Kia Carnival: ಕಿಯಾ ಕಾರ್ನಿವಲ್‌ 7-ಸೀಟರ್ ಫ್ಯಾಮಿಲಿ ಕಾರು ಬಿಡುಗಡೆ: ವೈಶಿಷ್ಟ್ಯಗಳು ಮತ್ತು ಬೆಲೆ ವಿವರಗಳು

8 ಏರ್‌ಬ್ಯಾಗ್‌ಗಳೊಂದಿಗೆ Kia Carnival 2024 ಪ್ರೀಮಿಯಂ ಲಿಮೋಸಿನ್ ಪ್ಲಸ್ ಟ್ರಿಮ್ನಲ್ಲಿ ಬಿಡುಗಡೆಯಾಗಿದೆ

ಕಿಯಾ ಇಂಡಿಯಾ(Kia India) ಇಂದು ದೇಶೀಯ ಮಾರುಕಟ್ಟೆಯಲ್ಲಿ ಸೊಗಸಾದ ವಿನ್ಯಾಸ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಸಂಯೋಜನೆಯ ಬಹುನಿರೀಕ್ಷಿತ ಕಿಯಾ ಕಾರ್ನಿವಲ್ 2024 ಎಂಪಿವಿ (2024 Kia Carnival MPV) ಅನ್ನು ಅದ್ಭುತವಾಗಿ ಬಿಡುಗಡೆ ಮಾಡಿದೆ. ಈ ಪ್ರತಿಷ್ಠಿತ ವಾಹನವು 63.90 ಲಕ್ಷ ರೂಪಾಯಿಗಳ ಆರಂಭಿಕ ಬೆಲೆಯೊಂದಿಗೆ (ಎಕ್ಷ-ಶೋರೂಂ) ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆಯಿದೆ. ಅತ್ಯಾಧುನಿಕ ವಿನ್ಯಾಸ, ಆಕರ್ಷಕ ವೈಶಿಷ್ಟ್ಯಗಳು ಮತ್ತು ವಿಶಾಲವಾದ ಕಾಬಿನ್‌ನೊಂದಿಗೆ ಸಜ್ಜಿತವಾದ ಈ ಕಾರ್ನಿವಲ್, ಪ್ರೀಮಿಯಂ ಎಂಪಿವಿ ವಿಭಾಗದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸುವ ನಿರೀಕ್ಷೆಯಿದೆ. ಪ್ರಸ್ತುತ, ಈ ವಾಹನವು ಒಂದೇ ಟಾಪ್-ಸ್ಪೆಕ್ ಲಿಮೋಸಿನ್ ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ.

ಈ ಮಾದರಿಯು ಶಕ್ತಿಶಾಲಿ ಡೀಸೆಲ್ ಎಂಜಿನ್ನಿಂದ ನಡೆಯುತ್ತದೆ ಮತ್ತು ಏಳು ಆಸನಗಳ ಆಯ್ಕೆಯೊಂದಿಗೆ ಬರುತ್ತದೆ. ಕಂಪನಿಯು ಶೀಘ್ರದಲ್ಲೇ ಕಡಿಮೆ ಬೆಲೆಯ ಲಿಮೋಸಿನ್ ಆವೃತ್ತಿಯನ್ನು ಪರಿಚಯಿಸುವ ಭರವಸೆ ನೀಡಿದೆ. ಈ ಅತ್ಯಾಧುನಿಕ ಎಂಪಿವಿ, ದೇಶಕ್ಕೆ ಸಂಪೂರ್ಣವಾಗಿ ನಿರ್ಮಿತವಾಗಿ ಬರುತ್ತದೆ ಮತ್ತು ನಂತರ ಇಲ್ಲಿ ಸ್ಥಳೀಯವಾಗಿ ಜೋಡಿಸಲಾಗುತ್ತದೆ. ಕಿಯಾ ಕಂಪನಿ, ಭಾರತದಲ್ಲಿ ಕಾರ್ನಿವಲ್ ಕಾರಿಗೆ 2,796 ಬುಕಿಂಗ್‌ಗಳು ಬಂದಿವೆ ಎಂದು ತಿಳಿಸಿದೆ. ಸೆಪ್ಟೆಂಬರ್ 16ರಂದು ಬುಕಿಂಗ್ ಪ್ರಾರಂಭವಾದ ಮೊದಲ 24 ಗಂಟೆಗಳಲ್ಲಿಯೇ 1,800 ಬುಕಿಂಗ್‌ಗಳು ಬಂದವು. ಈ ಹೊಸ ಪೀಳಿಗೆಯ ಮಾಡೆಲ್ ಅನ್ನು 2 ಲಕ್ಷ ರೂಪಾಯಿ ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಬುಕಿಂಗ್  ಮಾಡಿಕೊಳ್ಳಬಹುದು. ಗ್ರಾಹಕರ ಅನುಕೂಲಕ್ಕಾಗಿ ಕಿಯಾ ಕಂಪನಿಯು ಮೂರು ವರ್ಷಗಳ ವಾರಂಟಿ, ರೋಡ್‌ಸೈಡ್ ಅಸಿಸ್ಟೆನ್ಸ್ ಮತ್ತು ಉಚಿತ ಸರ್ವಿಸ್‌ಗಳನ್ನು ಒದಗಿಸುತ್ತಿದೆ.

