ಭಾರತದ ಬಹುರಾಷ್ಟ್ರೀಯ ವಾಹನ ಉತ್ಪಾದನಾ ಕಂಪನಿಯಾದ ಮಹೀಂದ್ರಾ (Mahindra) ತನ್ನ ಹೊಸ 5-ಡೋರ್ ಥಾರ್ ಅನ್ನು ಮುಂಬರುವ ಆಗಸ್ಟ್ ಅಲ್ಲಿ ಅನಾವರಣಗೊಳಿಸುತ್ತಿದ್ದು, ಇದು ADAS ಮತ್ತು 360-ಡಿಗ್ರಿ ಕ್ಯಾಮೆರಾಗಳಂತಹ ಫೀಚರ್‌ಗಳನ್ನು ಹೊಂದಿರುತ್ತದೆ.
ಮಹೀಂದ್ರಾ & ಮಹೀಂದ್ರಾ ಹೊಸ 5- ಡೋರ್ ಗಳ ಥಾರ್ ಅನ್ನು ಮಹೀಂದ್ರ ಥಾರ್ ROXX ಎಂದು ಹೆಸರಿಸಿದೆ. ಆಗಸ್ಟ್ 15 ರಂದು ಮಹೀಂದ್ರ ಥಾರ್ ROXX ನ ಗ್ರಾಂಡ್ ಓಪೆನಿಂಗ್ ನೆಡೆಸಲು ನಿಧ೯ರಿಸಲಾಗಿದೆ. ತನ್ನ ವಿಶಿಷ್ಟ ವಿನ್ಯಾಸ, ಟೆಕ್ನಾಲಜಿ ಮತ್ತು ಸುಧಾರಿತ ಕಾರ್ಯಕ್ಷಮತೆಯೊಂದಿಗೆ ಥಾರ್ ROXX SUV ಮಾರುಕಟ್ಟೆಯಲ್ಲಿ ಹೊಸ ಸಂಚಲನಾ ಮೂಡಿಸಲು ಎಲ್ಲಾ ರೀತಿಯಲ್ಲಿಯೂ ಸಿದ್ದತೆಮಾಡಿಕೊಂಡಿದೆ. ಈ ಅತ್ಯಾಕರ್ಷಕ ಹೊಸ SUV ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲು ಸಿದ್ಧವಾಗುತ್ತಿದೆ.
ಮಹೀಂದ್ರಾ ಥಾರ್ 5-ಡೋರ್ ಎಕ್ಸ್ಟೀರಿಯರ್ ಮತ್ತು ಇಂಟೀರಿಯರ್
ಮಹೀಂದ್ರಾ ಥಾರ್ ROXX ವೃತ್ತಾಕಾರದ LED ಹೆಡ್‌ಲ್ಯಾಂಪ್ಗಳನ್ನು ಹೊಂದಿದ್ದು ಇದರಲ್ಲಿ LED DRLs, ಫಾಗ್ ಲೈಟ್ಸ್ ಮತ್ತು ಟೈಲ್‌ಲ್ಯಾಂಪ್ ಗಳು ಸೇರಿಕೊಂಡಿರುತ್ತವೆ. ಇದರ ಹೊಸ ಬಾಡಿ-ಕಲರ್ ಸ್ಲೇಟೆಡ್ ಗ್ರಿಲ್ ಹಾಗೂ ನವೀಕರಿಸಿದ ಅಲೋಯ್ ವೀಲ್ಸ್ ವಾಹನದ ಫ್ರೊಂಟ್ ಲುಕ್ ಅನ್ನು ಇನ್ನಷ್ಟು ಆಕಷ೯ಕವಾಗಿಸುತ್ತದೆ, ಬಂಪರ್‌ಗಳಲ್ಲಿ ದಪ್ಪ ಸಿಲ್ವರ್ ಆಕ್ಸೆಂಟ್ ಅಳವಡಿಸಲಾಗಿದ್ದು ಇದು ಥಾರ್ 3-ಡೋರ್‌ನ ಆಲ್-ಬ್ಲಾಕ್ ಶೈಲಿಯಿಂದ ವಿಭಿನ್ನವಾಗಿದೆ. ಅದಲ್ಲದೆ, ಹಿಂಬದಿಯ ಬಾಗಿಲಿನ ಹ್ಯಾಂಡಲ್ ಅನ್ನು ಬಾಗಿಲಿನ ಫ್ರೇಮ್‌ನಲ್ಲಿಯೇ ಸುಲಭವಾಗಿ ತೆಗೆಯಲು ಇಡಲಾಗಿದೆ.

