ಜಪಾನ್ ದೇಶದ ಬಹುರಾಷ್ಟ್ರೀಯ ಕಾರು ಉತ್ಪಾದನ ಕಂಪನಿಯು ಭಾರತದಲ್ಲಿ ಇತ್ತೀಚೆಗೆ ತನ್ನ ಇತ್ತೀಚಿನ ನಿಸ್ಸಾನ್ ಎಕ್ಸ್-ಟ್ರೈಲ್ (Nissan X-Trail) ಎಸ್ಯುವಿಯನ್ನು ಪರಿಚಯಿಸಿದ್ದು, ಅದು ಆಗಸ್ಟ್ 1 ರಂದು ಮಾರುಕಟ್ಟೆಯನ್ನು ತಲುಪಲಿದೆ ಎಂಬ ಮಾಹಿತಿಯಿದೆ. ಈ ಮಾಡೆಲ್ 4th ಜೆನರೇಷನ್ ಶ್ರೇಣಿಯ ಭಾಗವಾಗಿದ್ದು, ಇದು ಸಿಬಿಯು(CBU) ಮಾರ್ಗದ ಮೂಲಕ ಭಾರತಕ್ಕೆ ಕಾಲಿಡಲಿದೆ. ಇದರ ಅಂದಾಜು ಬೆಲೆ ರೂ.40.0 ಲಕ್ಷದಿಂದ ರೂ. 45.0 ಲಕ್ಷಗಳಾಗಿದ್ದು, ಟೊಯೊಟಾ ಫಾರ್ಚೂನರ್, ಲೆಜೆಂಡರ್, ಸ್ಕೋಡಾ ಕೊಡಿಯಾಕ್ ಮತ್ತು ಜೀಪ್ ಮೆರಿಡಿಯನ್ ಕಾರುಗಳಿಗೆ ಪೈಪೋಟಿ ನೀಡಲಿದೆ.
ನಿಸ್ಸಾನ್ ಎಕ್ಸ್-ಟ್ರೈಲ್ ನಲ್ಲಿ, 7 ಪ್ರಯಾಣಿಕರಿಗೆ ಸ್ಥಳಾವಕಾಶವನ್ನು ಕಲ್ಪಿಸಲಾಗಿರುತ್ತದೆ. ಮೂರನೇ ಸಾಲಿನ ಆಸನಗಳನ್ನು ಬೇಕಾದ ರೀತಿಯಲ್ಲಿ ಸರಿಹೊಂದಿಸಬಹುದಾದವು, ಪ್ರಯಾಣಿಕರಿಗೆ ಹಚ್ಚುವರಿ ಆರಾಮಕ್ಕಾಗಿ ಫ್ಲಾಟ್ ಸರ್ಫೇಸ್ ಅನ್ನು ನೀಡಲಾಗಿದೆ. ಜೊತೆಗೆ, ಎರಡನೇ ಸಾಲಿನ ಆಸನಗಳನ್ನು ಹಿಂದುಮುಂದು ಮಾಡಬಹುದು, ಹಾಗೂ ಕಾರಿನಲ್ಲಿ ಚರ್ಮದ ಬದಲಾಗಿ ಆರಾಮದಾಯಕ ಫ್ಯಾಬ್ರಿಕ್ ಅಪ್ಹೋಲ್ಸ್ಟರಿಗಳನ್ನು ಹೊಂದಿದೆ.
ನಿಸ್ಸಾನ್ ಎಕ್ಸ್-ಟ್ರೈಲ್ ಫೀಚರ್ಸ್
ಕಾರಿನ ಎಕ್ವಿಪ್ಮೆಂಟ್ಗಳನ್ನು ನೋಡುವುದಾದರೆ, ಈ ಕಾರು ಡ್ಯುಯಲ್-ಪೇನ್ ಪನೋರಮಿಕ್ ಸನ್ರೂಫ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, 8-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ವೈರ್ಲೆಸ್ ಸ್ಮಾರ್ಟ್ಫೋನ್ ಚಾರ್ಜರ್, ಕೀಲೆಸ್ ಎಂಟ್ರಿ, ಪುಶ್-ಬಟನ್ ಸ್ಟಾರ್ಟ್, ಡ್ರೈವ್ ಮೋಡ್ಗಳು, ಆಟೋ-ಹೋಲ್ಡ್ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಕ್ರೂಸ್ ಕಂಟ್ರೋಲ್ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಸುರಕ್ಷತೆಗಅಗಿ 7 ಏರ್ಬ್ಯಾಗ್ಗಳು, ಗಣಕೀಕೃತ ವೈಪರ್ಗಳು, ಟ್ರಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಹೆಲ್ಪ್ ಮತ್ತು ಮುಂಭಾಗ ಹಾಗೂ ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳನ್ನು ಸಹಾ ಹೊಂದಿದೆ.

