ಸುಜುಕಿ ಮೋಟಾರ್ಸೈಕಲ್ ಇಂಡಿಯಾ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಗುರುಗ್ರಾಮ್ ಪೊಲೀಸರಿಗೆ 40 ಕಸ್ಟಮೈಸ್ ಮಾಡಿದ ವಿ-ಸ್ಟ್ರಾಮ್ ಎಸ್‌ಎಕ್ಸ್ 250(V-Strom SX 250) ಮೋಟಾರ್‌ಸೈಕಲ್‌ಗಳನ್ನು ಉದಾರವಾಗಿ ನೀಡಿದೆ.
ಜಪಾನಿನ ಮೋಟಾರ್ಸೈಕಲ್ ಕಂಪನಿ ಸುಜುಕಿ ಮೋಟಾರ್ಸೈಕಲ್ ಇಂಡಿಯಾ ಇತ್ತೀಚೆಗೆ ರಸ್ತೆ ಸುರಕ್ಷತೆ ಮತ್ತು ಸವಾರರನ್ನು ರಕ್ಷಿಸುವ ಬಗ್ಗೆ ಪ್ರಚಾರ ಮಾಡುಲು ಗುರ್ಗಾವ್ ಪೋಲಿಸರಿಗೆ ಪೋತ್ಸಾಹಿಸುವ ಉದೇಶಕ್ಕಾಗಿ ವಿಶೇಷವಾಗಿ ಕಸ್ಟಮೈಸ್ ಮಾಡಲಾದ 40 ವಿ-ಸ್ಟ್ರೋಮ್ ಎಸ್‌ಎಕ್ಸ್ 250 ಸಾಹಸ ಬೈಕುಗಳನ್ನು ದಾನ ಮಾಡಿದೆ ತನ್ನ ಔದಾಯ೯ತೆಯನ್ನುತೋರಿಸಿದೆ. ಈ ಕಾರ್ಯಕ್ರಮವು ಗುರುಗ್ರಾಮ್‌ನ ಪೊಲೀಸ್ ಕಮಿಷನರ್ ವಿಕಾಸ್ ಅರವಿಂದ ಮತ್ತು ಸುಜುಕಿ ಮೋಟಾರ್ಸೈಕಲ್ ಇಂಡಿಯಾ ನ ವ್ಯವಸ್ಥಾಪಕ ನಿರ್ದೇಶಕ ಕೆನಿಚಿ ಉಮೇಡ ಅವರಿಂದ ಪ್ರಾರಂಭವಾಯಿತು.
ಪೊಲೀಸ್ ಬಳಕೆಗೆ ಕಸ್ಟಮೈಸ್ ಮಾಡಲಾದ ವಿ-ಸ್ಟ್ರೋಮ್ ಎಸ್‌ಎಕ್ಸ್ 250 ವಿವಿಧ ಅಪ್‌ಗ್ರೇಡ್‌ಗಳೊಂದಿಗೆ ಬರುತ್ತದೆ. ಇದು ಬಿಳಿ ಬಣ್ಣದಲ್ಲಿದ್ದು, ಎತ್ತರವಾದ ವಿಂಡ್ಸ್‌ಕ್ರೀನ್ ಹೊಂದಿರುತ್ತದೆ. ಇದರ ಮುಂದೆ ಮತ್ತು ಇಂಧನ ಟ್ಯಾಂಕ್‌ನಲ್ಲಿ ‘ಪೊಲೀಸ್’ ಚಿಹ್ನೆಗಳನ್ನು ಹೊಂದಿರುತ್ತದೆ. ಅದಲ್ಲದೆ, ಈ ಬೈಕಿನಲ್ಲಿ ಅಧಿಕೃತ ಬಳಕೆಗಾಗಿ ಕೆಂಪು ಮತ್ತು ನೀಲಿ ಬ್ಲಿಂಕಿಂಗ್ ಲೈಟ್‌ಗಳು ಮತ್ತು ಸೈರನ್ ಅಳವಡಿಸಲಾಗಿದೆ.
ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ 250 ಬೈಕ್ 249ಸಿಸಿ ಸಿಂಗಲ್-ಸಿಲಿಂಡರ್, ಏರ್/ಆಯಿಲ್-ಕೂಲ್ಡ್ ಎಂಜಿನ್‌ನೊಂದಿಗೆ ಬರುತ್ತದೆ, ಇದು 25 ಬಿಎಚ್‌ಪಿ ಮತ್ತು 22 ಎನ್‌ಎಮ್ ಶಕ್ತಿಯನ್ನು ಪ್ಯಾಕ್ ಮಾಡುತ್ತದೆ. ಈ ಬೈಕ್‌ನಲ್ಲಿ ದೀರ್ಘ-ಪ್ರಯಾಣದ ಟೆಲಿಸ್ಕೋಪಿಕ್ ಫೋರ್ಕ್, 7 ಹಂತಗಳಲ್ಲಿ ಕಮ್ಮಿ ಮಾಡಬಹುದಾದ ಮೋನೋಷಾಕ್ ಸಸ್ಪೆನ್ಶನ್, ಮತ್ತು ಎರಡೂ ಚಕ್ರಗಳಲ್ಲಿ ಡುಯಲ್-ಚಾನೆಲ್ ಎಬಿಎಸ್‌ನೊಂದಿಗೆ ಸಜ್ಜುಗೊಳಿಸಿರುವ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದ್ದು, ಇದು ಸಲೀಸಾದ ಮತ್ತು ಸುರಕ್ಷಿತ ರೈಡ್ ನೀಡುತ್ತದೆ, ಮತ್ತು ವಿಶ್ವಾಸಾರ್ಹ ಬ್ರೇಕಿಂಗ್ ಶಕ್ತಿಯನ್ನು ಹೊಂದಿದೆ.
ವಿ-ಸ್ಟ್ರೋಮ್ ಎಸ್ಎಕ್ಸ್ 250(V-Strom SX 250) ಬೈಕ್ 19 ಇಂಚಿನ ಮುಂಭಾಗದ ಚಕ್ರ ಮತ್ತು 17 ಇಂಚಿನ ಹಿಂಭಾಗದ ಚಕ್ರವನ್ನು ಹೊಂದಿದ್ದು, ಡ್ಯುಯಲ್ ಪರ್ಪಸ್ ಟೈರ್ಗಳನ್ನು ಹೊಂದಿದೆ. ಈ ರೀತಿಯ ಚಕ್ರಗಳ ಕಾಂಬಿನೇಷನ್ ನಿಮಗೆ ನಗರದ ಬೀದಿಗಳಲ್ಲಿ ಕುಶಲತೆಯನ್ನು ನೀಡುತ್ತದೆ ಮತ್ತು ಸುಲಭವಾದ ಆಫ್-ರೋಡ್ ಸಫೇ೯ಸ್ ನಿರ್ವಹಿಸುವ ಸಾಮರ್ಥ್ಯವನ್ನು ನೀಡುತ್ತದೆ. ಇದು ನಗರದ ಮೂಲಕ ಕ್ರೂಸಿಂಗ್ ಮಾಡಲು ಬಯಸುವ ಹಾಗೂ ಹೊಸ ಮಾರ್ಗಗಳನ್ನುಎಕ್ಸಪ್ಲೋರ್ ಮಾಡಲು ಬಯಸುವ ಪ್ರಯಾಣಿಕರಿಗೆ ಪಫೆ೯ಕ್ಟ್ ಬೈಕ್ ಆಗಿದೆ.
