Maruti Suzuki Dzire: 5-ಸ್ಟಾರ್ ಸೇಫ್ಟಿ ರೇಟಿಂಗ್ ಮತ್ತು ಸನ್‌ರೂಫ್ ನೊಂದಿಗೆ ಹೊಸ ಡಿಜೈರ್ ಬಿಡುಗಡೆ

Maruti Suzuki Dzire: ಮಾರುತಿ ಸುಜುಕಿಯ ಮೊದಲ 5 ಸ್ಟಾರ್ ಸುರಕ್ಷತಾ ಕಾರು ಮಾರುತಿ ಸುಜುಕಿ ಡಿಜೈರ್ ಕೇವಲ 6.79 ಲಕ್ಷ ರೂಗೆ ಬಿಡುಗಡೆ

ಭಾರತೀಯ ಕಾರು ಮಾರುಕಟ್ಟೆಯ ದಿಗ್ಗಜ ಮಾರುತಿ ಸುಜುಕಿ (Maruti Suzuki) ತನ್ನ ಪ್ರಮುಖ ಸೆಡಾನ್ ಡಿಜೈರ್‌ಗೆ ಹೊಸ ನವೀಕರಣ ನೀಡಿದೆ. ನಾಲ್ಕನೇ ತಲೆಮಾರಿನ ಡಿಜೈರ್ (Maruti Suzuki Dzire) ಹೊಸ ವಿನ್ಯಾಸ, ಆಧುನಿಕ ವೈಶಿಷ್ಟ್ಯಗಳು ಮತ್ತು ಬಲಿಷ್ಠ ಎಂಜಿನ್‌ನೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿದೆ. ಈ ಕಾರಿನ ಎಕ್ಸ್ ಶೋರೂಂ ಬೆಲೆ ರೂ. 6.79 ಲಕ್ಷದಿಂದ ಆರಂಭವಾಗುತ್ತದೆ. ನೀವು ಕೂಡ ಈ ಹೊಸ ಡಿಜೈರ್‌ಗೆ ಮಾಲೀಕರಾಗಲು ಬಯಸಿದರೆ, ಕೇವಲ ರೂ. 11,000 ಮುಂಗಡ ಪಾವತಿಸುವ ಮೂಲಕ ಬುಕ್ಕಿಂಗ್ ಮಾಡಿ, ಈ ಕಾರನ್ನು ನಿಮ್ಮದಾಗಿಸಿಕೊಳ್ಳಬಹುದು.

ಮಾರುತಿ ಸುಜುಕಿ ಡಿಸೈರ್ ಕಾರಿನ ಎಕ್ಸ್ ಶೋರೂಂ ಬೆಲೆ ವಿವರಗಳು

  • ಡಿಸೈರ್ LXi ಮಾದರಿ ಕೇವಲ ಮ್ಯಾನುವಲ್ ಗಿಯರ್‌ಬಾಕ್ಸ್ ಆಯ್ಕೆಯೊಂದಿಗೆ ಲಭ್ಯವಿದೆ. ಅದರ ಬೆಲೆ ರೂ. 6.79 ಲಕ್ಷ.
  • ಡಿಸೈರ್ VXi ಮಾದರಿ ಮ್ಯಾನುವಲ್ ಮತ್ತು AMT ಎರಡೂ ಗಿಯರ್‌ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿದೆ. ಅದರ ಬೆಲೆ ಕ್ರಮವಾಗಿ ರೂ. 7.79 ಲಕ್ಷ ಮತ್ತು ರೂ. 8.24 ಲಕ್ಷ.
  • ಡಿಸೈರ್ ZXi ಮಾದರಿಯ ಬೆಲೆ ಮ್ಯಾನುವಲ್ ಗಿಯರ್‌ಬಾಕ್ಸ್ ಆಯ್ಕೆಗೆ ರೂ. 8.89 ಲಕ್ಷ ಮತ್ತು AMT ಗಿಯರ್‌ಬಾಕ್ಸ್ ಆಯ್ಕೆಗೆ ರೂ. 9.34 ಲಕ್ಷ.
  • ಅತ್ಯುನ್ನತ ಡಿಸೈರ್ ZXi+ ಮಾದರಿ ಮ್ಯಾನುವಲ್ ಗಿಯರ್‌ಬಾಕ್ಸ್ ಆಯ್ಕೆಗೆ ರೂ. 9.69 ಲಕ್ಷ ಮತ್ತು AMT ಗಿಯರ್‌ಬಾಕ್ಸ್ ಆಯ್ಕೆಗೆ ರೂ. 10.14 ಲಕ್ಷ ಬೆಲೆಯಲ್ಲಿ ಲಭ್ಯವಿದೆ.
  • CNG ಆಸಕ್ತರಿಗೆ, ಡಿಸೈರ್ CNG ಮಾದರಿಗಳೂ ಲಭ್ಯವಿದೆ: ಡಿಸೈರ್ CNG VXi ಮಾದರಿ ರೂ. 8.74 ಲಕ್ಷ ಮತ್ತು ಡಿಸೈರ್ CNG ZXi ಮಾದರಿ ರೂ. 9.84 ಲಕ್ಷ ಬೆಲೆಯಲ್ಲಿ, ಎರಡೂ ಮಾದರಿಗಳು ಕೇವಲ ಮ್ಯಾನುವಲ್ ಗಿಯರ್‌ಬಾಕ್ಸ್ ಆಯ್ಕೆಯೊಂದಿಗೆ ಲಭ್ಯವಿದೆ.
2024 Maruti Suzuki Dzire - ಮಾರುತಿ ಸುಜುಕಿ ಡಿಸೈರ್
2024 Maruti Suzuki Dzire – ಮಾರುತಿ ಸುಜುಕಿ ಡಿಸೈರ್