ಇದನ್ನೂ ಓದಿ: ಲಕ್ಷುರಿ ಫೀಚರ್ಸ್ ಜೊತೆಗೆ 561Km ರೇಂಜ್, ಕಿಯಾ EV9 ಎಲೆಕ್ಟ್ರಿಕ್ ಕಾರು ಬಿಡುಗಡೆ

Kia Carnival 2024
Kia Carnival 2024

2024 ಕಿಯಾ ಕಾರ್ನಿವಲ್‌: ಎಕ್ಸ್‌ಟೀರಿಯರ್‌

2024 Kia Carnival ಹೊರಭಾಗದ ವಿನ್ಯಾಸವು ಗಮನಾರ್ಹವಾಗಿ ಬದಲಾವಣಿಗೊಂಡಿದೆ. ಹಿಂದಿನ ಮಾದರಿಗಳಿಗೆ ಹೋಲಿಸಿದರೆ, ಇದು ಹೆಚ್ಚು ಆಕರ್ಷಕ ನೋಟವನ್ನು ಹೊಂದಿದೆ. ಮೊದಲ ನೋಟದಲ್ಲಿಯೇ, ಇದು ಒಂದು ಎಸ್‌ಯುವಿಯಂತೆ ಕಂಡುಬರುತ್ತದೆ. ಎಸ್‌ಯುವಿಗಳ ವಿನ್ಯಾಸದಿಂದ ಪ್ರೇರಿತವಾಗಿ, ವಾಹನದ ಮುಂಭಾಗವು ವಿಶಾಲವಾದ ಟೈಗರ್ ನೋಸ್ ಗ್ರಿಲ್‌ ಮತ್ತು ಲಂಬವಾಗಿ ಜೋಡಿಸಲಾದ ಎಲ್‌ಇಡಿ ಹೆಡ್‌ಲೈಟ್‌ಗಳೊಂದಿಗೆ ಆಕರ್ಷಕವಾಗಿದೆ. ಎಲ್‌ ಆಕಾರದ ಡೇಟೈಮ್‌ ರನ್ನಿಂಗ್‌ ಲೈಟ್‌ಗಳು, , ಟೈಲ್‌ಗೇಟ್‌ನಲ್ಲಿ ಎಲ್ಇಡಿ ಲೈಟ್ ಬಾರ್, ವಾಹನದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತವೆ. ರೂಫ್ ರೈಲ್‌ಗಳು ಮತ್ತು ಶಾರ್ಕ್ ಫಿನ್ ಆಂಟೆನಾದೊಂದಿಗೆ, ಈ ಎಂಪಿವಿ ಒಂದು ಆಕರ್ಷಕ ನೋಟವನ್ನು ಹೊಂದಿದೆ. ಸ್ಟೈಲಿಶ್ 18-ಇಂಚಿನ ಡೈಮಂಡ್-ಕಟ್ ಅಲಾಯ್‌ ವೀಲ್‌ಗಳು ಅದರ ರಸ್ತೆ ಉಪಸ್ಥಿತಿಯನ್ನು ಇನ್ನಷ್ಟು ಬಲಪಡಿಸುತ್ತವೆ.

