Hyundai: ಹ್ಯುಂಡೈ ಎಕ್ಸ್ಟೆರ್ CNG ಡ್ಯುಯಲ್ ಸಿಲಿಂಡರ್ ಭಾರತದಲ್ಲಿ ಬಿಡುಗಡೆ! ಬೆಲೆ 8.50 ಲಕ್ಷ ರೂ

ಹ್ಯುಂಡೈ ಈಗಷ್ಟೇ ಟಾಟಾ ಪಂಚ್ನಲ್ಲಿ ಇರುವಂತೆ  ಡ್ಯುಯಲ್ CNG ಸಿಲಿಂಡರ್ ಸೆಟಪ್ನೊಂದಿಗೆ ಎಕ್ಸ್ಟೆರ್ ಮಾಡೆಲ್‌ ಅನ್ನುಬಿಡುಗಡೆ ಮಾಡಿದೆ.

ಹ್ಯುಂಡೈ ಕಂಪನಿಯು ಇತ್ತೀಚೆಗೆ ಎಕ್ಸ್ಟೆರ್ CNG ಕಾರನ್ನು ಬಿಡುಗಡೆ ಮಾಡಿದ್ದು, ಇದರ ಬೆಲೆ 8.50 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಇದು ವಿಶಿಷ್ಟವಾದ ಡ್ಯುಯಲ್ ಸಿಲಿಂಡರ್ ಸಿಸ್ಟಮ್‌ ಅನ್ನು ಹೊಂದಿದೆ. ಹ್ಯುಂಡೈ ಸಂಸ್ಥೆಯು ಟಾಟಾ ಮೋಟಾರ್ಸ್ ನಂತರ, ತಮ್ಮ CNG ವಾಹನಗಳಲ್ಲಿ ಈ ಟೆಕ್ನಾಲಜಿ ಒದಗಿಸುವ ಭಾರತದ ಎರಡನೇ ಕಾರು ತಯಾರಕ ಸಂಸ್ಥೆಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಟಾಟಾ ಹೊರತುಪಡಿಸಿ ಡುಯಲ್-ಸಿಲಿಂಡರ್ ಟೆಕ್ನಾಲಜಿಯನ್ನು ಬಳಸಲಾಗಿರುವ ಮೊದಲ ಕಾರಾಗಿದ್ದು ಇದರಿಂದ ಕಾರಿನ ಟ್ರಂಕ್ನಲ್ಲಿ ಹೆಚ್ಚಿನ ಸ್ಟೋರೇಜ್‌ ಮಾಡುವುದು ಈಗ ಸಾದ್ಯವಾಗಿದೆ.

ಅಪ್ಡೇಟೆಡ್ CNG ವೇರಿಯಂಟ್‌ಗಳು ರೂ 8.50 ಲಕ್ಷದಿಂದ ಪ್ರಾರಂಭವಾಗಿ ರೂ 9.38 ಲಕ್ಷದವರೆಗೆ ಹೋಗುತ್ತವೆ. ಸಮಾನ ಪೆಟ್ರೋಲ್ ವೇರಿಯಂಟ್‌ಗೆ ಹೋಲಿಸಿದರೆ, CNG ವೇರಿಯಂಟ್‌ಗಳು ಅವುಗಳಿಗಿಂತ ರೂ ೧ ಲಕ್ಷಗಳಷ್ಟೇ ಬೆಲೆ ಹೆಚ್ಚಾಗಿರುತ್ತದೆ. ಈ ಮಾಡೆಲ್‌ ಮೂರು  ವಷ೯ನ್‌ಗಳಲ್ಲಿ ಲಭ್ಯವಿದ್ದು ಅವುಗಳು S, SX, ಮತ್ತು ಹೊಸ SX ನೈಟ್ ಎಡಿಷನ್.

ಅಪ್ಡೇಟೆಡ್ Hyundai Exter CNG ಯ ಹೈಲೈಟ್ಸ್

• ಬೆಲೆಃ ₹ 8.50 ಲಕ್ಷಕ್ಕೆ ಬಿಡುಗಡೆ

• ವೇರಿಯಂಟ್‌ಗಳು:- ಎಸ್, ಎಸ್ಎಕ್ಸ್ ಮತ್ತು ನೈಟ್ ಎಸ್ಎಕ್ಸ್ನಲ್ಲಿ ಲಭ್ಯವಿದೆ

• ಪರ್ಫಾಮೆನ್ಸ್:-  5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ನೊಂದಿಗೆ CNG ಮೋಡ್ನಲ್ಲಿ 69 PS ಮತ್ತು 95.2 Nm ಅನ್ನು ಪ್ರೊಡ್ಯೂಸ್‌ ಮಾಡುತ್ತದೆ.,

• ಬೆಲೆ ಪ್ರೀಮಿಯಂಃ ಸಮಾನ ಪೆಟ್ರೋಲ್ ವೇರಿಯಂಟ್‌ಗಿಂತ ₹ 1 ಲಕ್ಷ ಹೆಚ್ಚು ವೆಚ್ಚವಾಗುತ್ತದೆ

• ಬೆಲೆ ಹೆಚ್ಚಳಃ ಅಪ್ಡೇಟೆಡ್ CNG ವೇರಿಯಂಟ್‌ಗಳು ಹಿಂದಿನ ಮಾಡೆಲ್‌ಗಳಿಗಿಂತ ₹ 7,000 ಹೆಚ್ಚು ದುಬಾರಿ

