ಎಂಜಿ ಹೆಕ್ಟರ್ ಹಾಗೂ ಹೆಕ್ಟರ್ ಪ್ಲಸ್ ನಂತರ, MG Astor ಮಿಡ್ ಎಸ್ಯುವಿಯ ಬೆಲೆ ಏರಿಸಿದ ಎಂಜಿ ಕಂಪನಿ
ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ವಾಹನ ತಯಾರಕರು ತಮ್ಮ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸಲು ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿರುವ ಈ ಸಮಯದಲ್ಲಿ, ಎಂಜಿ ಮೋಟಾರ್ಸ್(MG Motors) ವಿಭಿನ್ನ ನಿರ್ಧಾರವನ್ನು ತೆಗೆದುಕೊಂಡಿದೆ. ಕಂಪನಿಯು ತನ್ನ ಜನಪ್ರಿಯ ಎಸ್ಯುವಿ ಮಾದರಿಗಳಾದ ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ನ ಬೆಲೆಯನ್ನು ಈಗಾಗಲೇ ಹೆಚ್ಚಿಸಿದ್ದು, ಈಗ ಮಧ್ಯಮ ಗಾತ್ರದ ಎಸ್ಯುವಿ ಮಾದರಿಯಾದ ಎಂಜಿ ಆಸ್ಟರ್(MG Astor) ಕೆಲವು ಮಾದರಿಗಳ ಬೆಲೆಯನ್ನು 27,000 ರೂಪಾಯಿಗಳವರೆಗೆ ಹೆಚ್ಚಿಸಿರುವ ಬಗ್ಗೆ ಎಂಜಿ ಕಂಪನಿಯು ಘೋಷಿಸಿದೆ.
ಈ ಬೆಲೆ ಹೆಚ್ಚಳದಿಂದಾಗಿ, MG Astor ಕಾರಿನ ಆರಂಭಿಕ ಎಕ್ಸ್ ಶೋರೂಂ ಬೆಲೆ ಈಗ ರೂ.9.98 ಲಕ್ಷಕ್ಕೆ ಏರಿದೆ. ಅದರ ಅತ್ಯುನ್ನತ ಮಾದರಿಯ ಬೆಲೆ ರೂ. 18.35 ಲಕ್ಷಕ್ಕೆ ತಲುಪಿದೆ. ಎಂಜಿ ಆಸ್ಟರ್ ಎಸ್ಯುವಿಯು ಸ್ಪ್ರಿಂಟ್, ಶೈನ್, ಸೆಲೆಕ್ಟ್, ಶಾರ್ಪ್ ಪ್ರೊ ಮತ್ತು ಸ್ಯಾವಿ ಪ್ರೊ ಎಂಬ ವಿವಿಧ ರೂಪಾಂತರಗಳಲ್ಲಿ ಲಭ್ಯವಿದೆ. ಗ್ರಾಹಕರು ತಮ್ಮ ಆದ್ಯತೆಗೆ ಅನುಗುಣವಾಗಿ ಬ್ಲ್ಯಾಕ್ ಕ್ಯಾಂಡಿ ವೈಟ್, ಗ್ಲೇಜ್ ರೆಡ್, ಅರೋರಾ ಸಿಲ್ವರ್, ಹವಾನಾ ಗ್ರೇ ಮತ್ತು ಕ್ಯಾಂಡಿ ವೈಟ್ ಜೊತೆಗೆ ಸ್ಟಾರ್ರಿ ಬ್ಲ್ಯಾಕ್ ರೂಫ್ನಂತಹ ಆಕರ್ಷಕ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಎಂಜಿ ಆಸ್ಟರ್ ಬ್ಲ್ಯಾಕ್ ಸ್ಟಾರ್ಮ್ ಎಡಿಷನ್ ರೂ. 13.45 ಲಕ್ಷಕ್ಕೆ ಬಿಡುಗಡೆ

