Royal Enfield: ಹೊಸ ಬಣ್ಣದ ಆಯ್ಕೆಗಳೊಂದಿಗೆ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ ಬಿಡುಗಡೆ

ಯುವ ಜನರ ಹೃದಯವನ್ನು ಗೆದ್ದಿರುವ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಇಂದು ನೂತನ ಬಣ್ಣದ ಆಯ್ಕೆಯೊಂದಿಗೆ ಇನ್ನಷ್ಟು ಆಕರ್ಷಕವಾಗಿದೆ. Royal Enfield Bullet 350 ಮೋಟಾರ್‌ಸೈಕಲ್‌ಗೆ ಬೆಟಾಲಿಯನ್ ಬ್ಲ್ಯಾಕ್ (Battalion Black) ಎಂಬ ಹೊಸ ಬಣ್ಣದ ಆಯ್ಕೆ ಸೇರ್ಪಡೆಯಾಗಿದ್ದು, ಇದು ಮಿಲಿಟರಿ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಕಂಪನಿಯ ಅಧಿಕೃತ ವೆಬ್ಸೈಟ್ ಪ್ರಕಾರ ಈ ಮಾದರಿಯನ್ನು ರೂ.1,74,875/- (ಎಕ್ಸ್ ಶೋರೂಂ) ಎಂಬ ಆಕರ್ಷಕ ದರದಲ್ಲಿ ಖರೀದಿಸಬಹುದಾಗಿದೆ. ಇದು ಮಿಲಿಟರಿ ಬ್ಲ್ಯಾಕ್ ಗಿಂತ ರೂ 1000 ಹೆಚ್ಚಾಗಿದೆ. ಗ್ರಾಹಕರು ಮಿಲಿಟರಿ ಬ್ಲ್ಯಾಕ್, ಮಿಲಿಟರಿ ರೆಡ್, ಮಿಲಿಟರಿ ಸಿಲ್ವರ್‌ ಬ್ಲ್ಯಾಕ್ ಮತ್ತು ಮಿಲಿಟರಿ ಸಿಲ್ವರ್‌ ರೆಡ್ ಎಂಬ ಬಣ್ಣಗಳಲ್ಲಿ ತಮ್ಮ ಇಷ್ಟದ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದು.

ರಾಯಲ್ ಎನ್‌ಫೀಲ್ಡ್ ಬುಲೆಟ್ 350: ವೈಶಿಷ್ಟ್ಯಗಳು

ಐತಿಹಾಸಿಕ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ವಿನ್ಯಾಸದಲ್ಲಿ ಸೂಕ್ಷ್ಮ ಬದಲಾವಣೆಗಳೊಂದಿಗೆ, ಮೋಟಾರ್‌ಸೈಕಲ್‌ನ ಇಂಧನ ಟ್ಯಾಂಕ್ ಮತ್ತು ಸೈಡ್ ಪ್ಯಾನೆಲ್‌ಗಳಲ್ಲಿ ಐಕಾನಿಕ್ ಬ್ಯಾಡ್ಜ್‌ನೊಂದಿಗೆ ಗೋಲ್ಡ್ ಬಣ್ಣದ ರೇಖೆಗಳು ಅದರ ಸೊಬಗನ್ನು ಹೆಚ್ಚಿಸಿವೆ. ಸುರಕ್ಷತೆಯ ದೃಷ್ಟಿಯಿಂದ, ಸಿಂಗಲ್-ಚಾನೆಲ್ ಎಬಿಎಸ್ ವ್ಯವಸ್ಥೆಯನ್ನು ಸೇರಿಸಲಾಗಿದೆ.

ಹೊಸ ಬೈಕ್‌ನ ವೈಶಿಷ್ಟ್ಯಗಳಲ್ಲಿ ಯಾವುದೇ ಪ್ರಮುಖ ನವೀಕರಣಗಳನ್ನು ಮಾಡಲಾಗಿಲ್ಲ. ಹ್ಯಾಲೋಜನ್ ಹೆಡ್‌ಲೈಟ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಬಲ್ಬ್ ಮಾದರಿಯ ಇಂಡಿಕೇಟರ್‌ಗಳು, ಟೈಲ್ ಲೈಟ್ ಮತ್ತು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ಹಲವು ಆಕರ್ಷಕ ತಾಂತ್ರಿಕ ಸೌಲಭ್ಯಗಳನ್ನು ಈ ಬೈಕ್ ಹೊಂದಿದೆ. 195 ಕೆಜಿ ತೂಕ ಹೊಂದಿರುವ ಈ ಬೈಕ್‌ನಲ್ಲಿ 13 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ನೀಡಲಾಗಿದೆ, ಇದು ಉತ್ಕೃಷ್ಟ ಮೈಲೇಜ್‌ಗಾಗಿ ಪರಿಪೂರ್ಣವಾಗಿದೆ.

