Royal Enfield: ರಾಯಲ್ ಎನ್ಫೀಲ್ಡ್ ಗೆರಿಲ್ಲಾ450 ರೂ. 2.39 ಲಕ್ಷಕ್ಕೆ ಬಿಡುಗಡೆಯಾಗಿದೆ

ಭಾರತದ ಅತ್ಯಂತ ಹಳೆಯ ಜಾಗತಿಕ ಮೋಟಾರ್ ಸೈಕಲ್‌ ಬ್ರಾಂಡ್‌ ಖ್ಯಾತಿಯ ರಾಯಲ್ ಎನ್‌ಫೀಲ್ಡ್  ಕಂಪನಿಯು ತನ್ನ ಹೊಸ ಮೋಟಾರ್‌ ಸೈಕಲ್‌ ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಅನ್ನು ಬಿಡುಗಡೆ ಮಾಡಿದೆ. ರಾಯಲ್ ಎನ್‌ಫೀಲ್ಡ್  ಗೆರಿಲ್ಲಾ 450 ಅನ್ನು ಮೂರು ವೆರಿಯಂಟ್‌ಗಳನ್ನು ಹೊಂದಿದ್ದು ನೀವು ಇದನ್ನು ಐದು ಬಣ್ಣಗಳಲ್ಲಿ ಕಾಣಬಹುದಾಗಿರುತ್ತದೆ. ಭಾರತದ ಎಕ್ಸ್ ಶೋರೂಂ ದರದ ಪ್ರಕಾರ ಇದರ ಬೆಲೆ ರೂ.2.39 ಲಕ್ಷದಿಂದ ಆರಂಭವಾಗಿ ರೂ.2.54 ಲಕ್ಷವರೆಗೆ ಇದೆ.

ಇದರ ಮೂರು ವೆರಿಯಂಟ್‌ಗಳ ಬೆಲೆಯು ಭಿನ್ನ ವಾಗಿದ್ದು ಮೊದಲನೇಯದು ಅನಲಾಗ್‌ ಆವೃತ್ತಿಯದಾಗಿದ್ದು ಇದರ ಬೆಲೆ ರೂ.2.39ಲಕ್ಷಗಳಾಗಿರುತ್ತದೆ ಹಾಗೂ ಇದು ಸ್ಮೋಕ್ ಮತ್ತು ಪ್ಲಾಯಾ ಬ್ಲಾಕ್ ಬಣ್ಣಗಳಲ್ಲಿ ಬರುತ್ತದೆ. ಎರಡನೆಯದ್ದು ಡ್ಯಾಶ್ ವೆರಿಯಂಟ್ ಇದರ ಬೆಲೆ ರೂ2.49 ಲಕ್ಷಗಳು ಹಾಗೂ ಇದು ಗೋಲ್ಡ್ ಡಿಪ್ ಬಣ್ಣದಲ್ಲಿ ಬರುತ್ತದೆ. ಕೊನೆಯದಾಗಿ ಫ್ಲಾಶ್ ವೆರಿಯಂಟ್ ಇದರ ಬೆಲೆ ರೂ.2.54 ಲಕ್ಷಗಳಾಗಿದ್ದು ಇದು ಬ್ರಾವಾ ಬ್ಲೂ ಮತ್ತು ಯೆಲ್ಲೋ ರಿಬನ್ ಬಣ್ಣಗಳಲ್ಲಿ ಸಿಗಬಹುದಾಗಿರುತ್ತದೆ.

