Mahindra Thar Roxx: ಮಹೀಂದ್ರಾ ಥಾರ್ ರಾಕ್ಸ್ 4×4 ಬುಕಿಂಗ್ ಆರಂಭ, ಬೆಲೆ ರೂ. 18.79 ಲಕ್ಷ

ಅಕ್ಟೋಬರ್ 3ರಿಂದ Mahindra Thar Roxx ಬುಕ್ಕಿಂಗ್ ಆರಂಭ, ಕೇವಲ ರೂ. 21,000 ಪಾವತಿಯೊಂದಿಗೆ ಬುಕ್ ಮಾಡಿಕೊಳ್ಳಿ

ಮಹೀಂದ್ರಾ (Mahindra) ಕಂಪನಿಯು ಇತ್ತೀಚೆಗೆ ತನ್ನ ಬಹುನಿರೀಕ್ಷಿತ ಥಾರ್ ರಾಕ್ಸ್ (Mahindra Thar Roxx) ಎಸ್‌ಯುವಿಯ 4×4 ಆವೃತ್ತಿಗಳ ಬೆಲೆಯನ್ನು ಅಧಿಕೃತವಾಗಿ ಪ್ರಕಟಿಸಿದೆ. ವಿಶ್ವದಾದ್ಯಂತ ಈ ವಾಹನವನ್ನು ಪರಿಚಯಿಸಿದ ಕೇವಲ ಒಂದು ತಿಂಗಳ ಅವಧಿಯಲ್ಲಿಯೇ ಈ ಪ್ರಮುಖ ಬೆಳವಣಿಗೆ ಸಂಭವಿಸಿದೆ. ಥಾರ್ ರಾಕ್ಸ್ 4×4 ಮಾದರಿಗಳು ರೂ. 18.79 ಲಕ್ಷದಿಂದ ಆರಂಭವಾಗುವ ಬೆಲೆಯಲ್ಲಿ ಲಭ್ಯವಿರುತ್ತವೆ ಮತ್ತು ಟಾಪ್-ಎಂಡ್ ಮಾದರಿಯ ಬೆಲೆ ರೂ. 22.49 ಲಕ್ಷ (ಎಕ್ಸ್-ಶೋರೂಂ) ವರೆಗೆ ಹೋಗಬಹುದು. ಈ 4×4 ವೈಶಿಷ್ಟ್ಯವು ಪ್ರಸ್ತುತ ಡೀಸೆಲ್ ಎಂಜಿನ್‌ಗಳೊಂದಿಗೆ ಮಾತ್ರ ಲಭ್ಯವಿದ್ದು, MX5, AX5 L ಮತ್ತು AX7 L ಎಂಬ ಮೂರು ವಿಭಿನ್ನ ಟ್ರಿಮ್ ಹಂತಗಳಲ್ಲಿ ಲಭ್ಯವಿರುತ್ತದೆ.

ಗ್ರಾಹಕರು ಅಕ್ಟೋಬರ್ 3ರಿಂದ ಥಾರ್ ರಾಕ್ಸ್ 4×4 (Thar Roxx 4×4) ಅನ್ನು ಬುಕ್ ಮಾಡಬಹುದು ಮತ್ತು ವಿತರಣೆ ದಸರಾ ಹಬ್ಬದ ಸಂದರ್ಭದಲ್ಲಿ, ಅಂದರೆ ಅಕ್ಟೋಬರ್ 12, 2024ರಿಂದ ಆರಂಭವಾಗಲಿದೆ. ವಾಹನವನ್ನು ಬುಕ್ ಮಾಡಲು ಗ್ರಾಹಕರು ರೂ. 21,000/-ನ ಬುಕ್ಕಿಂಗ್ ಶುಲ್ಕವನ್ನು ಪಾವತಿಸಬೇಕು. ಹಿಂದಿನ ತಿಂಗಳು, ಮಹೀಂದ್ರ ಥಾರ್ ರಾಕ್ಸ್ 4×2 (Thar Roxx 4×2) ವಿವಿಧ ಮಾದರಿಗಳ ಬೆಲೆ ವಿವರಗಳನ್ನು ಪ್ರಕಟಿಸಲಾಯಿತು. ಈ ಮಾದರಿಗಳು ಎಕ್ಸ್-ಶೋರೂಂ ಬೆಲೆ ರೂ. 12.99 ಲಕ್ಷದಿಂದ ರೂ. 20.49 ಲಕ್ಷದವರೆಗೆ ಹೋಗುತ್ತವೆ. 4×4 ಎಂಜಿನ್ ಹೊಂದಿರುವ MX5 ಮಾದರಿಯ ಬೆಲೆ 4×2 ಮಾದರಿಗಿಂತ ಸುಮಾರು ರೂ. 1.80 ಲಕ್ಷ ಹೆಚ್ಚಾಗಿದೆ. ಮತ್ತೊಂದೆಡೆ, ಟಾಪ್-ಸ್ಪೆಕ್ AX7 L 4×4 ಮಾದರಿಯು 2 ವೀಲ್ ಡ್ರೈವ್ ಮಾದರಿಗಿಂತ ರೂ. 1.5 ಲಕ್ಷ ಹೆಚ್ಚಾಗಿರುತ್ತದೆ.

