MG Hector ಮತ್ತು Hector Plus ಸ್ನೋಸ್ಟಾರ್ಮ್ ಎಡಿಷನ್ಗಳು ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಆಯ್ಕೆಗಳೊಂದಿಗೆ ಬರುತ್ತವೆ
ಭಾರತೀಯ ಮಾರುಕಟ್ಟೆಯಲ್ಲಿ ಎಂಜಿ ಮೋಟಾರ್ಸ್(MG Motors) ತನ್ನ ಹೆಕ್ಟರ್ ಎಸ್ಯುವಿಯ ಹೊಸ ವಿಶೇಷ ಆವೃತ್ತಿಯನ್ನು, ಸ್ನೋಸ್ಟಾರ್ಮ್(Snowstorm) ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿದೆ. ಶಾರ್ಪ್ ಪ್ರೊ ಮಾದರಿಯ ಆಧಾರದಲ್ಲಿ ನಿರ್ಮಿಸಲಾದ ಈ ಆವೃತ್ತಿಯು, ಎಂಜಿ ಹೆಕ್ಟರ್ (MG Hector) ಮತ್ತು ಹೆಕ್ಟರ್ ಪ್ಲಸ್ (Hector Plus) ಎರಡೂ ಮಾದರಿಗಳಲ್ಲಿ ಲಭ್ಯವಿದೆ. ಗ್ರಾಹಕರ ಬದಲಾಗುತ್ತಿರುವ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು, ಸ್ನೋಸ್ಟಾರ್ಮ್ (Snowstorm) ಆವೃತ್ತಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಹೆಕ್ಟರ್ ಪ್ಲಸ್ ಮಾದರಿಯಲ್ಲಿ, ಈ ಆವೃತ್ತಿಯನ್ನು ಎರಡು ಅಥವಾ ಮೂರು ಸಾಲುಗಳ ಆಸನಗಳೊಂದಿಗೆ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಭಾರತದಲ್ಲಿ ಇದರ ಎಕ್ಸ್ ಶೋರೂಂ ಬೆಲೆ ರೂ. 21.53 ಲಕ್ಷ ಆಗಿದೆ.
ಇದನ್ನೂ ಓದಿ: ಎಂಜಿ ಆಸ್ಟರ್ ಬ್ಲ್ಯಾಕ್ ಸ್ಟಾರ್ಮ್ ಎಡಿಷನ್ ರೂ. 13.45 ಲಕ್ಷಕ್ಕೆ ಬಿಡುಗಡೆ
ಎಂಜಿ ಹೆಕ್ಟರ್ ಸ್ನೋಸ್ಟಾರ್ಮ್ ಎಡಿಷನ್: ವೈಶಿಷ್ಟ್ಯಗಳು
ಗ್ಲೋಸ್ಟರ್ ಸ್ನೋಸ್ಟಾರ್ಮ್ ಮಾದರಿಯಂತೆಯೇ, ಹೊಸ ಎಂಜಿ ಹೆಕ್ಟರ್ ಸ್ನೋಸ್ಟಾರ್ಮ್(MG Hector Snowstorm) ವೈಟ್ ಮತ್ತು ಬ್ಲಾಕ್ ಬಣ್ಣಗಳ ಸಂಯೋಜನೆಯೊಂದಿಗೆ ಆಕರ್ಷಕ ಮುಂಭಾಗ ಮತ್ತು ಹಿಂಭಾಗದ ಬಂಪರ್ಗಳನ್ನು ಹೊಂದಿದೆ. ಮತ್ತು ಬ್ರೇಕ್ ಕ್ಯಾಲಿಪರ್ಗಳಲ್ಲಿ ಕೆಂಪು ಬಣ್ಣದ ಟಚ್ಗಳನ್ನು ಹೊಂದಿದೆ. ನೀವು ಒಆರ್ವಿಎಂ ಪ್ರೊಟೆಕ್ಟರ್ಗಳ ಮೇಲೆ ಮತ್ತು ಫಾಗ್ ಲ್ಯಾಂಪ್ಗಳಿಗೆ ವಿಶೇಷವಾದ ರೆಡ್ ಇಂಟೇಕ್ಗಳನ್ನು ಸಹ ಕಾಣಬಹುದು. ಸ್ಲೀಕ್ ಡಾರ್ಕ್ ಕ್ರೋಮ್ ಸರೌಂಡ್ ಡೈಮಂಡ್ ಮೆಶ್ ಫ್ರಂಟ್ ಗ್ರಿಲ್, 18-ಇಂಚಿನ ಸ್ಪೋರ್ಟಿ ಆಲ್-ಬ್ಲ್ಯಾಕ್ ಅಲಾಯ್ ವೀಲ್ಸ್, ಮುಂಭಾಗದ ಫೆಂಡರ್ನಲ್ಲಿ ಸ್ನೋಸ್ಟಾರ್ಮ್ ಲಾಂಛನ (emblem) ಮತ್ತು ಸ್ಮೋಕ್ಡ್ ಟೈಲ್ ಲ್ಯಾಂಪ್ಗಳು. ಹೆಚ್ಚುವರಿ ಸ್ಪರ್ಶಕ್ಕಾಗಿ ಪಿಯಾನೋ ಬ್ಲಾಕ್ ರೂಫ್ ರೈಲ್ಸ್ , ಬ್ಲಾಕ್ ಟೈಲ್ ಲ್ಯಾಂಪ್ಗಳು ಮತ್ತು ಪಿಯಾನೋ ಬ್ಲ್ಯಾಕ್ ಬಣ್ಣದ ಹೆಡ್ಲ್ಯಾಂಪ್ ಬೆಜೆಲ್ಗಳು. ಮತ್ತು ಇದು ಎಲ್ಲಾ 5, 6 ಮತ್ತು 7 ಸೀಟರ್ ವಿನ್ಯಾಸಗಳಲ್ಲಿ ಲಭ್ಯವಿದೆ.

