iVOOMi S1 Lite ಎಲೆಕ್ಟ್ರಿಕ್ ಸ್ಕೂಟರ್ 180 ಕಿಮೀ ರೇಂಜ್, ಆಕರ್ಷಕ ಫೀಚರ್ಗಳೊಂದಿಗೆ ಬಿಡುಗಡೆ
ಪುಣೆಯ ಪ್ರತಿಷ್ಠಿತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಐವೂಮಿ ಎನರ್ಜಿ(iVOOMi Energy), ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಸ್1 ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಈ ಸ್ಕೂಟರ್ ಒಮ್ಮೆ ಚಾರ್ಜ್ ಮಾಡಿದರೆ 180 ಕಿಲೋಮೀಟರ್ವರೆಗೆ ಸುಗಮವಾಗಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ಗರಿಷ್ಠ ವೇಗ ಗಂಟೆಗೆ 60 ಕಿಲೋಮೀಟರ್ನಷ್ಟಿದೆ. ಎಕ್ಸ್ ಶೋರೂಂ ಬೆಲೆ ರೂ. 84,999 ಎಂಬ ಆಕರ್ಷಕ ಬೆಲೆಯಲ್ಲಿ ಲಭ್ಯವಿರುವ ಈ ಸ್ಕೂಟರ್ ಬಹುತೇಕ ಎಲ್ಲಾ ವರ್ಗದ ಜನರಿಗೆ ಕೈಗೆಟುಕುವಂತಿದೆ.
iVOOMi S1 Lite ಎಲೆಕ್ಟ್ರಿಕ್ ಸ್ಕೂಟರ್ಗಾಗಿ ಗ್ರಾಹಕರ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕಂಪನಿಯು ಭಾರತದ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ತೆಲಂಗಾಣ ಮತ್ತು ರಾಜಸ್ಥಾನದಲ್ಲಿನ ತನ್ನ ಡೀಲರ್ಶಿಪ್ಗಳಲ್ಲಿ ಬುಕಿಂಗ್ ಅನ್ನು ಪ್ರಾರಂಭಿಸಿದೆ. ಈ ಆಧುನಿಕ ಎಲೆಕ್ಟ್ರಿಕ್ ವಾಹನವನ್ನು ರೂ. 84,999/-ನ ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದು. ಅಲ್ಲದೆ, ಗ್ರಾಹಕರ ಅನುಕೂಲಕ್ಕಾಗಿ ಕಂಪನಿಯು ಸುಲಭವಾದ EMI ಆಯ್ಕೆಯನ್ನು ಸಹ ಒದಗಿಸಿದೆ.
ಇದನ್ನೂ ಓದಿ: ಹೊಸ ಎರಡು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಡಿಯೋನ್ ಎಲೆಕ್ಟ್ರಿಕ್
iVoomi ಎಸ್1 ಲೈಟ್: ವಿನ್ಯಾಸ
ವಿವಿಧ ಪ್ರಯಾಣದ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾದ iVoomi S1 ಲೈಟ್ ಎಲೆಕ್ಟ್ರಿಕ್ ಸ್ಕೂಟರ್, ಬಾಳಿಕೆ, ಸೌಕರ್ಯ ಮತ್ತು ಆಧುನಿಕ ತಂತ್ರಜ್ಞಾನದ ಸಮ್ಮಿಶ್ರಣವಾಗಿದೆ. ERW 1 ದರ್ಜೆಯ ಚಾಸಿಸ್ನೊಂದಿಗೆ ನಿರ್ಮಿತವಾಗಿರುವುದರಿಂದ, ಈ ವಾಹನವು ಅತ್ಯುತ್ತಮ ಸ್ಥಿರತೆ ಮತ್ತು ದೀರ್ಘಾಯುಷ್ಯವನ್ನು ಒದಗಿಸುತ್ತದೆ. ಮತ್ತು 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ನಿಂದಾಗಿ, ಯಾವುದೇ ರಸ್ತೆಯಲ್ಲೂ ನೀವು ಸುಲಭವಾಗಿ ಸಂಚರಿಸಬಹುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ 10 ಅಥವಾ 12 ಇಂಚಿನ ಟ್ಯೂಬ್ಲೆಸ್ ಟೈರ್ಗಳನ್ನು ಆರಿಸಿಕೊಳ್ಳಬಹುದು.

