ದೇಶದ ಪ್ರಮುಖ ಕಾರು ತಯಾರಕರಲ್ಲಿ ಒಬ್ಬರಾದ ಹ್ಯುಂಡೈ ಇಂಡಿಯಾ(Hyundai India) ಕಂಪನಿ ಗ್ರಾಹಕರಿಗೆ ಹೊಸ ಅನುಭವವನ್ನು ನೀಡುವ ನಿಟ್ಟಿನಲ್ಲಿ ತನ್ನ ಜನಪ್ರಿಯ ವೆನ್ಯೂ ಎಸ್ಯುವಿಯ ಹೊಸ ರೂಪಾಂತರವಾದ ‘ವೆನ್ಯೂ ಎಸ್ ಪ್ಲಸ್'(Venue S Plus) ಅನ್ನು ಬಿಡುಗಡೆ ಮಾಡಿದೆ. ಗ್ರಾಹಕರ ಬೇಡಿಕೆಯನ್ನು ಪೂರೈಸುವ ಉದ್ದೇಶದಿಂದ, ಈ ಹೊಸ ರೂಪಾಂತರವು ಹಲವಾರು ಹೊಸ ವೈಶಿಷ್ಟಗಳು ಹಾಗೂ ಸನ್ರೂಫ್ನೊಂದಿಗೆ ಬರಲಿದೆ. ಎಕ್ಸ್ ಶೋ ರೂಂ ಬೆಲೆ ರೂ. 9,35,000 ನಿಂದ ಆರಂಭವಾಗುವ ಈ ವಾಹನವು ಕಾರು ಪ್ರಿಯರಿಗೆ ಹೊಸ ಆಯ್ಕೆಯನ್ನು ನೀಡುತ್ತದೆ.
ಹ್ಯುಂಡೈ ವೆನ್ಯೂ ಎಸ್ ಪ್ಲಸ್ ಪವರ್ಟ್ರೇನ್ ಮತ್ತು ವೈಶಿಷ್ಟ್ಯಗಳು
ಹೊಸದಾಗಿ ಬಿಡುಗಡೆಯಾದ ಹ್ಯುಂಡೈ ವೆನ್ಯೂ ಎಸ್ ಪ್ಲಸ್(Hyundai Venue S Plus) ರೂಪಾಂತರವು, ತನ್ನ ಎಸ್(ಒ) ಮಾದರಿಗಿಂತ ಕೆಳಗಿನ ಸ್ಥಾನದಲ್ಲಿದ್ದು, ಒಂದೇ ರೀತಿಯ ಪವರ್ಟ್ರೇನ್ ಆಯ್ಕೆಯನ್ನು ಹೊಂದಿದೆ. ಈ ರೂಪಾಂತರವು 1.2-ಲೀಟರ್ ಪೆಟ್ರೋಲ್ ಎಂಜಿನ್ನಿಂದ ಶಕ್ತಿ ಪಡೆಯುತ್ತಿದ್ದು, ಇದು 82 ಬಿಹೆಚ್ಪಿ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು 5-ಸ್ಪೀಡ್ ಮ್ಯಾನ್ಯುವಲ್ ಗೇರ್ಬಾಕ್ಸ್ಗೆ ಜೋಡಿಸಲ್ಪಟ್ಟಿದೆ. ವೆನ್ಯೂ ಎಸ್ ಪ್ಲಸ್ ಸನ್ರೂಫ್ ಸೌಲಭ್ಯ ಹೊಂದಿರುವ ಅತ್ಯಂತ ಕೈಗೆಟುಕುವ ಮಾದರಿಯಾಗಿದೆ.

ಇದರಲ್ಲಿ ಡಿಜಿಟಲ್ ಇನ್ಫೋಟೈನ್ಮೆಂಟ್ ಕ್ಲಸ್ಟರ್, 8 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ವ್ಯವಸ್ಥೆ, ವೈರ್ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ, ಹಿಂಭಾಗದ ಎಸಿ ವೆಂಟ್ಗಳು, ಟಿಪಿಎಂಎಸ್, ಎಲ್ಇಡಿ ಡಿಆರ್ಎಲ್ಗಳು ಮತ್ತು ಆಟೋಮ್ಯಾಟಿಕ್ ಹೆಡ್ಲ್ಯಾಂಪ್ಗಳು ಸೇರಿದಂತೆ ರೂಫ್ ರೈಲ್ಗಳು, ಆರು ಏರ್ಬ್ಯಾಗ್ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ನಂತಹ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಂತೆ ಈ ವಾಹನವು ಹಲವಾರು ಆಧುನಿಕ ವೈಶಿಷ್ಟ್ಯಗಳನ್ನು ನೀಡಲಾಗಿದೆ.
