ಲೆಕ್ಸಸ್ ಎಲ್ಎಂ 350h ಎಂಪಿವಿ 7 ಆಸನಗಳ ವಿಐಪಿ ಮಾದರಿಯು 2 ಕೋಟಿ ರೂಪಾಯಿ ಬೆಲೆಯಲ್ಲಿ ಮತ್ತು 4 ಆಸನಗಳ ಅತ್ಯಂತ ಐಷಾರಾಮಿ ಮಾದರಿಯು 2.50 ಕೋಟಿ ರೂಪಾಯಿ ಬೆಲೆಯಲ್ಲಿ ಲಭ್ಯವಿದೆ.
ಲೆಕ್ಸಸ್ ಭಾರತದಲ್ಲಿ ಬಹುನಿರೀಕ್ಷಿತ ಲೆಕ್ಸಸ್ ಎಲ್ಎಂ 350h(Lexus LM 350h) ಅನ್ನು ಅಂತಿಮವಾಗಿ ವಿತರಿಸಲು ಪ್ರಾರಂಭಿಸಿದೆ. 2023ರ ಮಾರ್ಚ್ ತಿಂಗಳಲ್ಲಿಯೇ ಬೆಲೆಗಳನ್ನು ಘೋಷಿಸಿದರೂ, ಅಧಿಕೃತ ವಿತರಣೆಗಳು ಒಂದು ವರ್ಷದ ನಂತರ ಪ್ರಾರಂಭವಾಗಿವೆ. ಲೆಕ್ಸಸ್ ಎಲ್ಎಂ 350h ನಿಮಗೆ ಆಯ್ಕೆ ಮಾಡಲು ಎರಡು ವೇರಿಯಂಟ್ ಆಯ್ಕೆಗಳನ್ನು ನೀಡುತ್ತದೆ. 2 ಕೋಟಿ ರೂಪಾಯಿ ಬೆಲೆಯ 7 ಆಸನಗಳ ವಿಐಪಿ ಮಾದರಿ ಮತ್ತು 2.50 ಕೋಟಿ ರೂಪಾಯಿ ಬೆಲೆಯ 4 ಆಸನಗಳ ಅಲ್ಟ್ರಾ ಲಗ್ಷರಿ ಮಾದರಿ ಇವೆ (ಎಕ್ಸ್-ಶೋರೂಮ್ ಬೆಲೆ).
ಲೆಕ್ಸಸ್ ಇಂಡಿಯಾದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ತನ್ಮಯ್ ಭಟ್ಟಾಚಾರ್ಯ ಅವರು, “ಹೊಸ ಲೆಕ್ಸಸ್ ಎಲ್ಎಂ 350h ಕ್ಕೆ ನಮ್ಮ ಗ್ರಾಹಕರಿಂದ ನಾವು ಪಡೆದ ಅಭೂತಪೂರ್ವ ಪ್ರತಿಕ್ರಿಯೆಯಿಂದ ನಾವು ನಮ್ರತೆ ಮತ್ತು ಸಂತೋಷವನ್ನು ಅನುಭವಿಸುತ್ತಿದ್ದೇವೆ. ಈ ವಾಹನವು ಐಷಾರಾಮಿಗೆ ನಮ್ಮ ಬದ್ಧತೆಯನ್ನು ಸಾಕಾರಗೊಳಿಸುತ್ತದೆ ಮತ್ತು ಇದು ನಿರೀಕ್ಷೆಗಳನ್ನು ಮೀರಿದೆ ಮತ್ತು ಐಷಾರಾಮಿ ಪ್ರಥಮ ದರ್ಜೆ ಪ್ರಯಾಣದಲ್ಲಿ ಹೊಸ ಮಾನದಂಡವನ್ನು ಸೃಷ್ಟಿಸಿದೆ ಎಂಬ ವಿಶ್ವಾಸ ನಮಗಿದೆ. ದೀರ್ಘ ಕಾಯುವ ಅವಧಿಗೆ ನಾವು ಕ್ಷಮೆಯಾಚಿಸುತ್ತೇವೆ ಮತ್ತು ನಮ್ಮ ಎಲ್ಲಾ ಗ್ರಾಹಕರಿಗೆ ನಿರಂತರ ಬೆಂಬಲಕ್ಕಾಗಿ ಹೃದಯಪೂರ್ವಕ ಧನ್ಯವಾದಗಳು.
ಈ ಲಕ್ಷುರಿ ಕಾರಿನ ಪರಿಚಯವು ಭಾರತದಲ್ಲಿ ಲೆಕ್ಸಸ್ಗೆ ಪ್ರಮುಖ ಮೈಲಿಗಲ್ಲು ಮತ್ತು ನಮ್ಮ ಗ್ರಾಹಕರಿಗೆ ವಿಶ್ವ ದರ್ಜೆಯ ಉತ್ಪನ್ನಗಳನ್ನು ಒದಗಿಸುವಲ್ಲಿ ನಾವು ಬದ್ಧರಾಗಿರುತ್ತೇವೆ ಮತ್ತು ಹೀಗೆ ನಮ್ಮ ಸಂಬಂಧವನ್ನು ಬಲಪಡಿಸುತ್ತೇವೆ ಮತ್ತು ನಾವೀನ್ಯತೆ ಮತ್ತು ಅತ್ಯುತ್ತಮತೆಯ ನಮ್ಮ ಪರಂಪರೆಯನ್ನು ಮುಂದುವರಿಸುತ್ತೇವೆ” ಎಂದು ಹೇಳಿದರು.
