Honda: ಹಬ್ಬಕ್ಕೆ ಜನಪ್ರಿಯ ಹೋಂಡಾ ಕಾರುಗಳ ಮೇಲೆ ಮೆಗಾ ಡಿಸ್ಕೌಂಟ್ ಆಫರ್‌ಗಳು

Honda Cars: ಈ ಅಕ್ಟೋಬರ್‌ನಲ್ಲಿ ಹೋಂಡಾ ಅಮೇಜ್, ಎಲಿವೇಟ್, ಸಿಟಿ ಕಾರುಗಳ ಖರೀದಿಗೆ ದೊಡ್ಡಮಟ್ಟದ ರಿಯಾಯಿತಿಗಳು

ದಸರಾ-ದೀಪಾವಳಿ ಹಬ್ಬದ ಸಂಭ್ರಮಕ್ಕೆ ಹೋಂಡಾ ಕಾರ್ಸ್ ಇಂಡಿಯಾ ಒಂದು ಸಿಹಿ ಸುದ್ದಿಯನ್ನು ತಂದಿದೆ! ಅಕ್ಟೋಬರ್ ತಿಂಗಳಿನಲ್ಲಿ ಅಮೇಜ್, ಎಲಿವೇಟ್ ಮತ್ತು ಸಿಟಿ ಕಾರುಗಳ ಮೇಲೆ ಘೋಷಿಸಿರುವ ಬೃಹತ್ ರಿಯಾಯಿತಿಗಳೊಂದಿಗೆ, ನಿಮ್ಮ ಕನಸಿನ ಕಾರು ಇದೀಗ ನಿಮ್ಮ ಕೈಗೆಟುಕುವ ದೂರದಲ್ಲಿದೆ. ಈ ಹಬ್ಬದ ಸಂದರ್ಭದಲ್ಲಿ ಹೊಸ ಕಾರನ್ನು ಖರೀದಿಸುವ ಆಲೋಚನೆಯಲ್ಲಿರುವವರಿಗೆ ಇದು ಒಂದು ಅದ್ಭುತ ಅವಕಾಶ.

ಹೋಂಡಾ ಕಾರ್ಸ್ ಇಂಡಿಯಾ ತನ್ನ ಗ್ರಾಹಕರಿಗೆ ಹೊಸ ಹೊಂಡಾ ಕಾರು ಖರೀದಿಸುವ ಅನುಭವವನ್ನು ಇನ್ನಷ್ಟು ಸುಖಕರವಾಗಿಸಲು ‘ಎಕ್ಸ್’ ಖಾತೆಯಲ್ಲಿ ವಿವಿಧ ಹಣಕಾಸು ಆಯ್ಕೆಗಳನ್ನು ನೀಡಿದೆ. ‘ಗ್ರೇಟ್ ಹೋಂಡಾ ಫೆಸ್ಟ್’ ನಲ್ಲಿ ಭಾಗವಹಿಸುವವರಿಗೆ ರೂ. 5 ಲಕ್ಷ ಮೌಲ್ಯದ ಚಿನ್ನ ಗೆಲ್ಲುವ ಅದೃಷ್ಟದ ಅವಕಾಶವಿದೆ. ಈ ವಾಹನದೊಂದಿಗೆ, ಗ್ರಾಹಕರು 3 ವರ್ಷಗಳವರೆಗೆ ಉಚಿತ ವಾಹನ ನಿರ್ವಹಣಾ ಸೌಲಭ್ಯವನ್ನು ಆನಂದಿಸಬಹುದು. ಇದಲ್ಲದೆ, ಜನಪ್ರಿಯ ಎಲಿವೇಟ್ ಎಸ್‌ಯುವಿ, ಅಮೇಜ್ ಸೆಡಾನ್ ಮತ್ತು ಸಿಟಿ ಸೆಡಾನ್ ಮಾದರಿಗಳ ಮೇಲೆ ರೂ.75,000 ರಿಂದ ರೂ.1,14,000 ವರೆಗಿನ ಆಕರ್ಷಕ ಹಣಕಾಸು ಯೋಜನೆಗಳು ಲಭ್ಯವಿವೆ.

