Mini Cooper S: ಮಿನಿ ಕೂಪರ್ ಎಸ್ 3-ಡೋರ್‌ ಕಾರು ರೂ. 44.90 ಲಕ್ಷಕ್ಕೆ ಬಿಡುಗಡೆಯಾಗಿದೆ

ಹೊಸ ಮಿನಿ ಕೂಪರ್ ಎಸ್ 2.0-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಮತ್ತು ಎವಲ್ಯೂಷನರಿ ಡಿಸೈನ್‌ ಹೊಂದಿದೆ.

ಮಿನಿ ಇತ್ತೀಚೆಗೆ ಭಾರತದಲ್ಲಿ ಹೊಸ ಕೂಪರ್ ಎಸ್ ಹ್ಯಾಚ್ಬ್ಯಾಕ್ ಅನ್ನು 44.90 ಲಕ್ಷ ರೂಪಾಯಿಗಳ ಆರಂಭಿಕ ಬೆಲೆಯಲ್ಲಿ (ಎಕ್ಸ್-ಶೋರೂಂ) ಲಾಂಚ್ ಮಾಡಿದೆ ಮತ್ತು ವಿತರಣೆ ಸೆಪ್ಟೆಂಬರ್‌ನಿಂದ ಆರಂಭವಾಗಲಿದೆ. ಈ 3-ಡೋರ್ ಹ್ಯಾಚ್ಬ್ಯಾಕ್ ಹಾಟ್ ಕೂಪರ್ ಎಸ್ 3-ಡೋರ್‌ ಪೆಟ್ರೋಲ್ ಎಂಜಿನ್ನೊಂದಿಗೆ ಬರುತ್ತದೆ. ಇದನ್ನು ಸಿಬಿಯು ಆಗಿ ಭಾರತಕ್ಕೆ ತರಲಾಗಿದೆ. ಈ ಇತ್ತೀಚಿನ ಮಾಡೆಲ್‌ ನಾಲ್ಕನೇ ತಲೆಮಾರಿನ ಹ್ಯಾಚ್‌ನ ಅಂತಿಮ ಕಂಬಷನ್‌ ಎಂಜಿನ್‌ ವಷ೯ನ್‌ ಆಗಿದ್ದು, ಮೂಲ 1959 ಮಾಡೆಲ್‌ ನ ಡಿಸೈನ್‌ ಸ್ಪಿರಿಟ್‌ ಅನ್ನು ಇನ್ನು ಉಳಿಸಿಕೊಂಡಿದೆ.

ಮಿನಿ ಕೂಪರ್‌ ಎಸ್‌ ಎಕ್ಸ್ಟೀರಿಯರ್‌

ಹೊಸ ಕೂಪರ್ ಎಸ್ 3-ಡೋರ್‌ಗೆ ಹೊಸ ಹಾಟ್ ಲುಕ್ ಅನ್ನು ನೀಡಿದ್ದು. ಇದು ಹಿಂದಿನ ಆವೃತ್ತಿಗಳ ಸಾಂಪ್ರದಾಯಿಕ ಆಕರ್ಷಣೆಯನ್ನು ಉಳಿಸಿಕೊಂಡಿದೆ ಆದರೆ ಮೃದುವಾದ ರೂಪರೇಖೆಗಳನ್ನು ಹೊಂದಿದೆ. ಹ್ಯಾಚ್ ಅನ್ನು ಈಗ ಫ್ರೇಮ್‌ಲೆಸ್ ಆಗಿರುವ ರೌಂಡ್ ಹೆಡ್‌ಲೈಟ್‌ಗಳು, ದೊಡ್ಡ ಆಕ್ಟಾಗನಲ್‌ ಫ್ರೊಂಟ್ ಗ್ರಿಲ್ ಮತ್ತು ಹಿಂಭಾಗದಲ್ಲಿ ಹೊಸ ಟ್ರೈಯಾಂಗುಲರ್ ಬ್ರೇಕ್‌ಲೈಟ್‌ಗಳೊಂದಿಗೆ ನವೀಕರಿಸಲಾಗಿದೆ. ಕ್ರೋಮ್ ಬದಲಿಗೆ, ಎಕ್ಸ್ಟೀರಿಯರ್‌ ನಲ್ಲಿ ಈಗ ವೀಲ್ ಆರ್ಚ್‌ಗಳಲ್ಲಿ ಪ್ಲಾಸ್ಟಿಕ್ ಕ್ಲಾಡಿಂಗ್ ಅನ್ನು ಕಾಣಬಹುದಾಗಿದೆ.

