2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ (2024 Paris Olympics) ಬೆಳ್ಳಿ ಪದಕವನ್ನು ಗೆದ್ದು ದೇಶದ ಹೆಮ್ಮೆಯಾಗಿರುವ ನೀರಜ್ ಚೋಪ್ರಾ (Neeraj Chopra) ಅವರ ಬಗ್ಗೆ ಇಂದು ನಾವು ವಿಶೇಷವಾಗಿ ಮಾತನಾಡಲಿದ್ದೇವೆ. ಜಾವೆಲಿನ್ ಎಸೆತದಲ್ಲಿ ಅಮೋಘ ಪ್ರದರ್ಶನ ನೀಡಿ ವಿಶ್ವವೇ ಮೆಚ್ಚುವಂತೆ ಮಾಡಿರುವ ನೀರಜ್ ಅವರು, ತಮ್ಮ ಐಷಾರಾಮಿ ಕಾರುಗಳ ಸಂಗ್ರಹದಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. 2020ರ ಟೋಕಿಯೋ ಒಲಿಂಪಿಕ್ಸ್ನಲ್ಲಿ(2020 Tokyo Olympics) ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಜಗತ್ತಿನ ಗಮನ ಸೆಳೆದ ನೀರಜ್ ಚೋಪ್ರಾ.
ಭಾರತೀಯ ಅಥ್ಲೆಟಿಕ್ಸ್ನ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನು ಬರೆದರು. ಕೇವಲ 26ನೇ ವಯಸ್ಸಿನಲ್ಲಿ ಸತತ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಮೊದಲ ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕ್ರೀಡಾಂಗಣದಲ್ಲಿ ಭರ್ಜರಿ ಪ್ರದರ್ಶನ ನೀಡುವುದರ ಜೊತೆಗೆ, ವಾಹನಗಳ ಕಡೆಗೂ ನೀರಜ್ಗೆ ಅಪಾರ ಆಸಕ್ತಿ ಇದೆ. ಅವರ ವಾಹನಗಳ ಸಂಗ್ರಹದ ಬಗ್ಗೆ ಇಂದು ವಿಸ್ತಾರವಾಗಿ ತಿಳಿಯೋಣ.
ನೀರಜ್ ಚೋಪ್ರಾ ಕಾರುಗಳು (Neeraj Chopra Cars)
ಮಹೀಂದ್ರಾ XUV700 “ಜಾವೆಲಿನ್ ಎಡಿಷನ್”: ನೀರಜ್ ಚೋಪ್ರಾ ಅವರ ಕಾರು ಸಂಗ್ರಹದಲ್ಲಿ ಹೊಸ ಸೇರ್ಪಡೆಯಾಗಿರುವ ಮಹೀಂದ್ರಾ ಎಕ್ಸ್ಯುವಿ700 ‘ಜಾವೆಲಿನ್ ಎಡಿಷನ್’ ಕಾರು, ಒಲಿಂಪಿಕ್ಸ್ ಚಾಂಪಿಯನ್ಗೆ ಸಿಕ್ಕ ಅತ್ಯಂತ ವಿಶೇಷ ಗೌರವವಾಗಿದೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಜಾವೆಲಿನ್ ಅನ್ನು 87.58 ಮೀಟರ್ ಎಸೆದು ಚಿನ್ನದ ಪದಕ ಗೆದ್ದ ನೆನಪಿಗಾಗಿ, ಈ ಕಾರಿನ ಮುಂಭಾಗದ ಫೆಂಡರ್ನಲ್ಲಿ ಅದೇ ದೂರವನ್ನು ಸೂಚಿಸುವ 87.58 ಬ್ಯಾಡ್ಜ್ ಅನ್ನು ಅಳವಡಿಸಲಾಗಿದೆ. ಈ ವಿಶೇಷ ಕಾರು ನೀರಜ್ ಅವರ ಐತಿಹಾಸಿಕ ಸಾಧನೆಯನ್ನು ಶಾಶ್ವತವಾಗಿ ಸ್ಮರಿಸುತ್ತದೆ. ಈ ಐಷಾರಾಮಿ SUVಯ ಬೆಲೆ ರೂ. 13.99 ಲಕ್ಷದಿಂದ ರೂ. 26.04 ಲಕ್ಷದವರೆಗೆ ಇರುತ್ತದೆ.
