ಆಡ್ವೆಂಚರ್ ಪ್ರಿಯರಿಗೆ ಬಂಪರ್ ಆಫರ್: ಮಾರುತಿ ಜಿಮ್ನಿ ಮೇಲೆ ಭರ್ಜರಿ ರಿಯಾಯಿತಿ!
ಮಾರುತಿ ಸುಜುಕಿಯಿಂದ ಕಾರು ಖರೀದಿಸಲು ಇದೇ ಸರಿಯಾದ ಸಮಯ! ನೆಕ್ಸಾದ ಹಲವು ಕಾರು ಮಾದರಿಗಳ ಮೇಲೆ ಅದ್ಭುತ ಆಫರ್ಗಳು ಲಭ್ಯವಿದೆ. ವಿಶೇಷವಾಗಿ ಜಿಮ್ನಿ ಆಫ್ರೋಡ್ ಎಸ್ಯುವಿ ಮೇಲಿನ ಕ್ಯಾಶ್ ಡಿಸ್ಕೌಂಟ್ ಮತ್ತು ಇತರ ಬೋನಸ್ಗಳು ನಿಮ್ಮನ್ನು ಅಚ್ಚರಿಗೊಳಿಸಲಿವೆ. ಬಜೆಟ್ನಲ್ಲಿ ಸ್ಟೈಲಿಶ್ ಮತ್ತು ಸಾಹಸ ಪ್ರಿಯರಾದ ನಿಮಗೆ ಜಿಮ್ನಿ ಖಂಡಿತವಾಗಿಯೂ ಸೂಕ್ತ ಆಯ್ಕೆಯಾಗಿದೆ.
ಮಾರುತಿ ಸುಜುಕಿ ಕಂಪನಿ, ಗ್ರಾಹಕರನ್ನು ಆಕರ್ಷಿಸಲು ಜಿಮ್ನಿ(Jimny) ಎಸ್ಯುವಿ ಮೇಲೆ ಅದ್ಭುತ ರಿಯಾಯಿತಿಗಳನ್ನು ಘೋಷಿಸಿದೆ. ಪ್ರಸ್ತುತ, ಮಾರುತಿ ಜಿಮ್ನಿ ಎಸ್ಯುವಿಯನ್ನು ಜೀಟಾ ಮತ್ತು ಆಲ್ಫಾ ಎಂಬ ಎರಡು ಮಾದರಿಗಳಲ್ಲಿ ಖರೀದಿಸಬಹುದಾಗಿದೆ. ಈ ಎರಡರಲ್ಲಿಯೂ, ಗ್ರಾಹಕರು ಅಲ್ಫಾ ಮಾದರಿಯನ್ನು ಆಯ್ಕೆ ಮಾಡುವುದರಿಂದ ಹೆಚ್ಚಿನ ರಿಯಾಯಿತಿಗಳನ್ನು ಪಡೆಯಬಹುದು. ಹೊಸ ಆಫರ್ ನಲ್ಲಿ ರೂ.1,98,000 ರಿಂದ ರೂ.2,53,000 ವರೆಗಿನ ನಗದು ಪ್ರಯೋಜನಗಳು ಮತ್ತು ಇತರ ಹಲವು ಆಕರ್ಷಕ ಆಫರ್ಗಳನ್ನು ಪಡೆದುಕೊಳ್ಳಿ. ಈ ಆಫರ್ಗಳು ರಾಜ್ಯ ಮತ್ತು ಡೀಲರ್ಶಿಪ್ಗಳಿಗೆ ಅನುಸಾರವಾಗಿ ಬದಲಾಗಬಹುದು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಮಾರುತಿ ಸುಜುಕಿ ಡೀಲರ್ಶಿಪ್ಗೆ ಭೇಟಿ ನೀಡಿ.
