ಹ್ಯುಂಡೈ Creta Knight Edition ಅನ್ನು ಟಾಪ್-ಸ್ಪೆಕ್ S(O) ಮತ್ತು SX(O) ಮಾದರಿಗಳಲ್ಲಿ ನಿರ್ಮಿಸಲಾಗಿದೆ
ಭಾರತೀಯ ಕಾರು ಮಾರುಕಟ್ಟೆಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿರುವ ಹ್ಯುಂಡೈ ಕ್ರೆಟಾ (Hyundai Creta), ಈಗ ಹೊಸ ಕ್ರೆಟಾ ನೈಟ್ ಎಡಿಷನ್ನೊಂದಿಗೆ (Creta Knight Edition) ಇನ್ನಷ್ಟು ಆಕರ್ಷಕವಾಗಿದೆ. ಈ ವರ್ಷದ ಆರಂಭದಲ್ಲಿ ನವೀಕರಿಸಲ್ಪಟ್ಟ ಕ್ರೆಟಾ ಮತ್ತು ಸ್ಪೋರ್ಟಿ ಕ್ರೆಟಾ ಎನ್ಲೈನ್ ನಂತರ, ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಈ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರ ನಿರೀಕ್ಷೆಗಳನ್ನು ಮತ್ತೊಮ್ಮೆ ಮೀರಿದೆ. ತನ್ನ ಸೊಗಸಾದ ವಿನ್ಯಾಸ ಮತ್ತು ಆಧುನಿಕ ವೈಶಿಷ್ಟ್ಯಗಳಿಂದಾಗಿ, ಕ್ರೆಟಾ ಭಾರತೀಯ ಗ್ರಾಹಕರಲ್ಲಿ ಯಾವಾಗಲೂ ಜನಪ್ರಿಯವಾಗಿದೆ.
ಈ ವಿಶೇಷ ಆವೃತ್ತಿಯು ಎಸ್ (ಒ) ಮತ್ತು ಎಸ್ಎಕ್ಸ್ (ಒ) ಎಂಬ ಎರಡು ಆಕರ್ಷಕ ಮಾದರಿಗಳಲ್ಲಿ ಲಭ್ಯವಿದೆ. ಗ್ರಾಹಕರು 1.5-ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್ಗಳ ನಡುವೆ ತಮ್ಮ ಇಚ್ಛೆಯಂತೆ ಆಯ್ಕೆ ಮಾಡಿಕೊಳ್ಳಬಹುದು. ಈ ವಾಹನದ ಎಕ್ಸ್ ಶೋರೂಂ ಬೆಲೆ ರೂ.14.51 ಲಕ್ಷದಿಂದ ರೂ.20.15 ಲಕ್ಷದವರೆಗೆ ಇದೆ. ‘ನೈಟ್ ಎಡಿಷನ್’ ಎಂಬ ಹೆಸರಿನಂತೆಯೇ, ಈ ಮಾದರಿಯು ಹೊಸ ನೋಟದೊಂದಿಗೆ ಎದ್ದು ಕಾಣುತ್ತದೆ. ಹೊರ ಮತ್ತು ಒಳ ಭಾಗಗಳಲ್ಲಿ 21 ಕ್ಕೂ ಹೆಚ್ಚು ವಿಶಿಷ್ಟ ಬದಲಾವಣೆಗಳನ್ನು ಮಾಡಲಾಗಿದೆ.