ಮಹೀಂದ್ರಾ ಥಾರ್: Neeraj Chopra ಅವರು ಆಫ್ ರೋಡ್ ಗೆ ಹೆಸರುವಾಸಿಯಾಗಿರುವ ಕಪ್ಪು ಬಣ್ಣದ ಕ್ಲಾಸಿಕ್ ಮಹೀಂದ್ರ ಥಾರ್ ಎಸ್ಯುವಿಯನ್ನು ತಮ್ಮ ಗ್ಯಾರೇಜ್ನಲ್ಲಿ ಹೊಂದಿದ್ದಾರೆ. ಮಹೀಂದ್ರಾ ಥಾರ್ ಕಾರಿನ ಬೆಲೆ ರೂ. 14.06 ಲಕ್ಷದಿಂದ ರೂ. 21.91 ಲಕ್ಷದವರೆಗೆ ಇದೆ. ಈ ಬೆಲೆ ವ್ಯತ್ಯಾಸವು ಕಾರಿನ ಮಾದರಿ, ಎಂಜಿನ್ ಆಯ್ಕೆ ಮತ್ತು ಇತರ ವೈಶಿಷ್ಟ್ಯಗಳನ್ನು ಆಧರಿಸಿದೆ. ಟಾಪ್ ಮಾದರಿಯ ಥಾರ್ನ ಬೆಲೆ ರೂ. 21.91 ಲಕ್ಷವಾಗಿದೆ. ಆಟೋಮ್ಯಾಟಿಕ್ ಗೇರ್ಬಾಕ್ಸ್ನೊಂದಿಗೆ ಬರುವ ಥಾರ್ನ ಬೆಲೆ ರೂ. 17.61 ಲಕ್ಷದಿಂದ ರೂ. 21.91 ಲಕ್ಷದವರೆಗೆ ಇದೆ.
ಇದನ್ನೂ ಓದಿ: ಕ್ರಿಕೆಟಿಗ ಸರ್ಫರಾಜ್ ಖಾನ್ ತಂದೆಗೆ Mahindra Thar ಗಿಫ್ಟ್ ನೀಡಿದ ಆನಂದ್ ಮಹೀಂದ್ರಾ
ಟೊಯೋಟಾ ಫಾರ್ಚುನರ್: ನೀರಜ್ ಚೋಪ್ರಾ ಅವರ ಸಂಗ್ರಹದಲ್ಲಿ ಮತ್ತೊಂದು ವಾಹನವೆಂದರೆ ಟೊಯೋಟಾ ಫಾರ್ಚುನರ್. ಈ ಎಸ್ಯುವಿ ವಿಶ್ವಾಸಾರ್ಹತೆ, ಆಫ್-ರೋಡ್ ಸಾಮರ್ಥ್ಯ ಮತ್ತು ಐಷಾರಾಮಿಗಳಿಗೆ ಹೆಸರುವಾಸಿಯಾಗಿದೆ. ಟೊಯೋಟಾ ಫಾರ್ಚುನರ್ ಬೆಲೆಗಳು ₹ 33.43 ಲಕ್ಷಗಳಿಂದ ಪ್ರಾರಂಭವಾಗುತ್ತವೆ ಮತ್ತು ಉನ್ನತ ಮಾದರಿಯ ಬೆಲೆಗಳು ₹ 51.44 ಲಕ್ಷಗಳವರೆಗೆ ಹೋಗುತ್ತವೆ. ಈ ಕಾರು 7 ವಿಭಿನ್ನ ಆವೃತ್ತಿಗಳಲ್ಲಿ ಲಭ್ಯವಿದೆ.

ರೇಂಜ್ ರೋವರ್ ಸ್ಪೋರ್ಟ್: ಚೋಪ್ರಾ ಅವರ ಕಾರುಗಳ ಸಂಗ್ರಹದಲ್ಲಿ ಐಷಾರಾಮಿ ಮತ್ತು ಕಾರ್ಯಕ್ಷಮತೆಯ ಸಂಯೋಜನೆಯಾಗಿರುವ ರೇಂಜ್ ರೋವರ್ ಸ್ಪೋರ್ಟ್ ಕೂಡ ಒಂದು. ಈ ಪ್ರೀಮಿಯಂ ಎಸ್ಯುವಿ 1.98 ರಿಂದ 2.22 ಕೋಟಿ ರೂಪಾಯಿಗಳಷ್ಟು ಬೆಲೆ ಬಾಳುತ್ತದೆ ಎಂದು ಅಂದಾಜಿಸಲಾಗಿದೆ. ರೇಂಜ್ ರೋವರ್ ಸ್ಪೋರ್ಟ್ 2997 ಸಿಸಿ ಎಂಜಿನ್ನಿಂದ ಚಾಲಿತವಾಗಿದೆ, ಇದು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ನೊಂದಿಗೆ ಲಭ್ಯವಿದೆ. 2997 ಸಿಸಿ ಎಂಜಿನ್ 345.98bhp@4000rpm ಶಕ್ತಿ ಮತ್ತು 700Nm@1500-3000rpm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಫೋರ್ಡ್ ಮುಸ್ತಾಂಗ್ ಜಿಟಿ: ನೀರಜ್ ಚೋಪ್ರಾ ಅವರ ವಾಹನಗಳಲ್ಲಿ ಫೋರ್ಡ್ ಮಸ್ಟಾಂಗ್ ಜಿಟಿ ಕೂಡ ಸೇರಿದೆ. ಇದು ತನ್ನ ಪವರ್ ಮತ್ತು ಸ್ಟೈಲಿಶ್ ಗೆ ಹೆಸರುವಾಸಿಯಾದ ಸ್ಪೋರ್ಟ್ಸ್ ಕಾರು. ಈ ಕಾರಿನ ಬೆಲೆ ಸುಮಾರು ರೂ 93.52 