Bajaj Chetak 2901 ಆವೃತ್ತಿಯು ಈಗ ಬ್ಲೂಟೂತ್ನೊಂದಿಗೆ ಬರುತ್ತದೆ ಮತ್ತು 123ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ
ಬಜಾಜ್ ಆಟೋ ಹೊಸ ಬಜಾಜ್ ಚೇತಕ್ 2901 (Bajaj Chetak 2901) ಬಿಡುಗಡೆಯೊಂದಿಗೆ ತನ್ನ ಎಲೆಕ್ಟ್ರಿಕ್ ಸ್ಕೂಟರ್ಗಳ ಶ್ರೇಣಿಯನ್ನು ವಿಸ್ತರಿಸಿದೆ. ಇದರ ಬೆಲೆ ರೂ 95,998 (ಎಕ್ಸ್-ಶೋ ರೂಂ), ಈ ಇತ್ತೀಚಿನ ಮಾದರಿಯು ಗಟ್ಟಿಮುಟ್ಟಾದ ಬಾಡಿ ಮತ್ತು ಸುಧಾರಿತ ತಂತ್ರಜ್ಞಾನವನ್ನು ಹೊಂದಿದೆ, ಇದು ಸಾಂಪ್ರದಾಯಿಕ ಮತ್ತು ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಆನಂದಿಸುವ ಸವಾರರನ್ನು ಆಕರ್ಷಿಸುತ್ತದೆ. ಮತ್ತು ಚೇತಕ್ 2901 ಎಲೆಕ್ಟ್ರಿಕ್ ಬೈಕ್ ಅನ್ನು ದೈನಂದಿನ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು 123ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. ನಿಮ್ಮ ವೈಯಕ್ತಿಕ ಶೈಲಿಗೆ ಸರಿಹೊಂದುವಂತೆ ಕೆಂಪು(Red), ಬಿಳಿ(White), ಕಪ್ಪು(Black), ನಿಂಬೆ ಹಳದಿ(Lime Yellow) ಮತ್ತು ಆಕಾಶ ನೀಲಿ(Azure Blue) ಸೇರಿದಂತೆ ವಿವಿಧ ಬಣ್ಣಗಳಲ್ಲಿ ಲಭ್ಯವಿದೆ.
ಬಜಾಜ್ ಚೇತಕ್ 2901 ವಿಶೇಷತೆಗಳು
ಬಜಾಜ್ ಚೇತಕ್ 2901 ಅಲಾಯ್ ವಿಲ್ ಮತ್ತು ಬ್ಲೂಟೂತ್ ಮೂಲಕ ಸಂಪರ್ಕಿಸುವ ವರ್ಣರಂಜಿತ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ನೊಂದಿಗೆ ಬರುತ್ತದೆ, ಇದು ನಿಮ್ಮ ಸವಾರಿಯನ್ನು ಹೆಚ್ಚು ಆರಾಮದಾಯಕ ಮತ್ತು ಅನುಕೂಲಕರವಾಗಿಸುತ್ತದೆ. ಹೆಚ್ಚುವರಿಯಾಗಿ 3,000 ರೂಗಳಿಗೆ, ನೀವು ಟೆಕ್ಪ್ಯಾಕ್(TecPac)ನೊಂದಿಗೆ ನಿಮ್ಮ ಅನುಭವವನ್ನು ಹೆಚ್ಚಿಸಿಕೊಳ್ಳಬಹುದು, ಇದರಲ್ಲಿ ಹಿಲ್ ಹೋಲ್ಡ್, ರಿವರ್ಸ್ ಅಸಿಸ್ಟೆನ್ಸ್, ಕಾಲ್ ಮತ್ತು