Ather 450X: ಏಥರ್‌ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಮೇಲೆ 25,000 ರೂಪಾಯಿವರೆಗೆ ಡಿಸ್ಕೌಂಟ್ ಪಡೆಯಿರಿ

Ather 450X ಮತ್ತು 450 Apex ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಮೇಲೆ ರೂ.25,000 ವರೆಗೆ ಹಬ್ಬದ ಡಿಸ್ಕೌಂಟ್!

ಹಬ್ಬದ ಸಂದರ್ಭದಲ್ಲಿ ಎಲೆಕ್ಟ್ರಿಕ್‌ ವಾಹನಗಳನ್ನು ಖರೀದಿಸಲು ಯೋಜಿಸುತ್ತಿರುವವರಿಗೆ ಭಾರತದ ಪ್ರಮುಖ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ ಏಥರ್‌ ಎನರ್ಜಿ(Ather Energy),  ತನ್ನ ಗ್ರಾಹಕರಿಗೆ ವಿಶೇಷ ಹಬ್ಬದ ಆಫರ್‌ ಘೋಷಿಸಿದೆ. ಈ ಆಫರ್‌ನಡಿ, ಕಂಪನಿಯ ಜನಪ್ರಿಯ 450 ಸರಣಿಯ ಎಲೆಕ್ಟ್ರಿಕ್‌ ಸ್ಕೂಟರ್‌ಗಳಾದ Ather 450X ಮತ್ತು Ather 450 Apex ಮಾದರಿಗಳ ಖರೀದಿಯ ಮೇಲೆ ಗರಿಷ್ಠ ರೂ. 25,000/- ವರೆಗಿನ ಆಕರ್ಷಕ ರಿಯಾಯಿತಿಯನ್ನು ಘೋಷಿಸಲಾಗಿದೆ. ಈ ಆಫರ್‌ನಲ್ಲಿ ಬ್ಯಾಟರಿ ವಾರಂಟಿ ವಿಸ್ತರಣೆ, ಉಚಿತ ಎಥರ್ ಗ್ರಿಡ್ ಚಾರ್ಜಿಂಗ್ ಸೌಲಭ್ಯ ಮತ್ತು ನಗದು ಮರುಪಾವತಿಯಂತಹ ಹಲವು ಪ್ರಯೋಜನಗಳನ್ನು ಒಳಗೊಂಡಿದೆ.

ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದಲ್ಲಿ ಏಥರ್ ಎನರ್ಜಿ ಗಮನಾರ್ಹ ಪ್ರಗತಿ ಸಾಧಿಸಿದೆ. ಈ ಸೆಪ್ಟೆಂಬರ್‌ನಲ್ಲಿ 12,579 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡ 75ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಇದರೊಂದಿಗೆ ದೇಶದ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಶೇಕಡ 14ರಷ್ಟು ಪಾಲನ್ನು ಹೊಂದಿದೆ. ಈ ಸಂತೋಷದ ಸಂದರ್ಭದಲ್ಲಿ, ದಸರಾ ಮತ್ತು ದೀಪಾವಳಿ ಹಬ್ಬಗಳನ್ನು ಪ್ರಯುಕ್ತವಾಗಿ ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ಘೋಷಿಸಿದೆ.

ಇದನ್ನೂ ಓದಿ: ಕೋಮಾಕಿ ಎಕ್ಸ್-ಒನ್ ಎಲೆಕ್ಟ್ರಿಕ್ ಸ್ಕೂಟರ್ ಕೇವಲ ರೂ. 49,999 ಬೆಲೆಗೆ ಬಿಡುಗಡೆ

Ather 450X and 450 Apex 2
Ather 450X Electric scooter

ಏಥರ್ ಎನರ್ಜಿ ತನ್ನ ಗ್ರಾಹಕರ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಾ, ಹಬ್ಬದ ಸಂದರ್ಭದಲ್ಲಿ ಬ್ಯಾಟರಿ ವಾರಂಟಿಯನ್ನು ಎಂಟು ವರ್ಷಗಳವರೆಗೆ ವಿಸ್ತರಿಸುವ ಮೂಲಕ ಗ್ರಾಹಕರ ವಿಶ್ವಾಸವನ್ನು ಗಳಿಸಿದೆ. ಈ ಮೂಲಕ ಗ್ರಾಹಕರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ತಮ್ಮ ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಹೆಚ್ಚು ಕಾಲ ಆನಂದಿಸಬಹುದು, ಕಂಪನಿಯು ತನ್ನ ಏಥರ್ ಗ್ರಿಡ್ ನೆಟ್‌ವರ್ಕ್‌ನ ಮೂಲಕ ಗ್ರಾಹಕರಿಗೆ ಒಂದು ವರ್ಷದ ಉಚಿತ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುತ್ತಿದೆ. ದೇಶದಾದ್ಯಂತ ವಿಸ್ತರಿಸಿರುವ 2,152 ವೇಗದ ಚಾರ್ಜಿಂಗ್ ಕೇಂದ್ರಗಳನ್ನು ಉಚಿತವಾಗಿ ಬಳಸಿಕೊಳ್ಳುವ ಅವಕಾಶವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಸಾಮಾನ್ಯವಾಗಿ ರೂ. 5,000 ಮೌಲ್ಯದ ಈ ಸೌಲಭ್ಯವು ಹಬ್ಬದ ಉಡುಗೊರೆಯಾಗಿ ಗ್ರಾಹಕರಿಗೆ ಲಭ್ಯವಿದೆ.