ಇದನ್ನೂ ಓದಿ: ಮಾರುತಿ ಸುಜುಕಿ ಹೊಸ ಡಿಜೈರ್ ಜೊತೆಗೆ ಹಿಂದಿನ ಮಾದರಿಯ ಡಿಜೈರ್ ಮಾರಾಟವನ್ನು ಮುಂದುವರಿಸಲಿದೆ

ಮಾರುತಿ ಸುಜುಕಿ ಡಿಸೈರ್: ಎಕ್ಸ್‌ಟೀರಿಯರ್‌, ವಿನ್ಯಾಸ

ಹೊಸ ಮಾರುತಿ ಡಿಜೈರ್ (Maruti Suzuki Dzire)ಕಾರು ತನ್ನ ಅದ್ಭುತ ವಿನ್ಯಾಸದಿಂದ ಎಲ್ಲರ ಗಮನ ಸೆಳೆಯುತ್ತದೆ. ಮುಂಭಾಗದಲ್ಲಿ ವಿಶಾಲವಾದ ಗ್ರಿಲ್ ಮತ್ತು ಆಕರ್ಷಕ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಕಾರಿಗೆ ಆಧುನಿಕ ನೋಟ ನೀಡುತ್ತವೆ. ಎಲ್ಇಡಿ ಡಿಆರ್‌ಎಲ್‌ಗಳು ಕಾರಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಹಿಂಭಾಗದ ವಿನ್ಯಾಸವೂ ಕೂಡ ಅಷ್ಟೇ ಆಕರ್ಷಕವಾಗಿದ್ದು, ‘ವೈ’ ಆಕಾರದ ವಿಶಿಷ್ಟ ಟೈಲ್‌ಲೈಟ್‌ಗಳು ಕಾರಿನ ಗುರುತನ್ನು ಪ್ರತಿಬಿಂಬಿಸುತ್ತವೆ. ಜೊತೆಗೆ, ಡ್ಯುಯಲ್-ಟೋನ್ 15-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್‌ಗಳು ಕಾರಿಗೆ ಸ್ಪೋರ್ಟಿ ಲುಕ್ ನೀಡುತ್ತವೆ.

2024 Maruti Suzuki Dzire
2025 Maruti Dzire

ಹೊಸ ಮಾರುತಿ ಸುಜುಕಿ ಡಿಜೈರ್ ಕಾರಿನ ಆಯಾಮಗಳು ಹಿಂದಿನ ಮಾದರಿಗೆ ಹೋಲುತ್ತವೆ. ಇದು ಸುಮಾರು 3,995 ಮಿಮೀ ಉದ್ದ, 1,735 ಮಿಮೀ ಅಗಲ ಮತ್ತು 1,525 ಮಿಮೀ ಎತ್ತರವಿದೆ. ಕಾರಿನ ಚಕ್ರಗಳ ನಡುವಿನ ಅಂತರ (ವೀಲ್ಬೇಸ್) 2,450 ಮಿಮೀ ಆಗಿದ್ದು, ನೆಲದಿಂದ ಕೆಳಭಾಗದವರೆಗಿನ ಅಂತರ (ಗ್ರೌಂಡ್ ಕ್ಲಿಯರೆನ್ಸ್) 163 ಮಿಮೀ ಇದೆ. ಹಿಂದಿನ ಮಾದರಿಗೆ ಹೋಲಿಸಿದರೆ, ಹೊಸ ಡಿಜೈರ್ ಕೇವಲ 10 ಮಿಮೀ ಎತ್ತರವಾಗಿದೆ.