ಇದನ್ನೂ ಓದಿ: ಕಡಿಮೆ ಬೆಲೆಗೆ ಸನ್ರೂಫ್ನೊಂದಿಗೆ ಹ್ಯುಂಡೈ ವೆನ್ಯೂ ಎಸ್ ಪ್ಲಸ್ ಬಿಡುಗಡೆ

ಹ್ಯುಂಡೈ ಕ್ರೆಟಾ ನೈಟ್ ಎಡಿಷನ್ (Hyundai Creta Knight Edition) ವಿನ್ಯಾಸವು ಕಪ್ಪು ಬಣ್ಣದ ಆಧಾರಿತವಾಗಿದ್ದು, ಕಾರಿಗೆ ಆಕರ್ಷಕ ಮತ್ತು ಸ್ಪೋರ್ಟಿ ಲುಕ್ ಅನ್ನು ನೀಡುತ್ತದೆ. ಮ್ಯಾಟ್ ಬ್ಲ್ಯಾಕ್ ಬಣ್ಣದಲ್ಲಿರುವ ರೇಡಿಯೇಟರ್ ಗ್ರಿಲ್, ಹ್ಯುಂಡೈ ಲೋಗೋ, ನೈಟ್ ಎಡಿಷನ್ ಸೂಚಿಸುವ ಬ್ಯಾಡ್ಜ್ ಮತ್ತು 17 ಇಂಚಿನ ಅಲಾಯ್ ವೀಲ್ಗಳೊಂದಿಗೆ, ರೆಡ್ ಬ್ರೇಕ್ ಕ್ಯಾಲಿಪರ್ಗಳು ಮತ್ತು ವಿಶಿಷ್ಟವಾದ ನೈಟ್ ಲೋಗೋ ಕಾರಿನ ಬಾಹ್ಯ ವಿನ್ಯಾಸವನ್ನು ಮತ್ತಷ್ಟು ಹೈಲೈಟ್ ಮಾಡುತ್ತವೆ. ಬ್ಲ್ಯಾಕ್ ಸ್ಕಿಡ್ ಪ್ಲೇಟ್ಗಳು, ರೂಫ್ ರೈಲ್ಗಳು, ಸೈಡ್ ಸಿಲ್ ಗಾರ್ನಿಶ್ ,ORVM ಗಳು ಮತ್ತು ಸ್ಪಾಯ್ಲರ್ಗಳು ಕಾರಿನ ಒಟ್ಟಾರೆ ನೋಟವನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುತ್ತವೆ.
ಒಳಭಾಗದ ಕ್ಯಾಬಿನ್ ನಲ್ಲಿ ಕೂಡ ಡಾರ್ಕ್ ಥೀಮ್ ವ್ಯಾಪಿಸಿದೆ. ಡುಯಲ್ -ಟೋನ್ ಗ್ರೇ ಇಂಟೀರಿಯರ್ ಬದಲಿಗೆ, ಈಗ ನೀವು ಬ್ರಾಸ್-ಕಲರ್ನ ಅಲಂಕಾರಗಳೊಂದಿಗೆ ಸಂಪೂರ್ಣವಾಗಿ ಬ್ಲ್ಯಾಕ್ ಕ್ಯಾಬಿನ್ ಪಡೆಯುತ್ತೀರಿ. ನಿಮ್ಮ ಸೀಟುಗಳು ಬ್ರಾಸ್ ಹೊಲಿಗೆಯೊಂದಿಗೆ ವಿಶೇಷ ಬ್ಲ್ಯಾಕ್ ಲೆದರ್ನಲ್ಲಿ ಬರುತ್ತವೆ. ಸ್ಟೀರಿಂಗ್ ವೀಲ್ ಮತ್ತು ಗೇರ್ ಬೂಟ್ ಬ್ರಾಸ್ ಸ್ಟಿಚಿಂಗ್ನೊಂದಿಗೆ ಬ್ಲ್ಯಾಕ್ ಲೆದರ್ನಲ್ಲಿ ಸುತ್ತುವರಿದಿವೆ. ಹೆಚ್ಚುವರಿಯಾಗಿ, ನೈಟ್ ಎಡಿಷನ್ನಲ್ಲಿ, ನೀವು ಸ್ಟೈಲಿಶ್ ಟಚ್ಗಾಗಿ ಸ್ಪೋರ್ಟಿ ಮೆಟಾಲಿಕ್ ಪೆಡಲ್ಗಳನ್ನು ಪಡೆಯುತ್ತೀರಿ.
ಇದನ್ನೂ ಓದಿ: 2024 ಭಾರತದಲ್ಲಿ ಹ್ಯುಂಡೈ ಕ್ರೆಟಾ ಎನ್ ಲೈನ್ ಬುಕಿಂಗ್ ಆರಂಭ
ಹ್ಯುಂಡೈ ಕ್ರೆಟಾ ನೈಟ್ ಎಡಿಷನ್: ಪವರ್ಟ್ರೇನ್ ಆಯ್ಕೆಗಳು
ಹ್ಯುಂಡೈ ಕ್ರೆಟಾ ನೈಟ್ ನೀವು ಆಯ್ಕೆ ಮಾಡಲು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. 1.5-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ 115 ಬಿಹೆಚ್ಪಿ ಪವರ್ ಮತ್ತು 144 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5-ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ 116 ಬಿಹೆಚ್ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪೆಟ್ರೋಲ್ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಅಥವಾ ಸಿವಿಟಿ ಗೇರ್ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಡೀಸೆಲ್ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.