ಮಾರುತಿ ಸುಜುಕಿ ಎರಿಟಿಗಾ(Maruti Suzuki Ertiga) ಕೇವಲ ಒಂದು ಸ್ಟಾರ್ನೊಂದಿಗೆ ಕಡಿಮೆ ಸುರಕ್ಷತಾ ರೇಟಿಂಗ್ ಪಡೆದಿದ್ದರೆ, ರೇನಾಲ್ಟ್ ಟ್ರೈಬರ್(Renault Triber) ಸ್ವಲ್ಪ ಉತ್ತಮವಾಗಿ ಎರಡು ಸ್ಟಾರ್ಗಳನ್ನು ಗಳಿಸಿದೆ
ಗ್ಲೋಬಲ್ NCAP ಯು ಆಫ್ರಿಕಾದಲ್ಲಿ ವಾಹನಗಳ ಸುರಕ್ಷತೆಯನ್ನು ಪರೀಕ್ಷಿಸುವ #SaferCarsforAfrica ಅಭಿಯಾನದಲ್ಲಿ ಭಾಗವಾಗಿ ಇತ್ತೀಚೆಗೆ ನಡೆಸಿದ ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳನ್ನು ಹಂಚಿಕೊಂಡಿದೆ. ಈ ಪರೀಕ್ಷೆಯಲ್ಲಿ ಭಾರತದಲ್ಲಿ ತಯಾರಿಸಲ್ಪಟ್ಟ ಮಾರುತಿ ಸುಜುಕಿ ಎರಿಟಿಗಾ ಮತ್ತು ರೇನಾಲ್ಟ್ ಟ್ರೈಬರ್ ಸೇರಿದ್ದವು. ದುರದೃಷ್ಟವಶಾತ್, ಎರಡೂ ಎಂಪಿವಿಗಳು ಉತ್ತಮವಾಗಿ ನಿರ್ವಹಿಸಲಿಲ್ಲ. ಮಾರುತಿ ಸುಜುಕಿ ಎರಿಟಿಗಾ ಕೇವಲ ಒಂದು ಸ್ಟಾರ್ನೊಂದಿಗೆ ಕಡಿಮೆ ಸುರಕ್ಷತಾ ರೇಟಿಂಗ್ ಪಡೆದಿದ್ದರೆ, ರೇನಾಲ್ಟ್ ಟ್ರೈಬರ್ ಸ್ವಲ್ಪ ಉತ್ತಮವಾಗಿ ಎರಡು ಸ್ಟಾರ್ಗಳನ್ನು ಗಳಿಸಿದೆ. ಈ ಮಾಡೆಲ್ ಗಳು ಭಾರತದಲ್ಲಿ ಮಾರಾಟವಾಗುತ್ತವೆ ಮತ್ತು ದಕ್ಷಿಣ ಆಫ್ರಿಕಾಕ್ಕೂ ಕಳುಹಿಸಲಾಗುತ್ತದೆ.
ಮಾರುತಿ ಸುಜುಕಿ ಎರಿಟಿಗಾ(Maruti Suzuki Ertiga)
ಮಾರುತಿ ಸುಜುಕಿ ಎರಿಟಿಗಾ(Maruti Suzuki Ertiga) ವಯಸ್ಕರನ್ನು ಸುರಕ್ಷತೆಯಾಗಿಡುವಲ್ಲಿ ಒಟ್ಟು 34 ರಲ್ಲಿ 23.63 ಅಂಕಗಳೊಂದಿಗೆ ಉತ್ತಮವಾಗಿ ನಿರ್ವಹಿಸಿದೆ. ಆದರೆ ಮಕ್ಕಳ ಸುರಕ್ಷತೆಗೆ 49 ರಲ್ಲಿ 19.40 ಅಂಕಗಳೊಂದಿಗೆ ಕೇವಲ ಎರಡು ಸ್ಟಾರ್ ಗಳನ್ನು ಪಡೆದಿದೆ. ಗ್ಲೋಬಲ್ ಎನ್ಸಿಎಪ್ ಪ್ರಕಾರ, ಚಾಲಕ ಮತ್ತು ಪ್ರಯಾಣಿಕರ ತಲೆ ಮತ್ತು ಕುತ್ತಿಗೆಗೆ ರಕ್ಷಣೆ ಉತ್ತಮವಾಗಿದೆ. ಆದರೆ ಚಾಲಕನ ಎದೆಗೆ ರಕ್ಷಣೆ ಮಾಜಿ೯ನಲ್ ಎಂದು ರೇಟಿಂಗ್ ನೀಡಲಾಗಿದೆ, ಆದರೆ ಮುಂಭಾಗದಲ್ಲಿ ಕಳಿತುಕೊಳ್ಳುವ ಪ್ರಯಾಣಿಕರಿಗೆ ಇದು ಉತ್ತಮವೆಂದು ಪರಿಗಣಿಸಲಾಗಿದೆ.
