Hyundai Alcazar: ಹೈಟೆಕ್ ಫೀಚರ್ಸ್ ಗಳೊಂದಿಗೆ ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ ಬಿಡುಗಡೆ

Hyundai Alcazar ಫೇಸ್‌ಲಿಫ್ಟ್ ಈ ಹಿಂದಿನಂತೆ 1.5 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ನೀಡುತ್ತದೆ

ದೇಶೀಯ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಆದ ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಂಡಿರುವ ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor India), ತನ್ನ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಕಾರುಗಳನ್ನು ಒದಗಿಸುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿದೆ. ಆಕರ್ಷಕ ವಿನ್ಯಾಸ, ಆಧುನಿಕ ತಂತ್ರಜ್ಞಾನ ಮತ್ತು ವಿಶಾಲವಾದ ವೈಶಿಷ್ಟ್ಯಗಳ ಸಮಾಗಮವೇ ಹ್ಯುಂಡೈ ಕಾರುಗಳ ಯಶಸ್ಸಿನ ರಹಸ್ಯ. ಈ ಸರಣಿಯಲ್ಲಿ, ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿ ಮಾದರಿಯಾದ ಅಲ್ಕಾಜರ್‌ ಫೇಸ್‌ಲಿಫ್ಟ್ (Hyundai Alcazar) ಎಸ್‌ಯುವಿಯನ್ನು ಸೋಮವಾರ ಅದ್ಧೂರಿಯಾಗಿ ಬಿಡುಗಡೆ ಮಾಡಿದೆ.

ಹ್ಯುಂಡೈ ಅಲ್ಕಾಜರ್ ಎಸ್‌ಯುವಿ ಈಗ ನಿಮ್ಮ ಕುಟುಂಬಕ್ಕೆ ಸೇರಲು ಸಿದ್ಧವಾಗಿದೆ. ಅದರ ಆಕರ್ಷಕ ಬೆಲೆ ಮತ್ತು ವಿಶಾಲವಾದ ಕ್ಯಾಬಿನ್ ನಿಮಗೆ ಖಂಡಿತ ಇಷ್ಟವಾಗಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುವ ಈ ಕಾರಿನ ಆರಂಭಿಕ ಬೆಲೆ ಕ್ರಮವಾಗಿ ರೂ.14.99 ಲಕ್ಷ ಮತ್ತು ರೂ.15.99 ಲಕ್ಷ (ಎಕ್ಸ್ ಶೋರೂಂ) ಆಗಿದ್ದು, ಟಾಪ್ ವೇರಿಯಂಟ್ ಗಳ ಬೆಲೆ 21.55 ಲಕ್ಷದವರೆಗೂ ಹೋಗುತ್ತದೆ.

ಇದನ್ನೂ ಓದಿ: ಹ್ಯುಂಡೈ ಕ್ರೆಟಾ ನೈಟ್ ಎಡಿಷನ್ ಹೊಸ ಬ್ಲ್ಯಾಕ್ ಲುಕ್‌ನಲ್ಲಿ ಬಿಡುಗಡೆ

2024 Hyundai Alcazar
2024 Hyundai Alcazar

ಹ್ಯುಂಡೈ ಅಲ್ಕಾಜರ್ ವೈಶಿಷ್ಟ್ಯಗಳು

ಎಕ್ಸಿಕ್ಯೂಟಿವ್, ಪ್ರೆಸ್ಟಿಜ್, ಪ್ಲಾಟಿನಿಯಂ ಮತ್ತು ಸಿಗ್ನೇಚರ್ ಎಂಬ ನಾಲ್ಕು ವಿಭಿನ್ನ ವೆರಿಯೆಂಟ್‌ಗಳಲ್ಲಿ ಲಭ್ಯವಿರುವ ಈ ಕಾರು, ಈ ಹಿಂದಿನ ಮಾದರಿಯಂತೆ 6 ಮತ್ತು 7 ಸೀಟರ್ ಆಯ್ಕೆಗಳನ್ನು ಒಳಗೊಂಡಿದೆ. ಹೊಸದಾಗಿ ಬಂದಿರುವ ಕಾರಿನಲ್ಲಿ ಹೆಚ್ಚು ಬದಲಾವಣೆಗಳಿಲ್ಲ. ಹೊರಭಾಗದಲ್ಲಿ ವಿಶಿಷ್ಟವಾದ ಫೇಸ್ಲಿಫ್ಟ್ ಲೈಟ್ ಬಾರ್, ದೊಡ್ಡಗ್ರಿಲ್, ಹೆಡ್‌ಲ್ಯಾಂಪ್‌ಗಳು, ಸ್ಕೀಡ್ ಪ್ಲೇಟ್, ಡಾರ್ಕ್ ಕ್ರೊಮ್ ಗ್ರೀಲ್ ಮತ್ತು ಎಚ್-ಆಕಾರದ ಎಲ್‌ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ಗಳನ್ನು ಪಡೆಯುತ್ತದೆ. ಹೊಸ18-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್‌ಗಳು ಮತ್ತು ಬಳಕೆಗೆ ಯೋಗ್ಯವಾದ ರೂಫ್ ರೈಲ್ಸ್‌ಗಳು ಸಿಕ್ಕಿವೆ. ಹಿಂಭಾಗದಲ್ಲಿ ಪೂರ್ಣ-ಅಗಲದ ಎಲ್ಇಡಿ ಟೈಲ್‌ಲ್ಯಾಂಪ್‌ಗಳು ಅದಕ್ಕೆ ಸ್ಪೋರ್ಟಿ ನೋಟವನ್ನು ನೀಡುತ್ತವೆ.