ಶೈನ್ 1.5 ಎಂಟಿ ಐವರಿ ಮತ್ತು ಸೆಲೆಕ್ಟ್ 1.5 ಎಂಟಿ ಐವರಿ ಮಾದರಿಗಳ ಬೆಲೆಯನ್ನು ಪ್ರತಿಯೊಂದಕ್ಕೂ ರೂ.20,000 ಹೆಚ್ಚಿಸಲಾಗಿದೆ. ಇದಲ್ಲದೆ, ಸ್ಯಾವಿ ಪ್ರೊ ಟರ್ಬೊ 1.3 ಎಟಿ ಸಾಂಗ್ರಿಯಾ ರೆಡ್, ಸ್ಯಾವಿ ಪ್ರೊ 1.5 ಸಿವಿಟಿ ಸಾಂಗ್ರಿಯಾ ರೆಡ್ ಮತ್ತು ಸ್ಯಾವಿ ಪ್ರೊ 1.5 ಸಿವಿಟಿ ಐವರಿ ಕಾರುಗಳ ಬೆಲೆಯನ್ನು ರೂ.27,000 ಹೆಚ್ಚಿಸಲಾಗಿದೆ. ಶಾರ್ಪ್ ಪ್ರೊ 1.5 ಸಿವಿಟಿ ಐವರಿ ಮಾದರಿಯ ಬೆಲೆ ರೂ. 26,000 ಹೆಚ್ಚಾಗಿದೆ. ಇದೇ ರೀತಿ, ಶಾರ್ಪ್ ಪ್ರೊ 1.5 ಎಂಟಿ ಐವರಿ ಮತ್ತು ಸೆಲೆಕ್ಟ್ 1.5 ಸಿವಿಟಿ ಐವರಿ ಮಾದರಿಗಳ ಬೆಲೆ ಕ್ರಮವಾಗಿ ರೂ. 24,000 ಮತ್ತು ರೂ. 21,000 ಹೆಚ್ಚಾಗಿದೆ.
ಇದನ್ನೂ ಓದಿ: ಕಡಿಮೆ ಬೆಲೆ, ಸೂಪರ್ ಫೀಚರ್ಸ್ನೊಂದಿಗೆ ಬಿಡುಗಡೆಯಾದ ಎಂಜಿ ವಿಂಡ್ಸರ್ ಎಲೆಕ್ಟ್ರಿಕ್
ಎಂಜಿ ಆಸ್ಟರ್: ವೈಶಿಷ್ಟ್ಯಗಳು
ಈ ಎಸ್ಯುವಿಯು i-Smart 2.0 ತಂತ್ರಜ್ಞಾನದೊಂದಿಗೆ. 10.1-ಇಂಚಿನ ದೊಡ್ಡ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ವ್ಯವಸ್ಥೆಯು, ವೈರ್ಲೆಸ್ ಸ್ಮಾರ್ಟ್ಫೋನ್ ಸಂಪರ್ಕ, 7-ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್. ಲೆದರ್ ಅಪ್ಹೋಲ್ಸ್ಟರಿ ಮತ್ತು ಲೆದರ್ ನಿಂದ ಸುತ್ತುವರೆದ ಸ್ಟೀರಿಂಗ್ ವ್ಹೀಲ್, 6-ವೇ ಪವರ್-ಹೊಂದಾಣಿಕೆ ಡ್ರೈವರ್ ಸೀಟ್, ವಿಶಾಲವಾದ ಪನರೊಮಿಕ್ ಸನ್ರೂಫ್ ಮತ್ತು ವೈರ್ಲೆಸ್ ಚಾರ್ಜಿಂಗ್ ವ್ಯವಸ್ಥೆ ನಿಮ್ಮ ಪ್ರಯಾಣವನ್ನು ಇನ್ನಷ್ಟು ಆರಾಮದಾಯಕವಾಗಿಸುತ್ತದೆ. ಹೆಚ್ಚುವರಿಯಾಗಿ, 6-ಸ್ಪೀಕರ್ ಮತ್ತು ಟ್ವೀಟರ್ಗಳನ್ನು ನೀಡಲಿದೆ.