ಮಿನಿ ಕೂಪರ್ ಎಸ್(Mini Cooper S) 3-ಡೋರ್‌ಗೆ ಹತ್ತು ಬಣ್ಣ ಆಯ್ಕೆಗಳು ಲಭ್ಯವಿದೆ: ಮೆಲ್ಟಿಂಗ್ ಸಿಲ್ವರ್, ಮಿಡ್‌ನೈಟ್ ಬ್ಲ್ಯಾಕ್, ನಾನುಕ್ ವೈಟ್, ಬ್ರಿಟಿಷ್ ರೇಸಿಂಗ್ ಗ್ರೀನ್, ಚಿಲಿ ರೆಡ್ II, ಇಂಡಿಗೋ ಸನ್ಸೆಟ್ ಬ್ಲೂ, ಬ್ಲೇಜಿಂಗ್ ಬ್ಲೂ, ಐಸಿ ಸನ್‌ಶೈನ್ ಬ್ಲೂ, ಓಷನ್ ವೇವ್ ಗ್ರೀನ್ ಮತ್ತು ಸನ್ನಿ ಸೈಡ್ ಯೆಲ್ಲೋ. ನೀವು ಬಯಸಿದರೆ ಒಂದೇ ಬಣ್ಣದ ರೂಫ್‌ ಅನ್ನು ಪಡೆಯಬಹುದು. ‘ಕ್ಲಾಸಿಕ್’ ಪ್ಯಾಕ್‌ನಲ್ಲಿ, ರೂಫ್ ಗಾಗಿ  ಗ್ಲೇಜ್ಡ್ ವೈಟ್ ಅಥವಾ ಜೆಟ್ ಬ್ಲ್ಯಾಕ್‌ನ ಹೆಚ್ಚುವರಿ ಆಯ್ಕೆಗಳನ್ನು ಸಹಾ ಪಡೆಯಬಹುದಾಗಿರುತ್ತದೆ.

ಕೂಪರ್ ಎಸ್ 3-ಡೋರ್‌ಗೆ 17-ಇಂಚಿನ ಚಕ್ರಗಳನ್ನು U-ಸ್ಪೋಕ್ ಸ್ಪೆಕ್ಟರ್ ಗ್ರೇ ಅಥವಾ ಪ್ಯಾರಲೆಲ್ ಸ್ಪೋಕ್ 2-ಟೋನ್ ಅಲಾಯ್‌ಗಳೊಂದಿಗೆ ಸ್ಟ್ಯಾಂಡರ್ಡ್ ಆಯ್ಕೆಯಾಗಿ ಪಡೆಯಬಹುದು. ಫೇವರ್ಡ್ ಪ್ಯಾಕ್ ನೊಂದಿಗೆ 17-ಇಂಚಿನ U-ಸ್ಪೋಕ್ ವಿಬ್ರೆಂಟ್ ಸಿಲ್ವರ್ ಚಕ್ರಗಳು ಮತ್ತು ಹೆಚ್ಚು ಕಸ್ಟಮೈಸ್ ನೋಟಕ್ಕಾಗಿ ಸ್ಲೈಡ್ ಸ್ಪೋಕ್ 2-ಟೋನ್ ಅಥವಾ ನೈಟ್ ಫ್ಲ್ಯಾಶ್ ಸ್ಪೋಕ್ 2-ಟೋನ್ ಅಲಾಯ್‌ಗಳೊಂದಿಗೆ 18-ಇಂಚಿನ ಚಕ್ರಗಳ ಆಯ್ಕೆಗಳನ್ನು ಪಡೆಯಬಹುದು.