ಹೊಸ ಕಾರ್ನೀವಲ್ ಕಾರು ತನ್ನ ವಿಶಾಲವಾದ ಆಯಾಮಗಳಿಂದಾಗಿ ಸಾಕಷ್ಟು ಗಮನ ಸೆಳೆಯುತ್ತದೆ. 5,155 ಮಿಮೀ ಉದ್ದ, 1,995 ಮಿಮೀ ಅಗಲ ಮತ್ತು 1,775 ಮಿಮೀ ಎತ್ತರದೊಂದಿಗೆ, ಈ ಕಾರು ವಿಶಾಲ ಮತ್ತು ಆರಾಮದಾಯಕವಾದ ಪ್ರಯಾಣವನ್ನು ನೀಡುತ್ತದೆ. 3,090 ಮಿಮೀ ವೀಲ್ಬೇಸ್‌ನೊಂದಿಗೆ, ಒಳಾಂಗಣದಲ್ಲಿ ಸಾಕಷ್ಟು ಸ್ಥಳಾವಕಾಶವನ್ನು ಒದಗಿಸುತ್ತದೆ. ಭಾರತೀಯ ಗ್ರಾಹಕರಿಗೆ, ಗ್ಲೇಸಿಯರ್ ವೈಟ್ ಪರ್ಲ್ ಮತ್ತು ಫ್ಯೂಷನ್ ಬ್ಲ್ಯಾಕ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಈ ಕಾರನ್ನು ಆಯ್ಕೆ ಮಾಡುವ ಆಯ್ಕೆ ಇದೆ.

ಇದನ್ನೂ ಓದಿ: ಕಿಯಾ ಸೆಲ್ಟೋಸ್ X-ಲೈನ್ ಈಗ ಹೊಸ ಬಣ್ಣದಲ್ಲಿ ಮಿಂಚುತ್ತಿದೆ

2024 ಕಿಯಾ ಕಾರ್ನೀವಲ್: ಇಂಟೀರಿಯರ್, ವೈಶಿಷ್ಟ್ಯಗಳು

ಈ ಹೊಸ ಕಾರಿನಲ್ಲಿ, ಏಳು ಜನರು ಸುಖವಾಗಿ ಕುಳಿತುಕೊಂಡು ದೂರದ ಪ್ರಯಾಣವನ್ನು ಮಾಡಬಹುದು. 12.3-ಇಂಚಿನ ಟಚ್‌ಸ್ಕ್ರೀನ್‌ನಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನನ್ನು ಸುಲಭವಾಗಿ ಸಂಪರ್ಕಿಸಬಹುದು. 11-ಇಂಚಿನ ಹೆಡ್-ಅಪ್ ಡಿಸ್ಪ್ಲೇ ಮತ್ತು 12.3-ಇಂಚಿನ ಡಿಜಿಟಲ್ ಡ್ರೈವರ್‌ನ ಡಿಸ್ಪ್ಲೇ ನಿಮಗೆ ಎಲ್ಲಾ ಪ್ರಮುಖ ಮಾಹಿತಿಯನ್ನು ಒಂದೇ ನೋಟದಲ್ಲಿ ನೀಡುತ್ತದೆ. ಒಳಗೆ, ಪ್ರೀಮಿಯಂ 12-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್,  ಡ್ಯುಯಲ್ ಎಲೆಕ್ಟ್ರಿಕ್ ಸನ್ರೂಫ್‌ಗಳು ಮತ್ತು 3-ಜೋನ್ ಕ್ಲೇಮೇಟ್ ಕಂಟ್ರೋಲ್, 12-ವೇ ಅಡ್ಜೆಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್‌ಗಳಿವೆ. 4-ಸ್ಪೋಕ್ ಸ್ಟೀರಿಂಗ್ ವೀಲ್, ಡ್ಯುಯಲ್ ಎಲೆಕ್ಟ್ರಿಕ್ ಸನ್‌ರೂಫ್‌ಗಳು ಸೇರಿದಂತೆ ಹಲವು ವೈಶಿಷ್ಟ್ಯಗಳು ಇವೆ.