ಇದನ್ನೂ ಓದಿ: ಕೈಗೆಟುಕುವ ಬೆಲೆಯಲ್ಲಿ ಹೋಂಡಾ ಎಲಿವೇಟ್ ಅಪೆಕ್ಸ್ ಎಡಿಷನ್ ಬಿಡುಗಡೆ

ಹೋಂಡಾ ಅಮೇಜ್ ಮೇಲೆ ರೂ. 1.12 ಲಕ್ಷ ಡಿಸ್ಕೌಂಟ್

ಹೋಂಡಾ ಅಮೇಜ್ (Honda Amaze) ಕಾರು ಖರೀದಿಸಲು ಇದೇ ಸರಿಯಾದ ಸಮಯ! ಟಾಪ್-ಮಾಡೆಲ್ VX ಮತ್ತು ವಿಶೇಷ ಎಲೈಟ್ ಆವೃತ್ತಿಗಳಲ್ಲಿ ನೀವು 1.12 ಲಕ್ಷ ರೂಪಾಯಿಗಳವರೆಗೆ ರಿಯಾಯಿತಿ ಪಡೆಯಬಹುದು. ಮಧ್ಯಮ ವರ್ಗದ S ಮಾಡೆಲ್‌ನಲ್ಲಿ 96,000 ರೂಪಾಯಿ ಮತ್ತು ಎಂಟ್ರಿ-ಲೆವೆಲ್ E ಮಾಡೆಲ್‌ನಲ್ಲಿ 86,000 ರೂಪಾಯಿಗಳವರೆಗೆ ರಿಯಾಯಿತಿಯನ್ನು ಆನಂದಿಸಿ.

ಹೋಂಡಾ ಅಮೇಜ್ ರೂ.7.20 ಲಕ್ಷದಿಂದ ರೂ.9.96 ಲಕ್ಷ (ಎಕ್ಸ್ ಶೋರೂಂ ಬೆಲೆ) ದೊರೆಯುವ ಈ ಕಾರು ವಿಶಾಲವಾದ ಕ್ಯಾಬಿನ್ ಮತ್ತು 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಗೇರ್‌ಬಾಕ್ಸ್ ಆಯ್ಕೆಗಳನ್ನು ಹೊಂದಿದೆ. ಹೋಂಡಾ ಅಮೇಜ್ ಶೀಘ್ರದಲ್ಲೇ ಹೊಸ ಅವತಾರದಲ್ಲಿ ಬರಲಿದೆ. ಹಾಗಾಗಿ, ಈ ಆಫರ್‌ಗಳನ್ನು ಉಪಯೋಗಿಸಿಕೊಂಡು ನಿಮ್ಮ ಕನಸಿನ ಕಾರನ್ನು ಈಗಲೇ ಹೊಂದಿರಿ!

ಇದನ್ನೂ ಓದಿ: ಮಾರುತಿ ಬ್ರೆಝಾ, ಸ್ವಿಫ್ಟ್, ಮತ್ತು ಆಲ್ಟೋ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಆಫರ್

