Tata Curvv: ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾದ ಟಾಟಾ ಕರ್ವ್ ಪೆಟ್ರೋಲ್, ಡೀಸೆಲ್

ಟಾಟಾ ಕರ್ವ್ ಕೂಪೆ ಎಸ್‌ಯುವಿ ವಿವಿಧ ಎಂಜಿನ್ ಆಯ್ಕೆಗಳು, ಆಧುನಿಕ ವೈಶಿಷ್ಟ್ಯಗಳು ಮತ್ತು ಆಕರ್ಷಕ ಬೆಲೆಯೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿದೆ.

ಭಾರತದಲ್ಲಿ ಟಾಟಾ ಮೋಟಾರ್ಸ್ (Tata Motors) ಒಂದು ಪ್ರತಿಷ್ಠಿತ ಮತ್ತು ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಇಂದು ತನ್ನ ಗ್ರಾಹಕರ ಬಹುನೀರಿಕ್ಷಿತ ಕರ್ವ್(Tata Curvv) ಕೂಪೆ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುವ  ಈ ಕಾರು , ಸ್ಮಾರ್ಟ್, ಪ್ಯೂರ್ ಪ್ಲಸ್, ಪ್ಯೂರ್ ಪ್ಲಸ್ ಎಸ್, ಕ್ರಿಯೇಟಿವ್, ಕ್ರಿಯೇಟಿವ್ ಪ್ಲಸ್, ಕ್ರಿಯೇಟಿವ್ ಪ್ಲಸ್ ಎಸ್, ಅಕಂಪ್ಲಿಶೇಡ್ ಎಸ್ ಮತ್ತು ಅಕಂಪ್ಲಿಶೇಡ್ ಪ್ಲಸ್ ಎ ಎಂಬ ಎಂಟು ವಿಭಿನ್ನ ಮಾದರಿಗಳಲ್ಲಿ ಲಭ್ಯವಿದೆ.

ಈ ಕಾರಿನ ಆರಂಭಿಕ ಬೆಲೆ ಶೋರೂಂನಲ್ಲಿ 10 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ ಹಾಗೂ ಟಾಪ್ ಎಂಡ್ ಮಾದರಿಯ ಬೆಲೆ 17.70 ಲಕ್ಷ ರೂಪಾಯಿಗಳವರೆಗೆ ಇರುತ್ತದೆ. ಇತ್ತೀಚೆಗೆ ದೇಶೀಯ ಮಾರುಕಟ್ಟೆಯಲ್ಲಿ ಹೊಚ್ಚ ಹೊಸ ಕರ್ವ್ ಇವಿಯನ್ನು (Curvv EV) ಪರಿಚಯಿಸಿತ್ತು. ಇದೊಂದು ಎಲೆಕ್ಟ್ರಿಕ್ ಕೂಪೆ ಎಸ್‌ಯುವಿಯಾಗಿದೆ. ಈ ಹೊಸ ಮಾದರಿಯು ಆರಂಭಿಕ ಬೆಲೆ  ರೂ. 17.49 ಲಕ್ಷದಿಂದ ರೂ. 21.99 ಲಕ್ಷ (ಎಕ್ಸ್‌ಶೋರೂಂ) ವರೆಗೆ ಇದೆ.

ಇದನ್ನೂ ಓದಿ: ಟಾಟಾ ಕರ್ವ್ ಇವಿ ರೂ. 17.49 ಲಕ್ಷಕ್ಕೆ ಲಾಂಚ್ ಆಗಿದೆ

Tata Curvv Interior
Tata Curvv Interior

ಟಾಟಾ ಕರ್ವ್(Tata Curvv): ಎಕ್ಸ್ಟೀರಿಯರ್, ಇಂಟೀರಿಯರ್ ಮತ್ತು ವೈಶಿಷ್ಟ್ಯಗಳು

ಈ ಆಧುನಿಕ ಕಾರು ತನ್ನ ವಿಶಿಷ್ಟ ವಿನ್ಯಾಸದಿಂದ ಎಲ್ಲರನ್ನು ಆಕರ್ಷಿಸುತ್ತದೆ. ಸ್ಪ್ಲಿಟ್ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಡಿಆರ್‌ಎಲ್‌ ಕಾರಿಗೆ ಒಂದು ಆಕರ್ಷಕ ನೋಟವನ್ನು ನೀಡುತ್ತದೆ. ಇಳಿಜಾರಾದ ರೂಫ್‌ಲೈನ್, 18 ಇಂಚಿನ ಡುಯಲ್ ಟೋನ್ ಅಲಾಯ್ ವೀಲ್‌ಗಳು, ಫ್ಲಶ್ ಡೋರ್ ಹ್ಯಾಂಡಲ್ಸ್, ರೂಫ್ ಟಾಪ್ ಮೌಂಟೆಡ್ ಸ್ಪಾಯ್ಲರ್ ಮತ್ತು ಎಲ್‌ಇಡಿ ಟೈಲ್‌ಲೈಟ್‌ಗಳು ಕಾರಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಐದು ಆಕರ್ಷಕ ಬಣ್ಣಗಳ ಆಯ್ಕೆಯೊಂದಿಗೆ, ನೀವು ನಿಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ಒಂದು ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದು. ಮತ್ತು ಈ ಕಾರು ವಿಶಾಲವಾದ 500 ಲೀಟರ್ ಬೂಟ್ ಸ್ಪೇಸ್‌ನೊಂದಿಗೆ ಬರುತ್ತದೆ.