ಇದನ್ನೂ ಓದಿ: ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಹೊಸ ಎಡಿಷನ್‌ ಬಿಡುಗಡೆ, ಬೆಲೆ ಮತ್ತು ವೈಶಿಷ್ಟ್ಯಗಳು

Royal Enfield Bullet 350 Battalion Black
Royal Enfield Bullet 350 Battalion Black

ಹೊಸ ಬುಲೆಟ್ 350 ಮೋಟಾರ್‌ಸೈಕಲ್‌ನ ಚಕ್ರಗಳು ಅದರ ವಿಶಿಷ್ಟತೆಯನ್ನು ಹೆಚ್ಚಿಸುತ್ತವೆ. ಮುಂಭಾಗದಲ್ಲಿ 19 ಇಂಚಿನ ಮತ್ತು ಹಿಂಭಾಗದಲ್ಲಿ 18 ಇಂಚಿನ ಸ್ಪೋಕ್ ವೀಲ್‌ಗಳು ಅಳವಡಿಸಲ್ಪಟ್ಟಿದ್ದು, 100 ಮತ್ತು 120 ಸೆಕ್ಷನ್‌ನ ಟೈರ್‌ಗಳೊಂದಿಗೆ ಸಜ್ಜುಗೊಳಿಸಲಾಗಿದೆ. 1390 ಎಂಎಂ ವೀಲ್‌ಬೇಸ್ ಮತ್ತು 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ, ವಿವಿಧ ರಸ್ತೆಗಳಲ್ಲಿ ಸುಲಭವಾಗಿ ಸಂಚರಿಸಲು ಸಾಧ್ಯವಾಗುತ್ತದೆ. 805 ಎಂಎಂ ಎತ್ತರದ ಸೀಟ್‌ನಿಂದಾಗಿ ಹೆಚ್ಚಿನ ಎತ್ತರದ ಸವಾರರಿಗೂ ಇದು ಸೂಕ್ತವಾಗಿದೆ. 

ಸವಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಬೈಕ್‌ನಲ್ಲಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್‌ಗಳನ್ನು ಅಳವಡಿಸಲಾಗಿದೆ. ಬ್ರೇಕಿಂಗ್ ವ್ಯವಸ್ಥೆಯು ಡಿಸ್ಕ್ ಮತ್ತು ಡ್ರಮ್ ಬ್ರೇಕ್‌ಗಳ ಸಂಯೋಜನೆಯನ್ನು ಹೊಂದಿದೆ. ಹೈ-ಎಂಡ್ ಮಾದರಿಯಲ್ಲಿ ಎರಡೂ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಬಳಸಲಾಗಿದೆ.

ಇದನ್ನೂ ಓದಿ: ರಾಯಲ್ ಎನ್ಫೀಲ್ಡ್ ಗೆರಿಲ್ಲಾ450 ರೂ. 2.39 ಲಕ್ಷಕ್ಕೆ ಬಿಡುಗಡೆಯಾಗಿದೆ

Royal Enfield Bullet 350: ಎಂಜಿನ್

ಹೊಸ ಬೆಟಾಲಿಯನ್ ಬ್ಲ್ಯಾಕ್ ಬಣ್ಣದಲ್ಲಿ ಬಿಡುಗಡೆಯಾಗಿರುವ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಮೋಟಾರ್‌ಸೈಕಲ್‌ ಪವರ್‌ಟ್ರೇನ್‌ನಲ್ಲಿ ಯಾವುದೇ ಗಮನಾರ್ಹವಾದ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದರಲ್ಲಿ 349 ಸಿಸಿ ಏರ್-ಕೋಲ್ಡ್ ಸಿಂಗಲ್-ಸಿಲಿಂಡರ್ ಜೆ-ಸೀರಿಸ್ ಪೆಟ್ರೋಲ್ ಎಂಜಿನ್ ಉಪಯೋಗಿಸಲಾಗಿದೆ. ಈ ಎಂಜಿನ್ 20.4 ಬಿಹೆಚ್‍ಪಿ ಗರಿಷ್ಠ ಶಕ್ತಿ ಮತ್ತು 27 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಇದಕ್ಕೆ 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

ರಾಯಲ್ ಎನ್ಫೀಲ್ಡ್ (Royal Enfield) ಕಂಪನಿಯ ಒಟ್ಟಾರೆ ಮಾರಾಟದಲ್ಲಿ ಬುಲೆಟ್ 350 (Bullet 350) ಮಾದರಿಯ ಕೊಡುಗೆ ಅಷ್ಟೇನೂ ಗಮನಾರ್ಹವಾಗಿಲ್ಲ. ಆದರೂ, ತನ್ನ ಹೆರಿಟೇಜ್ ಬ್ರಾಂಡ್‌ನ ಖ್ಯಾತಿಯನ್ನು ಕಾಪಾಡಿಕೊಳ್ಳಲು ಕಂಪನಿ ಈ ಮಾದರಿಯನ್ನು ಮುಂದುವರಿಸಿದೆ. ಬುಲೆಟ್ 350 ಬೈಕ್‌ಗೆ ಒಂದು ಕಾಲದಲ್ಲಿ ಬಹಳಷ್ಟು ಜನರು ಆಕರ್ಷಿತರಾಗುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಕಿಕ್ ಸ್ಟಾರ್ಟ್ ವೈಶಿಷ್ಟ್ಯದ ಕೊರತೆಯಿಂದಾಗಿ ಅನೇಕರು ಈ ಬೈಕ್‌ನಿಂದ ದೂರ ಸರಿಯುತ್ತಿದ್ದಾರೆ.

Leave a Comment