ಹೊಸ ಜಾವಾ 42 ಬೈಕ್ 294 ಸಿಸಿ, ಜೆ-ಪ್ಯಾಂಥರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಬೈಕ್ನ ಬೆಲೆಯನ್ನು 16,000 ರಷ್ಟು ಕಡಿಮೆ ಮಾಡಲಾಗಿದೆ
ಜಾವಾ ಮೋಟಾರ್ಸೈಕಲ್ಸ್ ತನ್ನ ಜನಪ್ರಿಯ ಜಾವಾ 42(Jawa 42) ಮಾದರಿಯನ್ನು ಇತ್ತೀಚೆಗೆ ನವೀಕರಿಸಿದೆ. ಈ ನವೀಕರಣದೊಂದಿಗೆ, ಬೈಕ್ನ ಬೆಲೆ ರೂ. 1.73 ಲಕ್ಷಕ್ಕೆ ಇಳಿದಿದ್ದು, ಗ್ರಾಹಕರಿಗೆ ಹೆಚ್ಚು ಆಕರ್ಷಕವಾಗಿದೆ. ಹೊಸ ಜಾವಾ 42 ಹಿಂದಿನ ಮಾದರಿಗಿಂತ ಹಲವು ವಿಧಗಳಲ್ಲಿ ಉತ್ತಮವಾಗಿದ್ದು, ಹೊಸ ವೈಶಿಷ್ಟ್ಯಗಳು, ವಿವಿಧ ಬಣ್ಣದ ಆಯ್ಕೆಗಳು ಮತ್ತು ಉತ್ತಮ ಎಂಜಿನ್ ಕಾರ್ಯಕ್ಷಮತೆಯನ್ನು ಹೊಂದಿದೆ.
Jawa 42 ಎಂಜಿನ್ ಮತ್ತು ಫೀಚರ್ಸ್ ಗಳು
ಕ್ಲಾಸಿಕ್ ಲೆಜೆಂಡ್ಸ್ ಜಾವಾ 42(Jawa 42) ಬೈಕ್ನ ಎಂಜಿನ್ ಅನ್ನು ಇನ್ನಷ್ಟು ಶಕ್ತಿಶಾಲಿ ಮತ್ತು ಸುಗಮವಾಗಿಸಲು, ಜಾವಾ 350 ಮತ್ತು ಯೆಜ್ದಿ ಅಡ್ವೆಂಚರ್ ಬೈಕ್ಗಳಿಂದ ಕಲಿತ ಪಾಠಗಳನ್ನು ಬಳಸಿಕೊಂಡು ಹೊಸದಾಗಿ ವಿನ್ಯಾಸಗೊಳಿಸಲಾಗಿದೆ. ಈ ಹೊಸ 294 ಸಿಸಿ, ಲಿಕ್ವಿಡ್-ಕೂಲ್ಡ್ ವ್ಯವಸ್ಥೆಯನ್ನು ಹೊಂದಿರುವ ಜೆ-ಪ್ಯಾಂಥರ್ ಎಂಜಿನ್ ಹೊಂದಿದೆ, ಮತ್ತು 27.32 ಬಿಹೆಚ್ಪಿ ಶಕ್ತಿ ಮತ್ತು 26.84 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದಲ್ಲದೆ, ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್, 6-ಸ್ಪೀಡ್ ಗೇರ್ಬಾಕ್ಸ್ ಮತ್ತು ಗೇರ್ ಆಧಾರಿತ ಥ್ರೊಟಲ್ ಮ್ಯಾಪಿಂಗ್ ವ್ಯವಸ್ಥೆಯೊಂದಿಗೆ, ಗೇರ್ ಬದಲಾವಣೆಗಳು ಇನ್ನಷ್ಟು ಮೃದುವಾಗಿ ಮತ್ತು ಸುಲಭವಾಗುತ್ತವೆ.
