PURE EV: 170 ಕಿ.ಮಿ ರೇಂಜ್‌ನೊಂದಿಗೆ ಇಕೋಡ್ರೈಫ್ಟ್ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಗೆ ಎಂಟ್ರಿ!

PURE EV EcoDryft ಎಲೆಕ್ಟ್ರಿಕ್ ಬೈಕ್ ಟಾಪ್ ಸ್ಪೀಡ್ ಗಂಟೆಗೆ 75 ಕಿ. ಮೀ. ಆಗಿದೆ.

ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕ್ಷೇತ್ರವು ಗಣನೀಯ ಪ್ರಗತಿಯನ್ನು ಸಾಧಿಸಿದ್ದು, ಹೊಸ ಮಾದರಿಗಳು ಸ್ಪರ್ಧಾತ್ಮಕ ಬೆಲೆಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ. ಈಗಾಗಲೇ ಹಲವು ಬ್ರ್ಯಾಂಡ್‌ಗಳು ತಮ್ಮ ವಿದ್ಯುತ್ ದ್ವಿಚಕ್ರ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಈಗ ಪ್ಯೂರ್ ಇವಿ (PURE EV) ಕಂಪನಿಯು ತನ್ನ ಹೊಸ ಇಕೋಡ್ರೈಫ್ಟ್ (EcoDryft) ಮಾದರಿಯೊಂದಿಗೆ ಗಮನ ಸೆಳೆದಿದೆ. ಪ್ಯೂರ್ ಇವಿ ಇಕೊ ಡ್ರಿಫ್ಟ್ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿದ್ದು ಆರಂಭಿಕ ಎಕ್ಸ್ ಶೋರೂಂ ಬೆಲೆ ಸುಮಾರು ರೂ 99,999 ಆಗಿದೆ.

ಪ್ಯೂರ್ ಇವಿ ಇಕೋಡ್ರೈಫ್ಟ್ ಎಲೆಕ್ಟ್ರಿಕ್ ಬೈಕ್‌ವು ಆಕರ್ಷಕ ವಿನ್ಯಾಸದೊಂದಿಗೆ, ವಿಶಿಷ್ಟ ರೇಂಜ್, ಆಧುನಿಕ ವೈಶಿಷ್ಟ್ಯಗಳು ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ 171 ಕಿಲೋಮೀಟರ್‌ಗಳವರೆಗೆ ಮೈಲೇಜ್ ನೀಡುವ ಈ ಬೈಕ್‌ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಪ್ರಯಾಣಿಕರಿಗೆ ಹೊಸ ಆಯ್ಕೆಯನ್ನು ನೀಡುತ್ತದೆ. ತಿಂಗಳಿಗೆ ಕೇವಲ ರೂ. 3,021 EMI ಮೂಲಕ ನೀವು ಈ ಬೈಕ್‌ನ ಮಾಲೀಕರಾಗಬಹುದು. ಪರಿಸರ ಸ್ನೇಹಿಯಾಗಿ ಪ್ರಯಾಣಿಸುವ ಆಸೆಯಿದ್ದರೆ, ಪ್ಯೂರ್ ಇವಿ ಇಕೋಡ್ರೈಫ್ಟ್ ಬೈಕ್‌ ನಿಮ್ಮ ಬಜೆಟ್‌ಗೆ ಸೂಕ್ತವಾಗಿದೆ.