Lexus LM 350h ಇಂಟೀರಯರ್, ಎಕ್ಸ್ಟೀರಿಯರ್ ಮತ್ತು ಫೀಚರ್ಸ್
ಗಾಳಿಯ ವೈಜ್ಞಾನಿಕ ವಿನ್ಯಾಸವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಹೊಸ ಲೆಕ್ಸಸ್ ಎಲ್ಎಂ ಮಿನಿವ್ಯಾನ್ನ ಹೊರಭಾಗವು ಹೊಸ ಸ್ಪಿಂಡಲ್ ಬಾಡಿ ಫ್ರಂಟ್ ಗ್ರಿಲ್ ಮತ್ತು ಕ್ರೋಮ್ ಅಲಂಕಾರಗಳೊಂದಿಗೆ ಇನ್ನಷ್ಟು ಆಕರ್ಷಕವಾಗಿದೆ. ಈ ಆಧುನಿಕ ವಿನ್ಯಾಸವು ವಾಹನಕ್ಕೆ ಭವ್ಯವಾದ ನೋಟವನ್ನು ನೀಡುತ್ತದೆ.
ಲೆಕ್ಸಸ್ ಎಲ್ಎಂ 350h (Lexus LM 350h) 17 ಮತ್ತು 19 ಇಂಚಿನ ಅಲಾಯ್ ವೀಲ್ಗಳೊಂದಿಗೆ ಬರುತ್ತದೆ, ಇದು ಅದ್ಭುತವಾಗಿ ಕಾಣುವುದಲ್ಲದೆ, ನಿಮ್ಮ ಪ್ರಯಾಣವನ್ನು ಸುಗಮ ಮತ್ತು ಆರಾಮದಾಯಕಗೊಳಿಸಲು ಸಹಾಯ ಮಾಡುತ್ತದೆ. ಇನ್ನೂ ಕಾರಿನ ಬಣ್ಣಗಳ ಆಯ್ಕೆಗೆ ಬಂದರೆ ಸಾನಿಕ್ ಅಗೇಟ್, ಸಾನಿಕ್ ಟೈಟಾನಿಯಂ, ಗ್ರಾಫೈಟ್ ಬ್ಲ್ಯಾಕ್ ಮತ್ತು ಸಾನಿಕ್ ಕ್ವಾರ್ಟ್ಜ್ನಂತಹ ವಿವಿಧ ಸೊಗಸಾದ ಬಣ್ಣಗಳು ಈ ಕಾರಿಗೆ ಉತ್ಕೃಷ್ಟತೆಯ ಸ್ಪರ್ಶವನ್ನು ನೀಡುತ್ತವೆ.

ಲೆಕ್ಸಸ್ ಎಲ್ಎಂನಲ್ಲಿ ದೊಡ್ಡ 48 ಇಂಚಿನ ಅಗಲ ಪರದೆ ಮತ್ತು ಅದ್ಭುತವಾದ 23 ಸ್ಪೀಕರ್ಗಳ ಸೌಂಡ್ ಸಿಸ್ಟಮ್ ಇದೆ. ಡ್ರೈವರ್ ಸೀಟ್ ಹಾಗೂ ಹಿಂಬದಿಯ ಸೀಟುಗಳಿಂದ ನಿಮ್ಮನ್ನು ಪ್ರತ್ಯೇಕಿಸುವ ಕ್ಯಾಬಿನ್ ನೊಂದಿಗೆ ನೀವು ನಿಮ್ಮ ಸ್ವಂತ ಜಾಗವನ್ನು ಆನಂದಿಸಬಹುದು. ಫೋಲ್ದೆಬಲ್ ಟೇಬಲ್ಸ್, ಹೀಟೆಡ್ ಆರ್ಮ್ರೆಸ್ಟ್ಗಳು, ಯುಎಸ್ಬಿ ಪೋರ್ಟ್ಗಳು, ವೈರ್ಲೆಸ್ ಚಾರ್ಜರ್ಗಳು, ಮೃದು ಬೆಳಕು ಮತ್ತು ಇನ್ನೂ ಹೆಚ್ಚಿನ ಐಷಾರಾಮಿ ವೈಶಿಷ್ಟ್ಯಗಳನ್ನು ಆನಂದಿಸಬಹುದು. ಹಾಗೂ
ನಿಮಗೆ 64 ಬಣ್ಣ ಆಯ್ಕೆಗಳು ಮತ್ತು 14 ಥೀಮ್ಗಳು ಲಭ್ಯವಿದೆ. ಅಂದರೆ ನೀವು ಬಯಸಿದಂತೆ ಬೆಳಕನ್ನು ಕಸ್ಟಮೈಸ್ ಮಾಡಬಹುದು. ವ್ಯಾನಿಟಿ ಕನ್ನಡಿಗಳು, ಛತ್ರಿ ಹೋಲ್ಡರ್ ಮತ್ತು ರೆಫ್ರಿಜರೇಟರ್ ಕೂಡ ಇದೆ. ಈ ಎಂಪಿವಿಯಲ್ಲಿ ಸೊಗಸಾದ ಡ್ಯುಯಲ್ ಸನ್ರೂಫ್ ಮತ್ತು HVAC, ಸೀಟ್ ಹೊಂದಾಣಿಕೆಗಳು, ಇಂಟೀರಿಯರ್ ಲೈಟಿಂಗ್, ವಿಂಡೋ ಬ್ಲೈಂಡ್ಗಳು ಮತ್ತು ಆಡಿಯೋ ಸೆಟ್ಟಿಂಗ್ಗಳಿಗೆ ಟಚ್ಸ್ಕ್ರೀನ್ ನಿಯಂತ್ರಕವಿದೆ.