ಸುರಕ್ಷತೆಯ ದೃಷ್ಟಿಯಿಂದ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ವ್ಯವಸ್ಥೆ ಇದೆ. ಹೆಚ್ಚುವರಿಯಾಗಿ, ಮುಂಭಾಗದ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದ ಸ್ಪ್ರಿಂಗ್ ಕಾಯಿಲ್ ಘಟಕವು ನಿಮಗೆ ಸುಗಮ ಮತ್ತು ಆರಾಮದಾಯಕ ಸವಾರಿಯ ಅನುಭವ ನೀಡುತ್ತದೆ. 18 ಲೀಟರ್ಗಳ ವಿಶಾಲವಾದ ಅಂಡರ್ಸೀಟ್ ಬೂಟ್ ಸ್ಪೇಸ್ ನಿಮ್ಮ ಎಲ್ಲಾ ಅಗತ್ಯ ವಸ್ತುಗಳಿಗೆ ಸಾಕಷ್ಟು ಜಾಗವನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ಸವಾರರ ಸುರಕ್ಷತೆಯನ್ನು ಮುಖ್ಯವಾಗಿಟ್ಟುಕೊಂಡು ವಿನ್ಯಾಸಗೊಳಿಸಲಾದ ಈ ಸ್ಕೂಟರ್, ಏಳು ಹಂತದ ಸುರಕ್ಷತಾ ವ್ಯವಸ್ಥೆಯನ್ನು ಹೊಂದಿದೆ.
ಇದನ್ನೂ ಓದಿ: 100 ಕಿಮೀ ರೇಂಜ್ನೊಂದಿಗೆ ಈವಾ ಸೀರೀಸ್ ಎಲೆಕ್ಟ್ರಿಕ್ ಸ್ಕೂಟರ್ಗಳು ರೂ. 56,051 ಬೆಲೆಗೆ ಲಾಂಚ್ ಆಗಿವೆ
iVoomi ಎಸ್1 ಲೈಟ್: ವೈಶಿಷ್ಟ್ಯಗಳು
iVOOMi S1 Lite ಇ-ಸ್ಕೂಟರ್ನ ಆಧುನಿಕ ಎಲ್ಇಡಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ನಿಮಗೆ ಸಂಪೂರ್ಣ ಸವಾರಿ ಮಾಹಿತಿಯನ್ನು ಒದಗಿಸುತ್ತದೆ. ಇದರಲ್ಲಿ ನಿಮ್ಮ ವೇಗ, ಪ್ರಯಾಣಿಸಿದ ದೂರ ಮತ್ತು ಬ್ಯಾಟರಿಯ ಆರೋಗ್ಯದಂತಹ ಪ್ರಮುಖ ವಿವರಗಳು ಸೇರಿವೆ. ಅಷ್ಟೇ ಅಲ್ಲ, ಯುಎಸ್ಬಿ ಚಾರ್ಜಿಂಗ್ ಪೋರ್ಟ್ನೊಂದಿಗೆ ನೀವು ಪ್ರಯಾಣದಲ್ಲಿರುವಾಗ ನಿಮ್ಮ ಸ್ಮಾರ್ಟ್ಫೋನ್ ಅಥವಾ ಇತರ ಗ್ಯಾಜೆಟ್ಗಳನ್ನು ಸುಲಭವಾಗಿ ಚಾರ್ಜ್ ಮಾಡಬಹುದು. ಹೊಸ Voomi S1 ಲೈಟ್ ಎಲೆಕ್ಟ್ರಿಕ್ ಸ್ಕೂಟರ್ನಲ್ಲಿನ ಸ್ಮಾರ್ಟ್ ಕನೆಕ್ಟಿವಿಟಿ ವೈಶಿಷ್ಟ್ಯವು ಬಳಕೆದಾರರಿಗೆ ನ್ಯಾವಿಗೇಷನ್, ಅಲರ್ಟ್ ಗಳು ಮತ್ತು ಸರ್ವಿಸ್ ರೈಮೆಂಡರ್ ಗಳಂತಹ ಸೇವೆಗಳನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಪಡೆಯಲು ಅನುವು ಮಾಡಿಕೊಡುತ್ತದೆ.