ಇದನ್ನೂ ಓದಿ: ಮೊದಲ ಮಹೀಂದ್ರಾ ಥಾರ್ ರಾಕ್ಸ್ 1.31 ಕೋಟಿ ರೂ.ಗೆ ಮಾರಾಟ!

Mahindra Thar Roxx
Mahindra Thar Roxx

ಮಹೀಂದ್ರಾ ಥಾರ್ ರಾಕ್ಸ್: ವೈಶಿಷ್ಟ್ಯಗಳು

ವಾಹನದ ಒಳಗೂ ಹಲವಾರು ಫೀಚರ್ಸ್ ಗಳಿದ್ದು, ದೊಡ್ಡ 10.25-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ವೈರ್ಲೆಸ್ ಚಾರ್ಜಿಂಗ್ ಪ್ಯಾಡ್, ಪನೊರಮಿಕ್ ಸನ್ರೂಫ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಮುಂಭಾಗದ ಸೀಟುಗಳು, ಕ್ರೂಸ್ ಕಂಟ್ರೋಲ್, ಎಲೆಕ್ಟ್ರಿಕ್ ಅಡ್ಜಸ್ಟ್ ಒಆರ್ವಿಎಂ, ರಿಯರ್ ಡಿಫಾಗರ್, ಕಪ್ ಹೋಲ್ಡರ್ನೊಂದಿಗೆ ರಿಯರ್ ಆರ್ಮ್ ರೆಸ್ಟ್, 6 ವೇ ಪವರ್ಡ್ ಡ್ರೈವರ್ ಸೀಟ್, ಇದಲ್ಲದೇ ಸಂಪೂರ್ಣ ಡಿಜಿಟಲ್ ಆಗಿರುವ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಅತ್ಯುತ್ತಮ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಅನ್ನು ಪಡೆಯುತ್ತೀರಿ.

ಮಹೀಂದ್ರಾ ಥಾರ್ ರಾಕ್ಸ್(Mahindra Thar Roxx) ಕಾರಿನಲ್ಲಿ ನಿಮ್ಮ ಪ್ರಯಾಣವನ್ನು ಸಂಪೂರ್ಣವಾಗಿ ಸುರಕ್ಷಿತವಾಗಿಸಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಆರು ಏರ್‌ಬ್ಯಾಗ್‌ಗಳು, ಇಎಸ್ಇ, ತ್ರಿಪಾಯಿಂಟ್ ಸೀಟ್‌ಬೆಲ್ಟ್‌ಗಳು, ಎಲ್ಲಾ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳು, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್, ಮುಂಭಾಗದ ಪಾರ್ಕಿಂಗ್ ಸೆನ್ಸಾರ್, ಕ್ರೂಸ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, ಆಟೋ ಹೆಡ್‌ಲೈಟ್‌ಗಳು ಮತ್ತು ವೈಪರ್‌ಗಳು ಹಾಗೂ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಮ್‌ನಂತಹ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳು ನಿಮ್ಮ ಪ್ರತಿಯೊಂದು ಪ್ರಯಾಣವನ್ನು ಸುಗಮಗೊಳಿಸುತ್ತವೆ. ಇದಲ್ಲದೆ, ಟಾಪ್-ಎಂಡ್ ಮಾದರಿಯಲ್ಲಿ ನೀಡಲಾಗಿರುವ ಲೆವಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ನಿಮಗೆ ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಚಲಿಸಲು ಅವಕಾಶ ಮಾಡಿಕೊಡುತ್ತದೆ.

