ಎಂಟ್ರಿ ಲೆವೆಲ್ ಸಬ್ ಕಾಂಪ್ಯಾಕ್ಟ್ ಎಸ್ಯುವಿಯಲ್ಲಿ Hyundai Venue E+ ಈಗ ಎಲೆಕ್ಟ್ರಿಕ್ ಸನ್‌ರೂಫ್ ವೈಶಿಷ್ಟ್ಯವನ್ನು ಒಳಗೊಂಡಿದೆ
ಹ್ಯುಂಡೈ ಮೋಟಾರ್ ಇಂಡಿಯಾ ತನ್ನ ಜನಪ್ರಿಯ ವೆನ್ಯೂ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯ ಸರಣಿಗೆ ಇನ್ನೊಂದು ಹೊಸ ಆಯಾಮವನ್ನು ಸೇರಿಸಿದೆ. ವೆನ್ಯೂ ಇ ಪ್ಲಸ್ (Venue E+) ಎಂಬ ಹೊಸ ಮಾದರಿಯನ್ನು ಪರಿಚಯಿಸುವ ಮೂಲಕ, ಗ್ರಾಹಕರಿಗೆ ಇನ್ನಷ್ಟು ಆಕರ್ಷಕ ಆಯ್ಕೆಗಳನ್ನು ನೀಡಿದೆ. ಈ ಹೊಸ ಮಾದರಿಯು ವೆನ್ಯೂ ಶ್ರೇಣಿಯಲ್ಲಿನ ಬೇಸ್ ಇ ವೇರಿಯೆಂಟ್ ಮತ್ತು ಎಸ್ ವೇರಿಯೆಂಟ್‌ನಡುವೆ ಸ್ಥಾನ ಪಡೆದಿದೆ.
ಇ ಪ್ಲಸ್ ವೇರಿಯೆಂಟ್ ವಿಶೇಷತೆ ಎಂದರೆ, ಈಗ ಹ್ಯುಂಡೈ ವೆನ್ಯೂ ಶ್ರೇಣಿಯಲ್ಲಿ ಸನ್‌ರೂಫ್ ಸೌಲಭ್ಯವನ್ನು ಹೊಂದಿರುವ ಅತ್ಯಂತ ಬಜೆಟ್ ಸ್ನೇಹಿ ಆಯ್ಕೆಯಾಗಿದೆ. ಹೌದು, ಕೇವಲ 8.23 ಲಕ್ಷ ರೂಪಾಯಿಗಳ (ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಗ್ರಾಹಕರು ಈ ಹೊಸ ಸೌಲಭ್ಯವನ್ನು ಆನಂದಿಸಬಹುದು. ಈ ಹೊಸ ಮಾದರಿಯ ಬೇಸ್ ಇ ವೇರಿಯೆಂಟ್‌ಗಿಂತ ಕೇವಲ 29,000 ರೂಪಾಯಿಗಳು ಹೆಚ್ಚು ಆಗಿವೆ.
ಇದನ್ನೂ ಓದಿ: ಕಡಿಮೆ ಬೆಲೆಗೆ ಸನ್‌ರೂಫ್‌ನೊಂದಿಗೆ ಹ್ಯುಂಡೈ ವೆನ್ಯೂ ಎಸ್ ಪ್ಲಸ್ ಬಿಡುಗಡೆ

ಹ್ಯುಂಡೈ ವೆನ್ಯೂ E +: ವೈಶಿಷ್ಟ್ಯಗಳು
ಸನ್‌ರೂಫ್‌ನೊಂದಿಗೆ Hyundai Venue E+ ಮಾದರಿಯು ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಅಡ್ಜಸ್ಟಬಲ್ ಮಾಡಬಹುದಾದ ಮುಂಭಾಗ ಮತ್ತು ಹಿಂಭಾಗದ ಹೆಡ್ ರೆಸ್ಟ್ಗಳು, 60:40 ಸ್ಪ್ಲಿಟ್ ರಿಯರ್ ಸೀಟ್ಗಳೊಂದಿಗೆ ಎರಡು-ಹಂತದ ರೆಕ್ಲೈನಿಂಗ್, ಫ್ರಂಟ್ ಪವರ್ ವಿಂಡೋಸ್, ಮ್ಯಾನ್ಯುವಲ್ ಎಸಿ ಮತ್ತು ಹೆಚ್ಚಿನವುಗಳನ್ನು ಹೊಂದಿದೆ. ದುರದೃಷ್ಟವಶಾತ್, ನೀವು ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಎಲ್ಇಡಿ ಹೆಡ್ಲ್ಯಾಂಪ್ಗಳು ಮತ್ತು ಆಟೋ ಎಸಿಗಳಂತಹ ಸೌಲಭ್ಯಗಳನ್ನು ಪಡೆಯುವುದಿಲ್ಲ. ಆದಾಗ್ಯೂ ನೀವು ಈ ಕೆಲವು ವೈಶಿಷ್ಟ್ಯಗಳನ್ನು ಆಫ್ಟರ್ ಮಾರ್ಕೆಟ್ ನಲ್ಲಿ ಹಾಕಿಸಿಕೊಳ್ಳಬಹುದು.