Hyundai Venue ರೂಪಾಂತರಗಳು
ಹೊಸ ವೆನ್ಯೂ(Hyundai Venue) ಕಾರಿನ ಬೇಸ್ ಮಾಡೆಲ್ ಪೆಟ್ರೋಲ್-ಮ್ಯಾನುವಲ್ ಮಾದರಿಯ ಬೆಲೆ 7.94 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ ಮತ್ತು ಟಾಪ್-ಮಾಡೆಲ್ ಎಸ್ಎಕ್ಸ್ (ಒ) ಮಾದರಿಯ 13.48 ಲಕ್ಷ ರೂಪಾಯಿಗಳವರೆಗೆ (ಎಕ್ಸ್-ಶೋರೂಮ್) ಹೋಗುತ್ತದೆ. ಈ ಕಾರು ಎಕ್ಸಿಕ್ಯುಟಿವ್, ಎಸ್, ಎಸ್+, ಎಸ್ (ಒ), ಎಸ್ಎಕ್ಸ್ ಮತ್ತು ಎಸ್ಎಕ್ಸ್ (ಒ) ಎಂಬ ಆರು ವಿಭಿನ್ನ ಮಾದರಿಗಳಲ್ಲಿ ಲಭ್ಯವಿದೆ. ಈ ಎಲ್ಲಾ ಮಾದರಿಗಳಲ್ಲಿ, ಎಸ್ (ಒ) ಅಥವಾ ಎಸ್+ ಮಾದರಿಗಳು ತಮ್ಮ ಬೆಲೆಗೆ ಹೋಲಿಸಿದರೆ ಹೆಚ್ಚು ವೈಶಿಷ್ಟ್ಯಗಳನ್ನು ಹೊಂದಿವೆ. ಇವು ಮಾತ್ರ ಎಲ್ಲಾ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿರುವ ಮಾದರಿಗಳಾಗಿದ್ದು, ಪ್ರಯಾಣಿಕರಿಗೆ ಅಗತ್ಯವಿರುವ ಹೆಚ್ಚಿನ ಸೌಕರ್ಯಗಳನ್ನು ಹೊಂದಿವೆ..

ಈ ಕಾರು 1.2 ಲೀಟರ್ ಪೆಟ್ರೋಲ್, 1.0 ಲೀಟರ್ ಟರ್ಬೋ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಗೇರ್ಬಾಕ್ಸ್ ಆಯ್ಕೆಗಳಲ್ಲಿ 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಸಿಗುತ್ತದೆ.
2024ನೇ ಸಾಲಿನ ಜುಲೈ ತಿಂಗಳಲ್ಲಿ ಹುಂಡೈ ವೆನ್ಯೂ ಮಾದರಿಯ ಯಶಸ್ಸು ಮುಂದುವರಿದಿದ್ದು, ಸುಮಾರು 9,000 ಘಟಕಗಳನ್ನು ಮಾರಾಟ ಮಾಡುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ಸಬ್-4 ಮೀಟರ್ ಎಸ್ಯುವಿ ವಿಭಾಗದಲ್ಲಿ ಈ ಮಾದರಿಯು 8.65%ರಷ್ಟು ಮಾರುಕಟ್ಟೆ ಪಾಲನ್ನು ಭದ್ರಪಡಿಸಿಕೊಂಡಿದೆ.
ಇದನ್ನೂ ಓದಿ: ಹುಂಡೈ ವೆನ್ಯೂ ಎಸ್(ಒ) ಪ್ಲಸ್ ಸನ್ರೂಫ್ನೊಂದಿಗೆ 10 ಲಕ್ಷ ರೂಪಾಯಿಗೆ ಬಿಡುಗಡೆ