ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್(Godawari Electric Motors), ನಗರ ಸಂಚಾರಕ್ಕಾಗಿ ವಿನ್ಯಾಸಗೊಳಿಸಿದ ಹೊಸ, ಈಬ್ಲು ಸೆಟಿ (eblu Cety) ಎಂಬ ಇ- ರಿಕ್ಷವನ್ನು ಪರಿಚಯಿಸಿದೆ. 1,99,999 ರೂಪಾಯಿಗಳ (ಎಕ್ಸ್-ಶೋರೂಮ್) ಬೆಲೆಯಲ್ಲಿ, ಈಬ್ಲು ಸೆಟಿ ನಗರಗಳಲ್ಲಿ ಪರಿಸರ ಸ್ನೇಹಿ ಮತ್ತು ಸಮಸ್ಯೆಯಿಲ್ಲದ ಪ್ರಯಾಣಕ್ಕೆ ಸೂಕ್ತ ಆಯ್ಕೆಯಾಗಿದೆ. ಇದನ್ನು ಭಾರತದಾದ್ಯಂತ ಯಾವುದೇ ಗೋದಾವರಿ ಶೋರೂಮ್ನಲ್ಲಿ ಖರೀದಿಸಬಹುದು.
eblu Cety ಇ-ರಿಕ್ಷಾ: ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್
eblu Cety ಮಾದರಿಯ ಇ-ರಿಕ್ಷಾ ಪ್ರಬಲ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಒಳಗೊಂಡಿದ್ದು, 51.2 V ವೋಲ್ಟೇಜ್ ಮತ್ತು 100Ah ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ 1.6 kW ಶಕ್ತಿ ಮತ್ತು 20 Nm ಶ್ರೇಣಿಯ ಪೀಕ್ ಟಾರ್ಕ್ ನೀಡುವ ಎಂಜಿನ್ ಅಳವಡಿಸಲಾಗಿದೆ. ಚಾಲನೆಯ ಹೆಚ್ಚಿನ ಅನುಕೂಲಕ್ಕಾಗಿ ಈ ವಾಹನದಲ್ಲಿ ಫಾರ್ವರ್ಡ್ ಹಾಗೂ ರಿವರ್ಸ್ ಮೋಡ್ಗಳನ್ನು ಬಳಸಬಹುದು. ಈ ರಿಕ್ಷಾವು ಗಂಟೆಗೆ 25 ಕಿ.ಮೀ ವೇಗದಲ್ಲಿ ಚಲಿಸಬಲ್ಲದು ಮತ್ತು ಒಂದು ಪೂರ್ಣ ಚಾರ್ಜ್ ಮೂಲಕ ಸುಮಾರು 95 ಕಿ.ಮೀ ದೂರವನ್ನು ಸಾಗಿಸಲು ಸಾಧ್ಯವಿದೆ. ಇಳಿಜಾರಿನಂತಹ ಕಠಿಣ ಪರಿಸ್ಥಿತಿಗಳನ್ನು ಸಹ ಸಮರ್ಥವಾಗಿ ನಿಭಾಯಿಸುವ ಮತ್ತು ಶಕ್ತಿಯ ಸಂರಕ್ಷಣೆ ಮಾಡಲು ಅತಿ ಪ್ರಬಲವಾದ ಬ್ರೇಕಿಂಗ್ ವ್ಯವಸ್ಥೆ ಹೊಂದಿದೆ.
ಈ ವಾಹನವು ಖರೀದಿದಾರರಿಗೆ 12 ತಿಂಗಳ ಅಥವಾ 20,000 ಕಿಲೋಮೀಟರ್ವರೆಗೆ ವಾರಂಟಿ ಮತ್ತು ಬ್ಯಾಟರಿಗೆ 3 ವರ್ಷ ಅಥವಾ 80,000 ಕಿಲೋಮೀಟರ್ವರೆಗೆ ವಾರಂಟಿಯೊಂದಿಗೆ ಬರುತ್ತವೆ. ಈ ವಾಹನದೊಂದಿಗೆ ಬರುವ 48V, 20Amp ಹೋಮ್ ಚಾರ್ಜರ್ ನಿಮ್ಮ ವಾಹನದ ಬ್ಯಾಟರಿಯನ್ನು ಕೇವಲ 4 ಗಂಟೆ 30 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡುತ್ತದೆ.