ಇದನ್ನೂ ಓದಿ: ಓಲಾ ಕಂಪನಿಯ ರೋಡ್‌ಸ್ಟರ್ ಸರಣಿಯ ಎಲೆಕ್ಟ್ರಿಕ್ ಬೈಕ್ ರೂ. 75,000 ಕ್ಕೆ ಬಿಡುಗಡೆ

PURE EV EcoDryft
PURE EV EcoDryft

ಪ್ಯೂರ್ ಇವಿ ಇಕೋಡ್ರೈಫ್ಟ್: ವೈಶಿಷ್ಟ್ಯಗಳು

ಪ್ಯೂರ್ ಇವಿ ಇಕೋಡ್ರೈಫ್ಟ್ ಎಂಬುದು ಕೇವಲ ಒಂದು ಎಲೆಕ್ಟ್ರಿಕ್ ಬೈಕ್ ಮಾತ್ರವಲ್ಲ, ಅದು ಅತ್ಯುತ್ತಮ ಕಾರ್ಯಕ್ಷಮತೆ, ಆಕರ್ಷಕ ವಿನ್ಯಾಸ ಮತ್ತು ಅನೇಕ ಅನುಕೂಲಕರ ವೈಶಿಷ್ಟ್ಯಗಳ ಸಂಯೋಜನೆಯಾಗಿದೆ. ಇಂಧನ ಬೈಕ್‌ಗಳ ಸೊಗಸಾದ ವಿನ್ಯಾಸವನ್ನು ಹೊಂದಿರುವ ಈ ಎಲೆಕ್ಟ್ರಿಕ್ ಬೈಕ್ ನಲ್ಲಿ ಪುಶ್ ಬಟನ್ ಸ್ಟಾರ್ಟ್, ಇಕೋಡ್ರಿಫ್ಟ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಅನ್ನು ಹೊಂದಿದ್ದು, ಇದರಲ್ಲಿ ವೇಗ, ಬ್ಯಾಟರಿ ಮಟ್ಟ ಮತ್ತು ಟ್ರಿಪ್ ವಿವರಗಳಂತಹ ಅಗತ್ಯ ಮಾಹಿತಿಯನ್ನು ತೋರಿಸುತ್ತದೆ.

ಈ ಬೈಕ್‌ನಲ್ಲಿ ಎಲ್‌ಇಡಿ ಹೆಡ್‌ಲೈಟ್‌ಗಳು, ಟರ್ನ್ ಸಿಗ್ನಲ್ ಲ್ಯಾಂಪ್‌ಗಳು ಮತ್ತು ಟೈಲ್‌ಲೈಟ್‌ಗಳು ಅಳವಡಿಸಲಾಗಿದ್ದು, ರಾತ್ರಿ ವೇಳೆ ಸುರಕ್ಷಿತ ಸವಾರಿಗೆ ಹೆಚ್ಚಿನ ಗೋಚರತೆಯನ್ನು ಒದಗಿಸುತ್ತವೆ. ಹಾಗೂ ಮುಂದಿನ ಚಕ್ರವು ಡಿಸ್ಕ್ ಬ್ರೇಕಿಂಗ್ ವ್ಯವಸ್ಥೆಯನ್ನು ಹೊಂದಿದೆ. ಮತ್ತು ಈ ಬೈಕ್ ನಿಮ್ಮ ವೈಯಕ್ತಿಕ ಶೈಲಿಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಲು ಬ್ಲೂ, ರೆಡ್, ಗ್ರೇ ಮತ್ತು ಬ್ಲಾಕ್ ಎಂಬ ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.

ಇದನ್ನೂ ಓದಿ: ಕಡಿಮೆ ಬೆಲೆಗೆ 160 ಕಿಮೀ ರೇಂಜ್‌ ನೀಡುವ ಆರ್‌ವಿ1 ಎಲೆಕ್ಟ್ರಿಕ್‌ ಬೈಕ್‌ ಬಿಡುಗಡೆ

ಪ್ಯೂರ್ ಇವಿ ಇಕೋಡ್ರೈಫ್ಟ್: ಪವರ್‌ಟ್ರೇನ್, ಬ್ಯಾಟರಿ 

ಪ್ಯೂರ್ ಇವಿ ಇಕೋಡ್ರೈಫ್ಟ್ ವಾಹನವು 3 ಕಿಲೋವ್ಯಾಟ್ ಶಕ್ತಿಶಾಲಿ ಹಬ್ ಮೋಟರ್‌ನೊಂದಿಗೆ ಸಜ್ಜಾಗಿದ್ದು, ಉತ್ತಮ ಕಾರ್ಯಕ್ಷಮತೆ ನೀಡುತ್ತದೆ. ಈ ಮೋಟರ್ 40 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಬೈಕ್‌ನಲ್ಲಿ ತಕ್ಷಣದ ಟಾರ್ಕ್ ಮತ್ತು ಡ್ರೈವ್ ಮೂಡ್, ಕ್ರಾಸ್ ಓವರ್ ಮೋಡ್, ಥ್ರಿಲ್ ಮೋಡ್ ಎಂಬ ಮೂರು ವಿಭಿನ್ನ ಚಾಲನಾ ಮೋಡ್‌ಗಳು ಆನಂದದಾಯಕ ಚಾಲನಾ ಅನುಭವವನ್ನು ನೀಡುತ್ತದೆ. ಇದರ ಟಾಪ್ ಸ್ಪೀಡ್ ಗಂಟೆಗೆ 75 ಕಿ. ಮೀ. ಆಗಿದೆ. ಹಾಗೂ 84V ಚಾರ್ಜರ್ ಬಳಸಿ ಸಂಪೂರ್ಣವಾಗಿ ಈ ಬೈಕ್‌ ಚಾರ್ಜ್ ಆಗಲು ಸುಮಾರು 4 ರಿಂದ 6 ಗಂಟೆ ಸಮಯ ತೆಗೆದುಕೊಳ್ಳುತ್ತದೆ.

Leave a Comment