ಗ್ಲೋಬಲ್ ಎನ್ಸಿಎಪ್ ಎರಿಟಿಗಾದ ಫೂಟ್ವೆಲ್ ಸ್ಪೇಸ್ ಅನ್ನು ಅನ್ ಸ್ಟೇಬಲ್ ಎಂದು ಹೇಳಿದೆ, ಇದರಿಂದ ಪೆಡಲ್ ಡಿಸ್ಪ್ಲೇಸ್ಮೆಂಟ್ ಆಗಿ ಕಾಲುಗಳಿಗೆ ಗಾಯಗಳಾಗುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಿದೆ. ಆದಾಗ್ಯೂ, ಸೈಡ್ ಇಂಪ್ಯಾಕ್ಟ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಗಳು ದೊರೆತಿದ್ದು, ತಲೆ, ತೊಡೆ ಮತ್ತು ಹೊಟ್ಟೆಗೆ ಉತ್ತಮ ರಕ್ಷಣೆ ಮತ್ತು ಎದೆಗೆ ಸಾಕಷ್ಟು ರಕ್ಷಣೆ ಇದೆ ಎಂದು ಸೂಚಿಸುತ್ತದೆ. ಎರಿಟಿಗಾದಲ್ಲಿ ಡ್ಯುಯಲ್ ಫ್ರೊಂಟ್ ಏರ್ ಬ್ಯಾಗ್ಸ್ ಹೊಂದಿದ್ದು ಆದರೆ ಸೈಡ್ ಏರ್ ಬ್ಯಾಗ್ಸ್ ಆಯ್ಕೆಗಳನ್ನು ಹೊಂದಿರುವುದಿಲ್ಲ. ಕೆಲವು ಸುರಕ್ಷತಾ ವೈಶಿಷ್ಟ್ಯಗಳು ಇದ್ದರೂ, ವಿಶೇಷವಾಗಿ ಸೈಡ್ ಇಂಪ್ಯಾಕ್ಟ್ ಗಳ ಘರ್ಷಣೆಗಳಿಗೆ ಸಂಬಂಧಿಸಿದಂತೆ ಕೆಲವು ಮಿತಿಗಳಿವೆ ಎಂಬುದು ಸ್ಪಷ್ಟವಾಗಿದೆ.
ರೇನಾಲ್ಟ್ ಟ್ರೈಬರ್(Renault Triber)
ರೇನಾಲ್ಟ್ ಟ್ರೈಬರ್(Renault Triber) ಎರಡು ಸ್ಟಾರ್ಗಳನ್ನು ಗಳಿಸಿದ ಎರಿಟಿಗಾಕ್ಕಿಂತ ಸ್ವಲ್ಪ ಉತ್ತಮವಾಗಿ ನಿರ್ವಹಿಸಿದೆ, ಆದರೆ ಅದು ಅತ್ಯುತ್ತಮವಾಗಿಲ್ಲ. ನಿಮಗೆ ಮತ್ತು ನಿಮ್ಮ ಪ್ರಯಾಣಿಕರಿಗೆ ಪರಾಯಾಣಿಸುವಾಗ ಉತ್ತಮ ಹೆಡ್ ಪ್ರೊಟೆಕ್ಷನ್ ಒದಗಿಸುತ್ತದೆ. ಆದರೆ ಫ್ರೊಂಟ್ & ಸೈಡ್ ಇಂಪ್ಯಾಕ್ಟ್ ಸಮಯದಲ್ಲಿ ಎದೆಗೆ ರಕ್ಷಣೆ ಒದಗಿಸುವಲ್ಲಿ ಕೊರತೆಯಿಂಟಾಗುವ ಸಾಧ್ಯತೆಯಿದೆ. ಕಾರಿನ ಸ್ಟ್ರಕ್ಚರ್ ಅನ್ ಸ್ಟೇಬಲ್ ಆಗಿದ್ದು, ಇದು ಡೀಫಾಲ್ಟ್ ಆಗಿ ಎರಡು ಏರ್ ಬ್ಯಾಗ್ಗಳನ್ನು ಮಾತ್ರ ಒಳಗೊಂಡಿದೆ. ಹೆಚ್ಚುವರಿಯಾಗಿ, ಇಎಸ್ಸಿ(ESC) ಸ್ಟಾಂಡಡ್೯ ಫೀಚರ್ ಆಗಿರುವುದಿಲ್ಲ. ಇದಲ್ಲದೆ, ಚೈಲ್ಡ್ ಸೀಟ್ಗೆ ISOFIX ಆಂಕರ್ಗಳ ಕೊರತೆಯಿಂದಾಗಿ ಮಗುವಿನ ಸುರಕ್ಷತಾ ಕಾರ್ಯಕ್ಷಮತೆ ಕಳಪೆಯಾಗಿದೆ.

