Nissan X-Trail: ನಿಸ್ಸಾನ್ ಎಕ್ಸ್-ಟ್ರೈಲ್ ರೂ. 49.92 ಲಕ್ಷಕ್ಕೆ ಬಿಡುಗಡೆ

ನಿಸ್ಸಾನ್ ಎಕ್ಸ್-ಟ್ರೈಲ್ ಅನ್ನು ಕೇವಲ ಒಂದು ಟ್ರಿಮ್ನಲ್ಲಿ ಬರುತ್ತದೆ, ಇದನ್ನು ಸಿಬಿಯು ಆಗಿ ಇಂಪೋಟ್‌೯ ಮಾಡಿಕೊಳ್ಳಲಾಗುತ್ತದೆ

ನಿಸ್ಸಾನ್ ಇತ್ತೀಚೆಗೆ ಭಾರತದಲ್ಲಿ Nissan X-Trail SUV ಅನ್ನು 49.92 ಲಕ್ಷ ರೂಪಾಯಿ (ಎಕ್ಸ್-ಶೋರೂಂ) ಆರಂಭಿಕ ಬೆಲೆಯಲ್ಲಿ ಪರಿಚಯಿಸಿದೆ. ಈ SUV ಮೂರು ರೋ ಸೀಟುಗಳೊಂದಿಗೆ ಬರುತ್ತದೆ ಮತ್ತು ಸಂಪೂರ್ಣ ಇಂಪೋಟ್‌೯ ಆಗಿ ತರಲಾಗುತ್ತಿದೆ. ನಿಸ್ಸಾನ್ ಎಕ್ಸ್-ಟ್ರೈಲ್‌ ಎಸ್ಯುವಿ 3 ವರ್ಷಗಳು/1 ಲಕ್ಷ ಕಿಮೀ ವಾರಂಟಿ ಮತ್ತು ಮೂರು ವರ್ಷಗಳ ಕಾಂಪ್ಲಿಮೆಂಟರಿ ರೋಡ್‌ಸೈಡ್‌  ಅಸಿಸ್ಟೆಂಟ್‌ ಅನ್ನು ಒಳಗೊಂಡಿದೆ. ನಿಸ್ಸಾನ್ ಎಕ್ಸ್-ಟ್ರೈಲ್ ನ ಒಂದೇ ವೇರಿಯಂಟ್‌ನಲ್ಲಿ ಅಲ್ಲಿ ಬರಲಿದ್ದು ಮೂರು ಬಣ್ಣಗಳ ಆಯ್ಕೆಗಳನ್ನು ನೀವು ಪಡೆಯಬಹುದು: ಅವು ಪರ್ಲ್ ವೈಟ್, ಷಾಂಪೇನ್ ಸಿಲ್ವರ್ ಮತ್ತು ಡೈಮಂಡ್ ಬ್ಲ್ಯಾಕ್ ಆಗಿರುತ್ತವೆ.

