Audi: ಆಡಿ ಕ್ಯೂ5 ಬೋಲ್ಡ್ ಎಡಿಷನ್ ರೂ. 72.30 ಲಕ್ಷಕ್ಕೆ ಬಿಡುಗಡೆ

Audi ಕ್ಯೂ5 ಬೋಲ್ಡ್ ಎಡಿಷನ್‌ನಲ್ಲಿ ಯಾವುದೇ ಮೆಕ್ಯಾನಿಕಲ್‌ ಚೇಂಜಸ್‌  ಇರುವುದಿಲ್ಲ, ಆದರೆ ಇದು ಕೆಲವೊಂದು ಕಾಸ್ಮಟಿಕ್‌ ಅಪ್‌ಗ್ರೇಡ್‌ ಗಳನ್ನುಒಳಗೊಂಡಿದೆ.

Audi India  ತನ್ನ ಕ್ಯೂ5 ಬೋಲ್ಡ್ ಎಡಿಷನ್ ಕಾರು ಅನ್ನು ಪರಿಚಯಿಸಿದೆ, ಇದು ಕ್ಯೂ5 ನ ಹೊಸ ವಷ೯ನ್‌ ಆಗಿದೆ ಮತ್ತು ಇದು ನಿರ್ದಿಷ್ಟ ಸಮಯಕ್ಕೆ ಮಾತ್ರ ಲಭ್ಯವಿದ್ದು ಇದರ ಬೆಲೆ ₹72.30 ಲಕ್ಷ (ಎಕ್ಸ್-ಶೋರೂಮ್, ಇಂಡಿಯಾ) ಆಗಿರುತ್ತದೆ. ಕ್ಯೂ5 ಬೋಲ್ಡ್ ಎಡಿಷನ್ ಮೆಕ್ಯಾನಿಕಲ್‌ ಚೇಂಜಸ್‌  ಇರುವುದಿಲ್ಲ, ಆದರೆ ಕೆಲವು ಕಾಸ್ಮಟಿಕ್‌ ಅಪ್‌ಗ್ರೇಡ್‌ಗಳನ್ನು ಒಳಗೊಂಡಿದೆ. ಇದು ಟಾಪ್‌ ಎಂಡ್ ಕ್ಯೂ5 ಮಾಡೆಲ್ ಗೆ ಹೋಲಿಸಿದರೆ ಅದಕ್ಕಿಂತ ರೂ 1.50 ಲಕ್ಷಗಳಷ್ಟು ಹೆಚ್ಚು ಬೆಲೆಯದಾಗಿದೆ.

ಆಡಿ ಕ್ಯೂ5 ಬೋಲ್ಡ್ ಎಡಿಷನ್ ಫೀಚರ್‌ಗಳು

ಈ ಹೊಸ ಕಾರು ಹೆಚ್ಚು ಸ್ಟೈಲಿಷ್‌ ಆಗಿದ್ದು ಇದರಲ್ಲಿ ಆಡಿ ಲೊಗೋಗಳು, ವಿಂಡೂಸರೌಂಡ್ ಗಳು, ಫ್ರೊಂಟ್‌ ಗ್ರಿಲ್  ಮತ್ತು ರೂಫ್‌ ರೈಲ್ಸ್ ನಂತಹ ವಿಶೇಷ ಫೀಚರ್‌ ಗಳಿರುತ್ತವೆ. ಈ ವಿಶೇಷ SUV ಮಾಡೆಲ್‌  ಎಕ್ಸ್ಲೂಸಿವ್‌ ಆಗಿದ್ದು ನಿರ್ದಿಷ್ಟ ಸಮಯಕ್ಕೆ ಮಾತ್ರ ಲಭ್ಯವಿರುತ್ತದೆ. ಇದು ಗ್ಲೇಷಿಯರ್‌ ವೈಟ್‌, ನವ್ವಾರ್‌ ಬ್ಲೂ, ಮಿಥೋಸ್‌ ಬ್ಲಾಕ್‌, ಡಿಸ್ಟರಿಕ್‌ ಗ್ರೀನ್‌ ಮತ್ತು ಮನ್ನಹತ್ತನ್‌ ಗ್ರೆ, ಈ ಐದು ಬಣ್ಣಗಳಲ್ಲಿ ಲಭ್ಯವಿರುತ್ತದೆ.

