MG Astor: ಎಂಜಿ ಆಸ್ಟರ್ ಬ್ಲ್ಯಾಕ್ ಸ್ಟಾರ್ಮ್ ಎಡಿಷನ್ ರೂ. 13.45 ಲಕ್ಷಕ್ಕೆ ಬಿಡುಗಡೆ

MG Astor Blackstorm ಎಡಿಷನ್‌ 1.5-ಲೀಟರ್ ಪೆಟ್ರೋಲ್ ಎಂಜಿನ್ನೊಂದಿಗೆ ಬರುತ್ತದೆ.

ಎಂಜಿ ಮೋಟಾರ್ಸ್(MG Motors) ಹೊಸ ಅಸ್ಟರ್ ಬ್ಲ್ಯಾಕ್‌ಸ್ಟಾರ್ಮ್‌(MG Astor Blackstorm) ಎಡಿಷನ್ ಅನ್ನು ಭಾರತದಲ್ಲಿ ಪರಿಚಯಿಸಿದ್ದು, ಮ್ಯಾನುಯಲ್ ಟ್ರಾನ್ಸ್‌ಮಿಷನ್ ಮಾದರಿಗಾಗಿ ಎಕ್ಸ್ ಶೋರೂಂ ದರದಂತೆ ರೂ. 13.44 ಲಕ್ಷ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮಾದರಿಗಾಗಿ ರೂ. 14.45 ಲಕ್ಷ ಬೆಲೆಯನ್ನು ಹೊಂದಿದೆ. ಈ ಹೊಸ ಮಾದರಿ ವಿಶೇಷವಾಗಿ 1.5 ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿದೆ. ಬ್ಲ್ಯಾಕ್‌ಸ್ಟಾರ್ಮ್ ಆವೃತ್ತಿಯು ಹಳೆಯ ಮಾದರಿಯೊಂದಿಗೆ ಹೋಲಿಸಿದಾಗ ಹಲವು ಬ್ಲ್ಯಾಕ್‌ ಥೀಮ್ ವಿನ್ಯಾಸ ತಂತ್ರಾಂಶಗಳನ್ನು ಹೊಂದಿದ್ದು, ಯಾಂತ್ರಿಕ ವೈಶಿಷ್ಟ್ಯಗಳಲ್ಲಿ ಯಾವುದೇ ಬದಲಾವಣೆಯಿಲ್ಲ. ಹಳೆಯ ಅಸ್ಟರ್ ಬ್ಲ್ಯಾಕ್‌ಸ್ಟಾರ್ಮ್ ಅನ್ನು ಸ್ಮಾರ್ಟ್ ಟ್ರಿಮ್ ಆಧಾರದ ಮೇಲೆ ನಿರ್ಮಿಸಲ್ಪಟ್ಟಿದ್ದರೆ, ಹೊಸದನ್ನು ಸೆಲೆಕ್ಟ್ ಟ್ರಿಮ್‌ನ ಮೇಲೆ ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: ಎಂಜಿ ಹೆಕ್ಟರ್ ಸ್ನೋಸ್ಟಾರ್ಮ್ ಎಡಿಷನ್ ರೂ. 21.53 ಲಕ್ಷಕ್ಕೆ ಬಿಡುಗಡೆ

