ಮಾಹಿಂದ್ರಾ ಥಾರ್ ರಾಕ್ಸ್ನ(Mahindra Thar Roxx) ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಈ ಥಾರ್ ರಾಕ್ಸ್ 2024 ರ ಆಗಸ್ಟ್ 15 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವುದರಿಂದ, ಕಂಪನಿ ಹೊಸ ಟೀಸರ್ ಅನ್ನು ಹಂಚಿಕೊಂಡಿದ್ದು, ಅದರಲ್ಲಿನ ಸ್ಟೈಲಿಶ್ ಬದಲಾವಣೆಗಳನ್ನು ನೀವು ನೋಡಬಹುದು.
ಹೊಸ ಥಾರ್ ರಾಕ್ಸ್ ಗೆ ಹೆಚ್ಚುವರಿ ಎರಡು ಬಾಗಿಲುಗಳು ಮತ್ತು ಉದ್ದವಾದ ವೀಲ್ಬೇಸ್ ಸಿಕ್ಕಿದೆ. ಈ ಬಲಿಷ್ಠ ವಾಹನಕ್ಕೆ ಅದ್ಭುತವಾದ ವಿನ್ಯಾಸ ವರ್ಧನೆ ಸಿಕ್ಕಿದೆ. ಇದು ಸುತ್ತಿನ ಆಕಾರದ ಮಂಜು ದೀಪಗಳು (ಫಾಗ್ ಲ್ಯಾಂಪ್), ಸ್ಲಿಮ್ ಆದ ಕಪ್ಪು ಬಾಗಿಲಿನ ಹಿಡಿಕೆಗಳು, ಹೊಸ ಗ್ರಿಲ್, ನವೀಕರಿಸಿದ ಎಲ್ಇಡಿ ಹೆಡ್ಲೈಟ್ಗಳು, ಸ್ಟೈಲಿಶ್ ಆಗಿರುವ ಐದು ಚಕ್ರದ ಡೈಮಂಡ್ ಕಟ್ (five-spoke diamond-cut) ಅಲಾಯ್ ವೀಲ್ ಗಳು ಮತ್ತು ಬದಲಾದ ಟೈಲ್ ಲೈಟ್ ಗಳನ್ನು ಹೊಂದಿದೆ. ಇದಲ್ಲದೆ, 5-ಬಾಗಿಲಿನ ಮಾದರಿಯು ಡ್ಯುಯಲ್-ಟೋನ್ ನಲ್ಲಿ ಬರಲಿದ್ದು, ಬಾಗಿಲಿನಲ್ಲಿ ಅಳವಡಿಸಲಾದ ORVMs ಮತ್ತು ಮುಂಭಾಗದ ಪ್ಯಾನೆಲ್ನಲ್ಲಿರುವ ಥಾರ್ ರಾಕ್ಸ್ ಬ್ಯಾಡ್ಜ್ನೊಂದಿಗೆ ಹೊಸ ಥಾರ್ ರಾಕ್ಸ್ ಹೆಚ್ಚು ಸ್ಟೈಲಿಶ್ ಆಗಿ ಕಾಣುತ್ತದೆ.
ಸ್ಪೈ ಫೋಟೋ(spy shots)ಗಳ ಪ್ರಕಾರ, ಮುಂಬರುವ ಥಾರ್ ಬೀಜ್(beige) ಬಣ್ಣದ ಇಂಟೀರಿಯರ್ ನೊಂದಿಗೆ ಬರಲಿದೆ. ವೈಶಿಷ್ಟ್ಯಗಳ ವಿಷಯದಲ್ಲಿ, 10.25 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಕೀಲೆಸ್ ಎಂಟ್ರಿ ಪುಶ್-ಬಟನ್ ಸ್ಟಾರ್ಟ್, ಯುಎಸ್ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ಗಳು, ವೈರ್ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಿರುವ 10.25 ಇಂಚಿನ ಟಚ್ಸ್ಕ್ರೀನ್ ಎಂಟರ್ಟೈನ್ಮೆಂಟ್ ಸಿಸ್ಟಮ್, ಮ್ಯಾನುವಲ್ ಡೇ/ನೈಟ್ IRVM, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಸನ್ರೂಫ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ನೀವು ನಿರೀಕ್ಷಿಸಬಹುದು.
