STRYDER: 40 ಕಿ.ಮೀ ರೇಂಜ್ ನೊಂದಿಗೆ ETB 200 ಇ-ಬೈಕ್ ಬಿಡುಗಡೆ

Tata Group: ಹೊಸ ETB 200 ಇ-ಬೈಕ್ ಬಿಡುಗಡೆ ಮಾಡಿದ ಟಾಟಾ ಗ್ರೂಪ್‌ನ ಸ್ಟ್ರೈಡರ್ ಸೈಕಲ್ಸ್‌

ಟಾಟಾ ಗ್ರೂಪ್‌ನ ಸ್ಟ್ರೈಡರ್ ಸೈಕಲ್ಸ್ (stryderbikes) ತನ್ನ ಇ-ಬೈಕ್ ಶ್ರೇಣಿಯನ್ನು ಇನ್ನಷ್ಟು ವಿಸ್ತರಿಸುತ್ತಾ, ಹೊಸ Stryder ETB 200 ಮಾದರಿಯನ್ನು ಬಿಡುಗಡೆ ಮಾಡಿದೆ. ನಗರ ಜೀವನಕ್ಕೆ ಪರಿಪೂರ್ಣ ಸಂಗಾತಿಯಾಗಿರುವ ಈ ಇ-ಬೈಕ್, ಪ್ರಾಯೋಗಿಕ ಮತ್ತು ಸ್ಪ್ಲಾಶ್ – ಪ್ರೂಫ್ ಬಾಹ್ಯ ಬ್ಯಾಟರಿ ವೈಶಿಷ್ಟ್ಯಗಳೊಂದಿಗೆ ನಿಮ್ಮ ಪ್ರಯಾಣವನ್ನು ಹೆಚ್ಚು ಆರಾಮದಾಯಕವಾಗಿಸುತ್ತದೆ. ಈಗಲೇ ಫ್ಲಿಪ್‌ಕಾರ್ಟ್ ಅಥವಾ ಸ್ಟ್ರೈಡರ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಶೇಕಡಾ 18 ರಷ್ಟು ರಿಯಾಯಿತಿಯೊಂದಿಗೆ ರೂ. 33,595 ಕ್ಕೆ ನಿಮ್ಮದಾಗಿಸಿಕೊಳ್ಳಿ.

ಸ್ಟ್ರೈಡರ್ ETB 200 ಇ-ಬೈಕ್ ಬ್ಯಾಟರಿ ಪ್ಯಾಕ್, ವೈಶಿಷ್ಟ್ಯಗಳು

ಸ್ಟ್ರೈಡರ್ ETB 200 ಇ-ಬೈಕ್ 36V x 250W BLDC ಮೋಟರ್ ಮತ್ತು,ಸ್ಪ್ಲಾಶ್-ಪ್ರೂಫ್ 36V x 7.8AH ಹೈ-ಪರ್ಫಾಮೆನ್ಸ್ ಬಾಹ್ಯ ಬ್ಯಾಟರಿಯೊಂದಿಗೆ ಸಜ್ಜಿತವಾಗಿದೆ. ಈ ಬ್ಯಾಟರಿಯನ್ನು ಸುಲಭವಾಗಿ ತೆಗೆದುಹಾಕಿ ಚಾರ್ಜ್ ಮಾಡಬಹುದಾಗಿದ್ದು, ಕೇವಲ ನಾಲ್ಕು ಗಂಟೆಗಳಲ್ಲಿ ಪೂರ್ಣ ಚಾರ್ಜ್ ಆಗುತ್ತದೆ. ಒಮ್ಮೆ ಪೂರ್ಣ ಚಾರ್ಜ್ ಆದ ಬಳಿಕ ಈ ವಾಹನವು 40 ಕಿಲೋಮೀಟರ್‌ವರೆಗೆ ಸುಗಮವಾಗಿ ಚಲಿಸುವ ಸಾಮರ್ಥ್ಯ ಹೊಂದಿದೆ. ಕಂಪನಿಯ ಪ್ರಕಾರ, ಈ ಇ-ಬೈಕ್ ನಗರದ ಓಡಾಟ ಹಾಗೂ ವಾರಾಂತ್ಯದ ಪ್ರವಾಸಗಳಿಗೆ ಅತ್ಯಂತ ಸೂಕ್ತವಾಗಿದೆ.

ಇದನ್ನೂ ಓದಿ: 180 ಕಿಮೀ ರೇಂಜ್ ನೀಡುವ iVoomi ಎಸ್1 ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

Stryder ETB 200 ಇ-ಬೈಕ್, ಸುರಕ್ಷತೆ ಮತ್ತು ಆರಾಮವನ್ನು ಪ್ರಾಮುಖ್ಯವಾಗಿ ಪರಿಗಣಿಸುವ ಸೈಕ್ಲಿಸ್ಟ್‌ಗಳಿಗೆ ಪರಿಪೂರ್ಣ ಆಯ್ಕೆಯಾಗಿದೆ. ಹೆಡ್‌ಲೈಟ್ ಸೇರಿದಂತೆ, ಸ್ವಯಂಚಾಲಿತ ಪವರ್ ಕಟ್-ಆಫ್, ಸಸ್ಪೆನ್ಷನ್ ಫೋರ್ಕ್ ಮತ್ತು ಅಗಲವಾದ 2.10 ಟೈರ್‌ಗಳು, ಡ್ಯುಯಲ್ ಡಿಸ್ಕ್ ಬ್ರೇಕ್‌ಗಳಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ಈ ಇ-ಬೈಕ್, ಸುಗಮ ಮತ್ತು ನಿಯಂತ್ರಿತ ಸವಾರಿಯನ್ನು ಖಾತರಿಪಡಿಸುತ್ತದೆ. ಕಂಪನಿಯು ಈ ಮಾದರಿಯ ಮೇಲೆ ನೀಡಿರುವ ಎರಡು ವರ್ಷಗಳ ವಾರಂಟಿ, ಗ್ರಾಹಕರಿಗೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡುತ್ತದೆ.