ಸುರಕ್ಷತೆಯ ದೃಷ್ಟಿಯಿಂದ, ಈ MG Astor ಎಸ್ಯುವಿಯಲ್ಲಿ ಲೆವೆಲ್ 2 ADAS ತಂತ್ರಜ್ಞಾನದೊಂದಿಗೆ, ಬ್ಲೈಂಡ್-ಸ್ಪಾಟ್ ಡಿಟೆಕ್ಷನ್, 360-ಡಿಗ್ರಿ ಸರೌಂಡ್-ವ್ಯೂ ಕ್ಯಾಮೆರಾ ಮತ್ತು ರೈನ್-ಸೆನ್ಸಿಂಗ್ ವೈಪರ್ಗಳು ಸೇರಿದಂತೆ ಅತ್ಯಾಧುನಿಕ ವೈಶಿಷ್ಟ್ಯಗಳು ಲಭ್ಯವಿದೆ. ಈ ವಾಹನವು ಲೇನ್ ಬದಲಾಯಿಸುವ ಸಹಾಯಕ ವ್ಯವಸ್ಥೆ, ಹಿಂಬದಿಯ ವಾಹನಗಳ ಕುರಿತು ಎಚ್ಚರಿಕೆ, ವಾಹನದ ಸ್ಥಿರತೆಯನ್ನು ಕಾಪಾಡುವ ವ್ಯವಸ್ಥೆ, ಚಕ್ರಗಳ ಜಾರುವಿಕೆಯನ್ನು ನಿಯಂತ್ರಿಸುವ ವ್ಯವಸ್ಥೆ, ಇಳಿಜಾರು ಪ್ರದೇಶಗಳಲ್ಲಿ ಸುರಕ್ಷಿತವಾಗಿ ಚಲಿಸಲು ಸಹಾಯ ಮಾಡುವ ವ್ಯವಸ್ಥೆಗಳಂತಹ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
ಇದನ್ನೂ ಓದಿ: ಎಂಜಿ ಹೆಕ್ಟರ್ ಸ್ನೋಸ್ಟಾರ್ಮ್ ಎಡಿಷನ್ ರೂ. 21.53 ಲಕ್ಷಕ್ಕೆ ಬಿಡುಗಡೆ
MG Astor: ಪವರ್ ಟ್ರೈನ್
3-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್: ಈ ಶಕ್ತಿಶಾಲಿ ಎಂಜಿನ್ 138 ಬಿಹೆಚ್ಪಿ ಪವರ್ ಮತ್ತು 220 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಇದು ಆಸ್ಟರ್ಗೆ ಚುರುಕಾದ ಮತ್ತು ಹುರುಪಿನ ಚಾಲನಾ ಅನುಭವವನ್ನು ನೀಡುತ್ತದೆ. ಈ ಎಂಜಿನ್ ಅನ್ನು ಸುಗಮವಾದ ಗೇರ್ ಶಿಫ್ಟ್ಗಳಿಗಾಗಿ ಸಿವಿಟಿ ಆಟೋಮ್ಯಾಟಿಕ್ ಗೇರ್ಬಾಕ್ಸ್ನೊಂದಿಗೆ ಜೋಡಿಸಲಾಗಿದೆ.
1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್: ಇದು ಇಂಧನ ದಕ್ಷತೆಗೆ ಹೆಚ್ಚು ಆದ್ಯತೆ ನೀಡುವ ಚಾಲಕರಿಗೆ ಸೂಕ್ತವಾದ ಆಯ್ಕೆಯಾಗಿದೆ. ಈ ಎಂಜಿನ್ 108 ಬಿಹೆಚ್ಪಿ ಪವರ್ ಮತ್ತು 144 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಮತ್ತು ಇದನ್ನು 5-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಆಟೋಮ್ಯಾಟಿಕ್ ಗೇರ್ಬಾಕ್ಸ್ನೊಂದಿಗೆ ಜೋಡಿಸಲಾಗಿದೆ.