Porsche: ಪೋರ್ಷೆ ಮಾಕಾನ್ ಇವಿ RWD ಕಾರು ಭಾರತದಲ್ಲಿ ಬಿಡುಗಡೆ ಬೆಲೆ ರೂ. 1.23 ಕೋಟಿ

ಲಕ್ಸುರಿ ಕಾರುಗಳು, ಉನ್ನತ ಕಾರ್ಯಕ್ಷಮತೆಯ ಸ್ಪೋಟ್ಸ್‌೯ ಕಾರು, SUVಗಳು ಹಾಗೂ ಸೆಡಾನ್‌ ಕಾರುಗಳಿಗೆ ಹೆಸರುವಾಸಿಯಾದ ಜಮ೯ನ್‌ ದೇಶದ ಪೋರ್ಷೆ(Porsche) ಕಂಪನಿಯು ಮಾಕಾನ್ ಇವಿ RWD ಕಾರು ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು ಇದರ ಬೆಲೆ ಸುಮಾರು ರೂ.1.23 ಕೋಟಿಗಳಾಗಿರುತ್ತದೆ.

ಪೋರ್ಷೆ ಕಂಪನಿಯು ಮಾಕಾನ್ ಎಲೆಕ್ಟ್ರಿಕ್ ಕಾರಿನ ಎರಡು ಹೊಸ ಆವೃತ್ತಿಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಇದರ ಆರಂಭಿಕ ಬೆಲೆ 1.23 ಕೋಟಿ ರೂ. ಈ ಐಷಾರಾಮಿ ಎಲೆಕ್ಟ್ರಿಕ್ ಎಸ್ಯುವಿ ಮೊದಲು ಒಂದೇ ಟರ್ಬೊ ಮಾದರಿಯಲ್ಲಿ ಲಭ್ಯವಿತ್ತು ಆದರೆ ಈಗ 1.65 ಕೋಟಿಯಿಂದ 1.69 ಕೋಟಿಗೆ ಬೆಲೆ ಹೆಚ್ಚಳದೊಂದಿಗೆ ಈ ಕಾರನ್ನು ನವೀಕರಿಸಲಾಗಿದೆ. ಹಾಗೂ 1.39 ಕೋಟಿ ಬೆಲೆಯೊಂದಿಗೆ ಹೊಸ 4S ವೇರಿಯಂಟ್‌ ಅನ್ನು ಇದರ ಜೊತೆಗೆ ಬಿಡುಗಡೆ ಮಾಡಲಾಗಿದೆ.

ಪೋರ್ಷೆ ಮಾಕಾನ್ ಇವಿ: ವಿಶೇಷತೆಗಳು

ಪೋರ್ಷೆ ಮಾಕಾನ್ ಇವಿ (Porsche Macan EV) ಬೇಸ್ ಮಾಡೆಲ್ ಕಾರು,  ಪೋರ್ಷೆ ಕಂಪನಿಯು ಮೊದಲ ರಿಯರ್-ವೀಲ್-ಡ್ರೈವ್ SUV ಆಗಿರುತ್ತದೆ ಇದರಲ್ಲಿ ಕಾರಿನ ಹಿಂಭಾಗದಲ್ಲಿ ಒಂದೇ ಎಲೆಕ್ಟ್ರಿಕ್ ಮೋಟಾರ್‌ ಅನ್ನು ನಾವು ಕಾಣಬಹುದಾಗಿರುತ್ತದೆ. ಈ ಎಂಜಿನ್ 360 ಹಾಸ್‌೯ ಪವರ್ ಮತ್ತು 563 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರಿಂದ, ಮಾಕಾನ್ ಕೇವಲ 5.7 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ/ಗಂ ವರೆಗೆ ಕ್ರಮಿಸಬಹುದು ಹಾಗೂ ಅತಿ ಹೆಚ್ಚು ವೇಗವಾಗಿ 220kmph ವರೆಗೂ ತಲುಪಬಹುದಾಗಿರುತ್ತದೆ.

ಇನ್ನು ಮಿಡ್‌ ರೇಂಜ್ SUV ಮಾಡೆಲ್‌ ಅನ್ನು ನೋಡುವುದಾದರೆ  ಅದು ಎರಡು ಎಲೆಕ್ಟ್ರಿಕ್ ಮೋಟರ್‌ ಗಳನ್ನು ಹೊಂದಿದ್ದು, ಈ ಎಂಜಿನ್ 516 ಹಾಸ್‌೯ ಪವರ್ ಮತ್ತು 820 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರಿಂದ, ಮಾಕಾನ್ ಕೇವಲ 4.1 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ/ಗಂ ವರೆಗೆ ಕ್ರಮಿಸಬಹುದು ಹಾಗೂ ಅತಿ ಹೆಚ್ಚು ವೇಗವಾಗಿ 240kmph ವರೆಗೂ ತಲುಪಬಹುದಾಗಿರುತ್ತದೆ.

