ಡುಕಾಟಿ(Ducati) ಕಂಪನಿಯು ಇತ್ತೀಚೆಗೆ ತನ್ನ ಮಲ್ಟಿಸ್ಟ್ರಾಡಾ ಸರಣಿಯನ್ನು ಹೊಸ ಆಯಾಮಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಮಲ್ಟಿಸ್ಟ್ರಾಡಾ V4 RS (Multistrada V4 RS) ಎಂಬ ಹೆಸರಿನ ಹೊಸ ಸ್ಪೋರ್ಟ್ಸ್-ಟೂರಿಂಗ್ ಬೈಕನ್ನು ಬಿಡುಗಡೆ ಮಾಡಿದೆ. 38,40,600 ರೂಪಾಯಿಗಳ (ಎಕ್ಸ್-ಶೋರೂಮ್) ಬೆಲೆಗೆ ಲಭ್ಯವಿರುವ ಈ ಬೈಕ್ ಅತ್ಯಾಧುನಿಕ ತಂತ್ರಜ್ಞಾನ, ಅದ್ಭುತ ಕಾರ್ಯಕ್ಷಮತೆ ಮತ್ತು ಆಕರ್ಷಕ ವಿನ್ಯಾಸವು ಪ್ರತಿಯೊಬ್ಬರ ಗಮನ ಸೆಳೆಯುವಂತಿದೆ.
ಈ ಬೈಕ್ ತನ್ನ ವಿನ್ಯಾಸ ಮತ್ತು ಕಾರ್ಬನ್ ಫೈಬರ್ ಹಾಗೂ ಟೈಟಾನಿಯಂನಂತಹ ಹಗುರವಾದ ವಸ್ತುಗಳ ಬಳಕೆಯಿಂದಾಗಿ ಗಮನ ಸೆಳೆಯುತ್ತದೆ. 17 ಇಂಚಿನ ಮಾರ್ಚೆಸಿನಿ ಅಲ್ಯೂಮಿನಿಯಂ ಚಕ್ರಗಳು ಮತ್ತು ಟೈಟಾನಿಯಂ ಸಬ್ಫ್ರೇಮ್ನಂತಹ ವೈಶಿಷ್ಟ್ಯಗಳು ಬೈಕಿನ ಒಟ್ಟಾರೆ ತೂಕವನ್ನು ಗಣನೀಯವಾಗಿ ಕಡಿಮೆ ಮಾಡಲು ಸಹಕಾರಿಯಾಗಿವೆ. ಪಿಲಿಯನ್ ಗ್ರ್ಯಾಬ್ ಹ್ಯಾಂಡಲ್ ಮತ್ತು ಟಾಪ್ ಬಾಕ್ಸ್ ಮೌಂಟಿಂಗ್ ಬ್ರಾಕೆಟ್ ಇಲ್ಲದೆ ನವೀಕರಿಸಲಾದ ಹಿಂದಿನ ವಿಭಾಗವು ತೂಕ ಕಡಿತದ ಪ್ರಯತ್ನಕ್ಕೆ ಮತ್ತಷ್ಟು ಶಕ್ತಿ ಸೇರಿಸಿದೆ. ಇದರ ಪರಿಣಾಮವಾಗಿ, V4 RS ಸಾಮಾನ್ಯ ಮಲ್ಟಿಸ್ಟ್ರಾಡಾ ಮಾದರಿಗಿಂತ 2.5 ಕೆಜಿ ಮತ್ತು ಪೈಕ್ಸ್ ಪೀಕ್(Pikes Peak) ಆವೃತ್ತಿಗಿಂತ 3 ಕೆಜಿ ಹಗುರವಾಗಿದೆ.
ಇದನ್ನೂ ಓದಿ: 2024 ಇಂಡಿಯನ್ ರೋಡ್ಮಾಸ್ಟರ್ ಎಲೈಟ್ ಬೆಲೆ 71.82 ಲಕ್ಷ ರೂಪಾಯಿ

ಮಲ್ಟಿಸ್ಟ್ರಾಡಾ ವಿ4 ಆರ್ಎಸ್ ಅತ್ಯಾಧುನಿಕ ತಂತ್ರಜ್ಞಾನದ ಸಂಯೋಜನೆಯಾಗಿದ್ದು, ರೈಡರ್ಗೆ ಅನುಕೂಲಕರವಾಗುವಂತೆ ವಿನ್ಯಾಸಗೊಳಿಸಲಾಗಿದೆ. ನಾಲ್ಕು ವಿಭಿನ್ನ ಪವರ್ ಮೋಡ್ಗಳು (ಫುಲ್, ಹೈ, ಮೀಡಿಯಂ, ಲೋ) ಮತ್ತು ನಾಲ್ಕು ರೈಡಿಂಗ್ ಮೋಡ್ಗಳು (ರೇಸ್, ಸ್ಪೋರ್ಟ್, ಟೂರಿಂಗ್, ಅರ್ಬನ್) ರೈಡರ್ಗೆ ತಮ್ಮ ಸವಾರಿ ಶೈಲಿ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಬೈಕ್ ಅನ್ನು ಹೊಂದಿಸಲು ಸಹಾಯ ಮಾಡಿಕೊಡುತ್ತದೆ. ಈ ಮೋಟಾರ್ಸೈಕಲ್ ಗಳಲ್ಲಿ ಎಂಜಿನ್ ಬ್ರೇಕಿಂಗ್ ಅನ್ನು ನಿಯಂತ್ರಿಸುವುದು. ಕಾರ್ನರಿಂಗ್ ಎಬಿಎಸ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ನ್ಯಾವಿಗೇಷನ್ ಮತ್ತು ಇತರ ಅನೇಕ ಹೈಟೆಕ್ ವೈಶಿಷ್ಟ್ಯಗಳೊಂದಿಗೆ ಸುರಕ್ಷತೆ ಮತ್ತು ಸೌಕರ್ಯವನ್ನು ಹೆಚ್ಚಿಸಲಾಗಿದೆ.