ಟಾಟಾ ಕರ್ವ್ ಕೂಪೆ ಎಸ್‌ಯುವಿಯು 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25 ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ,4-ಸ್ಪೋಕ್ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್, 9-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ಪನೊರೊಮಿಕ್ ಸನ್‌ರೂಫ್, ಅಂಬಿಯಂಟ್ ಲೈಟಿಂಗ್ , ಆಟೋ ಕ್ಲೈಮೇಟ್ ಕಂಟ್ರೋಲ್, 6-ವೇ  ಪವರ್- ಅಡ್ಜಸ್ಟಬಲ್ ಡ್ರೈವರ್ ಸೀಟ್, ವೈರ್‌ಲೆಸ್ ಚಾರ್ಜರ್, ಇನ್-ಬಿಲ್ಟ್ ಏರ್ ಪ್ಯೂರಿಫೈಯರ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ.

Tata Curvv
Tata Curvv

ಈ ಕಾರುಗಳಲ್ಲಿ ಸುರಕ್ಷತೆಯನ್ನು ಮುಖ್ಯವಾಗಿ ಪರಿಗಣಿಸಲಾಗಿದ್ದು, ಇದರಲ್ಲಿ ಆರು ಏರ್‌ಬ್ಯಾಗ್‌ಗಳು, ಎಲ್ಲಾ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳು, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, 360 ಡಿಗ್ರಿ ಕ್ಯಾಮೆರಾ, ಆಟೋ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ) ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ನಂತಹ ಪ್ರಮುಖ ವೈಶಿಷ್ಟ್ಯಗಳು ಸೇರಿವೆ. ಹೈ-ಎಂಡ್ ಮಾದರಿಗಳಲ್ಲಿ, ರಡಾರ್ ತಂತ್ರಜ್ಞಾನವನ್ನು ಬಳಸಿಕೊಂಡು ಅಪಘಾತಗಳನ್ನು ತಡೆಯುವಲ್ಲಿ ಸಹಾಯ ಮಾಡುವ ಲೆವಲ್ 2 ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂನಂತಹ ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.

ಇದನ್ನೂ ಓದಿ: ಬಜೆಟ್‌ಗೆ ಸರಿಹೊಂದುವ ಸಿಟ್ರನ್ ಬಸಾಲ್ಟ್ ಎಸ್‍ಯುವಿ ಕೂಪೆ ಬಿಡುಗಡೆ

ಟಾಟಾ ಕರ್ವ್ (Tata Curvv): ಪವರ್‌ಟ್ರೇನ್ ಆಯ್ಕೆಗಳು

ಈ Tata Curvv ಕಾರಿನಲ್ಲಿ ಮೂರು ವಿಭಿನ್ನ ಪವರ್‌ಟ್ರೇನ್ ಆಯ್ಕೆಗಳು ಲಭ್ಯವಿವೆ. 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 120 ಬಿಹೆಚ್‌ಪಿ ಶಕ್ತಿ ಮತ್ತು 170 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಉತ್ತಮ ಪರ್ಫಾಮೆನ್ಸ್ ಗಾಗಿ 1.2 ಲೀಟರ್ ಡೈರೆಕ್ಟ್ ಇಂಜೆಕ್ಷನ್ ಟರ್ಬೊ ಪೆಟ್ರೋಲ್ ಎಂಜಿನ್ 125 ಬಿಹೆಚ್‌ಪಿ ಶಕ್ತಿ ಮತ್ತು 225 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 1.5 ಲೀಟರ್ ಡೀಸೆಲ್ ಎಂಜಿನ್ 118 ಬಿಹೆಚ್‌ಪಿ ಗರಿಷ್ಠ ಶಕ್ತಿ ಮತ್ತು 260 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವಿದೆ. ಈ ಮೂರೂ ಎಂಜಿನ್‌ಗಳಿಗೆ ಸ್ಟ್ಯಾಂಡರ್ಡ್ ಆಗಿ 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಸಿಗುತ್ತದೆ ಹಾಗೂ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೂ ಕೊಡ ಲಭ್ಯವಿದೆ.

Leave a Comment