Kia Carnival 2024
Kia Carnival 2024 Interior

ಈ ವಾಹನವು ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. 8 ಏರ್‌ಬ್ಯಾಗ್‌ಗಳು, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಅಸಿಸ್ಟ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ರಿಯರ್ ಮತ್ತು ಸೈಡ್ ಪಾರ್ಕಿಂಗ್ ಸಂವೇದಕಗಳು, 360 ಡಿಗ್ರಿ ಕ್ಯಾಮೆರಾ ಮತ್ತು ಎಬಿಎಸ್ ಜೊತೆ ಇಬಿಡಿ. ಹೆಚ್ಚುವರಿಯಾಗಿ, ಇದು ಲೆವೆಲ್-2 ಎಡಿಎಎಸ್ ವ್ಯವಸ್ಥೆಯನ್ನು ಹೊಂದಿದ್ದು, ಲೇನ್ ಕೀಪ್ ಅಸಿಸ್ಟ್, ಲೇನ್ ಡಿಪಾರ್ಚರ್ ವಾರ್ನಿಂಗ್, ಬ್ಲೈಂಡ್ ಸ್ಪಾಟ್ ಘರ್ಷಣೆ ವಾರ್ನಿಂಗ್, ಫ್ರಂಟ್ ಕೊಲಿಷನ್ ವಾರ್ನಿಂಗ್ ಮತ್ತು ಅವಾಯ್ಡೆನ್ಸ್ ಅಸಿಸ್ಟ್, ಹೈ ಬೀಮ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ವೈಶಿಷ್ಟ್ಯಗಳು ನಿಮಗೆ ರಸ್ತೆಯಲ್ಲಿ ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸುತ್ತವೆ.

ಇದನ್ನೂ ಓದಿ: ಭಾರತದಲ್ಲಿ 4.5 ಲಕ್ಷ ಕಿಯಾ ಸೋನೆಟ್‌ ಮಾರಾಟದೊಂದಿಗೆ ಹೊಸ ದಾಖಲೆ

2024 ಕಿಯಾ ಕಾರ್ನೀವಲ್: ಪವರ್‌ಟ್ರೇನ್

ಭಾರತೀಯ ಮಾರುಕಟ್ಟೆಯಲ್ಲಿ, ಕಿಯಾ ಕಾರ್ನಿವಲ್(Kia Carnival) ಕೇವಲ ಒಂದು ಎಂಜಿನ್ ಆಯ್ಕೆಯೊಂದಿಗೆ ಲಭ್ಯವಿದೆ. ಇದು ಕಂಪನಿಯ ವಿಶ್ವಾಸಾರ್ಹ ಸ್ಮಾರ್ಟ್‌ಸ್ಟ್ರೀಮ್ 2.2-ಲೀಟರ್, 4 ಸಿಲಿಂಡರ್, ಸಿಆರ್ಡಿಐ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಆಗಿದ್ದು, ಇದು ಹಿಂದಿನ ಮಾದರಿಯಲ್ಲೂ ಬಳಕೆಯಾಗಿತ್ತು. ಈ ಶಕ್ತಿಶಾಲಿ ಎಂಜಿನ್ 193 ಅಶ್ವಶಕ್ತಿಯ ಬಿಎಚ್‌ಪಿ ಶಕ್ತಿ ಮತ್ತು 441 ಎನ್‌ಎಂ ಗರಿಷ್ಠ ಟಾರ್ಕ್‌ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 8 ಸ್ಪೀಡ್‌ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಹೊಂದಿದೆ. ಮತ್ತು ವಾಹನದ ಮುಂಭಾಗದ ಚಕ್ರಗಳಿಗೆ ಶಕ್ತಿಯನ್ನು ವರ್ಗಾಯಿಸುತ್ತದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವಿನ್ಯಾಸಗೊಳಿಸಲಾದ ಆವೃತ್ತಿಯು 3.5-ಲೀಟರ್ V6 ಪೆಟ್ರೋಲ್ ಎಂಜಿನ್ ಮತ್ತು 1.6-ಲೀಟರ್ ಟರ್ಬೋ-ಪೆಟ್ರೋಲ್ ಹೈಬ್ರಿಡ್ ಎಂಜಿನ್‌ನೊಂದಿಗೆ ಬರುತ್ತದೆ.

Leave a Comment