ನಿಸ್ಸಾನ್ ಎಕ್ಸ್-ಟ್ರೈಲ್ ವೈಶಿಷ್ಟ್ಯಗಳು

ಎಕ್ಸ್-ಟ್ರೈಲ್ ನಿಮಗೆ ಆನಂದಿಸಲು ಕೆಲವು ಅದ್ಭುತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇವುಗಳಲ್ಲಿ ಡ್ಯುಯಲ್-ಪೇನ್ ಪನೋರಮಿಕ್ ಸನ್‌ರೂಫ್, ಅನುಕೂಲಕರ ಡ್ಯುಯಲ್-ಜೋನ್ ಕ್ಲೈಮೇಟ್‌ ಕಂಟ್ರೋಲ್‌ ಸಿಸ್ಟಮ್‌ , ಎಂಜಿನ್ ಸ್ಟಾರ್ಟ್-ಸ್ಟಾಪ್ ಬಟನ್, ನಿಮ್ಮ ಮಾಹಿತಿ ಮನರಂಜನಾ ಅಗತ್ಯಗಳಿಗಾಗಿ 8-ಇಂಚಿನ ಟಚ್‌ಸ್ಕ್ರೀನ್, ದೊಡ್ಡ 12.3-ಇಂಚಿನ ಡಿಜಿಟಲ್ ಡ್ರೈವರ್‌ನ ಡಿಸ್ಪ್ಲೇ, ಸುಲಭ ಚಾರ್ಜಿಂಗ್‌ಗಾಗಿ ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಅತ್ಯುತ್ತಮ ಆಡಿಯೋ ಗುಣಮಟ್ಟಕ್ಕಾಗಿ ಅದ್ಭುತವಾದ 10-ಸ್ಪೀಕರ್ ಪ್ರೀಮಿಯಂ ಬೋಸ್ ಸರೌಂಡ್‌ ಸೌಂಡ್‌ ಸಿಸ್ಟಮ್ ಮತ್ತು ಕೀ ಲೆಸ್‌ ಎಂಟ್ರಿ ಮತ್ತು ಗೋ ಹಾಗೂ ಇದರಲ್ಲಿ ನೀವು ನಿಮ್ಮ ಪಸ೯ನಲೈಸ್ಡ್‌ ಡ್ರೈವಿಂಗ್ ಅನುಭವಕ್ಕಾಗಿ  ವಿವಿಧ ಡ್ರೈವ್ ಮೋಡ್‌ಗಳ ನಡುವೆ ಬದಲಾಯಿಸಬಹುದು.

ಸುರಕ್ಷತೆಯ ವಿಷಯಕ್ಕೆ ಬಂದಾಗ, ಈ ವಾಹನವು ನಿಮಗೆ ಉತ್ತಮ ರಕ್ಷಣೆ ನೀಡುತ್ತದೆ. ಇದು ಏಳು ಏರ್‌ಬ್ಯಾಗ್‌ಗಳು, ಹೆಚ್ಚುವರಿ ರಕ್ಷಣೆಗಾಗಿ 360-ಡಿಗ್ರಿ ಸರೌಂಡ್ ಕ್ಯಾಮೆರಾ, ಆಟೋಮ್ಯಾಟಿಕ್‌ ವೈಪರ್‌ಗಳು, EBD ಜೊತೆಗೆ ABS, ಟ್ರಾಕ್ಷನ್ ಕಂಟ್ರೋಲ್, ಲಿಮಿಟೆಡ್-ಸ್ಲಿಪ್ ಡಿಫರೆನ್ಷಿಯಲ್, ಹಿಲ್-ಸ್ಟಾರ್ಟ್ ಅಸಿಸ್ಟ್ ಮತ್ತು ಫ್ರೊಂಟ್‌ ಪಾಕಿ೯ಂಗ್ ಸೆನ್ಸಾರ್‌ಗಳನ್ನು ಹೊಂದಿದೆ. ಜೊತೆಗೆ, ಇದು ನಿಮ್ಮ ವರೀ-ಫ್ರೀ ಡ್ರೈವಿಂಗ್ ಅನುಭವಕ್ಕಾಗಿ. ಆಟೋ-ಹೋಲ್ಡ್ ಫಂಕ್ಷನ್‌ ಮತ್ತು ಕ್ರೂಸ್ ಕಂಟ್ರೋಲ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಹೊಂದಿರುತ್ತದೆ.

