Skoda Kylaq: ಆಕರ್ಷಕ ಫೀಚರ್ಸ್ ನೊಂದಿಗೆ ಸ್ಕೋಡಾ ಕೈಲಾಕ್ ಪ್ರೀಮಿಯಂ ಎಸ್ಯುವಿ ಬಿಡುಗಡೆ

Skoda Kylaq: ಸ್ಕೋಡಾ ಕೈಲಾಕ್ ಬುಕಿಂಗ್ ಡಿಸೆಂಬರ್ 2 ರಿಂದ ಪ್ರಾರಂಭವಾಗಲಿದ್ದು, ವಿತರಣೆ ಜನವರಿ 27,2025 ರಿಂದ ಪ್ರಾರಂಭವಾಗಲಿದೆ.

ಭಾರತೀಯ ಗ್ರಾಹಕರಲ್ಲಿ ಎಸ್‌ಯುವಿಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯೆಂಬುದು ತಿಳಿದ ಸಂಗತಿ. ಈ ಬದಲಾಗುತ್ತಿರುವ ಮಾರುಕಟ್ಟೆಯ ವಾಸ್ತವಕ್ಕೆ ಅನುಗುಣವಾಗಿ, ಸ್ಕೋಡಾ ಕಂಪನಿ ತನ್ನ ಗಮನವನ್ನು ಸೆಡಾನ್ ಕಾರುಗಳಿಂದ ಎಸ್‌ಯುವಿಗಳ ಕಡೆಗೆ ಹರಿಸಿದೆ. ಈ ನಿಟ್ಟಿನಲ್ಲಿ, ಗ್ರಾಹಕರ ನಿರೀಕ್ಷೆಯನ್ನು ಪೂರೈಸುವ ಉದ್ದೇಶದಿಂದ ಕಂಪನಿಯು ಇತ್ತೀಚೆಗೆ ಸ್ಕೋಡಾ ಕೈಲಾಕ್ (Skoda Kylaq) ಎಂಬ ಹೊಸ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ.

ಸ್ಕೋಡಾ ಕೈಲಾಕ್ ಕಾಂಪ್ಯಾಕ್ಟ್ ಎಸ್‌ಯುವಿ ವಾಹನವು ರೂ. 7.89 (ಎಕ್ಸ್ ಶೋರೂಂ) ಲಕ್ಷದಿಂದ ಆರಂಭವಾಗುವ ಆಕರ್ಷಕ ಬೆಲೆಯೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ. ಕುಶಾಕ್ ಮತ್ತು ಸ್ಲಾವಿಯಾ ಮಾದರಿಗಳ ಯಶಸ್ಸಿನ ನಂತರ, ಸ್ಕೋಡಾ ಕೈಲಾಕ್ ಕೂಡ MQB-A0-IN ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿದೆ. ಈ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗುತ್ತಿರುವ ಇದು ಸ್ಕೋಡಾದ ಮೂರನೇ ಮಾದರಿಯಾಗಿದೆ. ಗ್ರಾಹಕರು ಕೈಲಾಕ್‌ಗಾಗಿ ಡಿಸೆಂಬರ್ 2ರಿಂದ ಬುಕಿಂಗ್ ಮಾಡಬಹುದು ಮತ್ತು ಈ ವಾಹನವನ್ನು ಜನವರಿ 27, 2025 ರಿಂದ ಪಡೆಯಬಹುದು.

ಇದನ್ನೂ ಓದಿ: 2024 ಸ್ಕೋಡಾ ಕುಶಾಕ್ ಒನಿಕ್ಸ್ ಆಟೋಮ್ಯಾಟಿಕ್ ಭಾರತದಲ್ಲಿ ಬಿಡುಗಡೆ ಬೆಲೆ ರೂ 13.49 ಲಕ್ಷ