ಸವಾರರ ಸವಾರಿ ಅನುಭವವನ್ನು ಇನ್ನಷ್ಟು ಆರಾಮದಾಯಕ ಮತ್ತು ಸುಗಮಗೊಳಿಸುವ ನಿಟ್ಟಿನಲ್ಲಿ ಕಂಪನಿಯು ಬೈಕ್ಗೆ ಹಲವಾರು ಮಹತ್ವದ ಬದಲಾವಣೆಗಳನ್ನು ತಂದಿದೆ. ಬೈಕ್ನ ಸಮತೋಲನ ಮತ್ತು ಸುಗಮ ಚಲನೆಯನ್ನು ಹೆಚ್ಚಿಸಲು ಬ್ಯಾಲೆನ್ಸರ್ ತೂಕ ಮತ್ತು ಗೇರ್ ವ್ಯವಸ್ಥೆಯನ್ನು ಪರಿಷ್ಕರಿಸಲಾಗಿದೆ. ಹಿಂಭಾಗದ ಶಾಕ್ ಅಬ್ಸರ್ ಗಳ ಸ್ಥಾನವನ್ನು ಸರಿಹೊಂದಿಸುವ ಮೂಲಕ ಹಾಗೂ ಹೊಸ ಆರಾಮದಾಯಕ ಆಸನವನ್ನು ಅಳವಡಿಸುವ ಮೂಲಕ ಸವಾರಿಯ ಆರಾಮವನ್ನು ಹೆಚ್ಚಿಸಲಾಗಿದೆ. ಇದಲ್ಲದೆ, ಬೈಕ್ನ ಗ್ರೌಂಡ್ ಕ್ಲಿಯರೆನ್ಸ್ ಅನ್ನು 175 mm ಗೆ ಹೆಚ್ಚಿಸುವ ಮೂಲಕ ವಿವಿಧ ರಸ್ತೆಗಳಲ್ಲಿ ಸುಲಭವಾಗಿ ಸಂಚರಿಸಲು ಅನುವು ಮಾಡಿಕೊಡಲಾಗಿದೆ.

ಬೇಸ್ ಮಾಡೆಲ್ ನಲ್ಲಿ ರೌಂಡ್ ಹೆಡ್ಲೈಟ್, ಟಿಯರ್ಡ್ರಾಪ್ ಆಕಾರದ ಇಂಧನ ಟ್ಯಾಂಕ್, ಬೆಂಡಾಗಿರುವ ಹಿಂಭಾಗದ ಫೆಂಡರ್, ಸಿಂಗಲ್-ಚಾನೆಲ್ ಎಬಿಎಸ್, ಸ್ಪೋಕ್ಡ್ ವೀಲ್ಸ್ ಮತ್ತು ಅನಲಾಗ್ ಎಲ್ಸಿಡಿ ಡಿಸ್ಪ್ಲೇಯೊಂದಿಗೆ ಲಭ್ಯವಿದೆ. ಪರ್ಯಾಯವಾಗಿ, ಟಾಪ್ ಮಾಡೆಲ್ ಸಂಪೂರ್ಣ ಡಿಜಿಟಲ್ ಎಲ್ಸಿಡಿ ಡಿಸ್ಪ್ಲೇಯೊಂದಿಗೆ ಲಭ್ಯವಿದೆ, ನೀವು ಜಾವಾ 42 ಅನ್ನು ನಿಮ್ಮ ಬಜೆಟ್ ಅನುಗುಣವಾಗಿ ಸ್ಪೋಕ್ಡ್ ವೀಲ್ಸ್ ಮತ್ತು ಸಿಂಗಲ್-ಚಾನೆಲ್ ಎಬಿಎಸ್, ಸ್ಪೋಕ್ಡ್ ವೀಲ್ಸ್ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್ ಅಥವಾ ಡ್ಯುಯಲ್-ಚಾನೆಲ್ ಎಬಿಎಸ್ನೊಂದಿಗೆ ಅಲಾಯ್ ವೀಲ್ಸ್ ಆಯ್ಕೆಯೊಂದಿಗೆ ಪಡೆಯಬಹುದು.
2024ರ ಜಾವಾ 42 ಬೈಕ್(Jawa 42) ನಿಮಗೆ 14 ವಿಭಿನ್ನ ಬಣ್ಣ ಆಯ್ಕೆಗಳನ್ನು ನೀಡುತ್ತದೆ. ಮ್ಯಾಟ್ ಮತ್ತು ಗ್ಲಾಸ್ ಫಿನಿಶ್ಗಳ ನಡುವೆ ನಿಮ್ಮ ಇಷ್ಟಕ್ಕೆ ತಕ್ಕಂತೆ ಆಯ್ಕೆ ಮಾಡಬಹುದು. ಈ ಆಯ್ಕೆಗಳಲ್ಲಿ ಆರು ಹೊಸ ಬಣ್ಣಗಳು ಸೇರಿವೆ: ವೇಗಾ ವೈಟ್, ವಾಯೇಜರ್ ರೆಡ್, ಆಸ್ಟರಾಯ್ಡ್ ಗ್ರೇ, ಒಡಿಸ್ಸಿ ಬ್ಲಾಕ್, ನೆಬುಲಾ ಬ್ಲೂ ಮತ್ತು ಸೆಲೆಸ್ಟಿಯಲ್ ಕಾಪರ್ ಮ್ಯಾಟ್.
ಇದನ್ನೂ ಓದಿ: ಹೀರೋ ಎಕ್ಸ್ಟ್ರೀಮ್ 160R 4V ಹೊಸ ಅವತಾರದಲ್ಲಿ 1.38 ಲಕ್ಷ ರೂಪಾಯಿಗೆ ಬಿಡುಗಡೆ