ನಿಸ್ಸಾನ್ ಎಕ್ಸ್-ಟ್ರೈಲ್(Nissan X-Trail) 7 ಸೀಟರ್ ಸೆಟಪ್ ಅನ್ನು ಹೊಂದಿದೆ. ಎರಡನೇ ಸಾಲಿನಲ್ಲಿ, ನೀವು 40/20/40 ಸ್ಪ್ಲಿಟ್-ಫೋಲ್ಡಿಂಗ್, ಸ್ಲೈಡಿಂಗ್ ಮತ್ತು ರಿಕ್ಲೈನಿಂಗ್ ವೈಶಿಷ್ಟ್ಯವನ್ನು ಪಡೆಯುತ್ತೀರಿ. ಮೂರನೇ ಸಾಲು ನಿಮಗೆ 50/50 ಸ್ಪ್ಲಿಟ್‌ಗಳಿದ್ದು,  ಫೋಲ್ಡ್ ಮತ್ತು ರಿಕ್ಲೈನ್ ಮಾಡಬಹುದಾಗಿರುತ್ತದೆ.

Nissan X-Trail
Nissan X-Trail

Nissan X-Trail ಪವರ್‌ಟ್ರೇನ್

ನಿಸ್ಸಾನ್ ಎಕ್ಸ್-ಟ್ರೈಲ್(Nissan X-Trail) 1.5-ಲೀಟರ್ ಮೂರು-ಸಿಲಿಂಡರ್ ಟರ್ಬೋ-ಪೆಟ್ರೋಲ್ ಎಂಜಿನ್ ಮತ್ತು 12V ಮೈಲ್ಡ್-ಹೈಬ್ರಿಡ್ ಸಿಸ್ಟಮ್‌ನ ಕಾಮಬಿನೇಷನೊಂದಿಗೆ ಬರುತ್ತದೆ. ಈ ಎಂಜಿನ್ 163 ಹಾಸ್‌೯ ಪವರ್ ಮತ್ತು 300 Nm ಟಾರ್ಕ್ ಅನ್ನು ನೀಡುತ್ತದೆ. ಭಾರತೀಯ ಆವೃತ್ತಿಯಲ್ಲಿ ಕಂಟಿನ್ಯೂಯಸ್ ವೇರಿಯಬಲ್ ಟ್ರಾನ್ಸ್ಮಿಷನ್ (CVT) ಅನ್ನು ಸ್ಟಾಂಡಡ್‌೯ ಫೀಚರ್‌ ಆಗಿ ‌ ಹೊಂದಿರುತ್ತದೆ, ಇದು ಮುಂಭಾಗದ ಚಕ್ರಗಳಿಗೆ ಶಕ್ತಿಯನ್ನು ಒದಗಿಸುತ್ತದೆ. ನಿಸ್ಸಾನ್ ಎಕ್ಸ್-ಟ್ರೈಲ್‌ಗ 13.7 ಕಿಮೀ / ಲೀಟರ್ ಫ್ಯೂಯೆಲ್‌ ಎಫೀಷಿಯನ್ಸಿ ನಿಡುತ್ತದೆ. ಇನ್ನೊಂದು ವಿಶೇಷತೆಯೆಂದರೆ ನಿಸ್ಸಾನ್‌ನ ಸ್ಪೆಷಲ್‌ ವೇರಿಯಬಲ್‌ ಕಂಪ್ರೆಷನ್‌ ಟೆಕ್ನಾಲಜಿ, ಇದು ಅಗತ್ಯವಿದ್ದಾಗ ಪವರ್‌  ಅಥವಾ ಫ್ಯೂಯೆಲ್‌ ಎಫೀಷಿಯನ್ಸಿಯನ್ನು ಹೆಚ್ಚಿಸಲು ಕಂಪ್ರೆಷನ್‌ ರೇಷ್ಯೂ ಅನ್ನು ಅಡ್ಜಸ್ಟ್‌ ಮಾಡುವ ಫೀಚರ್‌ ಅನ್ನು ಹೊಂದಿರುತ್ತದೆ.

ಇದನ್ನೂ ಓದಿ: ಮಿನಿ ಕೂಪರ್ ಎಸ್ 3-ಡೋರ್‌ ಕಾರು ರೂ. 44.90 ಲಕ್ಷಕ್ಕೆ ಬಿಡುಗಡೆಯಾಗಿದೆ

Leave a Comment