ಲಕ್ಷ. ಮಸ್ಟಾಂಗ್ ಶಕ್ತಿಶಾಲಿ 5.0-ಲೀಟರ್ ವಿ8 ಎಂಜಿನ್ನನ್ನು ಹೊಂದಿದೆ. ಈ ಎಂಜಿನ್ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ನೊಂದಿಗೆ 400 ಬಿಹೆಚ್ಪಿ ಪವರ್ ಮತ್ತು 515 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಜಾಗ್ವಾರ್ ಎಫ್-ಪೇಸ್: ಜಾವೆಲಿನ್ ಮಾಸ್ಟರ್ ಚೋಪ್ರಾ, ಜಾಗ್ವಾರ್ ಎಫ್-ಪೇಸ್ನಂತಹ ವೈಭವೋಪೇತ ಸ್ಪೋರ್ಟ್ಸ್ ಕಾರನ್ನು ಹೊಂದಿದ್ದರೆ, ಜಾಗ್ವಾರ್ನ ವಿಶಿಷ್ಟ ವಿನ್ಯಾಸ ಮತ್ತು ಎಸ್ಯುವಿಯ ಪ್ರಾಯೋಗಿಕತೆಯನ್ನು ಒಂದುಗೂಡಿಸುವ ಈ ಕಾರು, ಚೋಪ್ರಾ ಅವರ ವೈಯಕ್ತಿಕ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಈ ಸ್ಪೋರ್ಟ್ ಕಾರು 2.0L Turbocharged I4 ಎಂಜಿನ್ನಿಂದ ಚಾಲಿತವಾಗಿದೆ, ಇದು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ನೊಂದಿಗೆ 246 ಬಿಹೆಚ್ಪಿ ಪವರ್ ಮತ್ತು 365 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ನೀರಜ್ ಚೋಪ್ರಾ ಬೈಕುಗಳು (Neeraj Chopra Bikes)
ಹಾರ್ಲೆ ಡೇವಿಡ್ಸನ್ 1200 ರೋಡ್ಸ್ಟರ್: Neeraj Chopra ಅವರ ನೆಚ್ಚಿನ ಬೈಕುಗಳಲ್ಲಿ ಒಂದು 2019 ಹಾರ್ಲೇ-ಡೇವಿಡ್ಸನ್ 1200 ರೋಡ್ಸ್ಟರ್. ಈ ಬೈಕ್ ಸ್ಯಾಟಿನ್ ಬ್ಲಾಕ್ ಕಲರ್ ಆಗಿದ್ದು. ಈ ಮೋಟಾರ್ಸೈಕಲ್ 1202cc ಶಕ್ತಿಯುತ ಎಂಜಿನ್ನಿಂದ ಚಾಲಿತವಾಗಿದ್ದು, ಇದು 78 bhp ಮತ್ತು 98 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಾರ್ಲೆ ಡೇವಿಡ್ಸನ್ ರೋಡ್ಸ್ಟರ್ ಬೆಲೆ 10.99 ಲಕ್ಷದಿಂದ ಪ್ರಾರಂಭವಾಗುತ್ತದೆ.
ಬಜಾಜ್ ಪಲ್ಸರ್ 220ಎಫ್: ನೀರಜ್ ಚೋಪ್ರಾ ಅವರ ಬೈಕ್ ಸಂಗ್ರಹದಲ್ಲಿ ಬಜಾಜ್ ಪಲ್ಸರ್ 220F ಒಂದು ವಿಶೇಷ ಸ್ಥಾನವನ್ನು ಹೊಂದಿದೆ. ಕಪ್ಪು ಬಣ್ಣದ ಈ ಸ್ಪೋರ್ಟಿ ಬೈಕ್, ತನ್ನ ಆಕರ್ಷಕ ವಿನ್ಯಾಸ ಮತ್ತು ಶಕ್ತಿಶಾಲಿ ಎಂಜಿನ್ಗಾಗಿ ಪ್ರಸಿದ್ಧವಾಗಿದೆ. ಈ ಬೈಕ್ ಅನ್ನು ಅವರು ತಮ್ಮ ಯೌವನದ ದಿನಗಳಲ್ಲಿ ಖರೀದಿಸಿದ್ದು, ಅಂದಿನ ಕಾಲದಲ್ಲಿ ಯುವಕರಲ್ಲಿ ಬಹಳ ಜನಪ್ರಿಯವಾಗಿದ್ದ ಈ ಮೋಟಾರ್ಸೈಕಲ್ಗೆ ಇದು ಅತ್ಯಂತ ಜನಪ್ರಿಯ ಬಣ್ಣ ಆಯ್ಕೆಗಳಲ್ಲಿ ಒಂದಾಗಿತ್ತು. ಬಜಾಜ್ ಪಲ್ಸರ್ 220 F ಬೈಕ್ನ ಬೆಲೆ ರೂ. 1,39,096 ರಿಂದ ರೂ. 1,41,086 ರವರೆಗೆ ಇದೆ.