ಇದನ್ನೂ ಓದಿ: 100 ಕಿಮೀ ರೇಂಜ್‌ನೊಂದಿಗೆ ಈವಾ ಸೀರೀಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ರೂ. 56,051 ಬೆಲೆಗೆ ಲಾಂಚ್ ಆಗಿವೆ

ಏಥರ್ 450ಎಕ್ಸ್‌ ಮತ್ತು 450 ಅಪೆಕ್ಸ್

ಭಾರತದಲ್ಲಿ ತಯಾರಾದ ಎಥರ್ 450ಎಕ್ಸ್ (Ather 450X)ಆಧುನಿಕ ಸ್ಕೂಟರ್‌ನ ಬೆಲೆ ರೂ. 1.41 ಲಕ್ಷದಿಂದ ರೂ. 1.55 ಲಕ್ಷದವರೆಗೆ ಇದೆ. 2.9 ಕಿಲೋವ್ಯಾಟ್‌ನ ಬಲಿಷ್ಠ ಬ್ಯಾಟರಿಯೊಂದಿಗೆ ಸಜ್ಜಿತವಾದ ಈ ಸ್ಕೂಟರ್ ಒಮ್ಮೆ ಚಾರ್ಜ್ ಮಾಡಿದರೆ 111 ಕಿಲೋಮೀಟರ್‌ವರೆಗೆ ನಿಮ್ಮ ಪ್ರಯಾಣವನ್ನು ಸುಗಮಗೊಳಿಸುತ್ತದೆ. ಎಥರ್ 450ಎಕ್ಸ್‌ನ 3.7 ಕಿಲೋವ್ಯಾಟ್ ಬ್ಯಾಟರಿಯು ನಿಮಗೆ 150 ಕಿಲೋಮೀಟರ್‌ವರೆಗೂ ಪ್ರಯಾಣವನ್ನು ನೀಡುತ್ತದೆ. ಎಥರ್ 450 ಎಕ್ಸ್ ಕೇವಲ 3.3 ಸೆಕೆಂಡುಗಳಲ್ಲಿ 0 ರಿಂದ 40 ಕಿಮೀ/ಗಂ ವರೆಗೆ ಹೋಗುತ್ತದೆ ಮತ್ತು90 ಕಿ.ಮೀ. ಗರಿಷ್ಠ ವೇಗವನ್ನು ಹೊಂದಿದೆ.

Ather 450 Apex
Ather 450 Apex Electric scooter

7 ಇಂಚಿನ ಡಿಜಿಟಲ್ ಡಿಸ್ಪ್ಲೇಯೊಂದಿಗೆ, ಮೊನೊಶಾಕ್ ಸಸ್ಪೆನ್ಷನ್, ಸ್ವಯಂಚಾಲಿತ ಇಂಡಿಕೇಟರ್ ಕಟ್-ಆಫ್, ಗೈಡ್-ಮಿ-ಹೋಮ್ ಲೈಟ್, ಆಟೋ ಹೋಲ್ಡ್‌, ಪಾರ್ಕ್‌ ಅಸಿಸ್ಟ್‌, ಫಾಲ್‌ ಸೇಫ್‌ ಮುಂತಾದ ಫೀಚರ್‌ಗಳನ್ನು ಹೊಂದಿದೆ. ಎಥರ್ 450ಎಕ್ಸ್ ಸುರಕ್ಷತೆಗಾಗಿ ಸೈಡ್-ಸ್ಟ್ಯಾಂಡ್ ಸೆನ್ಸರ್‌ಗಳು, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ (ಇಎಸ್ಎಸ್), ಡ್ಯುಯಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿವೆ.

ಎಥರ್ 450 ಅಪೆಕ್ಸ್ (Ather 450 Apex) ಎಲೆಕ್ಟ್ರಿಕ್ ಸ್ಕೂಟರ್‌ನ ಎಕ್ಸ್‌ ಶೋರೂಂ ಬೆಲೆ ರೂ. 1.95 ಲಕ್ಷ ಆಗಿದ್ದು, 450X ಮಾದರಿಗಿಂತ ಹೆಚ್ಚಿನ ಶಕ್ತಿಯನ್ನು ಹೊಂದಿದೆ. 3.7 ಕೆಡಬ್ಲ್ಯೂಹೆಚ್ ಬ್ಯಾಟರಿಯೊಂದಿಗೆ ಒಂದೇ ಚಾರ್ಜ್‌ನಲ್ಲಿ 157 ಕಿಮೀ ದೂರ ಕ್ರಮಿಸಬಹುದು ಎಂದರೆ, ನಿಮ್ಮ ದಿನನಿತ್ಯದ ಪ್ರಯಾಣವನ್ನು ತುಂಬಾ ಸುಲಭಗೊಳಿಸುತ್ತದೆ. ಅಷ್ಟೇ ಅಲ್ಲದೆ, ವಾರ್ಪ್+” ರೈಡಿಂಗ್ ಮೋಡ್‌ನಲ್ಲಿ 100 ಕಿಮೀ/ಗಂ ವೇಗದಲ್ಲಿ ಸವಾರಿ ಮಾಡುವ ಆನಂದವನ್ನು ಅನುಭವಿಸಬಹುದು.

ಈ ಹೊಸ ಮಾದರಿ ಮತ್ತು 450X ಎರಡನ್ನೂ ಖರೀದಿಸುವ ಗ್ರಾಹಕರಿಗೆ ರೂ. 5,000/- ತಕ್ಷಣದ ಡಿಸ್ಕೌಂಟ್‌ನೊಂದಿಗೆ ಕ್ರೆಡಿಟ್ ಕಾರ್ಡ್‌ ಇಎಂಐ ವಹಿವಾಟಿನ ಮೇಲೆ ರೂ. 10,000/- ಕ್ಯಾಶ್‌ಬ್ಯಾಕ್‌ನ ಆಕರ್ಷಕ ಕೊಡುಗೆಯನ್ನು ನೀಡಲಾಗುತ್ತಿದೆ.

Leave a Comment