ಮ್ಯೂಸಿಕ್ ಕಂಟ್ರೋಲ್ ಸ್ಪೋರ್ಟ್ ಮತ್ತು ಇಕೋ ಮೂಡ್ ಡ್ರೈವಿಂಗ್ ಆಯ್ಕೆಗಳು, ಜಿಯೋ-ಫೆನ್ಸಿಂಗ್, ಫಾಲೋ ಮಿ ಹೋಮ್ ಲೈಟ್ಸ್ ಮತ್ತು ಬ್ಲೂಟೂತ್ ಅಪ್ಲಿಕೇಶನ್ ಸಂಪರ್ಕದಂತಹ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

Bajaj Chetak 2901 ಎಲೆಕ್ಟ್ರಿಕ್ ಸ್ಕೂಟರ್(electric scooter) 2.9 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಈ ಬ್ಯಾಟರಿ ಅರ್ಬನ್ ಆವೃತ್ತಿಯಲ್ಲಿ ಬಳಸಲ್ಪಟ್ಟಿದೆ. ಹಾಗೂ ಈ ಸ್ಕೂಟರ್ ಗಂಟೆಗೆ 63 ಕಿಲೋಮೀಟರ್ ವೇಗವನ್ನು ತಲುಪಬಹುದು. ಇದು ಸ್ಟ್ಯಾಂಡರ್ಡ್ ವೈಶಿಷ್ಟ್ಯವಾಗಿ ಇಕೋ ಮೋಡ್ನೊಂದಿಗೆ ಬರುತ್ತದೆ. ನೀವು ಟೆಕ್ಪ್ಯಾಕ್(TecPac) ಅನ್ನು ಆಯ್ಕೆ ಮಾಡಿದರೆ, ನಿಮಗೆ ಸ್ಪೋರ್ಟ್ ಮೂಡ್ ಡ್ರೈವಿಂಗ್ ಇರುತ್ತದೆ. ಸ್ಕೂಟರ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು ಆರು ಗಂಟೆಗಳು ಬೇಕಾಗುತ್ತದೆ, ಇದು ನಿಮಗೆ 123ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. ಹಾಗೂ ಈ ಸ್ಕೂಟರ್ ಆಫ್-ಬೋರ್ಡ್ ಚಾರ್ಜರ್ ಅನ್ನು ಹೊಂದಿದ್ದು, ವಾಟರ್ ರೆಸಿಸ್ಟನ್ಸ್ ಗಾಗಿ(water resistance) IP67 ರೇಟಿಂಗ್ ಅನ್ನು ಹೊಂದಿದೆ.
ಬಜಾಜ್ ಆಟೋದ ಅರ್ಬನೈಟ್ ಅಧ್ಯಕ್ಷ ಎರಿಕ್ ವಾಸ್ ಮಾತನಾಡಿ, ಪೆಟ್ರೋಲ್ ಸ್ಕೂಟರ್ ಖರೀದಿದಾರರನ್ನು ತಮ್ಮ ಬಜೆಟ್ ಅನ್ನು ವಿಸ್ತರಿಸದೆ ಆಕರ್ಷಿಸಲು ಚೇತಕ್ 2901 ಅನ್ನು ರಚಿಸಲಾಗಿದೆ ಮತ್ತು ಬೆಲೆಯನ್ನು ನಿಗದಿಪಡಿಸಲಾಗಿದೆ. ಜೂನ್ 15 ರಿಂದ ಸ್ಕೂಟರ್ಗಳು ಖರೀದಿಗೆ ಲಭ್ಯವಿರುತ್ತವೆ. ಬಜಾಜ್ ತನ್ನ ಡೀಲರ್ ಜಾಲವನ್ನು ವಿಸ್ತರಿಸಿದ್ದು, ದೇಶಾದ್ಯಂತ 500ಕ್ಕೂ ಹೆಚ್ಚು ಶೋರೂಮ್ಗಳು ಈಗ ಚೇತಕ್ ಸ್ಕೂಟರ್ಗಳನ್ನು ಮಾರಾಟ ಮಾಡುತ್ತಿವೆ.