ಹೊಸ ಮಾಡೆಲ್ ನಲ್ಲಿ ನೀವು ಆನಂದಿಸಲು ಅನೇಕ ಟಾಪ್ ನಾಚ್ ಫೀಚರ್‌ಗಳು ಇರಲಿವೆ. ಇವುಗಳಲ್ಲಿ 10.25 ಇಂಚಿನ ಡ್ರೈವರ್ ಡಿಸ್ಪ್ಲೇ, 10.25 ಇಂಚಿನ ಟಚ್‌ಸ್ಕ್ರೀನ್ ಮನರಂಜನೆ ವ್ಯವಸ್ಥೆ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಪನೋರಾಮಿಕ್ ಸನ್‌ರೂಫ್, ಪುಶ್-ಬಟನ್ ಸ್ಟಾರ್ಟ್‌ನೊಂದಿಗೆ ಕೀಲಿಯಿಲ್ಲದ ಪ್ರವೇಶ, ಮತ್ತು ನಿಮ್ಮನ್ನು ಮಾರ್ಗದರ್ಶನ ಮಾಡಲು 360-ಡಿಗ್ರಿ ಕ್ಯಾಮೆರಾಗಳು ಸೇರಿರುತ್ತವೆ. ಈ ಮಾಡೆಲ್ ನಲ್ಲಿ ಸುರಕ್ಷತೆ ಮೊದಲ ಆದ್ಯತೆ ಆಗಿದ್ದು, ಇದು ಆರು ಏರ್‌ಬ್ಯಾಗ್‌ಗಳು, ಎಬಿಎಸ್ ಇಬಿಡಿ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಮತ್ತು ಎಡಿಎಎಸ್(ADAS) ಒಳಗೊಂಡಿರುತ್ತದೆ.
Mahindra Thar 5-ಡೋರ್: ಪವರ್‌ಟ್ರೈನ್
ಥಾರ್ ROXX ನಿಮಗೆ ಮೂರು ಎಂಜಿನ್ ಪ್ರಕಾರಗಳ ಆಯ್ಕೆಯನ್ನು ನೀಡುತ್ತದೆ: 1.5-ಲೀಟರ್ ಡೀಸೆಲ್, 2.2-ಲೀಟರ್ ಡೀಸೆಲ್, ಮತ್ತು 2.0-ಲೀಟರ್ ಪೆಟ್ರೋಲ್ ಎಂಜಿನ್. ನೀವು ಮೆನುಯಲ್ ಅಥವಾ ಆಟೊಮೇಟಿಕ್ ಟ್ರಾನ್ಸ್‌ಮಿಷನ್‌ಗಳನ್ನು ಆಯ್ಕೆ ಮಾಡಬಹುದು. 3-ಡೋರ್ ಮಾಡೆಲ್ ನಂತೆಯೇ, ROXX ನಲ್ಲೂ ರೇರ್ ವೀಲ್ ಡ್ರೈವ್ ಮತ್ತು 4 WD ಆಯ್ಕೆಗಳು ಲಭ್ಯವಿವೆ.
ಥಾರ್ 5-ಡೋರ್‌ನ್ನು ಪ್ರಸ್ತುತ ತಯಾರಿಸಲಾಗುತ್ತಿದೆ ಮತ್ತು ಆಗಸ್ಟ್ 15 ರಿಂದ ಲಭ್ಯವಾಗಲಿದೆ. ಅನ್‌ಅಫೀಷಿಯಲ್ ಬುಕಿಂಗ್‌ಗಳು ಡೀಲರ್‌ಗಳ ಮೂಲಕ ಈಗಾಗಲೇ ಲಭ್ಯವಿದೆ. ಥಾರ್ 5-ಡೋರ್ ಮಾರುಕಟ್ಟೆಗೆ ಬಿಡುಗಡೆಯಾದರೆ ಸುಮಾರು 15 ಲಕ್ಷ (ಎಕ್ಸ್-ಶೋರೂಮ್) ಆರಂಭಿಕ ಬೆಲೆಯೊಂದಿಗೆ ಇದು ಮಹೀಂದ್ರ ಥಾರ್ 3-ಡೋರ್ ಗಿಂತ ಟಾಪ್ ಪೊಸಿಷನ್‌ನಲ್ಲಿ ಇರಲಿದೆ.
ಇದನ್ನೂ ಓದಿ: ಹ್ಯುಂಡೈ ಎಕ್ಸ್ಟೆರ್ CNG ಡ್ಯುಯಲ್ ಸಿಲಿಂಡರ್ ಭಾರತದಲ್ಲಿ ಬಿಡುಗಡೆ! ಬೆಲೆ 8.50 ಲಕ್ಷ ರೂ