ಈ ಫೇಸ್‌ಲಿಫ್ಟ್ ಆಡಿ ಕ್ಯೂ8 ಫೇಸ್‌ಲಿಫ್ಟ್ ಬೆಲೆಗಳು ರೂ. 1.17 ಕೋಟಿಯಿಂದ ಪ್ರಾರಂಭವಾಗುತ್ತವೆ
ಐಷಾರಾಮಿ ಕಾರುಗಳ ಪ್ರಿಯರಿಗೆ ಸಂತಸದ ಸುದ್ದಿ! ಆಡಿ ಇಂಡಿಯಾ ತನ್ನ ಪ್ರತಿಷ್ಠಿತ ಕ್ಯೂ8 ಎಸ್‌ಯುವಿಯನ್ನು ಇನ್ನಷ್ಟು ಆಕರ್ಷಕವಾಗಿ ಮಾಡಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. 2023ರ ಸೆಪ್ಟೆಂಬರ್‌ನಲ್ಲಿ ಜಾಗತಿಕವಾಗಿ ಪರಿಚಯವಾದ ಈ ಫೇಸ್‌ಲಿಫ್ಟ್ ಮಾದರಿಯು ಈಗ ಭಾರತಕ್ಕೆ ಕಾಲಿಟ್ಟಿದೆ. ಆಡಿ ಕ್ಯೂ8(Audi Q8) ಇತ್ತೀಚೆಗೆ ತನ್ನ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದೆ ಮತ್ತು ಕೆಲವು ಹೊಸ ಟೆಕ್ನಾಲಜಿಗಳನ್ನುಗಳನ್ನು ಪಡೆದುಕೊಂಡಿದೆ. ಈ ವಾಹನದ ಎಕ್ಸ್ ಶೋರೂಂ ಬೆಲೆ ರೂ. 1.17 ಕೋಟಿ ರೂಪಾಯಿ (ಎಕ್ಸ್-ಶೋರೂಂ) ಆಗಿದೆ. ಈ ಫೇಸ್‌ಲಿಫ್ಟ್ ಆಡಿ ಕ್ಯೂ8 ಹಿಂದಿನ ಮಾದರಿಗಿಂತ 10 ಲಕ್ಷ ರೂಪಾಯಿ ಹೆಚ್ಚು ಬೆಲೆಯದಾಗಿದೆ. ಈ ಮಾದರಿಯ ಬುಕ್ಕಿಂಗ್‌ಗಳನ್ನು ಆಡಿ ಕಂಪನಿ ಈ ತಿಂಗಳ ಆರಂಭದಲ್ಲಿ ಪ್ರಾರಂಭಿಸಿದೆ
ಆಡಿ ಕ್ಯೂ8 ಫೇಸ್‌ಲಿಫ್ಟ್: ಇಂಟೀರಿಯ್ & ಎಕ್ಸ್ಟೀರಿಯರ್
ಆಡಿ ಕ್ಯೂ8(Audi Q8) ಫೇಸ್‌ಲಿಫ್ಟ್‌ಗೆ ಸ್ಟೈಲಿಶ್ ಮೇಕೋವರ್ ಸಿಕ್ಕಿದೆ. ಹೆಡ್‌ಲೈಟ್‌ಗಳು ಈಗ ಹೈ ಬೀಮ್‌ಗಾಗಿ ಲೇಸರ್ ಅಸಿಸ್ಟೆನ್ಸ್‌ನೊಂದಿಗೆ HD ಮ್ಯಾಟ್ರಿಕ್ಸ್ LED ಲೈಟ್‌ಗಳಾಗಿವೆ. ಹೊಸ ಸಿಂಗಲ್-ಫ್ರೇಮ್ ಗ್ರಿಲ್‌ಗೆ ಆಕ್ಟಗೊನಲ್ ಓಪೆನಿಂಗ್ ಮತ್ತು ‘L’ ಆಕಾರದ ಇನ್‌ಸರ್ಟ್‌ಗಳನ್ನು ಸೇರಿಸಲಾಗಿದೆ. SUV ಗೆ ಅಪ್‌ಡೇಟ್ ಮಾಡಿದ ಮುಂಭಾಗ ಮತ್ತು ಹಿಂಭಾಗ ಬಂಪರ್‌ಗಳು, ಸ್ಲೀಕ್ 21-ಇಂಚಿನ ಅಲಾಯ್ ವೀಲ್‌ಗಳು ಮತ್ತು ಆಧುನಿಕ ಡಿಜಿಟಲ್ OLED ಹಿಂಭಾಗದ ಲೈಟ್‌ಗಳೊಂದಿಗೆ ಹೊಸ ನೋಟ ಸಿಕ್ಕಿದೆ. ನೀವು ಸಖರ್ ಗೋಲ್ಡ್, ವೈಟೊಮೊ ಬ್ಲೂ, ಮಿಥೋಸ್ ಬ್ಲ್ಯಾಕ್, ಸಮುರಾಯ್ ಗ್ರೇ, ಗ್ಲೇಸಿಯರ್ ವೈಟ್, ಸ್ಯಾಟಲೈಟ್ ಸಿಲ್ವರ್, ಟ್ಯಾಮರಿಂಡ್ ಬ್ರೌನ್ ಮತ್ತು ವಿಕುನಾ ಬೀಜ್ ಈ ಎಂಟು ವಿಭಿನ್ನ ಬಣ್ಣಗಳಲ್ಲಿ ಆಯ್ಕೆ ಮಾಡಬಹುದು.