ಪೋರ್ಷೆಯು  ಸ್ಲೇಟ್ ಗ್ರೇ ನಿಯೋ (Slate Grey Neo) ಎಂಬ ಹೊಸ ಎಕ್ಸ್ಟೀರಿಯರ್ ಬಣ್ಣದ ಆಯ್ಕೆಯನ್ನು ಪರಿಚಯಿಸಿದೆ. ಜೊತೆಗೆ ಕಂಪನಿಯು ಹೊಸ 20 ಇಂಚಿನ ಮಾಕಾನ್ ಎಸ್  ಅಲೋಯ್ ವೀಲ್ ಚಕ್ರಗಳನ್ನು ಸಹಾ ಪರಿಚಯಿಸಿದ್ದು, ಇದು ಗ್ರಾಹಕರಿಗೆ ಆಪ್ಷನಲ್‌ ಆಯ್ಕೆಯಾಗಿರುತ್ತದೆ. ಉಳಿದಂತೆ  ಪೋರ್ಷೆಯ ತನ್ನ ಎಲ್ಲಾ ವೆರಿಯಂಟ್‌ಗಳಲ್ಲಿಯೂ ಆಫ್-ರೋಡ್ ಡಿಸೈನ್ ಪ್ಯಾಕೇಜ್ ಅನ್ನು ಅಳವಡಿಸಿ ‌ ಅಪ್ಡೇಟ್ ಗೊಳಿಸಿದ್ದು ಈ ಪ್ಯಾಕೇಜ್ ಗ್ರೌಂಡ್ ಕ್ಲಿಯರೆನ್ಸ್ ಅನ್ನು 10 ಮಿಮೀ ಹೆಚ್ಚಿಸುತ್ತದೆ ಮತ್ತು ಅಪ್ರೋಚ್ ಆಂಗಲ್ ಅನ್ನು ಸುಧಾರಿಸುತ್ತದೆ.

Porsche Macan EV: ಬ್ಯಾಟರಿ ಮತ್ತು ಚಾರ್ಜಿಂಗ್

ಪೋರ್ಷೆ ಮಾಕಾನ್ ನ ಎಲ್ಲಾ ಮೂರು ಟ್ರಿಮ್ ಗಳು 100kWh ಬ್ಯಾಟರಿ ಪ್ಯಾಕ್ನೊಂದಿಗೆ ಬರಲಿದ್ದು . ಟಾಪ್-ಟೈರ್‌  ಮಾಕಾನ್ ಟರ್ಬೊ ಇವಿ 591 ಕಿ. ಮೀ. ರೇಂಜ್‌ ನ್ನು ಒದಗಿಸುತ್ತದೆ, ಮಾಕಾನ್ 4 ಎಸ್ ಇವಿ 606 ಕಿ. ಮೀ. ವರೆಗೆ ಹೋಗಬಹುದು, ಮತ್ತು ಬೇಸ್‌ ಮಾಡೆಲ್‌  ಒಂದು ಚಾರ್ಜ್ನಲ್ಲಿ 641 ಕಿ.ಮೀ ವರೆಗೆ ಕ್ರಮಿಸಬಹುದಾಗಿರುತ್ತದೆ.

ಈ ಎಲೆಕ್ಟ್ರಿಕ್ SUV ಯನ್ನು ಪಿಪಿಇ ಪ್ಲಾಟ್ಫಾರ್ಮ್ನಲ್ಲಿ ನಿರ್ಮಿಸಲಾಗಿದ್ದು 800 ವೋಲ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿರುತ್ತದೆ. ಇದರ ಚಾರ್ಜಿಂಗ್ ಸ್ಪೀಡ್‌ 270 ಕಿಲೋವ್ಯಾಟ್ ಡಿಸಿ ಯಾಗಿರುತ್ತದೆ. ರಾಪಿಡ್ ಚಾರ್ಜರ್ ಬಳಸಿ, ನೀವು ಕೇವಲ 21 ನಿಮಿಷಗಳಲ್ಲಿ ಮಾಕಾನ್ ಇವಿ ಯ ಬ್ಯಾಟರಿಯನ್ನು 10% ರಿಂದ 80% ವರೆಗೆ ಚಾರ್ಜ್ ಮಾಡಬಹುದು.

ಇದನ್ನೂ ಓದಿ: ಆಡಿ ಕ್ಯೂ5 ಬೋಲ್ಡ್ ಎಡಿಷನ್ ರೂ. 72.30 ಲಕ್ಷಕ್ಕೆ ಬಿಡುಗಡೆ

Leave a Comment