ಪನಾಮೆರಾ ಜಿಟಿಎಸ್ ಕಾರು 3.8 ಸೆಕೆಂಡುಗಳಲ್ಲಿ 0-100 ಕಿ. ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದು ಮತ್ತು ಇದರ ಟಾಪ್ ಸ್ಪೀಡ್ 302 ಕಿಮೀ ಆಗಿರುತ್ತದೆ
ಜಮ೯ನಿ ಮೂಲದ ಪ್ರಸಿದ್ದ ಲಕ್ಸುರಿ ಕಾರುಗಳು, ಸ್ಪೋಟ್ಸ್೯ ಕಾರುಗಳನ್ನು ತಯಾರಿಸುವ ಕಂಪನಿಯಾದ ಪೋರ್ಷೆಯು (Porsche) ಇತ್ತೀಚಿಗೆ ಭಾರತದಲ್ಲಿ ಹೊಸ ಪನಾಮೆರಾ ಜಿಟಿಎಸ್ ಕಾರನ್ನು ಅನ್ನು ಬಿಡುಗಡೆ ಮಾಡಿದ್ದು ಇದರ ಆರಂಭಿಕ ಬೆಲೆಯು ಸುಮಾರು ರೂ.2.34 ಕೋಟಿಗಳಾಗಿರುತ್ತದೆ.
ಪೋರ್ಷೆ ಪನಾಮೆರಾ ಜಿಟಿಎಸ್: ಪವರ್ಟ್ರೈನ್
ರೆಗ್ಯುಲರ್ ಪನಾಮೆರಾ ಮಾಡೆಲ್ V6 ಎಂಜಿನ್ ಹೊಂದಿರುತ್ತದೆ, ಆದರೆ ಪನಾಮೆರಾ ಜಿಟಿಎಸ್ ಶಕ್ತಿಯುತ 4.0-ಲೀಟರ್, ಟ್ವಿನ್-ಟರ್ಬೋ V8 ಎಂಜಿನ್ ಹೊಂದಿದ್ದು 500hp ಶಕ್ತಿಯನ್ನು ನೀಡುತ್ತದೆ – ಅದು ಹಳೆಯ ಪನಾಮೆರಾ ಜಿಟಿಎಸ್ಗಿಂತ 20hp ಹೆಚ್ಚು. ಈ ಕಾರು 0 ರಿಂದ 100kph ಗೆ ಕೇವಲ 3.8 ಸೆಕೆಂಡುಗಳಲ್ಲಿ ತಲುಪುತ್ತದೆ ಮತ್ತು ಗರಿಷ್ಠ ವೇಗ 302kph ಆಗಿರುತ್ತದೆ.
PASM (ಪೋರ್ಷೆ ಆಕ್ಟಿವ್ ಸಸ್ಪೆನ್ಶನ್ ಮ್ಯಾನೇಜ್ಮೆಂಟ್) ವ್ಯವಸ್ಥೆಯನ್ನು ಜಿಟಿಎಸ್ನ ಸ್ಪೋರ್ಟಿ ಸ್ವರೂಪಕ್ಕೆ ಪೂರೈಸಲು ವಿಶೇಷವಾಗಿ ಅಳವಡಿಸಲಾಗಿದೆ . ಇದು ರೆಗ್ಯುಲರ್ ಪನಾಮೆರದಲ್ಲಿರುವುದಕ್ಕಿಂತ 10mm ಕೆಳಗೆ ಕುಳಿತುಕೊಳ್ಳುವುದರಿಂದ ನಿಮಗೆ ಡೈನಾಮಿಕ್ ಡ್ರೈವಿಂಗ್ ಅನುಭವ ಸಿಗುತ್ತದೆ. ಕಾರಿನಲ್ಲಿ ಸುಧಾರಿತ ಆಂಟಿ-ರೋಲ್ ಬಾರ್ಗಳು ಸಹ ಇವೆ, ಇದರಿಂದ ಸ್ಪ್ರಿಂಗ್ ದರವನ್ನು ಕಡಿಮೆ ಮಾಡಲಾಗುತ್ತದೆ, ಹಾಗೂ ನಿಮ್ಮ ಕಾರು ಹೆಚ್ಚು ಸ್ಟೇಬಲ್ ಆಗಿರುವುದನ್ನು ಖಚಿತಪಡಿಸುತ್ತದೆ.

