Maruti Suzuki: ಮಾರುತಿ ಸುಜುಕಿಯ ಎರಡು ವರ್ಷಗಳಲ್ಲಿ ಸರಿಸುಮಾರು 2 ಲಕ್ಷ ಗ್ರ್ಯಾಂಡ್ ವಿಟಾರಾ ಕಾರುಗಳನ್ನು ಮಾರಾಟ ಮಾಡಿದೆ

ಮಾರುತಿ ಸುಜುಕಿ ಇಂಡಿಯಾವು ಕಳೆದ ಸೆಪ್ಟೆಂಬರ್ 26,2022 ರಂದು ಬಿಡುಗಡೆಮಾಡಿದ್ದ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ಬಿಡುಗಡೆಯಾದ ಕೇವಲ 22 ತಿಂಗಳಲ್ಲಿ ಸರಿಸುಮಾರು 2 ಲಕ್ಷ ಯುನಿಟ್ಗಳನ್ನು ಮಾರಾಟ ಮಾಡುವ ಮೂಲಕ ಪ್ರಮುಖ ಮೈಲಿಗಲ್ಲನ್ನು ತಲುಪಿದೆ. ಜೂನ್ 2024 ರ ಅಂತ್ಯದ ವೇಳೆಗೆ, ಈಗಾಗಲೇ 199,550 ಯುನಿಟ್ ಗಳು ಮಾರಾಟವಾಗಿದ್ದು, 200,000 ಸಂಖ್ಯೆ  ತಲುಪಲು ಬೇಕಾದ ಉಳಿದ 450 ಯುನಿಟ್ಗಳನ್ನು ಜುಲೈ 2024 ರ ಆರಂಭದಲ್ಲಿ ಮಾರಾಟ ಮಾಡುವ ಸಾಧ್ಯತೆಯಿದೆ. ಇದರಿಂದ ಮಧ್ಯಮ ಗಾತ್ರದ SUV ಗಳಲ್ಲಿ ಅತ್ಯಂತ ವೇಗವಾಗಿ ಮಾರಾಟವಾದ ಮಧ್ಯಮ ಗಾತ್ರದ SUV ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಮತ್ತು ಹ್ಯುಂಡೈ ಕ್ರೆಟಾದ ಹಿಂದಿನ 25 ತಿಂಗಳ ದಾಖಲೆಯನ್ನು ಮುರಿದಿದ್ದು ಪ್ರಸ್ತುತ ಈ ಕಾರಿನ ಬೆಲೆ 10.99 ಲಕ್ಷದಿಂದ 19.93 ಲಕ್ಷ ರೂಗಳಾಗಿರುತ್ತದೆ.. (ex-showroom).

ಮಾರುತಿ ಸುಜುಕಿಯ ಗ್ರ್ಯಾಂಡ್ ವಿಟಾರಾ ಎಸ್ಯುವಿಗೆ ನೆಕ್ಸಾ ಡೀಲರ್ಶಿಪ್ಗಳಲ್ಲಿ ಬೇಡಿಕೆ ಇದೆ. ಜೂನ್ 2024 ರ ಹೊತ್ತಿಗೆ, ನೆಕ್ಸಾ ಈಗಾಗಲೇ 2.7 ದಶಲಕ್ಷಕ್ಕೂ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದೆ. ಇವುಗಳಲ್ಲಿ, ಗ್ರ್ಯಾಂಡ್ ವಿಟಾರಾ 199,550 ಯುನಿಟ್ಗಳನ್ನು ಹೊಂದಿದ್ದು, ಇದು ನೆಕ್ಸಾದ ಒಟ್ಟು ಮಾರಾಟದ 7.35% ರಷ್ಟನ್ನು ಪ್ರತಿನಿಧಿಸುತ್ತದೆ. ನೆಕ್ಸಾದಲ್ಲಿ ಬಲೆನೊ ಮತ್ತು ಇಗ್ನಿಸ್ ಮಾದರಿಗಳ ನಂತರ ಗ್ರ್ಯಾಂಡ್ ವಿಟಾರಾ ಮೂರನೇ ಜನಪ್ರಿಯ ಕಾರಾಗಿರುತ್ತದೆ.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಇಂಟೀರಿಯರ್ ಫೀಚರ್ಸ್

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾವು ನಿಮಗಾಗಿ ವ್ಯಾಪಕ ಶ್ರೇಣಿಯ ವೈಶಿಷ್ಟ್ಯಗಳನ್ನು ತಂದಿದೆ.  ಇದರಲ್ಲಿ ವೈರ್ಲೆಸ್ ಚಾರ್ಜಿಂಗ್, ಹೆಡ್-ಅಪ್ ಡಿಸ್ಪ್ಲೇ, 360 ಡಿಗ್ರಿ ಕ್ಯಾಮೆರಾ, ಪನೋರಮಿಕ್ ಸನ್ರೂಫ್, ಇಂಟಿಗ್ರೇಟೆಡ್ ನೆಕ್ಸ್ಟ್ ಜನರೇಷನ್ ಸುಜುಕಿ ಕನೆಕ್ಟ್ ಇನ್ಫೋಟೈನ್ಮೆಂಟ್ ಸಿಸ್ಟಮ್, ವೆಂಟಿಲೇಟೆಡ್ ಮತ್ತು ಹೀಟೆಡ್ ಸೀಟ್ಗಳು, ಒಂಬತ್ತು ಇಂಚಿನ ಟಚ್ಸ್ಕ್ರೀನ್ ಸ್ಮಾರ್ಟ್ಪ್ಲೇ ಪ್ರೊ + ಡಿಸ್ಪ್ಲೇ ಮತ್ತು ವೈರ್ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ನಂತಹ ವೈಶಿಷ್ಟಗಳನ್ನು ನೀವು ಆನಂದಿಸಬಹುದಾಗಿರುತ್ತದೆ.