ಗ್ಲೋಬಲ್ ಎನ್ಸಿಎಪ್(Global NCAP) ವರದಿಯ ಪ್ರಕಾರ, ಕಾರಿನ ಸ್ಟ್ರಕ್ಚರ್ ಪರ್ಫಾರಮೆನ್ಸ್ ಸ್ಥಿರವಾಗಿಲ್ಲ. ಸೈಡ್ ಏರ್ ಬ್ಯಾಗ್ಸ್ ಗಳು ಆಯ್ಕೆಯಾಗಿ ಲಭ್ಯವಿಲ್ಲ ಮತ್ತು ಇಎಸ್ಸಿ ಸ್ಟಾಂಡಡ್೯ ಫೀಚರ್ ಸೇರಿಸಲಾಗಿಲ್ಲ. ಹೆಚ್ಚುವರಿಯಾಗಿ, ಟ್ರೈಬರ್ಗೆ ISOFIX ಚೈಲ್ಡ್ ಸೀಟ್ ಆಂಕರೇಜ್ ಮತ್ತು ಹಿಂಭಾಗದ ರೇರ್ ವಡ್೯ ಫೇಸಿಂಗ್ ಸಿಆರ್ಎಸ್ ಅನ್ನು ಬಳಸುವಾಗ ಪ್ರಯಾಣಿಕರ ಏರ್ ಬ್ಯಾಗ್ಸ್ ಗಳ ಸಂಪರ್ಕ ಕಡಿತಗೊಳಿಸುವ ಸಾಮರ್ಥ್ಯವಿಲ್ಲ. ಇದು ಮಕ್ಕಳು ಸಂಚಾರಿಸುವಾಗ ಅವರ ರಕ್ಷಣೆಯ ಮೇಲೆ ಪರಿಣಾಮ ಬೀರುತ್ತದೆ.
ಎರಿಟಿಗಾ ಮತ್ತು ಟ್ರೈಬರ್ ಕಾರುಗಳು ಭಾರತದಲ್ಲಿ ಗ್ಲೋಬಲ್ ಎನ್ಸಿಎಪ್ ನಡೆಸಿದ ಕ್ರಾಶ್ ಪರೀಕ್ಷೆಗಳಿಗೆ ಒಳಗಾಗಿವೆ. ಎರಿಟಿಗಾ 2019 ರಲ್ಲಿ 3 ಸ್ಟಾರ್ ಗಳನ್ನು ಗಳಿಸಿದರೆ, ಟ್ರೈಬರ್ 2021 ರಲ್ಲಿ 4 ಸ್ಟಾರ್ಗಳನ್ನು ಗಳಿಸಿತ್ತು. ಗ್ಲೋಬಲ್ ಎನ್ಸಿಎಪ್ ತನ್ನ ಕ್ರಾಶ್ ಪರೀಕ್ಷಾ ಸ್ಟಾಂಡಡ್೯ಗಲನ್ನು ಇನ್ನಷ್ಟು ಕಠಿಣಗೊಳಿಸಿದೆ ಎಂಬುದು ಇಲ್ಲಿ ನಮಗೆ ತಿಳಿದುಬರುತ್ತದೆ.
ಇದನ್ನೂ ಓದಿ: ಮಾರುತಿ ಸುಜುಕಿ ಫ್ರಾಂಕ್ಸ್ ವೆಲೋಸಿಟಿ ಎಡಿಷನ್ ಬೆಲೆ ರೂ 7.29 ಲಕ್ಷದಿಂದ ಪ್ರಾರಂಭ