ಚೀನಾದ ವಿದ್ಯುತ್ ವಾಹನ ಕಂಪನಿಗಳು (Chinese EV companies) ವಿಶ್ವದ ವಿವಿಧ ದೇಶಗಳಲ್ಲಿ ತಮ್ಮ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಯೋಜನೆ ಹಾಕಿಕೊಂಡಿವೆ. ಈ ಹಿನ್ನೆಲೆಯಲ್ಲಿ, ಚೀನಾ ಸರ್ಕಾರವು ಈ ಕಂಪನಿಗಳೊಂದಿಗೆ ಸಭೆ ನಡೆಸಿ, ವಿದೇಶಗಳಲ್ಲಿ, ವಿಶೇಷವಾಗಿ ಭಾರತದಂತಹ ದೇಶಗಳಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವಾಗ ತಮ್ಮ ಕೋರ್ ತಂತ್ರಜ್ಞಾನವನ್ನು ಹಂಚಿಕೊಳ್ಳದಂತೆ ಸೂಚಿಸಿದೆ. ಬದಲಾಗಿ, ವಿದ್ಯುತ್ ವಾಹನಗಳ ಪ್ರಮುಖ ಘಟಕಗಳನ್ನು ಚೀನಾದಲ್ಲಿಯೇ ಉತ್ಪಾದಿಸಿ, ವಿದೇಶಗಳಲ್ಲಿ ಕೇವಲ ಅಂತಿಮ ಸರಕುಗಳನ್ನು ಜೋಡಿಸುವ ಕೆಲಸವನ್ನು ಮಾತ್ರ ಮಾಡಬೇಕೆಂದು ನಿರ್ದೇಶನ ನೀಡಿದೆ.
ವಿಶ್ವದ ವಿದ್ಯುತ್ ವಾಹನ ಕ್ಷೇತ್ರದಲ್ಲಿ ಚೀನಾ ದೇಶ ಅಗ್ರಗಣ್ಯ ಸ್ಥಾನವನ್ನು ಸಂಪಾದಿಸಿದೆ. ಪ್ರಸಿದ್ಧ ವಿದೇಶಿ ಕಂಪನಿಗಳಾದ ಟೆಸ್ಲಾ ಕೂಡ ಚೀನೀ ಕಂಪನಿಗಳ ಸ್ಪರ್ಧೆಯನ್ನು ಎದುರಿಸಲು ಹರಸಾಹಸ ಪಡುತ್ತಿರುವ ಸನ್ನಿವೇಶ ಇದಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಿರುವ ಚೀನೀ ವಿದ್ಯುತ್ ವಾಹನ ತಯಾರಕರು ಈಗಾಗಲೇ ವಿಶ್ವದ ಇತರ ದೇಶಗಳತ್ತ ತಮ್ಮ ವ್ಯಾಪಾರವನ್ನು ವಿಸ್ತರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಚೀನಾ ಸರ್ಕಾರವು ತನ್ನ ದೇಶದ ವಿದ್ಯುತ್ ವಾಹನ ಕಂಪನಿಗಳಿಗೆ ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ತಯಾರಿಕಾ ಘಟಕಗಳನ್ನು ಸ್ಥಾಪಿಸುವಾಗ, ತಮ್ಮ ತಂತ್ರಜ್ಞಾನದ ಗುಟ್ಟುಗಳನ್ನು ಬಹಿರಂಗಪಡಿಸಬಾರದು ಎಂಬುದು ಈ ನಿರ್ಬಂಧಗಳಲ್ಲಿ ಪ್ರಮುಖವಾಗಿದೆ.
ಜುಲೈನಲ್ಲಿ, ಚೀನಾದ ವಾಣಿಜ್ಯ ಸಚಿವಾಲಯವು ಹತ್ತುಕ್ಕೂ ಹೆಚ್ಚು ವಾಹನ ತಯಾರಕ ಕಂಪನಿಗಳ ಪ್ರತಿನಿಧಿಗಳನ್ನು ಒಂದು ಸಭೆಯಲ್ಲಿ ಭಾಗವಹಿಸಲು ಕರೆದಿತ್ತು. ಈ ಸಭೆಯಮುಖ್ಯ ಉದ್ದೇಶವೆಂದರೆ, ತಮ್ಮ ದೇಶದಲ್ಲಿ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ವಿದ್ಯುತ್ ವಾಹನ ತಂತ್ರಜ್ಞಾನವು ಇತರ ದೇಶಗಳಿಗೆ ವರ್ಗಾವಣೆಯಾಗದಂತೆ ತಡೆಯುವುದು. ಈ ನಿಟ್ಟಿನಲ್ಲಿ, ಸರ್ಕಾರವು ಕೆಲವು ನಿರ್ದಿಷ್ಟ ಮಾರ್ಗಸೂಚಿಗಳನ್ನು ನೀಡಿತು.
ಭಾರತದಲ್ಲಿ ವಾಹನ ತಯಾರಿಕಾ ಘಟಕಗಳನ್ನು ಸ್ಥಾಪಿಸುವ ಚೀನೀ ಕಂಪನಿಗಳಿಗೆ, ಕಾರಿನ ಪ್ರಮುಖ ಭಾಗಗಳನ್ನು ಚೀನಾದಲ್ಲಿಯೇ ತಯಾರಿಸಿ, ಅವುಗಳನ್ನು ಭಾರತಕ್ಕೆ ಕಳುಹಿಸುವಂತೆ ಸೂಚಿಸಲಾಗಿದೆ. ಈ ಭಾಗಗಳನ್ನು ಇಲ್ಲಿ ಜೋಡಿಸುವ ಮೂಲಕ, ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಬಹುದು ಎಂಬುದು ಈ ಸಲಹೆಯ ಹಿಂದಿನ ಕಾರಣ
ಚೀನಾ ಸರ್ಕಾರವು (China Government) ಹೊರಡಿಸಿರುವ ಈ ಮಾರ್ಗಸೂಚಿಗಳು ಭಾರತ ಮಾತ್ರವಲ್ಲದೆ, ಟರ್ಕಿ ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ಅನ್ವಯವಾಗುವಂತೆ ರೂಪಿಸಲಾಗಿದೆ. ವಿದ್ಯುತ್ ವಾಹನ ತಂತ್ರಜ್ಞಾನದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿರುವ ಬಿವೈಡಿ(BYD), ಚೆರಿ(Chery) ಮುಂತಾದ ಚೀನೀ ವಾಹನ ಕಂಪನಿಗಳು ಸ್ಪೇನ್, ಥಾಯ್ಲೆಂಡ್, ಹಂಗೇರಿ ಮುಂತಾದ ದೇಶಗಳಲ್ಲಿ ತಮ್ಮ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಯೋಜನೆ ಹೊಂದಿವೆ. ಭಾರತದಲ್ಲೂ ಬಿವೈಡಿ ಕಂಪನಿ ತನ್ನ ಉತ್ಪಾದನಾ ಘಟಕ ಸ್ಥಾಪಿಸಲು ಆಸಕ್ತಿ ತೋರಿದೆಯಾದರೂ, ಸರ್ಕಾರದ ಅಂತಿಮ ಅನುಮತಿ ಇನ್ನೂ ದೊರೆತಿಲ್ಲ.
ಇದನ್ನೂ ಓದಿ: ಒಂದೇ ದಿನದಲ್ಲಿ200 BYD SEAL ಎಲೆಕ್ಟ್ರಿಕ್ ಐಷಾರಾಮಿ ಸೆಡಾನ್ಗಳನ್ನು ವಿತರಿಸಲಾಗೀದೆ