ಗ್ರ್ಯಾಂಡ್ ವಿಟಾರಾ ನಿಮ್ಮ ಮತ್ತು ನಿಮ್ಮ ಸುರಕ್ಷತೆಗಾಗಿ  ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊದಿದ್ದು ಇದು ಒಟ್ಟು ಆರು ಏರ್ಬ್ಯಾಗ್ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಚೈಲ್ಡ್ ಸೀಟ್ಗಳಿಗೆ ISOFIX ಆಂಕರ್ಗಳು, EBD ಯೊಂದಿಗೆ ABS, ಹಿಲ್ ಡಿಸೆಂಟ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಮತ್ತು ವಾಹನದಲ್ಲಿರುವ ಎಲ್ಲಾ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮೈಂಡರ್ಗಳನ್ನು ಹೊಂದಿರುತ್ತದೆ.

Maruti Suzuki Grand Vitara: ಪವರ್‌ ಟ್ರೈನ್

ಈ SUVಯು  ನಿಮಗೆ ಎರಡು ರೀತಿಯ ಎಂಜಿನ್ಗಳ ನಡುವೆ ಆಯ್ಕೆಯನ್ನು ನೀಡುತ್ತದೆಃ 1.5-ಲೀಟರ್ ಮೈಲ್ಡ್ ಹೈಬ್ರಿಡ್ ಮತ್ತು 1.5-ಲೀಟರ್ ಸ್ಟ್ರಾಂಗ್‌ ಹೈಬ್ರಿಡ್.  ಮೈಲ್ಡ್ ಹೈಬ್ರಿಡ್ ಕಾರು 102 ಬಿಹೆಚ್ಪಿ ಪವರ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ಕಾರು 114.4 ಬಿಹೆಚ್ಪಿ ಪವರ್ ಉತ್ಪಾದಿಸುತ್ತದೆ. ಪೆಟ್ರೋಲ್ ಸ್ಟ್ರಾಂಗ್-ಹೈಬ್ರಿಡ್ ವ್ಯವಸ್ಥೆಯು ಸೆಲ್ಫ್-ಚಾರ್ಜಿಂಗ್ ಟೆಕ್ನಾಲಜಿಯನ್ನು ಹೊಂದಿರುವುದು ಮಾತ್ರವಲ್ಲದೆ ಪ್ಯೂರ್- EV, ಹೈಬ್ರಿಡ್ ಮತ್ತು ಪೆಟ್ರೋಲ್ ಎಂಬ ಮೂರು ಡ್ರೈವಿಂಗ್‌ ಮೋಡ್ ಗಳನ್ನು ಸಹ ನೀಡುತ್ತದೆ

ವಾಹನದ ಟ್ರಾನ್ಸ್‌ಮಿಷನ್‌ ಅನ್ನು ನೋಡುವುದಾದರೆ, ಎಂಜಿನ್ ಗೆ ವಿಭಿನ್ನ ಆಯ್ಕೆಗಳಿರುತ್ತವೆ. ಮೈಲ್ಡ್ ಹೈಬ್ರಿಡ್ಅನ್ನು ಐದು-ಸ್ಪೀಡ್ ಮ್ಯಾನ್ಯುವಲ್ ಅಥವಾ ಆರು-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ನೊಂದಿಗೆ  ಬರಲಿದೆ, ಮತ್ತು ಸ್ಟ್ರಾಂಗ್‌ ಹೈಬ್ರಿಡ್ ಎಂಜಿನ್ ಇ-ಸಿವಿಟಿ ಗೇರ್ಬಾಕ್ಸ್ನೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ನೀವು ಬಯಸಿದರೆ, ನೀವು CNGಯನ್ನು ಸಹಾ  ಆಯ್ಕೆಮಾಡಬಹುದು. ಇದು 1.5-ಲೀಟರ್ ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು ನಿಮಗೆ 86.6 ಬಿಹೆಚ್ಪಿ ಮತ್ತು 12 1.5 ಎನ್ಎಂ ಟಾರ್ಕ್ ಅನ್ನು ನೀಡುತ್ತದೆ.

ಇದನ್ನೂ ಓದಿ: ಮಾರುತಿ ಸುಜುಕಿ ಫ್ರಾಂಕ್ಸ್ ವೆಲೋಸಿಟಿ ಎಡಿಷನ್ ಬೆಲೆ ರೂ 7.29 ಲಕ್ಷದಿಂದ ಪ್ರಾರಂಭ

Leave a Comment