ಭಾರತದಲ್ಲಿ ನಿಸ್ಸಾನ್ ಎಕ್ಸ್-ಟ್ರೈಲ್(Nissan X-Trail) ಸಾಕಷ್ಟು ವಿಶಾಲವಾಗಿದೆ. ಇದು 4680 ಎಂಎಂ ಉದ್ದ, 1840 ಎಂಎಂ ಅಗಲ ಮತ್ತು 1725 ಎಂಎಂ ಎತ್ತರವಿದ್ದು, 2705 ಎಂಎಂ ವೀಲ್ಬೇಸ್ ಹೊಂದಿದೆ. ಈ SUV ಯು 210 ಎಂಎಂನ ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಅನ್ನು ನೀಡುತ್ತದೆ ಮತ್ತು ಸ್ಟೈಲಿಶ್ 20-ಇಂಚಿನ ಅಲ್ಲೋಯ್ ಚಕ್ರಗಳನ್ನು 255/45 ಆರ್ 20 ಟೈರ್ಗಳೊಂದಿಗೆ ಅಳವಡಿಸಲಾಗಿದೆ. ಹಾಗೂ ಬಣ್ಣದಲ್ಲಿ ಕೇವಲ ಮೂರು ಆಯ್ಕೆಗಳಿದ್ದು ಅವು ಡೈಮಂಡ್ ಬ್ಲ್ಯಾಕ್, ಷಾಂಪೇನ್ ಸಿಲ್ವರ್ ಮತ್ತು ಪರ್ಲ್ ವೈಟ್.
Nissan X-Trail: ಪವರ್ ಟ್ರೈನ್
ಭಾರತದಲ್ಲಿ, ನೀವು 1.5-ಲೀಟರ್ ಮೂರು ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿರುವ ಎಕ್ಸ್-ಟ್ರೈಲ್ ಅನ್ನು ಕಾಣಬಹುದು. ಈ ಎಂಜಿನ್ 12 ವಿ ಮೈಲ್ಡ್-ಹೈಬ್ರಿಡ್ ಸಿಸ್ಟಮ್ ಅನ್ನು ಹೊಂದಿದ್ದು, ಒಟ್ಟು 163 ಬಿಹೆಚ್ಪಿ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು ಶಿಫ್ಟ್-ಬೈ-ವೈರ್ ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ನೊಂದಿಗೆ ಮ್ಯಾಚ್ ಮಾಡಲಾಗಿದೆ. ಅದು ಮುಂಭಾಗದ ಚಕ್ರಗಳಿಗೆ ಮಾತ್ರ ಶಕ್ತಿ ನೀಡುತ್ತದೆ.
ಪ್ರಸ್ತುತ ನಿಸ್ಸಾನ್ ತನ್ನ ಸಣ್ಣ ಎಸ್ಯುವಿಗಳಿಗೆ ಹೊಸ ನೋಟವನ್ನು ನೀಡಲು ನಿಸ್ಸಾನ್ ಮ್ಯಾಗ್ನೈಟ್ ಅನ್ನು ನವೀಕರಿಸುವ ಪ್ರಕ್ರಿಯೆಯಲ್ಲಿದೆ. ಈ ಹೊಸ ಆವೃತ್ತಿಯನ್ನು ಐದು ಮತ್ತು ಏಳು ಆಸನಗಳಲ್ಲಿ ಕಾಣಬಹುದಾಗಿರುತ್ತದೆ. ಇದರ ಜೊತೆಗೆ, ನಿಸ್ಸಾನ್ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಪವರ್ ವಾಹನವನ್ನು ಅಭಿವೃದ್ಧಿಪಡಿಸುತ್ತಿದೆ. ಮತ್ತು ಇವುಗಳನ್ನು 2026ರ ವೇಳೆಗೆ ಬಿಡುಗಡೆಮಾಡುವ ನಿರೀಕ್ಷೆಯಿದೆ.
ಇದನ್ನೂ ಓದಿ: ಹ್ಯುಂಡೈ ಎಕ್ಸ್ಟೆರ್ CNG ಡ್ಯುಯಲ್ ಸಿಲಿಂಡರ್ ಭಾರತದಲ್ಲಿ ಬಿಡುಗಡೆ! ಬೆಲೆ 8.50 ಲಕ್ಷ ರೂ