ಮಹೀಂದ್ರಾ ಥಾರ್ ರಾಕ್ಸ್ನಲ್ಲಿ ಸುರಕ್ಷತೆ ಪ್ರಮುಖ ಆದ್ಯತೆಯಾಗಿದೆ. ನಿಮ್ಮನ್ನು ಸುರಕ್ಷಿತವಾಗಿರಿಸಲು ವಿವಿಧ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ ಎಲ್ಲಾ-ಚಕ್ರ ಡಿಸ್ಕ್ ಬ್ರೇಕ್ಗಳು ಮತ್ತು ABS ಇದ್ದು, EBD ನಿಮ್ಮನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ, ಸುರಕ್ಷತೆಯನ್ನು ಹೆಚ್ಚಿಸಲು 360-ಡಿಗ್ರಿ ಕ್ಯಾಮೆರಾ ಮತ್ತು ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್ ಗಳು ನಿಮಗೆ ಇರಬಹುದು. ಕೆಲವು ಮಾದರಿಗಳು ಚಾಲನೆ ಮಾಡುವಾಗ ಹೆಚ್ಚಿನ ರಕ್ಷಣೆಗಾಗಿ ತುರ್ತು ಬ್ರೇಕಿಂಗ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ನಂತಹ ಸುಧಾರಿತ ಚಾಲಕ-ಸಹಾಯ ವ್ಯವಸ್ಥೆಗಳೊಂದಿಗೆ (ADAS) ಸಹ ಬರಬಹುದು.
Mahindra Thar Roxx ಪವರ್ಟ್ರೈನ್
ಹೊಸ ಮಾಹಿಂದ್ರಾ ಥಾರ್ ರಾಕ್ಸ್ನಲ್ಲಿ ಮೂರು ಎಂಜಿನ್ ಆಯ್ಕೆಗಳು ಇರಲಿವೆ. ಇದು ಮೂರು ಬಾಗಿಲಿನ ಥಾರ್ನಂತೆಯೇ ಇರುತ್ತದೆ. ನಿಮಗೆ ಎರಡು ಡೀಸೆಲ್ ಮತ್ತು ಒಂದು ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಗಳು ಇರುತ್ತವೆ. 1.5 ಲೀಟರ್ ಡೀಸೆಲ್ ಎಂಜಿನ್ಗೆ ಹಿಂಭಾಗದ ಚಕ್ರ ಚಾಲನೆ ಮತ್ತು ಮ್ಯಾನುವಲ್ ಗೇರ್ಬಾಕ್ಸ್ ಮಾತ್ರ ಇರುತ್ತದೆ. 2.2 ಲೀಟರ್ ಡೀಸೆಲ್ ಎಂಜಿನ್ಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಗಳು ಇರುತ್ತವೆ ಮತ್ತು ಇದು 4X4 ವ್ಯವಸ್ಥೆಯನ್ನೂ ಹೊಂದಿರುತ್ತದೆ. 2.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಗಳು ಇರುತ್ತವೆ ಆದರೆ ಇದು ಹಿಂಭಾಗದ ಚಕ್ರ ಚಾಲನೆಯೊಂದಿಗೆ(RWD) ಮಾತ್ರ ಬರುತ್ತದೆ.
ಇದನ್ನೂ ಓದಿ: ಆಗಸ್ಟ್ 1ಕ್ಕೆ ಬಿಡುಗಡೆಯಾಗಲಿದೆ ನಿಸ್ಸಾನ್ ಎಕ್ಸ್-ಟ್ರೈಲ್ ಕಾರು