Hyundai Alcazar ಕಾರು 4,560 ಎಂಎಂ ಉದ್ದ, 1,800 ಎಂಎಂ ಅಗಲ ಮತ್ತು 1,710 ಎಂಎಂ ಎತ್ತರದೊಂದಿಗೆ, ಅಲ್ಕಾಜರ್ ಅಗಲವಾದ ಮತ್ತು ಆರಾಮದಾಯಕವಾದ ಪ್ರಯಾಣವನ್ನು ನೀಡುತ್ತದೆ. 2,760 ಎಂಎಂ ವೀಲ್‌ಬೇಸ್‌ನೊಂದಿಗೆ, ಪ್ರತಿ ಪ್ರಯಾಣವನ್ನು ಸುಗಮಗೊಳಿಸುತ್ತದೆ. ಒಂಬತ್ತು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದ್ದು. ಟೈಟಾನ್ ಗ್ರೇ ಮ್ಯಾಟ್, ಸ್ಟಾರಿ ನೈಟ್, ರೇಂಜರ್ ಖಾಕಿ, ಅಬಿಸ್ ಬ್ಲ್ಯಾಕ್, ಅಟ್ಲಾಸ್ ವೈಟ್, ರೋಬಸ್ಟ್ ಎಮರಾಲ್ಡ್ ಪರ್ಲ್, ರೋಬಸ್ಟ್ ಎಮರಾಲ್ಡ್ ಮ್ಯಾಟ್ ಮತ್ತು ಫಿಯರಿ ರೆಡ್ ಸೇರಿವೆ. ಈ ಪೈಕಿ ಕೊನೆಯ ಮೂರು ಬಣ್ಣಗಳು ಅಲ್ಕಾಜಾರ್‌ಗೆ ಹೊಸದಾಗಿದ್ದು, ರೋಬಸ್ಟ್ ಎಮರಾಲ್ಡ್ ಪರ್ಲ್ ಬಣ್ಣವನ್ನು ಕ್ರೆಟಾ ಮಾದರಿಯಲ್ಲೂ ಬಳಸಲಾಗಿದೆ. ಒಂದು ವಿಶಿಷ್ಟವಾದ ಡ್ಯುಯಲ್-ಟೋನ್ ಆಯ್ಕೆಯಾಗಿ ಅಟ್ಲಾಸ್ ವೈಟ್ ಬಣ್ಣಕ್ಕೆ ಅಬಿಸ್ ಬ್ಲ್ಯಾಕ್ ಬಣ್ಣದ ಸಂಯೋಜನೆಯನ್ನು ನೀಡಲಾಗಿದೆ.

ಇದನ್ನೂ ಓದಿ: ಹ್ಯುಂಡೈ ಎಕ್ಸ್‌ಟರ್‌ನ ಹೊಸ ವೇರಿಯೆಂಟ್‌ಗಳು ಸನ್‌ರೂಫ್‌ನೊಂದಿಗೆ ಬಿಡುಗಡೆ

Hyundai Alcazar Interior

ಹೊಸ ಕಾರಿನಲ್ಲಿ ಕ್ರೆಟಾದಲ್ಲಿರುವಂತೆ 10.25 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ, ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎರಡನೇ ಸಾಲಿನ ಪ್ರಯಾಣಿಕರಿಗಾಗಿ ವೆಂಟಿಲೆಷನ್ ಆಸನಗಳು, ವಾಯ್ಸ್ ಆಕ್ಟಿವೆಟೆಡ್ ಪನೊರಮಿಕ್ ಸನ್ ರೂಫ್, 1ನೇ ಮತ್ತು 2ನೇ ಸಾಲಿನ ವೈರ್ ಲೆಸ್ ಚಾರ್ಜಿಂಗ್ ಸೌಲಭ್ಯ, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ರೈನ್ ಸೆನ್ಸಿಂಗ್ ವೈಪರ್ಸ್, ಬಾಷ್ ಸೌಂಡ್ ಸಿಸ್ಟಂ ನೀಡಲಾಗಿದೆ. ಮತ್ತು ಇದು ಹೊಸ ಡ್ಯುಯಲ್ ಟೋನ್ ನೋಬಲ್ ಬ್ರೌನ್ ಮತ್ತು ಡಾರ್ಕ್ ನೇವಿ ಬಣ್ಣದ ಇಂಟೀರಿಯರನ್ನು ಸಹ ಪಡೆಯುತ್ತದೆ. ಹಿಂಭಾಗದ ಸನ್ ಶೇಡ್ಸ್ ಮತ್ತು ಫೋಲ್ಡ್-ಔಟ್ ಟ್ರೇ ಟೇಬಲ್ಗಳನ್ನು ನೀಡಲಾಗಿದೆ.