ಇದನ್ನೂ ಓದಿ: ಮಹೀಂದ್ರಾ ಇ-ಆಲ್ಫಾ ಪ್ಲಸ್ ಎಲೆಕ್ಟ್ರಿಕ್ ಥ್ರೀ ವೀಲರ್ ಬಿಡುಗಡೆ

eblu Cety ಇ-ರಿಕ್ಷಾ: ವೈಶಿಷ್ಟಗಳು
ಈಬ್ಲು ಸೆಟಿ ಇ-ರಿಕ್ಷಾ 2170 ಮಿಮೀ ವೀಲ್ಬೇಸ್, 993 ಮಿಮೀ ಅಗಲ, 2795 ಮಿಮೀ ಉದ್ದ ಮತ್ತು 1782 ಮಿಮೀ ಎತ್ತರವನ್ನು ಹೊಂದಿದೆ. ಈ ವಾಹನವು ಮುಂಭಾಗದಲ್ಲಿ ಡಿಸಿಪಿಡಿ ಹಾಗೂ ಹಿಂಭಾಗದಲ್ಲಿ ಶೀಟ್ ಮೆಟಲ್ ಬಾಡಿ ಹೊಂದಿದ್ದು, ಡ್ಯುಯಲ್ ಕಲರ್ ಬಾಡಿ ಪ್ಯಾನೆಲ್ಗಳೊಂದಿಗೆ ಬರಲಿದೆ. ಡ್ಯುಯಲ್ ಫ್ರಂಟ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಲೀಫ್ ಸ್ಪ್ರಿಂಗ್ಗಳನ್ನು ಒಳಗೊಂಡಿದ್ದು, 3.75 × 12 ಇಂಚಿನ ಟೈರ್ಗಳೊಂದಿಗೆ ಜೋಡಿಸಲಾದ ಡ್ರಮ್ ಬ್ರೇಕ್ ವ್ಯವಸ್ಥೆಯನ್ನು ಇದೆ ಒಳಗೊಂಡಿದೆ.
ಈ ವಾಹನದಲ್ಲಿನ ಹ್ಯಾಲೊಜೆನ್ ಲ್ಯಾಂಪ್ ದೀರ್ಘ ಮತ್ತು ಸ್ಪಷ್ಟ ನೋಟವನ್ನು ಒದಗಿಸುತ್ತದೆ ಮತ್ತು ಪಿಯು ಫೋಮ್ ಸೀಟ್ಗಳೊಂದಿಗೆ ಆರಾಮದಾಯಕ ಆಸನವನ್ನು ಒದಗಿಸುತ್ತದೆ. ಡ್ಯುಯಲ್ ಹೆಡ್ಲ್ಯಾಂಪ್ಗಳೊಂದಿಗೆ, ನೀವು ರಾತ್ರಿಯಲ್ಲಿ ಅಥವಾ ಕಡಿಮೆ-ಬೆಳಕಿನ ಪರಿಸ್ಥಿತಿಗಳಲ್ಲಿ ಉತ್ತಮ ಗೋಚರತೆಯನ್ನು ಒದಗಿಸುತ್ತವೆ. ಈ ವಾಹನವು ಕನಿಷ್ಠ 240 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ನೀಡುತ್ತದೆ, ಇದು ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಲು ಸೂಕ್ತವಾಗಿದೆ. ಜೊತೆಗೆ, ಇದು ಆಟೋಮೆಟಿಕ್ ವೈಪರ್ನೊಂದಿಗೆ ಬರುತ್ತದೆ.
ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್ನ ನಿರ್ದೇಶಕ ಮತ್ತು ಸಿಇಒ ಹೈದರ್ ಖಾನ್ ಅವರು, ವಿಶ್ವ ಇವಿ ದಿನದಂದು ಇಬ್ಲು ಸೆಟಿಯನ್ನು ಲೋಕಾರ್ಪಣೆ ಮಾಡುವ ಸಂದರ್ಭದಲ್ಲಿ ಮಾತನಾಡಿ, “ನಮ್ಮ ಕಂಪನಿಯು ಎಲ್ಲರಿಗೂ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಒದಗಿಸುವತ್ತ ಗಮನ ಹರಿಸುತ್ತಿದೆ. ಇಬ್ಲು ಸೆಟಿಯ ಉದ್ಘಾಟನೆಯ ಮೂಲಕ ನಾವು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬೆಂಬಲಿಸುತ್ತಿದ್ದೇವೆ ಮತ್ತು ಇಂಗಾಲ-ತಟಸ್ಥ ಚಲನಶೀಲತೆಯ ಗುರಿಯತ್ತ ಸಾಗುತ್ತಿದ್ದೇವೆ. ಇದು ನಮ್ಮ ಕಂಪನಿಯು ಸುಸ್ಥಿರ ಸಾರಿಗೆಯ ಭವಿಷ್ಯವನ್ನು ರೂಪಿಸಲು ಬದ್ಧವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ” ಎಂದು ಹೇಳಿದರು.