ಇದನ್ನೂ ಓದಿ: ಹೊಸ ಮಾರುತಿ ಡಿಜೈರ್‌ಗೆ 5-ಸ್ಟಾರ್ ಸೇಫ್ಟಿ ರೇಟಿಂಗ್

ಮಾರುತಿ ಸುಜುಕಿ ಡಿಸೈರ್: ಇಂಟೀರಿಯರ್, ಫೀಚರ್‌ಗಳು 

ಈ ಮಾರುತಿ ಸೆಡಾನ್ ಕಾರು ಒಳಭಾಗದಲ್ಲಿ ಬೀಜ್ ಬಣ್ಣದ ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಅನುಭವ ನೀಡುತ್ತದೆ. 9 ಇಂಚಿನ ದೊಡ್ಡ ಟಚ್‌ಸ್ಕ್ರೀನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸೇರಿದಂತೆ ಹಲವು ಆಧುನಿಕ ವೈಶಿಷ್ಟ್ಯಗಳಿಂದ ಸುಸಜ್ಜಿತವಾಗಿದೆ. ಇದಲ್ಲದೆ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಹಿಂಭಾಗದ AC ವೆಂಟ್‌ಗಳು, ವೈರ್‌ಲೆಸ್ ಚಾರ್ಜರ್, ಸನ್‌ರೂಫ್, ಹಿಂಭಾಗದಲ್ಲಿ ಸೆಂಟ್ರಲ್ ಆರ್ಮ್ ರೆಸ್ಟ್, 360-ಡಿಗ್ರಿ ಕ್ಯಾಮೆರಾ ಹಾಗೂ ಕ್ರೂಸ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳು ಈ ಕಾರನ್ನು ಇನ್ನಷ್ಟು ವಿಶೇಷವಾಗಿಸುತ್ತವೆ.

2024 Maruti Suzuki Dzire  Dashboard
2024 Maruti Suzuki Dzire Dashboard

ಮಾರುತಿ ಸ್ವಿಫ್ಟ್ ಡಿಜೈರ್ ಕಾರು ಸುರಕ್ಷತೆಯ ವಿಷಯದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ. ಈ ಕಾರಿನಲ್ಲಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್ ಹೋಲ್ಡ್ ಅಸಿಸ್ಟ್, ಎಬಿಎಸ್ ಜೊತೆಗೆ ಇಬಿಡಿ, ಬ್ರೇಕ್ ಅಸಿಸ್ಟ್, ಎಲ್ಲಾ ಸೀಟ್‌ಗಳಿಗೆ ಮೂರು-ಪಾಯಿಂಟ್ ಸೀಟ್ ಬೆಲ್ಟ್‌ಗಳು ಮತ್ತು ISOFIX ಮೌಂಟ್‌ಗಳು ಸೇರಿದಂತೆ ಹಲವಾರು ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳಿವೆ. ಈ ವೈಶಿಷ್ಟ್ಯಗಳಿಂದಾಗಿ, ಕಾರು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಗರಿಷ್ಠ 5-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ಇದನ್ನೂ ಓದಿ: ಮಾರುತಿ ಸುಜುಕಿ ಸ್ವಿಫ್ಟ್‌ ಸಿಎನ್‌ಜಿ ಕಾರು ಬಿಡುಗಡೆ, 33 ಕಿ.ಮೀ ಮೈಲೇಜ್

ಮಾರುತಿ ಸುಜುಕಿ ಡಿಸೈರ್: ಪವರ್‌ಟ್ರೇನ್, ಮೈಲೇಜ್ 

ಮಾರುತಿ ಸುಜುಕಿ ಡಿಸೈರ್ (Maruti Suzuki Dzire) ಕಾರಿನಲ್ಲಿ Z12E ಎಂಬ 3-ಸಿಲಿಂಡರ್, 1.2-ಲೀಟರ್ ಪೆಟ್ರೋಲ್ ಎಂಜಿನ್. ಈ ವರ್ಷದ ಆರಂಭದಲ್ಲಿ ಸ್ವಿಫ್ಟ್ ಮಾದರಿಯಲ್ಲಿ ಪರಿಚಯವಾದ ಈ ಎಂಜಿನ್ ಈಗ ಡಿಸೈರ್‌ಗೆ ಹೊಸ ಜೀವ ತುಂಬಿದೆ. 82hp ಶಕ್ತಿ ಮತ್ತು 112Nm ಟಾರ್ಕ್ ಉತ್ಪಾದಿಸುವ ಈ ಎಂಜಿನ್‌ಗೆ ಐದು-ಸ್ಪೀಡ್ ಮ್ಯಾನುವಲ್ ಅಥವಾ ಐದು-ಸ್ಪೀಡ್ AMT ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ.

ಹೊಸ ಮಾರುತಿ ಸುಜುಕಿ ಡಿಸೈರ್ ಕಾರು ತನ್ನ ಇಂಧನ ದಕ್ಷತೆಯಿಂದ ಗಮನ ಸೆಳೆಯುತ್ತಿದೆ. ARAI ಪ್ರಮಾಣೀಕರಣದ ಪ್ರಕಾರ, ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಲೀಟರ್‌ಗೆ 24.79 ಕಿಲೋಮೀಟರ್ ಮತ್ತು AMT ಗೇರ್‌ಬಾಕ್ಸ್‌ನೊಂದಿಗೆ ಲೀಟರ್‌ಗೆ 25.71 ಕಿಲೋಮೀಟರ್ ದೂರವನ್ನು ಕ್ರಮಿಸಬಲ್ಲದು. ಇನ್ನು CNG ಮಾದರಿಯ ಬಗ್ಗೆ ಹೇಳುವುದಾದರೆ, ಕಿಲೋಗ್ರಾಂಗೆ 33.73 ಕಿಲೋಮೀಟರ್ ಅದ್ಭುತ ಮೈಲೇಜ್  ನೀಡುತ್ತದೆ.

Leave a Comment