ಎಂಜಿ ಆಸ್ಟರ್ ಬ್ಲ್ಯಾಕ್ ಸ್ಟಾರ್ಮ್ ಎಡಿಷನ್: ವೈಶಿಷ್ಟ್ಯಗಳು ಮತ್ತು ಪವರ್ ಟ್ರೈನ್

ಎಂಜಿ ಅಸ್ಟರ್ ಬ್ಲಾಕ್‌ಸ್ಟಾರ್ಮ್‌ (MG Astor Blackstorm) ಹೊರ ಭಾಗದಲ್ಲಿ ಕಪ್ಪು ಥೀಮ್‌ನ ಅನೇಕ ಅಂಶಗಳನ್ನು ಹೊಂದಿದೆ. ಸಂಪೂರ್ಣ ಬ್ಲ್ಯಾಕ್ ಹನಿಕಾಂಬ್ ಪ್ಯಾಟರ್ನ್ ಗ್ರಿಲ್, ಬ್ಲಾಕ್-ಫಿನಿಶ್ಡ್ ಮುಂಬದಿ ಮತ್ತು ಹಿಂಬದಿ ಬಂಪರ್‌ಗಳು, ಬ್ಲಾಕ್-ಫಿನಿಶ್ಡ್ ಹೆಡ್ ಲ್ಯಾಂಪ್‌ಗಳು, 17- ಇಂಚಿನ ಬ್ಲ್ಯಾಕ್ ಅಲೋಯ್ ವೀಲ್‌ಗಳು ಮತ್ತು ರೆಡ್ ಬ್ರೇಕ್ ಕ್ಯಾಲಿಪರ್‌ಗಳು, ಗ್ಲೋಸಿ ಬ್ಲಾಕ್ ಡೋರ್ ಗಾರ್ನಿಷ್, ಬ್ಲ್ಯಾಕ್ ಸೈಡ್ ಡೋರ್ ಕ್ಲಾಡಿಂಗ್ ಮತ್ತು ಬ್ಲಾಕ್ ರೂಫ್ ರೇಲ್ಸ್‌ಗಳನ್ನು ಒಳಗೊಂಡಿವೆ. ವಿಶೇಷವಾಗಿ ಮುಂಭಾಗದ ಫೆಂಡರ್‌ನಲ್ಲಿ ಬ್ಲಾಕ್‌ಸ್ಟಾರ್ಮ್ ಎಂಬ ಲಾಂಛನ(emblem) ಕೂಡ ನೀಡಲಾಗಿದೆ.

MG Astor Blackstorm
MG Astor Blackstorm

ಎಂಜಿ ಅಸ್ಟರ್ ಬ್ಲ್ಯಾಕ್‌ಸ್ಟಾರ್ಮ್‌ ಒಳಭಾಗವು ಆಲ್-ಬ್ಲ್ಯಾಕ್ ಥೀಮ್ ಅನ್ನು ಹೊಂದಿದೆ. ಟಕ್ಸಿಡೋ ಬ್ಲ್ಯಾಕ್ ಸೀಟ್ ಅಪ್ಹೋಲ್ಸ್ಟರಿಗಳೊಂದಿಗೆ  ರೆಡ್ ಸ್ಟಿಚಸ್‌ಗಳನ್ನು ಕಾಣಬಹುದು. ರೆಡ್‌ ಸ್ಟಿಚಸ್‌ಗಳೊಂದಿಗೆ ಸ್ಟೀರಿಂಗ್ ವೀಲ್ ಮತ್ತು ಫ್ಲೋರ್ ಮ್ಯಾಟ್‌ಗಳು ಸೇರಿವೆ. ರೆಡ್-ಥೀಮ್ ಎಸಿ ವೆಂಟ್‌ಗಳು, ಪ್ಯಾನೊರಾಮಿಕ್ ಸನ್‌ರೂಫ್, ಡಿಜಿಟಲ್ ಕಾರ್ ಕೀ , ಪರ್ಸನಲ್ ಎಐ ಅಸಿಸ್ಟೆಂಟ್, ಜೆಬಿಎಲ್ ಸ್ಪೀಕರ್‌ ಮತ್ತು ಲೆವೆಲ್ 2 ಎಡಿಎಎಸ್ ಅನ್ನು ಸಹ ಪಡೆಯಬಹುದು.

ಇದನ್ನೂ ಓದಿ: ಕಡಿಮೆ ಬೆಲೆ, ಸೂಪರ್ ಫೀಚರ್ಸ್‌ನೊಂದಿಗೆ ಬಿಡುಗಡೆಯಾದ ಎಂಜಿ ವಿಂಡ್ಸರ್ ಎಲೆಕ್ಟ್ರಿಕ್

MG Astor Blackstorm 1.5 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ 109 ಬಿಹೆಚ್ಪಿ ಪವರ್ ಮತ್ತು 144 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅಂದರೆ ನೀವು ಕಾರನ್ನು ಚಲಾಯಿಸುವಾಗ ಸುಲಭವಾಗಿ ವೇಗವನ್ನು ಪಡೆಯಬಹುದು ಮತ್ತು ಯಾವುದೇ ರಸ್ತೆಯಲ್ಲಿ ಸುಲಭವಾಗಿ ಸಾಗಬಹುದು. ಈ ಕಾರನ್ನು ನೀವು 5-ಸ್ಪೀಡ್ ಮ್ಯಾನ್ಯುವಲ್ ಅಥವಾ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಆಯ್ಕೆ ಮಾಡಿಕೊಳ್ಳಬಹುದು.

Leave a Comment