Suzuki Motorcycle India as a part of its CSR initiative, handed over 40 Customized V Strom SX motorcycles to Gurgaon Police, aiding in their efforts to enhance road and rider safety. pic.twitter.com/H7ZOfNhvgj
— Suzuki Motorcycle India (@suzuki2wheelers) July 19, 2024
ಸುಜುಕಿ ವಿ-ಸ್ಟ್ರೋಮ್ ಎಸ್‌ಎಕ್ಸ್ 250 ವೈಶಿಷ್ಟ್ಯಗಳು
ವಿ-ಸ್ಟ್ರೋಮ್ ಎಸ್‌ಎಕ್ಸ್ 250(V-Strom SX 250) ಕೆಲವು ಶ್ರೇಷ್ಠ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದರಲ್ಲಿ ಫ್ಯಾನ್ಸಿ ಇನ್ಸ್ಟ್ರುಮೆಂಟ್ ಮತ್ತು ಹ್ಯಾಂಡಿ ಯುಎಸ್ಬಿ ಚಾರ್ಜಿಂಗ್ ಪೋರ್ಟ್ ಗಳನ್ನು ಕಾಣಬಹುದು . ಈ ಬೈಕ್ 167 ಕಿಲೋಗ್ರಾಂ ತೂಕ ಹೊಂದಿದೆ. ಬಣ್ಣಗಳ ಬಗ್ಗೆ ಬಂದಾಗ, ನಿಮ್ಮಿಗೆ ಮೂರು ಆಯ್ಕೆಗಳು ಇವೆ: ಚಾಂಪಿಯನ್ ಯೆಲ್ಲೋ ನಂಬರ್ ಟು, ಪರ್ಲ್ ಬ್ಲೇಜ್ ಆರೆಂಜ್, ಮತ್ತು ಗ್ಲಾಸ್ ಸ್ಪಾರ್ಕಲ್ ಬ್ಲಾಕ್.
ಜೊತೆಗೆ ಕೆಲವು ಹೆಚ್ಚುವರಿ ಫೀಚರ್ಗಳನ್ನು ಸಹಾ ನೀವು ಇದರಲ್ಲಿ ಪಡೆಯಬಹುದಾಗಿದ್ದು, ನಿಮಗೆ ಮಿಸ್ ಕಾಲ್‌ಗಳು, ಕಾಲರ್ ಐಡಿ, ಟನ್‌೯ ಬೈ ಟನ್‌೯ ಡೈರೆಕ್ಷನ್ , ಎಸ್‌ಎಮ್‌ಎಸ್‌ಗಳು ಮತ್ತು ವಾಟ್ಸಾಪ್ ಸಂದೇಶಗಳ ಕುರಿತು ನಿಮಗೆ ಮಾಹಿತಿ ನೀಡಲು ಬ್ಲೂಟೂತ್ ಅನ್ನು ಹೊಂದಿದೆ. ಜೊತೆಗೆ, ತಲುಪುವ ಅಂದಾಜು ಸಮಯದ ಮಾಹಿತಿಯನ್ನು ಮತ್ತು ನೀವು ವೇಗ ಮಿತಿಯನ್ನು ಮೀರಿಸಿದರೆ ಎಚ್ಚರಿಕೆಗಳನ್ನು ನೀಡುವ ಫಿಚರ್ ಅನ್ನು ಸಹಾ ಹೊದಿದೆ. ಈ ಮೋಟಾರ್ಸಿಕಲ್‌ನ ಬೆಲೆ ₹2.12 ಲಕ್ಷ (ಎಕ್ಸ್-ಶೋರುವ್) ಆಗಿದೆ.
ಸುಜುಕಿ ಮೋಟಾರ್ಸಿಕಲ್ ಇಂಡಿಯಾ(Suzuki Motorcycle India) ಗುರುಗಾಂವ್ ಪೋಲಿಸ್‌ಗಳಿಗೆ ಮೋಟಾರ್ಸಿಕಲ್‌ಗಳನ್ನು ಒದಗಿಸುವ ಮೂಲಕ ಇದು ರಸ್ತೆ ಸುರಕ್ಷತೆಗೆ ಬದ್ಧವಾಗಿದೆ ಎಂಬುದನ್ನು ಸಾಭೀತು ಪಡಿಸಿದೆ. ಸುಜುಕಿ ರಸ್ತೆ ಸುರಕ್ಷತೆಯನ್ನು ಸುಧಾರಿಸುವಲ್ಲಿ ಮಹತ್ವಪೂರ್ಣ ಪಾತ್ರವಹಿಸುತ್ತಿದೆ. ಈ ಬೈಕುಗಳು ಪೋಲಿಸುಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಕರಿಸುತ್ತದೆ..
ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಬಜಾಜ್ ಮೋಟಾರ್‌ಸೈಕಲ್ ಖರೀದಿ: ಫ್ಲಿಪ್‌ಕಾರ್ಟ್‌ನಲ್ಲಿ ಈಗ ಲಭ್ಯ!