ಹೊಸ ತಲೆಮಾರಿನ ಕಿಯಾ ಕಾರ್ನೀವಲ್ ಕಾರುಗಳು ಮೊದಲು ಸಿಬಿಯು ಮಾದರಿಗಳಾಗಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯತೆಯಿದೆ.
ಕಿಯಾ ಇಂಡಿಯಾ(Kia India) ತನ್ನ ಗ್ರಾಹಕರಿಗೆ ಉತ್ತಮ ಸುದ್ದಿಯೊಂದಿಗೆ ಮರಳಿದೆ! ಕಂಪನಿಯು ಹೊಸ ಮಾದರಿಯ ಕಿಯಾ ಕಾರ್ನೀವಲ್(Kia Carnival) ಅನ್ನು ಅಕ್ಟೋಬರ್ 3, 2024 ರಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈ ಹೊಸ ಕಾರ್ನೀವಲ್, ಕೊರಿಯಾದ ಕಾರು ತಯಾರಕ ಕಂಪನಿಯಾದ ಕಿಯಾಕ್ಕೆ ಭಾರತದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಲು ಸಹಾಯ ಮಾಡುವ ನಿರೀಕ್ಷೆಯಿದೆ. 2023ರ ಆಟೋ ಎಕ್ಸ್ಪೋದಲ್ಲಿ ಕೆ.ಎ.4 ಎಂದು ಕರೆಯಲಾಗುತ್ತಿದ್ದ ಈ ವಾಹನವು ಈಗ ಹೊಸ ನೋಟದೊಂದಿಗೆ ಹೆಚ್ಚು ಆಧುನಿಕವಾಗಿ ಕಾಣುತ್ತಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯವಾಗಲಿರುವ ಕಿಯಾ ಕಾರ್ನೀವಲ್ ಎಂಬಿವಿ, ಕಳೆದ ಆಟೋ ಎಕ್ಸ್ಪೋದಲ್ಲಿ ಪ್ರದರ್ಶಿಸಲಾದ ಕಿಯಾ KA4 ಮಾದರಿಯ ನವೀಕೃತ ಆವೃತ್ತಿಯಾಗಿದೆ. ಆರಂಭದಲ್ಲಿ ಈ ವಾಹನವನ್ನು ಸಂಪೂರ್ಣವಾಗಿ ವಿದೇಶದಿಂದ ಆಮದು ಮಾಡಿಕೊಳ್ಳಲಾಗುವುದು ಎಂದು ತಿಳಿದುಬಂದಿದೆ. ನಂತರದ ದಿನಗಳಲ್ಲಿ ಭಾರತದಲ್ಲಿಯೇ ಈ ವಾಹನವನ್ನು ತಯಾರಿಸುವ ಯೋಜನೆ ಇದೆ. ಆಮದು ಮಾಡಿಕೊಳ್ಳಲಾಗುವ ಕಾರ್ನೀವಲ್ ವಾಹನದ ಬೆಲೆ ಸುಮಾರು 50 ಲಕ್ಷ ರೂಪಾಯಿಗಳಿಂದ ಆರಂಭವಾಗುವ ನಿರೀಕ್ಷೆ ಇದೆ.
ಕಿಯಾ ಕಾರ್ನಿವಲ್ ಫೀಚರ್ಸ್ ಗಳು
ಹೊಸ ಮಾದರಿಯ Kia Carnival ಆಕರ್ಷಕ ಮತ್ತು ಆಧುನಿಕ ನೋಟವನ್ನು ಹೊಂದಿದ್ದು, ಇದು ಯುವ ಮತ್ತು ಡೈನಾಮಿಕ್ ಗ್ರಾಹಕರನ್ನು ಆಕರ್ಷಿಸುತ್ತದೆ. ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್ ಮತ್ತು ಎತ್ತರದ ಹೆಡ್ಲೈಟ್‌ಗಳು ಕಾರಿಗೆ ಆಕ್ರಮಣಕಾರಿ ನೋಟವನ್ನು ನೀಡುತ್ತವೆ. ಮೂರು ಸ್ಟೆಪ್ ನ ಲೈಟ್ ಸಿಸ್ಟಮ್ ಮತ್ತು ಸ್ಟೈಲಿಶ್ ಎಲ್-ಆಕಾರದ ಎಲ್ಇಡಿ ಲೈಟ್ಸ್ಗಳು ಕಾರಿನ ಮುಂಭಾಗವನ್ನು ಇನ್ನಷ್ಟು ಪ್ರಕಾಶಮಾನಗೊಳಿಸುತ್ತವೆ. ನವೀಕರಿಸಿದ ಬಂಪರ್‌ನ ವಿಶಾಲವಾದ ಸೆಂಟ್ರಲ್ ಏರ್ ಇನ್ಟೇಕ್ ಕಾರಿಗೆ ಭರ್ಜರಿ ನೋಟವನ್ನು ನೀಡುತ್ತದೆ.