ಹೊಸ ಅಲ್ಕಾಜರ್ ನಿಮ್ಮ ಪ್ರಯಾಣವನ್ನು ಸುರಕ್ಷಿತಗೊಳಿಸಲು ಅನೇಕ ಆಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 6 ಏರ್‌ಬ್ಯಾಗ್‌ಗಳು, 360 ಡಿಗ್ರಿ ಕ್ಯಾಮೆರಾ, ಸ್ಮಾರ್ಟ್ ಕ್ರೂಸ್ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ), ಎಲ್ಲಾ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಡಿಜಿಟಲ್ ಕೀ, ಹಿಲ್ ಡಿಸೆಂಟ್ ಕಂಟ್ರೋಲ್ ಸೌಲಭ್ಯಗಳು ನೀಡಲಾಗಿದೆ. ಹೈ-ಎಂಡ್ ಮಾದರಿಗಳಲ್ಲಿ ಅಪಘಾತಗಳನ್ನು ತಡೆಯುವಲ್ಲಿ ಸಹಾಯ ಮಾಡುವ ಲೆವಲ್ 2 ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ,ಫಾರ್ವರ್ಡ್ ಕೊಲಿಷನ್ ವಾರ್ನಿಂಗ್ ಸೇರಿದಂತೆ ಅನೇಕ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಇದನ್ನೂ ಓದಿ: ಕಡಿಮೆ ಬೆಲೆಗೆ ಸನ್‌ರೂಫ್‌ನೊಂದಿಗೆ ಹ್ಯುಂಡೈ ವೆನ್ಯೂ ಎಸ್ ಪ್ಲಸ್ ಬಿಡುಗಡೆ

ಹ್ಯುಂಡೈ ಅಲ್ಕಾಜರ್ (Hyundai Alcazar): ಪವರ್‌ಟ್ರೇನ್

ಹೊಸ ಹ್ಯುಂಡೈ ಅಲ್ಕಾಜರ್ (Hyundai Alcazar) ಎಸ್‌ಯುವಿ ಎರಡು ವಿಧದ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. 1.5 ಲೀಟರ್ ಜಿಡಿಟಿ ಟರ್ಬೋ ಪೆಟ್ರೋಲ್ ಎಂಜಿನ್ ಗರಿಷ್ಠ 158 ಬಿಹೆಚ್‌ಪಿ ಶಕ್ತಿ ಮತ್ತು 253 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದಲ್ಲದೆ, 1.5 ಲೀಟರ್ ಡೀಸೆಲ್ ಎಂಜಿನ್ ಗರಿಷ್ಠ 113 ಬಿಹೆಚ್‌ಪಿ ಶಕ್ತಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಈ ಕಾರು ವಿವಿಧ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡುತ್ತದೆ: 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು 7-ಸ್ಪೀಡ್ ಡಿಸಿಟಿ. ಚಾಲನೆಯ ಅನುಭವವನ್ನು ವೈಯಕ್ತಿಕಗೊಳಿಸಲು ನಾರ್ಮಲ್, ಇಕೋ ಮತ್ತು ಸ್ಪೋರ್ಟ್ ಮೋಡ್‌ಗಳ ಜೊತೆಗೆ, ವಿವಿಧ ರಸ್ತೆ ಪರಿಸ್ಥಿತಿಗಳಿಗೆ ಸೂಕ್ತವಾದ ಸ್ನೋ, ಮಡ್ ಮತ್ತು ಸ್ಯಾಂಡ್ ಮೋಡ್‌ಗಳು ಲಭ್ಯವಿವೆ. ಇಂಧನ ದಕ್ಷತೆಯನ್ನು ಹೆಚ್ಚಿಸಲು ಸ್ಟಾರ್ಟ್/ಸ್ಟಾಪ್ ಸಿಸ್ಟಮ್ ಅನ್ನು ಸೇರಿಸಲಾಗಿದೆ.

Leave a Comment