ಹೋಂಡಾ ಸಿಟಿ ಮೇಲೆ ರೂ.  1.14 ಲಕ್ಷ ಡಿಸ್ಕೌಂಟ್

ಹೋಂಡಾ ಸಿಟಿ (Honda City) ಕಾರಿನ ಮೇಲೆ ಕಳೆದ ತಿಂಗಳಿನಂತೆಯೇ 1.14 ಲಕ್ಷ ರೂಪಾಯಿಗಳವರೆಗಿನ ಆಕರ್ಷಕ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಗ್ರಾಹಕರು ಆಯ್ಕೆ ಮಾಡುವ ಮಾದರಿಯನ್ನು ಅನುಸರಿಸಿ ವಿವಿಧ ರೀತಿಯ ರಿಯಾಯಿತಿ ಯೋಜನೆಗಳು ಲಭ್ಯವಿವೆ. ವಿಶೇಷವಾಗಿ, ಹಿಂಬದಿ ಸೀಟಿನ ಮಧ್ಯದಲ್ಲಿ 3-ಪಾಯಿಂಟ್ ಸೀಟ್ ಬೆಲ್ಟ್ ವೈಶಿಷ್ಟ್ಯವಿಲ್ಲದ ಕೆಲವು ಮಾದರಿಗಳು ಮಾರಾಟವಾಗದೆ ಉಳಿದುಕೊಂಡಿದ್ದು, ಇವುಗಳ ಮೇಲೆ ಗಣನೀಯವಾದ ಹೆಚ್ಚುವರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಮಾದರಿಯು ರೂ.11.82 ಲಕ್ಷದಿಂದ ರೂ.16.35 ಲಕ್ಷ (ಎಕ್ಸ್ ಶೋರೂಂ) ದರದ ವ್ಯಾಪ್ತಿಯಲ್ಲಿ ಬರುತ್ತದೆ. ಸಿಟಿ ಕಾರಿನಲ್ಲಿ 121 ಬಿಹೆಚ್ಪಿ ಶಕ್ತಿಯನ್ನು ಹೊಂದಿರುವ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಅಥವಾ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಪಡೆಯಬಹುದು. ಇದಲ್ಲದೆ, ಸಿಟಿ ಹೈಬ್ರಿಡ್ ಮಾದರಿಯ ಮೇಲೆ ಸುಮಾರು 75,000 ರೂಪಾಯಿಗಳ ರಿಯಾಯಿತಿ ಜೊತೆಗೆ 20,000 ರೂಪಾಯಿಗಳ ಮೌಲ್ಯದ ಹೆಚ್ಚುವರಿ ಆಕ್ಸೆಸರಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ.

ಇದನ್ನೂ ಓದಿ: ಹಬ್ಬದ ಸೀಸನ್‌ನಲ್ಲಿ ರೆನಾಲ್ಟ್ ಕಾರುಗಳ  ಮೇಲೆ ಭರ್ಜರಿ ಡಿಸ್ಕೌಂಟ್ ಆಫರ್‌ಗಳು

ಹೋಂಡಾ ಎಲಿವೇಟ್ ರೂ.75,000 ಡಿಸ್ಕೌಂಟ್

ಹೋಂಡಾ ಎಲಿವೇಟ್ (Honda Elevate) ಎಸ್ಯುವಿ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಲು ಪ್ರಯತ್ನಿಸುತ್ತಿದೆಯಾದರೂ, ಕ್ರೆಟಾ ಮತ್ತು ಗ್ರ್ಯಾಂಡ್ ವಿಟಾರಾಂತಹ ಪ್ರತಿಷ್ಠಿತ ಮಾದರಿಗಳಿಗೆ ಸವಾಲು ಹಾಕುವಲ್ಲಿ ಇನ್ನೂ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಈ ಸಂದರ್ಭದಲ್ಲಿ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹೋಂಡಾ ಎಲಿವೇಟ್ ಅಪೆಕ್ಸ್ ಆವೃತ್ತಿಯನ್ನು ಪರಿಚಯಿಸುವ ಮೂಲಕ ಹೊಸ ಆಯಾಮವನ್ನು ತಲುಪಲು ಹೊರಟಿದೆ.

ಸದ್ಯದಲ್ಲೇ ಎಲಿವೇಟ್‌ನ ಸ್ಟ್ಯಾಂಡರ್ಡ್ ಆವೃತ್ತಿಗಳ ಮೇಲೆ ಸುಮಾರು 75,000 ರೂಪಾಯಿಗಳವರೆಗೆ ರಿಯಾಯಿತಿ ಲಭ್ಯವಾಗುತ್ತಿದೆ. ಮಳಿಗೆಯನ್ನು ಅವಲಂಬಿಸಿ ಈ ರಿಯಾಯಿತಿಯ ಪ್ರಮಾಣದಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ರೂ.11.69 ಲಕ್ಷದಿಂದ ರೂ.16.71 ಲಕ್ಷದವರೆಗಿನ ಬೆಲೆಯಲ್ಲಿ ಲಭ್ಯವಿರುವ ಈ ಕಾರು, 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಉತ್ತಮ ಮೈಲೇಜ್ ನೀಡುತ್ತದೆ.

Leave a Comment