ಹೆಚ್ಚಿನ ವೈಶಿಷ್ಟ್ಯಗಳನ್ನು ನಿರೀಕ್ಷಿಸುವ ಗ್ರಾಹಕರು ಕೇವಲ ರೂ. 4,999 ಕ್ಕೆ ಸ್ಮಾರ್ಟ್ ವೈಶಿಷ್ಟ್ಯಗಳ ಅಪ್ಗ್ರೇಡ್ನೊಂದಿಗೆ ತಮ್ಮ ಸವಾರಿ ಅನುಭವವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು. ಈ ಅಪ್ಗ್ರೇಡ್ನೊಂದಿಗೆ, iVoomi MT (DTE) ಇಂಡಿಕೇಟರ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಮತ್ತು ಕಾಲ್ ಮತ್ತು SMS ಅಲರ್ಟ್ಗಳಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಆನಂದಿಸಬಹುದು. ಈ ನವೀಕರಣಗಳು ಪ್ರತಿದಿನ ಪ್ರಯಾಣಿಸುವವರಿಗೆ ಸೌಕರ್ಯ ಮತ್ತು ಸುರಕ್ಷತೆಯನ್ನು ಒದಗಿಸುವುದರ ಜೊತೆಗೆ, ಸವಾರಿ ಮಾಡುವುದನ್ನು ಇನ್ನಷ್ಟು ಆನಂದದಾಯಕವಾಗಿಸುತ್ತದೆ.
ಇದನ್ನೂ ಓದಿ: ಬಜೆಟ್ಗೆ ಸರಿಹೊಂದುವ ಸ್ಟೋರಿ ಎಪಿಕ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
iVoomi ಎಸ್1 ಲೈಟ್: ಪವರ್ ಟ್ರೈನ್, ಬ್ಯಾಟರಿ ಪ್ಯಾಕ್
ಈ iVOOMi S1 Lite ಎಲೆಕ್ಟ್ರಿಕ್ ಸ್ಕೂಟರ್ವು 60V 52 Ah ಲಿಥಿಯಂ-ಐಯಾನ್ ಬ್ಯಾಟರಿ ತಂತ್ರಜ್ಞಾನದಿಂದ ಸಜ್ಜಿತವಾಗಿದ್ದು, ಉತ್ತಮ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯನ್ನು ಒದಗಿಸುತ್ತದೆ. 1.2 ಕಿಲೋವ್ಯಾಟ್ ಶಕ್ತಿಯ ಎಂಜಿನ್ ಹಾಗೂ 10.1 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವಿರುವ ಈ ಸ್ಕೂಟರ್, ಒಂದೇ ಚಾರ್ಜ್ನಲ್ಲಿ 180 ಕಿ.ಮೀ. ವರೆಗೆ ಪ್ರಯಾಣಿಸಲು ಸಾಮರ್ಥ್ಯವಿದೆ. ಗರಿಷ್ಠ ವೇಗ 53 ಕಿ.ಮೀ./ಗಂ. ತಲುಪುವ ಈ ಸ್ಕೂಟರ್ ಬ್ಯಾಟರಿ ಪ್ಯಾಕ್ ಅನ್ನು ಸುಲಭವಾಗಿ ತೆಗೆಯಬಹುದು. ಹೀಗಾಗಿ, ಗ್ರಾಹಕರು ತಮ್ಮ ವಾಹನವನ್ನು ನಿಲ್ಲಿಸಿರುವ ಸ್ಥಳದಲ್ಲಿ ವಿದ್ಯುತ್ ಸಾಕೆಟ್ ಇಲ್ಲದಿದ್ದರೂ ಸಹ ಬ್ಯಾಟರಿಯನ್ನು ಚಾರ್ಜ್ ಮಾಡಬಹುದು. ಮೂರೂ ವರ್ಷಗಳ ಬ್ಯಾಟರಿ ವಾರಂಟಿಯೊಂದಿಗೆ, ದಿನನಿತ್ಯದ ಸಾರಿಗೆ ಅಗತ್ಯಗಳಿಗೆ ಆಧುನಿಕ ಹಾಗೂ ವಿಶ್ವಾಸಾರ್ಹ ಆಯ್ಕೆಯಾಗುತ್ತದೆ.