ಸ್ಕೋಡಾ ಕೈಲಾಕ್: ಎಕ್ಸ್‌ಟೀರಿಯರ್‌, ವಿನ್ಯಾಸ

ಸ್ಕೋಡಾ ಕೈಲಾಕ್ (Skoda Kylaq) ಎಂಬ ಹೊಸ ಎಸ್‌ಯುವಿಯು ಸ್ಕೋಡಾ ಬ್ರ್ಯಾಂಡ್‌ನ ಇತ್ತೀಚಿನ ‘ಮಾಡರ್ನ್ ಸಾಲಿಡ್’ ವಿನ್ಯಾಸವನ್ನು ಮುಂದುವರಿಸಿದೆ. ಈ ವಾಹನದ ಅತ್ಯಂತ ಗಮನ ಸೆಳೆಯುವ ಅಂಶವೆಂದರೆ ಪಿಯಾನೋ ಬ್ಲ್ಯಾಕ್‌ ಬಣ್ಣದಲ್ಲಿ ಮೆರುಗುಗೊಳಿಸಲಾದ ಐಕಾನಿಕ್ ಬಟರ್ಫ್ಲೈ ಗ್ರಿಲ್. ಇದನ್ನು ಸುಂದರವಾಗಿ ವಿನ್ಯಾಸಗೊಳಿಸಲಾದ ಸ್ಪ್ಲಿಟ್ ಲೈಟಿಂಗ್ ಸೆಟಪ್‌ ವ್ಯವಸ್ಥೆ. ಮೇಲ್ಭಾಗದಲ್ಲಿ ತೆಳುವಾದ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳು ಮತ್ತು ಕೆಳಭಾಗದಲ್ಲಿ ಪ್ರೊಜೆಕ್ಟರ್ ಎಲ್‌ಇಡಿ ಹೆಡ್‌ಲೈಟ್‌ಗಳು ಈ ವಾಹನಕ್ಕೆ ಆಕರ್ಷಕ ನೋಟವನ್ನು ನೀಡುತ್ತವೆ. ಕುಶಾಕ್ ಮಾದರಿಯೊಂದಿಗೆ ಹಲವಾರು ವಿನ್ಯಾಸಾತ್ಮಕ ಸಾಮ್ಯತೆಗಳನ್ನು ಹೊಂದಿದ್ದರೂ, ಕೈಲಾಕ್ ಮಾದರಿಯು ಗಾತ್ರದಲ್ಲಿ ಸ್ವಲ್ಪ ಚಿಕ್ಕದಾಗಿ ಕಾಣುತ್ತದೆ.

Skoda Kylaq SUV Launched at Rs 7.89 Lakhs
Skoda Kylaq SUV

ಇದಲ್ಲದೆ, ಅಲ್ಯೂಮಿನಿಯಂನಂತೆ ಕಾಣುವ ಸ್ಪಾಯ್ಲರ್ , ಮತ್ತು 17-ಇಂಚಿನ ಅಲಾಯ್ ವೀಲ್‌ ಮತ್ತು ಎರಡು ಬಣ್ಣಗಳಲ್ಲಿರುವ ಬಂಪರ್ ಈ ವಾಹನದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಗ್ರಾಹಕರು ಕಾರ್ಬನ್ ಸ್ಟೀಲ್, ಕ್ಯಾಂಡಿ ವೈಟ್, ಆಲಿವ್ ಗೋಲ್ಡ್, ಲಾವಾ ಬ್ಲೂ, ಟಾರ್ನಾಡೋ ರೆಡ್ ಮತ್ತು ಬ್ರಿಲಿಯಂಟ್ ಸಿಲ್ವರ್ ಸೇರಿದಂತೆ ಆರು ಬಣ್ಣಗಳಲ್ಲಿ ಆಯ್ಕೆ ಮಾಡಬಹುದು.

ಈ SUV ಯು 3,995 ಮಿ.ಮೀ ಉದ್ದ, 1,783 ಮಿ.ಮೀ ಅಗಲ ಮತ್ತು 1,619 ಮಿ.ಮೀ ಎತ್ತರದ ಆಯಾಮಗಳನ್ನು ಹೊಂದಿದೆ. ಇದರ ವೀಲ್ಬೇಸ್ 2,566 ಮಿ.ಮೀ ಮತ್ತು ಗ್ರೌಂಡ್ ಕ್ಲಿಯರೆನ್ಸ್ 189 ಮಿ.ಮೀ ಆಗಿದೆ. ಈ SUV 446 ಲೀಟರ್ ಬೂಟ್ ಸಾಮರ್ಥ್ಯವನ್ನು ಹೊಂದಿದೆ, ಇದನ್ನು ಹಿಂಬದಿಯ ಸೀಟುಗಳನ್ನು ಮಡಿಸುವ ಮೂಲಕ 1,265 ಲೀಟರ್‌ಗೆ ಹೆಚ್ಚಿಸಬಹುದು.