ವಿಶ್ವದ ಇತರ ದೇಶಗಳಲ್ಲಿ, ಕಾರ್ನೀವಲ್ ಮಾದರಿಯು ಎರಡು 12.3-ಇಂಚಿನ ಟಚ್ ಸ್ಕ್ರೀನ್ ಗಳನ್ನು ಹೊಂದಿದ್ದು, ಚಾಲಕ ಮತ್ತು ಜೊತೆಯ ಪ್ರಯಾಣಿಕರಿಗೆ ಮನರಂಜನೆ ಮತ್ತು ವಾಹನವನ್ನು ನಿಯಂತ್ರಿಸಲು ಅನುಕೂಲವಾಗುವಂತೆ ಮಾಡುತ್ತದೆ. ಇದಲ್ಲದೆ, ಹಿಂಭಾಗದಲ್ಲಿ 14.6-ಇಂಚಿನ ದೊಡ್ಡ ಎಚ್ಡಿ ಟಚ್ ಸ್ಕ್ರೀನ್ ಹಿಂಬದಿಯ ಪ್ರಯಾಣಿಕರಿಗೆ ಉತ್ತಮ ಮನರಂಜನೆಯನ್ನು ನೀಡುತ್ತದೆ. ಸುರಕ್ಷತೆಯ ದೃಷ್ಟಿಯಿಂದ, ಈ ಕಾರು ಎಂಟು ಏರ್‌ಬ್ಯಾಗ್‌ಗಳನ್ನು ಹೊಂದಿದ್ದು, ಅತ್ಯಾಧುನಿಕ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS)ನೊಂದಿಗೆ ಸುಸಜ್ಜಿತವಾಗಿದೆ. ಜೊತೆಗೆ, 7, 9 ಅಥವಾ 11 ಆಸನಗಳನ್ನು ಆಯ್ಕೆ ಮಾಡುವ ಸೌಲಭ್ಯವಿದೆ. ಭಾರತದಲ್ಲಿ ಬಿಡುಗಡೆಯಾಗುವ ಕಾರಿನಲ್ಲಿ ಈ ಎಲ್ಲಾ ಅತ್ಯಾಧುನಿಕ ವೈಶಿಷ್ಟ್ಯಗಳು ಸಿಗುವ ಸಾಧ್ಯತೆ ಹೆಚ್ಚಿದೆ.
Kia Carnival ಎಂಜಿನ್
ಹೊಸ ಕಿಯಾ ಕಾರ್ನಿವಲ್(Kia Carnival) ವಾಹನವು ಈಗ ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಕಾರು 3.5-ಲೀಟರ್ ಪೆಟ್ರೋಲ್, 1.6-ಲೀಟರ್ ಪೆಟ್ರೋಲ್-ಹೈಬ್ರಿಡ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್‌ಗಳಂತಹ ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಭಾರತದಲ್ಲಿ ಮಾರಾಟವಾಗುತ್ತಿದ್ದ ಹಳೆಯ ಕಾರ್ನಿವಲ್ ಮಾದರಿಯಲ್ಲಿ 2.2-ಲೀಟರ್ ಡೀಸೆಲ್ ಎಂಜಿನ್‌ಗೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾತ್ರ ಲಭ್ಯವಿತ್ತು. ಈ ಹೊಸ ಮಾದರಿಯಲ್ಲೂ ಇದೇ ರೀತಿಯ ಆಯ್ಕೆಗಳು ಮುಂದುವರೆಯುವ ಸಾಧ್ಯತೆ ಇದೆ
ಇದನ್ನೂ ಓದಿ: ಭಾರತಕ್ಕೆ ಬರುತ್ತಿದೆ “ಕಿಯಾ ಇವಿ9” 7 ಸೀಟರ್ ಎಲೆಕ್ಟ್ರಿಕ್ ಎಸ್ಯುವಿ