ಸ್ನೋಸ್ಟಾರ್ಮ್ ಮಾದರಿಯ ಎಲ್ಲ ಒಳಭಾಗವು ಬ್ಲ್ಯಾಕ್ ಕ್ಯಾಬಿನ್ನೊಂದಿಗೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ನೀವು 14-ಇಂಚಿನ ಎಚ್ಡಿ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ವ್ಯವಸ್ಥೆಯನ್ನು ಕಾಣಬಹುದು, ಡ್ಯಾಶ್ಬೋರ್ಡ್, ಡೋರ್ಗಳು, ಸ್ಟೀರಿಂಗ್ ವೀಲ್, ಗೇರ್ ನಾಬ್ ಮತ್ತು ಸೆಂಟರ್ ಕನ್ಸೋಲ್ನಲ್ಲಿ ಸ್ಟೈಲಿಶ್ ಗನ್ಮೆಟಲ್ ಗ್ರೇ ಟ್ರಿಮ್ ಅಳವಡಿಕೆಗಳೊಂದಿಗೆ ಕ್ಯಾಬಿನ್ ಸಂಪೂರ್ಣ ಕಪ್ಪು ಬಣ್ಣದ್ದಾಗಿದೆ. ಮುಂಭಾಗದ ಹೆಡ್ರೆಸ್ಟ್ಗಳಲ್ಲಿ ಸ್ನೋಸ್ಟಾರ್ಮ್ ವಿನ್ಯಾಸ, ಹಿಂಭಾಗದ ಎಸಿ ವೆಂಟ್ಸ್ಗಳೊಂದಿಗೆ ಕ್ಲೈಮೇಟ್ ಕಂಟ್ರೋಲ್, ಡ್ಯುಯಲ್ ಪ್ಯಾನೊರಾಮಿಕ್ ಸನ್ರೂಫ್. ಪವರ್ ಡ್ರೈವರ್ ಸೀಟುಗಳು , ಹೆಚ್ಚುವರಿ ಸುರಕ್ಷತೆಗಾಗಿ ಲೆವೆಲ್ 2 ಎಡಿಎಎಸ್, 360-ಡಿಗ್ರಿ ಕ್ಯಾಮೆರಾ ಸೇರಿವೆ.
ಇದನ್ನೂ ಓದಿ: ಲಕ್ಷುರಿ ಎಂಜಿ ವಿಂಡ್ಸರ್ ಎಲೆಕ್ಟ್ರಿಕ್ ಕಾರಿನ ಸಂಪೂರ್ಣ ಬೆಲೆ ಮತ್ತು ಪ್ರಮುಖ ಫೀಚರ್ಸ್ಗಳು
ಎಂಜಿ ಹೆಕ್ಟರ್ ಸ್ನೋಸ್ಟಾರ್ಮ್ ಎಡಿಷನ್: ಪವರ್ ಟ್ರೈನ್
MG Hector Snowstorm ವಾಹನವು 1.5 ಲೀಟರ್ ಟರ್ಬೋ ಪೆಟ್ರೋಲ್ ಮತ್ತು 2.0 ಲೀಟರ್ ಡೀಸೆಲ್ ಎಂಜಿನ್ಗಳೊಂದಿಗೆ ಲಭ್ಯವಿದೆ. ಪೆಟ್ರೋಲ್ ಎಂಜಿನ್ 143 ಬಿಹೆಚ್ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ, ಆದರೆ ಡೀಸೆಲ್ ಎಂಜಿನ್ 168 ಬಿಹೆಚ್ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ನೀಡುತ್ತದೆ. ಪೆಟ್ರೋಲ್ ಮಾದರಿಯನ್ನು 6- ಸ್ಪೀಡ್ ಮ್ಯಾನ್ಯುವಲ್ ಅಥವಾ ಸಿವಿಟಿ ಆಟೋಮ್ಯಾಟಿಕ್ ಗೇರ್ಬಾಕ್ಸ್ನೊಂದಿಗೆ ಆಯ್ಕೆ ಮಾಡಬಹುದು. ಆದರೆ ಡೀಸೆಲ್ ಮಾದರಿಯು 6- ಸ್ಪೀಡ್ ಮ್ಯಾನ್ಯುವಲ್ ಗೇರ್ಬಾಕ್ಸ್ನೊಂದಿಗೆ ಮಾತ್ರ ಲಭ್ಯವಿದೆ.