ಭಾರತೀಯ ಮಾರುಕಟ್ಟೆಯಲ್ಲಿ ಹೀರೋ ಮೋಟೋಕಾರ್ಪ್ ತನ್ನದೇ ಆದ ಒಂದು ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ದಶಕಗಳಿಂದ ಹಳ್ಳಿಯಿಂದ ದಿಲ್ಲಿಯವರೆಗೆ ದೇಶದ ಜನತೆಯ ಎಲ್ಲರ ಮನಸ್ಸನ್ನು ಗೆದ್ದ ಈ ಕಂಪನಿ, ಈಗ ತನ್ನ ಜನಪ್ರಿಯ ಎಕ್ಸ್ಟ್ರೀಮ್ 160R 4V ಬೈಕ್ನ ಹೊಸ ಆವೃತ್ತಿಯನ್ನು ಮತ್ತೊಮ್ಮೆ ಪರಿಚಯಿಸಿದೆ. ಈ ಬೈಕ್ ಈಗ ಹೊಸ ನೋಟ, ಹೊಸ ಫೀಚರ್ಗಳು ಮತ್ತು ಸ್ವಲ್ಪ ಬೆಲೆ ಹೆಚ್ಚಳದೊಂದಿಗೆ ಮಾರುಕಟ್ಟೆಗೆ ಬಂದಿದೆ.
2024 ಹೀರೋ ಎಕ್ಸ್ಟ್ರೀಮ್ 160R 4V 9(Hero Xtreme 160R 4V) ಬೈಕ್. ಹಲವು ಹೊಸ ಫೀಚರ್ಗಳೊಂದಿಗೆ ಈಗ ಮಾರುಕಟ್ಟೆಗೆ ಬಂದಿದೆ. ಹೊಸ ಬಣ್ಣಗಳ ಆಯ್ಕೆಗಳೊಂದಿಗೆ ಈ ಬೈಕ್ನ ಬೆಲೆ 1,38,500 ರಿಂದ 1,39,500 ರೂಪಾಯಿಗಳವರೆಗೆ (ಎಕ್ಸ್ಶೋರೂಂ) ಇದೆ. ಈಗ ನೀವು ಫುಲ್ಲೋಡೆಡ್ ‘ಪ್ರೀಮಿಯಂ’ ವೇರಿಯಂಟ್ ಅನ್ನು ಪಡೆಯಬಹುದು.
ಈ ಹೊಸ ಮಾಡೆಲ್ನ ಬೈಕಿನ ಬೆಲೆಯು ಹಿಂದಿನ ಮಾಡಲ್ ಎಕ್ಸ್ಟ್ರೀಮ್ 160R 4V ಗೆ ಹೋಲಿಸಿದರೆ ₹4,000 ಹೆಚ್ಚು. ಹೊಸ ಫೀಚರ್ಗಳು ಮತ್ತು ಹೊಸ ಬಣ್ಣ ಆಯ್ಕೆಯಾದ ‘ಕೆವ್ಲರ್ ಬ್ರೌನ್’ ಸೇರಿದಂತೆ ಹಲವು ಸುಧಾರಣೆಗಳನ್ನು ಒಳಗೊಂಡಿದೆ. ಕೆವ್ಲರ್ ಬ್ರೌನ್ ಬಣ್ಣವು ಸಾಮಾನ್ಯ ಬೆಲೆಗಿಂತ ₹1000 ಹೆಚ್ಚು ಬೆಲೆ ಆಗಿರುತ್ತದೆ. ಮತ್ತು ನೀವು ಇನ್ನೂ ಮೊದಲಿನ ಬಣ್ಣ ಆಯ್ಕೆಗಳಾದ ನಿಯಾನ್ ಶೂಟಿಂಗ್ ಸ್ಟಾರ್ ಮತ್ತು ಸ್ಟೆಲ್ತ್ ಬ್ಲ್ಯಾಕ್ ಅನ್ನು ಸಹ ಆಯ್ಕೆ ಮಾಡಬಹುದು.
ಹೀರೋ ಎಕ್ಸ್ಟ್ರೀಮ್ 160R 4V ಫೀಚರ್ಗಳು
ಹೊಸ ಹೀರೋ ಎಕ್ಸ್ಟ್ರೀಮ್ 160R 4V(Hero Xtreme 160R 4V) ಮಾಡೆಲ್ ಹಿಂದಿನ ಎಕ್ಸ್ಟ್ರೀಮ್ 160R 4V ನ ಎಲ್ಲಾ ಉತ್ತಮ ವೈಶಿಷ್ಟ್ಯಗಳನ್ನು ಉಳಿಕೊಂಡಿದೆ ಮತ್ತು ಈಗ ಡ್ಯುಯಲ್-ಚಾನೆಲ್ ABS ಮತ್ತು ಡ್ರ್ಯಾಗ್ ರೇಸ್ ಟೈಮರ್ನೊಂದಿಗೆ ಬರುತ್ತದೆ. ಹೀರೋ ಹಳೆಯ LCD ಸ್ಕ್ರೀನ್ ಅನ್ನು ಹೆಚ್ಚು ಪ್ರಕಾಶಮಾನವಾದ ಸ್ಕ್ರೀನ್ಗೆ ಬದಲಾಯಿಸಿದೆ. ಹೊಸ LED ಟೈಲ್ ಲೈಟ್ ಕೂಡ ಇದೆ.
ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಬೈಕ್ನಲ್ಲಿ ಪ್ಯಾನಿಕ್ ಬ್ರೇಕ್ ಅಲರ್ಟ್ ವೈಶಿಷ್ಟ್ಯವನ್ನು ಸೇರಿಸಲಾಗಿದೆ. ಇದರಿಂದ ತುರ್ತು ಸಂದರ್ಭದಲ್ಲಿ ಹಿಂದಿನ ವಾಹನಗಳಿಗೆ ಎಚ್ಚರಿಕೆ ನೀಡಲು ಸಹಾಯವಾಗುತ್ತದೆ. ಹೊಸದಾಗಿ ವಿನ್ಯಾಸಗೊಳಿಸಲಾದ ಸಿಂಗಲ್-ಪೀಸ್ ಸೀಟ್ನಿಂದ ಬೈಕ್ಗೆ ಆಧುನಿಕ ನೋಟ ಸಿಕ್ಕಿದೆ. ಈ ಹೊಸ ಸೀಟ್ ವಿನ್ಯಾಸವು ಹಿಂದಿನ ಮಾದರಿಯಲ್ಲಿನ ಸ್ಪ್ಲಿಟ್-ಟೈಪ್ ಸೀಟ್ಗೆ ಉತ್ತಮ ಪರ್ಯಾಯವಾಗಿದೆ.
Hero Xtreme 160R 4V ಇಂಜಿನ್
ಹಿಂದಿನ ಮಾದರಿಯಂತೆ, ಹೊಸ ಎಕ್ಸ್ಟ್ರೀಮ್ 60ಆರ್ 4ವಿ ಎಡಿಷನ್(Hero Xtreme 160R 4V Edition ) ಕೂಡ 163.2 ಸಿಸಿ ಸಿಂಗಲ್ ಸಿಲಿಂಡರ್ ಏರ್/ಆಯಿಲ್-ಕೂಲ್ಡ್ ಪೆಟ್ರೋಲ್ ಎಂಜಿನ್ನೊಂದಿಗೆ ಬರುತ್ತದೆ. ಈ ಎಂಜಿನ್ 16.6 ಪಿಎಸ್ ಗರಿಷ್ಠ ಶಕ್ತಿ ಮತ್ತು 14.6 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪವರ್ ಡೆಲಿವರಿಯನ್ನು ನಿಭಾಯಿಸಲು 5-ಸ್ಪೀಡ್ ಗೇರ್ಬಾಕ್ಸ್ ಅನ್ನು ಜೋಡಿಸಲಾಗಿದೆ.
ಸ್ಟೈಲಿಶ್ ಆಗಿ ಕಾಣುವ 17-ಇಂಚಿನ ಚಕ್ರಗಳು ಈ ಬೈಕ್ಗೆ ಒಂದು ಉತ್ತಮ ನೋಟವನ್ನು ನೀಡುತ್ತವೆ. .. ಮುಂಭಾಗದ ಚಕ್ರದಲ್ಲಿ 100/80-ಆರ್17 ಮತ್ತು ಹಿಂಭಾಗದ ಚಕ್ರದಲ್ಲಿ 130/70-ಆರ್17 ಅಳತೆಯ ಟೈರ್ಗಳನ್ನು ಬಳಸಲಾಗಿದೆ. ಮುಂಭಾಗದಲ್ಲಿ ಯುಎಸ್ಡಿ ಫೋರ್ಕ್ಗಳು ಮತ್ತು ಹಿಂಭಾಗದಲ್ಲಿ ಪ್ರಿಲೋಡ್ ಅನ್ನು ಹೊಂದಾಣಿಕೆ ಮಾಡಬಹುದಾದ ಮೋನೋ-ಶಾಕ್ ಸಸ್ಪೆನ್ಷನ್ ವ್ಯವಸ್ಥೆಯು ಸವಾರಿಯನ್ನು ಸುಗಮಗೊಳಿಸುತ್ತದೆ. ಬ್ರೇಕಿಂಗ್ ಪರಿಣಾಮಕಾರಿಯಾಗಿಸಲು ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ಗಳನ್ನು ಅಳವಡಿಸಲಾಗಿದೆ
ಇದನ್ನೂ ಓದಿ: ರಾಯಲ್ ಎನ್ಫೀಲ್ಡ್ ಗೆರಿಲ್ಲಾ450 ರೂ. 2.39 ಲಕ್ಷಕ್ಕೆ ಬಿಡುಗಡೆಯಾಗಿದೆ