Mini Cooper S ಇಂಟೀರಯರ್‌

ಇಂಟೀರಯರ್‌ ನಲ್ಲಿ, ನೀವು ಸಿಂಪಲ್‌ ಡಿಸೈನ್ ಮತ್ತು ಮಾಡ೯ನ್‌ ಟೆಕ್ನಾಲಜಿಯ  ಸಮ್ಮಿಶ್ರಣವನ್ನು ಕಾಣಬಹುದು, ಅದರಲ್ಲಿ ಹೆಡ್ಸ್-ಅಪ್ ಡಿಸ್ಪ್ಲೇ, ಹೈ-ರೆಸಲ್ಯೂಶನ್ 9.4-ಇಂಚಿನ ರೌಂಡ್ OLED ಟಚ್‌ಸ್ಕ್ರೀನ್ ಡಿಸ್ಪ್ಲೇ ಸೇರಿವೆ. ಇತ್ತೀಚಿನ ಮಿನಿ ಆಪರೇಟಿಂಗ್ ಸಿಸ್ಟಮ್ 9 ಸಂಪರ್ಕವನ್ನು ಹೆಚ್ಚಿಸಲು, ಟಚ್‌ಸ್ಕ್ರೀನ್ ಮತ್ತು ವಾಯ್ಸ್ ಕಂಟ್ರೋಲ್ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ. ಮಿನಿ ಡಿಜಿಟಲ್ ಕೀ ಪ್ಲಸ್‌ನೊಂದಿಗೆ, ನಿಮ್ಮ ಸ್ಮಾರ್ಟ್‌ಫೋನ್ ಅನ್ನುಈಗ ಮಿನಿ ಅಪ್ಲಿಕೇಶನ್ ಮೂಲಕ ನಿಮ್ಮ ಕಾರು ಕೀಯಾಗಿ ಉಪಯೋಗಿಸಬಹುದು.

ಇತರ ಗಮನಾರ್ಹ ವೈಶಿಷ್ಟ್ಯಗಳಲ್ಲಿ ಎಲೆಕ್ಟ್ರಾನಿಕಲಿ ಅಡ್ಜಸ್ಟಬಲ್‌ ಪ್ರೊಂಟ್‌ ಸೀಟುಗಳು, ಚಾಲಕನ ಸೀಟಿಗೆ ಮಸಾಜ್ ಫೀಚರ್, ಸಾಫ್ಟ್‌ ಇಂಟೀರಿಯರ್‌ ಲೈಟ್ಸ್, ಹಾರ್ಮನ್ ಕಾರ್ಡನ್ ನಿಂದ ಉನ್ನತ ಗುಣಮಟ್ಟದ ಸೌಂಡ್‌ ಸಿಸ್ಟಮ್, ನಿಮ್ಮ ಕಾರನ್ನು ಸಂಪರ್ಕಿತವಾಗಿರಿಸುವ ಟೆಕ್ನಾಲಜಿ, ಸುರಕ್ಷತೆಗಾಗಿ ಆರು ಏರ್‌ ಬ್ಯಾಗ್ಸ್‌ , ರಸ್ತೆಯಲ್ಲಿ ನಿಮಗೆ ಸಹಾಯ ಮಾಡಲು ಲೆವೆಲ್ 1 ಸುರಕ್ಷತಾ ವ್ಯವಸ್ಥೆ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಸೇರಿವೆ.

ಮಿನಿ ಕೂಪರ್‌ ಎಸ್‌ ಪವರ್‌ ಟ್ರೈನ್

Mini Cooper S ಹ್ಯಾಚ್ಬ್ಯಾಕ್ ಇನ್ನೂ 2.0-ಲೀಟರ್, ನಾಲ್ಕು ಸಿಲಿಂಡರ್ ಟರ್ಬೋ-ಪೆಟ್ರೋಲ್ ಎಂಜಿನ್‌ನಲ್ಲಿ ಚಲಿಸುತ್ತದೆ, ಆದರೆ ಈಗ ಇದು ಹಿಂದಿನ 178hp ಮತ್ತು 280Nm ಗೆ ಹೋಲಿಸಿದರೆ 204hp ಮತ್ತು 300Nm ನಲ್ಲಿ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಎಂಜಿನ್ 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ, ಮ್ಯಾನುಯಲ್ ಗೇರ್ ಬದಲಾವಣೆಗಳಿಗೆ ಪ್ಯಾಡಲ್ ಶಿಫ್ಟರ್‌ಗಳಿಲ್ಲದೆ ಮುಂಭಾಗದ ಚಕ್ರಗಳಿಗೆ ಶಕ್ತಿಯನ್ನು ನೀಡುತ್ತದೆ. ಮಿನಿ ಕಾರು 6.6 ಸೆಕೆಂಡುಗಳಲ್ಲಿ 0 ರಿಂದ 100 kph ಗಳಷ್ಟು ವೇಗ ತಲುಪುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಮಾರುತಿ ಸುಜುಕಿಯ ಎರಡು ವರ್ಷಗಳಲ್ಲಿ ಸರಿಸುಮಾರು 2 ಲಕ್ಷ ಗ್ರ್ಯಾಂಡ್ ವಿಟಾರಾ ಕಾರುಗಳನ್ನು ಮಾರಾಟ ಮಾಡಿದೆ

Leave a Comment