ಈ ಡುಕಾಟಿ(Ducati) ಬೈಕ್ ಅಲ್ಯೂಮಿನಿಯಂ ಮೊನೊಕೊಕ್ ಫ್ರೇಮ್ ಅನ್ನು ಹೊಂದಿದ್ದು, ಮುಂಭಾಗದಲ್ಲಿ ಟೈಟಾನಿಯಂ ನೈಟ್ರೈಡ್ ಕೋಟಿಂಗ್ ಮಾಡಲಾದ 48 ಎಂಎಂ ಗಾತ್ರದ ಓಹ್ಲಿನ್ಸ್ ಫೋರ್ಕ್ಗಳಿಂದ ರಚಿಸಲ್ಪಟ್ಟಿದೆ, ಹಿಂಭಾಗದಲ್ಲಿ, ಇದು ಸಂಪೂರ್ಣವಾಗಿ ಕಸ್ಟಮೈಸ್ ಮಾಡಬಹುದಾದ ಓಹ್ಲಿನ್ಸ್ TTX36 ಮೊನೊ ಶಾಕ್ ಅನ್ನು ಹೊಂದಿದೆ. ಬ್ರೇಕಿಂಗ್ಗಾಗಿ, ಇದು ಮುಂಭಾಗದಲ್ಲಿ ಡ್ಯುಯಲ್ 330 ಎಂಎಂ ಅರೆ-ಫ್ಲೋಟಿಂಗ್ ಡಿಸ್ಕ್ಗಳೊಂದಿಗೆ ರೇಡಿಯಲಿ-ಮೌಂಟೆಡ್ ಬ್ರೆಂಬೊ ಸ್ಟೈಲೆಮಾ ಮೊನೊಬ್ಲಾಕ್ ಕ್ಯಾಲಿಪರ್ಗಳು ಮತ್ತು ಹಿಂಭಾಗದಲ್ಲಿ 265 ಎಂಎಂ ಡಿಸ್ಕ್ನೊಂದಿಗೆ ಬ್ರೆಂಬೊ ಎರಡು-ಪಿಸ್ಟನ್ ಫ್ಲೋಟಿಂಗ್ ಕ್ಯಾಲಿಪರ್ ಅನ್ನು ಹೊಂದಿದೆ.
ಇದನ್ನೂ ಓದಿ: Kawasaki Ninja ZX 4RR ಬೈಕ್ ರೂ 9.10 ಲಕ್ಷಕ್ಕೆ ಬಿಡುಗಡೆ
ಡುಕಾಟಿ ಮಲ್ಟಿಸ್ಟ್ರಾಡಾ V4 RS (Ducati Multistrada V4 RS): ಎಂಜಿನ್
ಮಲ್ಟಿಸ್ಟ್ರಾಡಾ V4 RS ಬೈಕಿನಲ್ಲಿ 1,103 ಸಿಸಿ ಸಾಮರ್ಥ್ಯದ ಡೆಸ್ಮೋಸೆಡಿಸಿ ಸ್ಟ್ರಾಡೇಲ್ ವಿ4 (Desmosedici Stradale V4)ಎಂಜಿನ್ ಅನ್ನು ಅಳವಡಿಸಲಾಗಿದೆ. ಇದು 12,250 ಆರ್ಪಿಎಂನಲ್ಲಿ 180 ಬಿಹೆಚ್ಪಿ ಶಕ್ತಿಯನ್ನೂ ಮತ್ತು 9,500 ಆರ್ಪಿಎಂನಲ್ಲಿ 118 ಎನ್ಎಂ ಟಾರ್ಕ್ನ್ನೂ ಉತ್ಪಾದಿಸುತ್ತದೆ. ಈ ವಿಶೇಷತೆಗಳೊಂದಿಗೆ, ಇದು 170 ಬಿಹೆಚ್ಪಿ ಮತ್ತು 125 ಎನ್ಎಂ ಉತ್ಪಾದಿಸುವ ಗ್ರಾಂಟುರಿಸ್ಮೊ ವಿ4 (Granturismo V4) ಎಂಜಿನ್ ಅನ್ನು ಮೀರಿಸುವ ಅತ್ಯಂತ ಶಕ್ತಿಶಾಲಿ ಅಡ್ವೆಂಚರ್ ಬೈಕ್ ಆಗಿದೆ. ವೇಗ ಮತ್ತು ಚುರುಕುತನಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಶಕ್ತಿ ಹೆಚ್ಚಳಕ್ಕೆ ಅನುಗುಣವಾಗಿ ಟಾರ್ಕ್ ಸ್ವಲ್ಪ ಕಡಿಮೆಯಾಗಿದೆ.