Stryder ETB 200 e-bike
Stryder ETB 200 e-bike

ಭಾರತದಲ್ಲಿ ವಿದ್ಯುತ್ ವಾಹನಗಳ ಬೇಡಿಕೆ ಹೆಚ್ಚುತ್ತಿದ್ದಂತೆ, ಸ್ಟ್ರೈಡರ್ ಕಂಪನಿಯ ವಿದ್ಯುತ್ ಬೈಸಿಕಲ್‌ಗಳ ಸರಣಿಯು ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಸಾಂಪ್ರದಾಯಿಕ ಬೈಸಿಕಲ್‌ಗಳಿಗೆ ವಿದ್ಯುತ್ ಬಲವನ್ನು ಸೇರಿಸುವ ಮೂಲಕ, ದೂರದ ಮತ್ತು ಕಷ್ಟಕರವಾದ ಪ್ರದೇಶಗಳಿಗೆ ಸುಲಭವಾಗಿ ತಲುಪಲು ಸವಾರರಿಗೆ ಸಾಧ್ಯವಾಗುತ್ತಿದೆ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ: ಕೋಮಾಕಿ ಎಕ್ಸ್-ಒನ್ ಎಲೆಕ್ಟ್ರಿಕ್ ಸ್ಕೂಟರ್ ಕೇವಲ ರೂ. 49,999 ಬೆಲೆಗೆ ಬಿಡುಗಡೆ

ಸ್ಟ್ರೈಡರ್ ಸೈಕಲ್ಸ್‌ನ ವ್ಯವಹಾರ ಮುಖ್ಯಸ್ಥ ರಾಹುಲ್ ಗುಪ್ತಾ ಅವರು, “ಭಾರತದ ಶಕ್ತಿ ವಲಯದಲ್ಲಿನ ಪರಿವರ್ತನೆಯನ್ನು ವೇಗಗೊಳಿಸುವಲ್ಲಿ ವಿದ್ಯುತ್ ದ್ವಿಚಕ್ರ ವಾಹನಗಳು ಪ್ರಮುಖ ಪಾತ್ರ ವಹಿಸಲಿವೆ. ನಮ್ಮ ಇತ್ತೀಚಿನ ನವೋಣ ETB 200 ಮಾದರಿಯ ಮೂಲಕ, ಗ್ರಾಹಕರಿಗೆ ಆಧುನಿಕ, ಬಳಕೆದಾರ ಸ್ನೇಹಿ ಹಾಗೂ ಪರಿಸರಕ್ಕೆ ಅನುಕೂಲಕರವಾದ ಸಾರಿಗೆ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ನಾವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ವಿಶಿಷ್ಟವಾದ ಬಾಹ್ಯ ಬ್ಯಾಟರಿ ತಂತ್ರಜ್ಞಾನದೊಂದಿಗೆ, ಈ ಮಾದರಿಯು ಆಧುನಿಕ ನಗರ ಜೀವನಶೈಲಿಗೆ ಅನುಗುಣವಾಗಿ ಹೊಂದಿಕೊಳ್ಳುವ ಮತ್ತು ಅನುಕೂಲಕರವಾದ ಪ್ರಯಾಣವನ್ನು ನೀಡುತ್ತದೆ.

ಟಾಟಾ ಗ್ರೂಪ್‌ನ (Tata Group) ಪರಂಪರೆಯನ್ನು ಮುಂದುವರಿಸುತ್ತಾ ಮತ್ತು ಸುಸ್ಥಿರ ಭವಿಷ್ಯದ ಕಡೆಗೆ ಕಾರ್ಯನಿರ್ವಹಿಸುತ್ತಾ, ನಮ್ಮ ಇ-ಬೈಕ್‌ಗಳು ಗ್ರಾಹಕರಿಗೆ ಪರಿಸರಕ್ಕೆ ಹಾನಿಯಾಗದ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಪ್ರೋತ್ಸಾಹಿಸುವ ಒಂದು ಅತ್ಯುತ್ತಮ ಪರಿಹಾರವಾಗಿದೆ. ಈ ಇ-ಬೈಕ್‌ಗಳು ನಗರದ ಟ್ರ್ಯಾಫಿಕ್‌ನಿಂದ ಮುಕ್ತಿ ಪಡೆದು ಸಣ್ಣ ದಾರಿಗಳಲ್ಲಿ ಸುಲಭವಾಗಿ ಸಂಚರಿಸುವ ಮೂಲಕ ನಗರ ಪ್ರಯಾಣವನ್ನು ಹೆಚ್ಚು ಸರಳಗೊಳಿಸುತ್ತವೆ.” ಎಂದು ಹೇಳಿದರು.

Leave a Comment