದೊಡ್ಡ ಡೈಮಂಡ ಕಟ್ ಅಲಾಯ್ ವೀಲ್ಸ್, ಫುಲ್ ವಿಡ್ತ್ DRL ಗಳೊಂದಿಗೆ LED ಹೆಡ್ಲೈಟ್ಗಳು, ಫುಲ್ ವಿಡ್ತ್ LED ಟೈಲ್ಲೈಟ್ಗಳು, ಬ್ಲೆಂಡೆಡ್ ಸ್ಪಾಯ್ಲರ್, ಶಾರ್ಕ್ಫಿನ್ ಆಂಟೆನಾ ಜೊತೆಗೆ, ಟಾಟಾ ಕರ್ವ್ ಇವಿ ಹೆಚ್ಚುವರಿಯಾಗಿ ಲೆವೆಲ್ -2 ADAS ಮತ್ತು 6 ಏರ್ ಬ್ಯಾಗ್ಗಳು, ABS, EBD, ಟ್ರಾಕ್ಷನ್ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ ಇವುಗಳಂತಹ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದು ವರದಿಯಾಗಿದೆ.
ಮುಂಬರುವ ಟಾಟಾ ಕರ್ವ್ ಇವಿ (Tata Curvv EV) ಹೆಚ್ಚು ಟೆಕ್ನಾಲಜಿಗಳಿಂದ ತುಂಬಿರುತ್ತದೆ ಎಂದು ವದಂತಿಗಳಿವೆ. ಗಮನಾರ್ಹ ತಂತ್ರಜ್ಞಾನ ವೈಶಿಷ್ಟ್ಯಗಳಲ್ಲಿ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗೆ ಹೊಂದಿಕೊಳ್ಳುವ ವಿಶಾಲವಾದ 12.3-ಇಂಚಿನ ಎಂಟರ್ಟ್ರೈನ್ಮೆಂಟ್ ಸ್ಕ್ರೀನ್, ಚಾಲಕನಿಗೆ ಡಿಜಿಟಲ್ ಡ್ಯಾಶ್ಬೋರ್ಡ್, ಆಟೋಮಾಟಿಕ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಸೀಟುಗಳು, ರೇರ್ ಏರ್ ಕಂಡೀಶನ್ ವೆಂಟ್ ಗಳು, ಆಟೋಮಾಟಿಕ್ ಹೆಡ್ಲೈಟ್ಗಳು ಮತ್ತು ವೈಪರ್ಗಳು, ಪನೋರಮಿಕ್ ಸನ್ರೂಫ್ ಮತ್ತು ಇನ್ನೂ ಅನೇಕ ಫೀಚರ್ಸ್ಗಳು ಸೇರಿವೆ.
ಇದನ್ನೂ ಓದಿ: ಪೋರ್ಷೆ ಮಾಕಾನ್ ಇವಿ RWD ಕಾರು ಭಾರತದಲ್ಲಿ ಬಿಡುಗಡೆ ಬೆಲೆ ರೂ. 1.23 ಕೋಟಿ