Porsche Panamera GTS: ಇಂಟೀರಿಯರ್ ಮತ್ತು ಏಕ್ಸ್ಟೀರಿಯರ್
ಹೊರಗಿನ ವಿನ್ಯಾಸವನ್ನು ಹೊಸತಾಗಿ ಅಪ್ಡೇಟ್ ಮಾಡಲಾಗಿದೆ, ಈ ಕಾರಿನ ಏಕ್ಸ್ಟೀರಿಯರ್ ಅನ್ನು ಬ್ಲ್ಯಾಕ್ ಜಿಟಿಎಸ್ ಲೋಗೋಗಳು, ವಿಶೇಷ ಮುಂಬಾಗದ ಪಾರ್ಟ್ಗಳು , ಡಾರ್ಕ್-ಟಿಂಟೆಡ್ HD ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್ಲೈಟ್ಗಳು, ಟೆಲ್ ಲೈಟ್ಗಳು ಮತ್ತು ಹೊಳೆಯುವ ಕೆಂಪು ಬ್ರೇಕ್ ಕ್ಯಾಲಿಪರ್ಗಳೊಂದಿಗೆ ಅಪ್ಡೇಟ್ ಗೊಳಿಸಲಾಗಿರುತ್ತದೆ. ಸ್ಟ್ಯಾಂಡರ್ಡ್ ಸ್ಪೋರ್ಟ್ ಪ್ಯಾಕೇಜ್ನಲ್ಲಿ, ನೀವು ಸೈಡ್ ಸ್ಕರ್ಟ್ಗಳು, ಫ್ರಂಟ್ ಇನ್ಸೆಟ್ಸ್ಗಳು, ಸೈಡ್ ವಿಂಡೋ ಟ್ರಿಮ್ ಮತ್ತು ಹಿಂಭಾಗದ ಬಂಪರ್ನಲ್ಲಿ ಸ್ಯಾಟಿನ್ ಮ್ಯಾಟ್-ಬ್ಲ್ಯಾಕ್ ಲುಕ್ ಕಾಣಬಹುದಾಗಿರುತ್ತದೆ. ಟೈಲ್ ಲ್ಯಾಂಪ್ ಗಳು ಡಾರ್ಕ್ ಬ್ರಾಂಜ್ ಬಣ್ಣದ್ದಾಗಿರುತ್ತದೆ. ಮತ್ತು ಪನಾಮೆರಾ ಜಿಟಿಎಸ್ 21-ಇಂಚಿನ ಆಂತರ್ಸೈಟ್ ಗ್ರೇ ಟರ್ಬೋ ಎಸ್ (Anthracite Grey Turbo S) ಸೆಂಟರ್-ಲಾಕ್ ಚಕ್ರಗಳನ್ನು ಹೊಂದಿದ್ದು ಇವು ಕಾರಿಗೆ ಸ್ಟೈಲಿಷ್ ಲುಕ್ ನೀಡುತ್ತವೆ.
ಪೋರ್ಷೆ ಕಾರುಗಳ ಇಂಟಿರಿಯರ್ ಡಿಸೈನ್ ಬಗ್ಗೆ ನೋಡುವುದಾದರೆ , ಇಲ್ಲಿ ನಾವು ಸ್ಯೂಡೆಯಂತೆ ಕಾಣುವ ರೇಸ್-ಟೆಕ್ಸ್ ಮೆಟೀರಿಯಲ್ ಅನ್ನು ಕಾಣಬುದಾಗಿರುತ್ತದೆ. ಇದನ್ನು ಮುಖ್ಯವಾಗಿ ರೂಫ್ ಲೈನಿಂಗ್, ಆರ್ಮ್ರೆಸ್ಟ್ಗಳು, ಡೋರ್ ಪ್ಯಾನಲ್ಗಳು ಮತ್ತು ಸೆಂಟರ್ ಪ್ಯಾನಲ್ಗಳಲ್ಲಿ ಬಳಸಲಾಗಿದೆ. ಪೋರ್ಷೆ ಪನಾಮೆರಾ ಜಿಟಿಎಸ್ ಮಾಡೆಲ್ ನಲ್ಲಿ ಕಾರ್ಮೈನ್ ರೆಡ್ (Carmine Red) ಮತ್ತು ಸ್ಲೇಟ್ ಗ್ರೇ ನೀಯೋ (Slate Grey Neo) ಸೇರಿದಂತೆ ಎರಡು ವಿಶೇಷ ಇಂಟೀರಿಯರ್ ಪ್ಯಾಕೇಜ್ಗಳಿದ್ದು ಗ್ರಾಹಕರು ತಮ್ಮ ಇಚ್ಚೆಗೆ ತಕ್ಕಂತೆ ಆಯ್ಕೆ ಮಾಡಬಹುದಾಗಿರುತ್ತದೆ. ಇದರೊಂದಿಗೆ ಕಾರ್ಬನ್ ಮ್ಯಾಟ್ ಪ್ಯಾಕೇಜ್ ಕೂಡ ಲಭ್ಯವಿರುತ್ತದೆ.
ಪೋರ್ಷೆ ತಮ್ಮ ಮಾತೃ ದೇಶವಾದ ಜರ್ಮನಿಯಲ್ಲಿ ಪನಾಮೆರಾ ಜಿಟಿಎಸ್ ಅನ್ನು ಕೆಲವು ತಿಂಗಳಲ್ಲಿ ವಿತರಿಸಲು ಪ್ರಾರಂಭಿಸುವುದಾಗಿ ತಿಳಿಸಿದೆ. ಭಾರತದಲ್ಲಿ ಈ ವರ್ಷದ ಅಂತ್ಯ ಅಥವಾ 2025 ರಲ್ಲಿಯೇ ವಿತರಣೆಯನ್ನು ನಿರೀಕ್ಷಿಸಬಹುದು ಹಾಗೂ ಜಿಟಿಎಸ್ ಟರ್ಬೋ, ಹೈಬ್ರಿಡ್ ಮಾಡೆಲ್ ಗಳು ಭಾರತದಲ್ಲಿ ಲಭ್ಯವಿಲ್ಲದ ಕಾರಣ, ಪನಾಮೆರಾ ಜಿಟಿಎಸ್ ಟಾಪ್ ಪನಾಮೆರಾ ಮಾಡೆಲ್ ಆಗಿ ಹೊರಹೊಮ್ಮಬಹುದಾಗಿದೆ.
ಇದನ್ನೂ ಓದಿ: ಪೋರ್ಷೆ ಮಾಕಾನ್ ಇವಿ RWD ಕಾರು ಭಾರತದಲ್ಲಿ ಬಿಡುಗಡೆ ಬೆಲೆ ರೂ. 1.23 ಕೋಟಿ