ಮಹೀಂದ್ರಾ ಥಾರ್ ಎಸ್ಯುವಿ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಟಿಸುತ್ತಿದ್ದರೆ, ಮಾರುತಿ ಸುಜುಕಿ ಜಿಮ್ನಿ ತನ್ನದೇ ಆದ ವಿಶಿಷ್ಟ ಗುಣಲಕ್ಷಣಗಳೊಂದಿಗೆ ಗಮನ ಸೆಳೆಯುತ್ತಿದೆ. ಬಜೆಟ್ಗೆ ಸರಿಹೊಂದುವ ಉತ್ತಮ ಆಫ್-ರೋಡ್ ವಾಹನವನ್ನು ಹುಡುಕುವ ಗ್ರಾಹಕರಿಗೆ ಇವೆರಡೂ ಉತ್ತಮ ಆಯ್ಕೆಗಳಾಗಿವೆ. ಆದರೆ, ಆಫ್-ರೋಡ್ ಪ್ರಿಯರನ್ನು ಆಕರ್ಷಿಸುವಲ್ಲಿ ಜಿಮ್ನಿ ಅಷ್ಟಾಗಿ ಯಶಸ್ವಿಯಾಗಿಲ್ಲ
ಮಾರುತಿ ಸುಜುಕಿ ಜಿಮ್ನಿ(Jimny) ವೈಶಿಷ್ಟ್ಯಗಳು
ಮಾರುತಿ ಸುಜುಕಿ ಜಿಮ್ನಿ(Maruti Suzuki Jimny) ಕಾರು ಎಕ್ಸ್ ಶೋರೂಂ ಬೆಲೆ ರೂ. 12.74 ಲಕ್ಷದಿಂದ ರೂ. 14.95 ಲಕ್ಷದವರೆಗೆ ಬೆಲೆ ಹೊಂದಿದ್ದು, ಈ ಕಾರಿನಲ್ಲಿ 9 ಇಂಚಿನ ಸ್ಮಾರ್ಟ್ಪ್ಲೇ ಪ್ರೊ+ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ಪ್ಲೇ, ಆಟೋಮ್ಯಾಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ ಮತ್ತು ನಾಲ್ಕು ಸ್ಪೀಕರ್ಗಳು, ಪ್ರೀಮಿಯಂ ಸೌಂಡ್ ಸಿಸ್ಟಮ್ನಂತಹ ಹಲವಾರು ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಇದಲ್ಲದೆ, 4WD ತಂತ್ರಜ್ಞಾನವು ಕಾರಿನ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ, ಇದು ಆರು ಏರ್ಬ್ಯಾಗ್ಗಳನ್ನು (ಸ್ಟ್ಯಾಂಡರ್ಡ್ ಆಗಿ) ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ಪಿ) ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ರಿಯರ್ ವ್ಯೂ ಕ್ಯಾಮೆರಾವನ್ನು ಹೊಂದಿದೆ.

ಮಾರುತಿ ಜಿಮ್ನಿ(Maruti Jimny) 211 ಲೀಟರ್ ಬೂಟ್ ಸ್ಪೇಸ್ ಹೊಂದಿದ್ದು, ಹಿಂಭಾಗದ ಸೀಟುಗಳನ್ನು ಕೆಳಕ್ಕೆ ಇಳಿಸುವ ಮೂಲಕ ಅದನ್ನು 332 ಲೀಟರ್ಗೆ ಹೆಚ್ಚಿಸಬಹುದು. ಮತ್ತು 195/80 ಅಳತೆಯ ಟೈಯರ್ಗಳು ಹಾಗೂ 210 ಎಂಎಂ ಗ್ರೌಂಡ್ ಕ್ಲಿಯರೆನ್ಸ್ನೊಂದಿಗೆ, ಜಿಮ್ನಿ ಎಲ್ಲಾ ರೀತಿಯ ರಸ್ತೆಗಳಲ್ಲಿ ಓಡಾಡಿಸಲು ಹಾಗೂ ಆಫ್ರೋಡ್ ಸಾಹಸಕ್ಕೂ ಸಿದ್ಧವಾಗಿದೆ.
ಮಾರುತಿ ಸುಜುಕಿ ಜಿಮ್ನಿ 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ನೊಂದಿಗೆ ಶಕ್ತಿಶಾಲಿಯಾಗಿದೆ. 4-ಸ್ಪೀಡ್ ಆಟೋಮ್ಯಾಟಿಕ್ ಅಥವಾ 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ನಲ್ಲಿ ನಿಮಗೆ ಬೇಕಾದಂತೆ ಆಯ್ಕೆ ಮಾಡಿಕೊಳ್ಳಬಹುದು. ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ, ಜಿಮ್ನಿ 105 ಹಾರ್ಸ್ಪವರ್ ಮತ್ತು 134 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಮ್ಯಾನುವಲ್ ಮಾದರಿಯಲ್ಲಿ ಫೋರ್ ವೀಲ್ ಡ್ರೈವ್ ಸಿಸ್ಟಂನೊಂದಿಗೆ ಬರಲಿದೆ.
ಇದನ್ನೂ ಓದಿ: ಮಾರುತಿ ಸುಜುಕಿ ಕಾರುಗಳ ಮೇಲೆ ಭಾರೀ ಡಿಸ್ಕೌಂಟ್