Q5 ಬೋಲ್ಡ್ ಎಡಿಷನ್‌ನಲ್ಲಿ 10.1-ಇಂಚು ಇನ್ಫೋಟೈನ್ಮೆಂಟ್ ಟಚ್‌ಸ್ಕ್ರೀನ್, 12.3-ಇಂಚು ಡಿಜಿಟಲ್ ಸಾಧನ ಕ್ಲಸ್ಟರ್, ವೈರ್‌ಲೆಸ್ ಚಾರ್ಜರ್, 19-ಬ್ಯಾಂಗ್ & ಓಲಫ್‌ಸೆನ್ ಆಡಿಯೋ ಸಿಸ್ಟಮ್, ಮೂರು-ಝೋನ್ ಕ್ಲೈಮೇಟ್ ಕಂಟ್ರೋಲ್, ಅಂಬಿಯಂಟ್ ಲೈಟಿಂಗ್, ಪ್ಯಾನೋರಾಮಿಕ್ ಸನ್‌ರೂಫ್ ಮತ್ತು ಇತರ ಫೀಚರ್‌ಗಳು ಲಭ್ಯವಿರುತ್ತವೆ. ಸುರಕ್ಷತೆ ದೃಷ್ಟಿಯಿಂದ, ಈ ಕಾರು 8 ಏರ್‌ಬ್ಯಾಗ್‌ಗಳನ್ನು, 360-ಡಿಗ್ರಿ ಕ್ಯಾಮೆರಾ, ESC ಮತ್ತು ಇತರ ಸೇಫ್ಟಿ ಫೀಚರ್‌ಗಳನ್ನು ಒದಗಿಸುತ್ತದೆ.

Audi Q5 Bold Edition: ಪವರ್‌ ಟ್ರೈನ್

ಕ್ಯೂ5 ಬೋಲ್ಡ್ ಎಡಿಷನ್ ಕಾರು 2.0-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿದೆ, ಇದು 261 ಹೆಚ್‌ಪಿಯ ಶಕ್ತಿಯನ್ನು ಮತ್ತು 370 Nm ಟಾರ್ಕ್ ಅನ್ನು ಉತ್ಪತ್ತಿ ಮಾಡುತ್ತದೆ. ಇದು 7- ಸ್ಪೀಡ್‌ ಡುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ಬಳಸುತ್ತದೆ, ಆಡಿಯು ಪ್ರಕಾರ, ಇದು 0 ರಿಂದ 100 kmph ನ್ನು ಕೇವಲ 6.1 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ ಹಾಗೂ ಸುಮಾರು 240 kmph ರಷ್ಟು ವೇಗವಾಗಿ ಚಲಿಸಬಹುದಾಗಿರುತ್ತದೆ.

ಆಡಿ ಇಂಡಿಯಾದ ಉಸ್ತುವಾರಿ ಬಾಲಬೀರ್ ಸಿಂಗ್ ಧಿಲ್ಲಾನ್ ರವರು ” ವಿಶೇಷ ಬೋಲ್ಡ್ ಎಡಿಷನ್  ಇಂದಿನ ದಿನಗಳಲ್ಲಿನ  ಗ್ರಾಹಕರ ಯುನಿಕ್ ಬೇಡಿಕೆಗಳಿಗನುಗುಣವಾಗಿದ್ದು  ಈ  ಕಾರಿನಲ್ಲಿ ಪಸ೯ನಲೈಸ್ಡ್‌ ಟಚ್ಚಸ್ ಮತ್ತು ಟಾಪ್-ನಾಚ್‌ ಫೀಚರ್ಗಳನ್ನು ಪಡೆಯಬಹುದಾಗಿರುತ್ತದೆ, ಮತ್ತು ಆಡಿಯು ಕ್ಯೂ5 ಎಂದಿಗೂ ನಮ್ಮ ಟಾಪ್-ಸೆಲಿಂಗ್ ಮಾಡೆಲ್‌ಗಳಲ್ಲಿ ಒಂದಾಗಿದ್ದು, ಈ ಹೊಸ ಬೋಲ್ಡ್ ಎಡಿಷನ್ ಹೆಚ್ಚಿನ ಖರೀದಿದಾರರನ್ನು ಮತ್ತು ಬ್ರ್ಯಾಂಡ್ ಅಭಿಮಾನಿಗಳನ್ನು ಸೆಳೆಯುತ್ತದೆ “ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಲಂಬೋರ್ಗಿನಿಯು URUS SE ಅನ್ನು ಭಾರತದಲ್ಲಿ ಪರಿಚಯಿಸಲು ಸಿದ್ಧವಾಗಿದೆ

Leave a Comment