• ಸಂಗ್ರಹಣೆಃ ಬೂಟ್ ಸ್ಟೋರೇಜ್ ಹೆಚ್ಚಿಸಲು ಡ್ಯುಯಲ್ ಸಿಲಿಂಡರ್ ಸೆಟಪ್ ಹೊಂದಿದೆ

ಎಕ್ಸ್ಟರ್ ಈಗ ಅಪ್ಗ್ರೇಡ್ ಮಾಡಲಾದ CNG ಸಿಸ್ಟಮ್ನೊಂದಿಗೆ ಬರುತ್ತದೆ. ಹಿಂದಿನಂತೆ 1.2-ಲೀಟರ್ ಎನ್ಎ ಪೆಟ್ರೋಲ್ ಎಂಜಿನ್ ಮತ್ತು ಐದು-ಸ್ಪೀಡ್  ಮ್ಯಾನ್ಯುವಲ್ ಗೇರ್ಬಾಕ್ಸ್ಗಳಿದ್ದರೂ, ಹೊಸ CNG ಡ್ಯುಯೊ ಮಾಡೆಲ್‌ನಲ್ಲಿ ಒಂದರ ಬದಲಿಗೆ ಎರಡು ಟ್ಯಾಂಕ್ಗಳನ್ನು ಇರುತ್ತವೆ. ಇಂಟಿಗ್ರೇಟೆಡ್‌ ಇಸಿಯುನೊಂದಿಗೆ, ಇದು ಪೆಟ್ರೋಲ್ ಮತ್ತು CNG ನಡುವೆ ಸಲೀಸಾಗಿ ಬದಲಾಗುತ್ತದೆ. ಈ ಸೆಟಪ್ನಿಂದಾಗಿ, ಎಕ್ಸ್ಟೆರ್ 27.1 ಕಿಮೀ/ಕೆಜಿಯಷ್ಟು ಫೈೂಯೆಲ್‌ ಎಫೀಷಿಯನನ್ಸಿಯನ್ನು ತಲಪಬಹುದಾಗಿರುತ್ತದೆ, ಹಾಗೂ 60 ಲೀಟರ್ CNG ಸಾಮರ್ಥ್ಯವನ್ನು ಹೊಂದಿದೆ. ಹ್ಯುಂಡೈ ಎಕ್ಸ್ಟೆರ್  CNGಯ  ಅಪ್ಡೇಟೆಡ್ ವಷ೯ನ್‌ ಜೊತೆಗೆ ಒಂದೇ ಟ್ಯಾಂಕ್ ಹೋದಿರುವ ಒರಿಜಿನಲ್ ಎಕ್ಸ್ಟೆರ್ CNGಯ ಕೂಡಮಾರಾಟಕ್ಕೆ ಲಭ್ಯವಿರುತ್ತದೆ.

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ನ ತರುಣ್ ಗರ್ಗ್ ರವರು, ಎಕ್ಸ್ಟೆರ್ ಹೈ-CNG Duo ಬಿಡುಗಡೆಯ ಬಗ್ಗೆ ಮಾತನಾಡುತ್ತಾ, “ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ನಲ್ಲಿ, ಪರಿಸರ ಸ್ನೇಹಿ ಮತ್ತು ಕ್ರಿಯೇಟಿವ್ ಮಾರ್ಗಗಳನ್ನು ನೀಡಲು ಬದ್ಧರಾಗಿದ್ದೇವೆ. ಎಂದು ತಿಳಿಸುತ್ತಾ ಡ್ಯುಯಲ್ ಸಿಲಿಂಡರ್ CNG ಟೆಕ್ನಾಲಜಿಯನ್ನು ಹೊಂದಿರುವ ಇತ್ತೀಚಿನ ಎಸ್ಯುವಿ, ಎಕ್ಸ್ಟರ್ ಉತ್ತಮ ಗ್ಯಾಸ್‌ ಮೈಲೇಜ್, ಹೆಚ್ಚು ಸ್ಟೋರೇಜ್ ಮತ್ತು ಹಲವಾರು ವಿಶೇಷ ಫೀಚರ್ ಹೊಂದಿರುವ ಎಕ್ಸ್ಟೆರ್ ಹೈ-CNG ಕಾರನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುವುದು ಅತ್ಯಂತ ಸಂತೋಷಕರ ವಿಷಯ ಎಂದು ತಮ್ಮ ಆನಂದವನ್ನು ಹಂಚಿಕೊಂಡಿದ್ದಾರೆ.”

ಇದನ್ನೂ ಓದಿ: Hyundai Creta N Line: 2024 ಭಾರತದಲ್ಲಿ ಹ್ಯುಂಡೈ ಕ್ರೆಟಾ ಎನ್ ಲೈನ್ ಬುಕಿಂಗ್ ಆರಂಭ

Leave a Comment