ಇದನ್ನೂ ಓದಿ: ಮಹೀಂದ್ರಾ ಥಾರ್ ರಾಕ್ಸ್‌ ಬಿಡುಗಡೆ ರೂ.12.99 ಲಕ್ಷಕ್ಕೆ ಪವರ್‌ಫುಲ್ SUV

Mahindra Thar Roxx
Mahindra Thar Roxx

4×4 ಮಾದರಿಗಳಲ್ಲಿ ‘ಸ್ಮಾರ್ಟ್ ಕ್ರಾಲ್’ ಮತ್ತು ‘ಇಂಟೆಲಿಟರ್ನ್’ ಎಂಬ ಎರಡು ಅತ್ಯಾಧುನಿಕ ತಂತ್ರಜ್ಞಾನಗಳು ಸೇರಿಸಲ್ಪಟ್ಟಿವೆ. ‘ಸ್ಮಾರ್ಟ್ ಕ್ರಾಲ್’ ವೈಶಿಷ್ಟ್ಯವು 2.5 ರಿಂದ 30 ಕಿಮೀ/ಗಂ ವೇಗದಲ್ಲಿ ಚಲಿಸುವಾಗ ಕಷ್ಟಕರವಾದ ರಸ್ತೆಗಳಲ್ಲಿ ಸುಲಭವಾಗಿ ಚಲಿಸಲು ಸಹಾಯ ಮಾಡುತ್ತದೆ. ಇನ್ನು ‘ಇಂಟೆಲಿಟರ್ನ್’ ವೈಶಿಷ್ಟ್ಯವು ಕಲ್ಲಿನ ಪ್ರದೇಶಗಳಲ್ಲಿ 15 ಕಿಮೀ/ಗಂ ಗಿಂತ ಕಡಿಮೆ ವೇಗದಲ್ಲಿ ವಾಹನವನ್ನು ನಿಧಾನವಾಗಿ ಚಲಾಯಿಸಲು ಸಹಾಯ ಮಾಡುತ್ತದೆ. ಈ ವೈಶಿಷ್ಟ್ಯವನ್ನು ಪ್ರತಿ ಬಾರಿ 15 ಸೆಕೆಂಡ್‌ಗಳವರೆಗೆ ಮಾತ್ರ ಬಳಸಬಹುದು.  ಹೊಸ 4×4 ಮಾದರಿಗಳು ‘ಫೋರ್ ಎಕ್ಸ್‌ಪ್ಲೋರ್’ ಡ್ರೈವ್ ತಂತ್ರಜ್ಞಾನದೊಂದಿಗೆ ಬಂದಿದ್ದು, ಇದು ಸ್ನೋ, ಮಡ್ ಮತ್ತು ಸ್ಯಾಂಡ್‌ನಂತಹ ವಿವಿಧ ರೀತಿಯ ರಸ್ತೆಗಳಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ತಂತ್ರಜ್ಞಾನವು ವಾಹನದ ಕಾರ್ಯಕ್ಷಮತೆಯನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ.

ಮಹೀಂದ್ರಾ ಥಾರ್ ರಾಕ್ಸ್: ಪವರ್‌ಟ್ರೇನ್

Mahindra Thar Roxx 4×4 ನ 2.2-ಲೀಟರ್ ಡೀಸೆಲ್ ಎಂಜಿನ್, ಅದರ ಅತ್ಯುತ್ತಮ ಕಾರ್ಯಕ್ಷಮತೆಯಿಂದ ಗಮನ ಸೆಳೆಯುತ್ತದೆ. 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ 150 bhp ಶಕ್ತಿ ಮತ್ತು 330 Nm ಟಾರ್ಕ್ ಅನ್ನು ನೀಡುವ ಈ ಎಂಜಿನ್, ಯಾವುದೇ ರಸ್ತೆಯಲ್ಲೂ ನಿಮಗೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ. ಆದರೆ ನಿಮಗೆ ಇನ್ನಷ್ಟು ಶಕ್ತಿ ಬೇಕಿದ್ದರೆ, 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ 172 bhp ಶಕ್ತಿ ಮತ್ತು 370 Nm ಟಾರ್ಕ್‌ನೊಂದಿಗೆ ಹೆಚ್ಚಿನ ಆವೃತ್ತಿಯನ್ನು ಆಯ್ಕೆ ಮಾಡಬಹುದು.

ಇದನ್ನೂ ಓದಿ: ಮಹೀಂದ್ರಾ ಥಾರ್ ರಾಕ್ಸ್ 5-ಡೋರ್ vs ಮಹೀಂದ್ರಾ ಥಾರ್ 3-ಡೋರ್ ಯಾವುದು ಬೆಸ್ಟ್ ?

Mahindra Thar Roxx
Mahindra Thar Roxx

ನೀವು 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ನೊಂದಿಗೆ ಮಹೀಂದ್ರಾ ಥಾರ್ ರಾಕ್ಸ್ ಮಾದರಿಯನ್ನು ಸಹ ಪಡೆಯಬಹುದು. ಇದು ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ 162 ಬಿಹೆಚ್ಪಿ ಮತ್ತು 330 ಎನ್ಎಂ ಟಾರ್ಕ್ ಅನ್ನು ಮತ್ತು ಆಟೋಮ್ಯಾಟಿಕ್ ಗೇರ್ಬಾಕ್ಸ್ನೊಂದಿಗೆ ಜೋಡಿಸಿದಾಗ 177 ಬಿಹೆಚ್ಪಿ ಮತ್ತು 380 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ಗಳು  6-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿದೆ.

ವಾಹನದ ಇಂಧನ ದಕ್ಷತೆಯನ್ನು ಪರಿಗಣಿಸಿದಾಗ, ARAI ಪ್ರಮಾಣೀಕೃತ ಮಾಹಿತಿಯ ಪ್ರಕಾರ, ಪೆಟ್ರೋಲ್ ಎಂಜಿನ್ ಮತ್ತು ಡೀಸೆಲ್ ಎಂಜಿನ್‌ಗಳ ಇಂಧನ ದಕ್ಷತೆಯಲ್ಲಿ ಗಮನಾರ್ಹ ವ್ಯತ್ಯಾಸ ಕಂಡುಬರುತ್ತದೆ. ಪೆಟ್ರೋಲ್ ಎಂಜಿನ್ ಪ್ರತಿ ಲೀಟರ್‌ಗೆ ಸರಾಸರಿ 12.40 ಕಿಲೋಮೀಟರ್ ದೂರವನ್ನು ಕ್ರಮಿಸಿದರೆ, ಡೀಸೆಲ್ ಎಂಜಿನ್ 15.20 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ.

Leave a Comment