ಹೊಸ ಮಾದರಿಯ ಇಂಟೀರಿಯರ್ ಕೆಲವು ಹೆಚ್ಚುವರಿ ಫೀಚರ್‌ಗಳೊಂದಿಗೆ ಹಿಂದಿನ ಮಾದರಿಯನ್ನು ಹೋಲುತ್ತದೆ, ಸೀಟುಗಳ ಮೇಲೆ ಹೊಸ ಸ್ಟಿಚಿಂಗ್ ಅನ್ನು ಕಾಣಬಹುದಾಗಿರುತ್ತದೆ ಮತ್ತು ಇಂಟೀರಿಯರ್ ನಲ್ಲಿ ಒಕಾಪಿ ಬ್ರೌನ್, ಸೈಗಾ ಬೀಜ್, ಬ್ಲ್ಯಾಕ್ ಮತ್ತು ಪಾಂಡೋ ಗ್ರೇ ಈ ನಾಲ್ಕು ಬಣ್ನಗಳ ಆಯ್ಕೆಯನ್ನು ಪಡೆಯಬಹುದಾಗಿರುತ್ತದೆ. ಇದರೊಂದಿಗೆ Audi ನ ಡ್ಯುಯಲ್ MMI ಟಚ್‌ಸ್ಕ್ರೀನ್‌ಗಳು, ನಾಲ್ಕು-ಝೋನ್ ಕ್ಲೈಮೆಂಟ್ ಕಂಟ್ರೋಲ್ ವ್ಯವಸ್ಥೆ, 360-ಡಿಗ್ರಿ ಸರೌಂಡ್ ವ್ಯೋವ್ ಕ್ಯಾಮೆರಾ, ADAS ಸೂಟ್, ಪನೋರಮಿಕ್ ಸನ್‌ರೂಫ್, ಹೆಡ್-ಅಪ್ ಡಿಸ್ಪ್ಲೇ, ಆರಾಮದಾಯಕವಾದ ಸೀಟುಗಳು ಹಾಗೂ ಸೀಟುಗಳನ್ನು ಬಿಸಿಯಾಗಿಸುವ ಮತ್ತು ತಂಪಾಗಿಸುವ ವೈಶಿಷ್ಟ್ಯಗಳು, ಮಸಾಜ್ ಪಂಕ್ಷನ್‌ಗಳು ಮತ್ತು ಅತ್ಯುತ್ತಮ Bang & Olufsen ಮ್ಯೂಸಿಕ್ ಸಿಸ್ಟಮ್ ನಂತಹ ವಿವಿಧ ವೈಶಿಷ್ಟ್ಯಗಳು ಸಹಾ ಇರುತ್ತವೆ.
ಇದನ್ನೂ ಓದಿ: ಆಡಿ ಕ್ಯೂ5 ಬೋಲ್ಡ್ ಎಡಿಷನ್ ರೂ. 72.30 ಲಕ್ಷಕ್ಕೆ ಬಿಡುಗಡೆ
Audi Q8 Facelift: ಎಂಜಿನ್
ಆಡಿ ಕ್ಯೂ8(Audi Q8) ವಾಹನದಲ್ಲಿ ವಿಶ್ವದಾದ್ಯಂತ ವಿವಿಧ ರೀತಿಯ ಎಂಜಿನ್‌ಗಳನ್ನು ಬಳಸಲಾಗಿದ್ದರೂ, ಭಾರತದಲ್ಲಿ 3.0-ಲೀಟರ್ V6 TFSI ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿದೆ. ಈ ಎಂಜಿನ್ 345 ಹಾಸ್‌೯ ಪವರ್ ಮತ್ತು 500 Nm ಟಾರ್ಕ್‌ನೊಂದಿಗೆ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಇದು ಕೇವಲ 5.6 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ/ಗಂ ವೇಗವನ್ನು ಮತ್ತು ಗರಿಷ್ಠ 250 ಕಿಮೀ/ಗಂ ವೇಗವನ್ನು ಸಾಧಿಸುವ ಸಾಮರ್ಥ್ಯ ಹೊಂದಿದೆ.