ಹೊಸ ಲೆಕ್ಸಸ್ LM ತುಂಬಾ ಸುರಕ್ಷತಾ ವೈಶಿಷ್ಟ್ಯಗಳ ಪಟ್ಟಿಯೊಂದಿಗೆ ಬರುತ್ತದೆ. ಇದರಲ್ಲಿ ಸುಧಾರಿತ AVS ಸಸ್ಪೆನ್ಷನ್ ಗಳು ,ಪ್ರೀ-ಕೊಲಿಷನ್ ವಾರ್ನಿಂಗ್, ಪ್ರೀ-ಕೊಲಿಷನ್ ಬ್ರೇಕ್ ಅಸಿಸ್ಟ್ ಮತ್ತು ಪ್ರೀ-ಕೊಲಿಷನ್ ಬ್ರೇಕಿಂಗ್ ಹೊಂದಿವೆ. ಜೊತೆಗೆ, ಡೈನಾಮಿಕ್ ರಾಡಾರ್ ಕ್ರೂಸ್ ಕಂಟ್ರೋಲ್, ಲೇನ್ ಡಿಪಾರ್ಚರ್ ಅಲರ್ಟ್ ಮತ್ತು ಕೃತಕ ಚಾಲಕ ಪ್ರತಿಸ್ಪಂದನ ವ್ಯವಸ್ಥೆ ಕೂಡ ಇವುಗಳಲ್ಲಿ ಸೇರಿವೆ.
ಲೆಕ್ಸಸ್ ಎಲ್ಎಂ 350h ಪವರ್ಟ್ರೈನ್
ಲೆಕ್ಸಸ್ LM ಎರಡೂ ಮಾಡಲ್ ಗಳು 2.5-ಲೀಟರ್, 4-ಸಿಲಿಂಡರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ನಿಂದ ಚಾಲಿತವಾಗುತ್ತವೆ. ಅಡ್ವಾನ್ಸ್ಡ್ ಪ್ಯಾರಲಲ್ ಹೈಬ್ರಿಡ್ ಸಿಸ್ಟಮ್ ಮತ್ತು ಈ ಫೋರ್ (E-Four) ಟೆಕ್ನಾಲಜಿ ಇಂದ, ಈ ಎಂಜಿನ್ 190 hp ಮತ್ತು 240 Nm ಟಾರ್ಕ್ ಉತ್ಪಾದಿಸುತ್ತದೆ. ಇದು ಸ್ವಯಂಚಾಲಿತವಾಗಿ ಶಿಫ್ಟ್ ಮಾಡಬಹುದಾದ ನಿರಂತರವಾಗಿ ಬದಲಾಗುವ ಪ್ರಸರಣ (CVT) ಗೆ ಜೋಡಿಸಲಾಗಿದೆ.
ನೀವು ನಾರ್ಮಲ್, ಇಕೋ ಮತ್ತು ಸ್ಪೋರ್ಟ್ ಮೋಡ್ಗಳು ಸೇರಿದಂತೆ ವಿಭಿನ್ನ ಡ್ರೈವಿಂಗ್ ಮೋಡ್ಗಳನ್ನು ಆಯ್ಕೆ ಮಾಡುವ ಆಯ್ಕೆಯನ್ನು ಹೊಂದಿರುತ್ತೀರಿ. ಕಂಪನಿಯು 19.28 ಕಿ.ಮೀ ಮೈಲೇಜ್ ಒದಗಿಸುತ್ತದೆ ಎಂದು ಹೇಳಿದೆ, ಮತ್ತು ಫುಲ್ ಟ್ಯಾಂಕ್ನಿಂದ ಈ ಕಾರು 1200 ಕಿ.ಮೀ ಗಿಂತ ಹೆಚ್ಚು ದೂರ ಸಂಚರಿಸುತ್ತದೆ ಎಂದು ಹೇಳಿಕೊಂಡಿದೆ.
ಇದನ್ನೂ ಓದಿ: ಆಡಿ ಕ್ಯೂ5 ಬೋಲ್ಡ್ ಎಡಿಷನ್ ರೂ. 72.30 ಲಕ್ಷಕ್ಕೆ ಬಿಡುಗಡೆ