ಇದನ್ನೂ ಓದಿ: ಹೊಸ ವೋಕ್ಸ್‌ವ್ಯಾಗನ್ ವರ್ಟಸ್ ಜಿಟಿ ಲೈನ್ ಮತ್ತು ಜಿಟಿ ಪ್ಲಸ್ ಸ್ಪೋರ್ಟ್ ಬಿಡುಗಡೆ

ಸ್ಕೋಡಾ ಕೈಲಾಕ್: ಇಂಟೀರಿಯರ್, ಫೀಚರ್‌ಗಳು

ಹೊಸ Skoda Kylaq ನ ಒಳಭಾಗದಲ್ಲಿ ಕುಶಾಕ್ ಮತ್ತು ಸ್ಲಾವಿಯಾ ಮಾದರಿಗಳಿಗೆ ಹೋಲುವಂತೆ, 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ವ್ಯವಸ್ಥೆ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, 8-ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇತರ ಹಲವಾರು ಆಧುನಿಕ ತಂತ್ರಜ್ಞಾನಗಳನ್ನು ಹೊಂದಿದೆ. ಲೆದರ್‌ಲೆಟ್ ಅಪ್‌ಹೋಲ್‌ಸ್ಟರಿ, ಕೀಲೆಸ್ ಎಂಟ್ರಿ, ಟೂ-ಸ್ಪೋಕ್ ಸ್ಟೀರಿಂಗ್ ವೀಲ್, ಫ್ರಂಟ್ ಸೆಂಟರ್ ಆರ್ಮ್‌ರೆಸ್ಟ್ ಮತ್ತು ಆಂಬಿಯೆಂಟ್ ಲೈಟಿಂಗ್‌ನಂತಹ ವೈಶಿಷ್ಟ್ಯಗಳು ಒಳಾಂಗಣವನ್ನು ಹೆಚ್ಚು ಆಕರ್ಷಕವಾಗಿಸುತ್ತವೆ. ಸಿಕ್ಸ್-ವೇ ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ಫ್ರಂಟ್ ಸೀಟ್ಗಳು, ಸಿಂಗಲ್ ಪೇನ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, ಗ್ಲೋವ್‌ಬಾಕ್ಸ್, ಕಪ್‌ಹೋಲ್ಡರ್‌ ಮತ್ತು ಕ್ಯಾಂಟನ್ ಸೌಂಡ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳು ಪ್ರಯಾಣಿಕರಿಗೆ ಹೆಚ್ಚಿನ ಆರಾಮವನ್ನು ಒದಗಿಸುತ್ತವೆ.

Skoda Kylaq SUV Dashboard
Skoda Kylaq SUV Dashboard

ಈ ವಾಹನವು ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಆರು ಏರ್ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ಹಲವಾರು ಆಧುನಿಕ ಸುರಕ್ಷತಾ ವೈಶಿಷ್ಟ್ಯಗಳು ಸೇರಿವೆ. ಇದಲ್ಲದೆ, ಮಲ್ಟಿ-ಕೊಲಿಷನ್ ಬ್ರೇಕಿಂಗ್ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳಂತಹ ಹಲವು ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೂಡ ಅಳವಡಿಸಲಾಗಿದೆ.

ಇದನ್ನೂ ಓದಿ: ಸಿಟ್ರನ್ ಏರ್‌ಕ್ರಾಸ್ ಎಕ್ಸ್‌ಪ್ಲೋರರ್ ಎಡಿಷನ್ ಬಿಡುಗಡೆ, ಆರಂಭಿಕ ಬೆಲೆ 10.23 ಲಕ್ಷ

ಸ್ಕೋಡಾ ಕೈಲಾಕ್: ಪವರ್ ಟ್ರೈನ್

ಸ್ಕೋಡಾ ಕೈಲಾಕ್ (Skoda Kylaq) ಎಸ್‌ಯುವಿ ತನ್ನ ಸಹೋದರಿ ಮಾದರಿಗಳಾದ ಕುಶಾಕ್ ಮತ್ತು ಸ್ಲಾವಿಯಾದಂತೆಯೇ 1.0-ಲೀಟರ್ TSI ಪೆಟ್ರೋಲ್, ಮೂರು ಸಿಲಿಂಡರ್ ಎಂಜಿನ್‌ನಿಂದ ಶಕ್ತಿ ಪಡೆಯುತ್ತದೆ. ಈ ಎಂಜಿನ್ 115 bhp ಗರಿಷ್ಠ ಶಕ್ತಿ ಮತ್ತು 178 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‌ಗೆ ಆರು-ಸ್ಪೀಡ್ ಮ್ಯಾನುವಲ್ ಅಥವಾ ಆರು-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೊಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳಿವೆ. ಸ್ಕೋಡಾ ಪ್ರಕಾರ, ಕೈಲಾಕ್ 0 ರಿಂದ 100 ಕಿಮೀ/ಗಂಟೆಗೆ 10.5 ಸೆಕೆಂಡುಗಳಲ್ಲಿ ವೇಗವನ್ನು ಪಡೆಯಬಹುದು.

Leave a Comment