ಈ ಕಾರಿನ ಪ್ರಮುಖ ಅಂಶವೆಂದರೆ ಅದರ ಸುರಕ್ಷತಾ ವೈಶಿಷ್ಟ್ಯಗಳು. ಇದು 6 ಏರ್‌ಬ್ಯಾಗ್‌ಗಳು, ಡೇ ಅಂಡ್ ನೈಟ್ IRVM, ಎಲ್ಲಾ ಸೀಟುಗಳಿಗೆ 3 ಪಾಯಿಂಟ್ ಸೀಟ್ ಬೆಲ್ಟ್ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ಸಿ) ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (ಎಚ್ಎಸಿ) ಮತ್ತು ಎಬಿಎಸ್ ಜೊತೆಗೆ ಇಬಿಡಿ ಹೊಂದಿದೆ. ಇವೆಲ್ಲವೂ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ ಸೇರಿವೆ.
ಇದನ್ನೂ ಓದಿ: ಹುಂಡೈ ವೆನ್ಯೂ ಎಸ್(ಒ) ಪ್ಲಸ್ ಸನ್‌ರೂಫ್‌ನೊಂದಿಗೆ 10 ಲಕ್ಷ ರೂಪಾಯಿಗೆ ಬಿಡುಗಡೆ

ಹೊಸ Venue E+ ಮಾದರಿಯೊಂದಿಗೆ ಹುಂಡೈ ವೆನ್ಯೂ ಒಟ್ಟು 10 ಮಾದರಿಗಳಿಂದ ಆಯ್ಕೆ ಮಾಡಬಹುದು. E, E+, S, S+, S (O), Executive, S (O) Plus, SX, Knight Edition ಮತ್ತು SX (O).
ಹ್ಯುಂಡೈ ವೆನ್ಯೂ ಇ ಪ್ಲಸ್ (Hyundai Venue E+): ಪವರ್‌ಟ್ರೇನ್
ಹೊಸ ವೆನ್ಯೂ ಇ+ ಮಾಡೆಲ್‌ನ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳಿಲ್ಲ. 1.2-ಲೀಟರ್ ಕಪ್ಪಾ ಪೆಟ್ರೋಲ್ ಎಂಜಿನ್ ಗರಿಷ್ಠ 82 bhp ಮತ್ತು 113.8 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ ಮತ್ತು ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಜೋಡಿಸಲಾಗಿದೆ. ವೆನ್ಯೂ ಇತರ ಎಂಜಿನ್ ಆಯ್ಕೆಗಳನ್ನು ನೀಡುತ್ತದೆ, ಅವುಗಳೆಂದರೆ 1.0-ಲೀಟರ್ ಟರ್ಬೋ-ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್, ಎರಡೂ ಆರು-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತವೆ. ಹೆಚ್ಚುವರಿಯಾಗಿ, 1.0-ಲೀಟರ್ ಟರ್ಬೋ-ಪೆಟ್ರೋಲ್ ಮಾಡೆಲ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ಆಯ್ಕೆಯಾಗಿ ನೀಡುತ್ತದೆ.