ರಾಯಲ್ ಎನ್ಫೀಲ್ಡ್ ಗೆರಿಲ್ಲಾ450 ಫೀಚರ್‌ಗಳು

ರಾಯಲ್ ಎನ್ಫೀಲ್ಡ್ ಗೆರಿಲ್ಲಾ 450ರ  ಡಿಸೈನ್‌ ಮಾಡ್ರನ್-ರೇಟ್ರೊ ಶೈಲಿಯಲ್ಲಿ ಇರುತ್ತದೆ. ಇದರಲ್ಲಿ ರಾಯಲ್ ಎನ್‌ಫೀಲ್ಡ್ ಹಿಂದಿನಿಂದಲು ರೂಢಿಸಿಕೊಂಡಿರುವ ರೌಂಡ್ ಹೆಡ್ಲೈಟ್ ಹಾಗೂ ಹಿಮಾಲಯನ್ 450 ನಿಂದ ತೆಗೆದುಕೊಳ್ಳಲಾದ ವೃತ್ತಾಕಾರದ ಇನ್ಸ್ಟ್ರೂಮೆಂಟಲ್ ಪ್ಯಾನಲ್ ಅನ್ನು ಕಾಣಬಹುದಾಗಿರುತ್ತದೆ. ಅಲ್ಲದೆ ನಾವು ಇಲ್ಲಿ ಆರಾಮದಾಯಕ ಪ್ರಯಾಣಕ್ಕಾಗಿ ಒಂದು ಉದ್ದದ ಸಿಂಗಲ್‌ ಸೀಟ್‌ ಮತ್ತು ನಯವಾಗಿ ವಿಸ್ತರಿಸುವ ಶೈಲಿಯ ಎಲ್‌ಇಡಿ ಟೈಲ್ ಲೈಟ್ ಅನ್ನು ಸಹಾ ಕಾಣಬಹುದು

ಹಿಮಾಲಯನ್‌ನಲ್ಲಿ ಇರುವುದರಂತೆಯೇ Royal Enfield Guerrilla 450 ಶಕ್ತಿಯುತ 452cc ಲಿಕ್ವಿಡ್-ಕೂಲ್ಡ್ ‘ಶೆರ್ಪಾ 450’ ಎಂಜಿನ್‌ನಿಂದ ಕಾರ್ಯನಿರ್ವಹಿಸುತ್ತದೆ, ಈ ಬಲಿಷ್ಠ ಎಂಜಿನ್ 8,000rpm ನಲ್ಲಿ 40 ಹಾರ್ಸ್‌ಪವರ್ ಮತ್ತು 5,500rpm ನಲ್ಲಿ 40Nm ಟಾರ್ಕ್ ಅನ್ನು ನೀಡುತ್ತದೆ. ಹಿಮಾಲಯನ್‌ನೊಂದಿಗೆ ಎಂಜಿನ್ ಹಂಚಿಕೊಂಡರೂ, ಗೆರಿಲ್ಲಾ 450 ತನ್ನ ಸ್ವಂತ ವಿಶೇಷ ಟ್ಯೂನಿಂಗ್ ಮತ್ತು ಗಿಯರಿಂಗ್ ಅನ್ನು ಹೊಂದಿದೆ.

ಗೆರಿಲ್ಲಾ 450 ಮತ್ತು ಹಿಮಾಲಯನ್ ಎರಡರಲ್ಲೂ ಬಹಳಷ್ಟು ವಿಷಯಗಳು ಸಾಮಾನ್ಯವಾಗಿದೆ ಎಂಬುದರಿಂದ, ಹಿಮಾಲಯನ್ ಗೆ ಹೋಲಿಸಿದರೆ ಗೆರಿಲ್ಲಾ 11kg ಲಘುವಾಗಿದೆ, ಇದರ ತೂಕವು 185kg ಯಾಗಿದ್ದು ಈ ತೂಕದ ವ್ಯತ್ಯಾಸವು ಗೆರಿಲ್ಲಾ 450 ರಲ್ಲಿ 11-ಲೀಟರ್ ಇಂಧನ ಟ್ಯಾಂಕ್ ಮತ್ತು ಟ್ಯೂಬ್ಲೆಸ್ ಟೈರ್‌ಗಳೊಂದಿಗೆ ಅಲೈ ವೀಲ್ ಗಳಂತಹ ವೈಶಿಷ್ಟ್ಯಗಳಿರುವ ಕಾರಣದಿಂದಾಗಿದೆ. ಟೈರ್‌ಗಳ ವಿಚಾರದಲ್ಲಿ ನೋಡುವುದಾದರೆ ಗೆರಿಲ್ಲಾ CEAT ಟೈರ್‌ಗಳನ್ನು ಹೊಂದಿದೆ, ಮುಂಭಾಗದ ಚಕ್ರ ಸೈಜ್‌ 120/70 R17 ಮತ್ತು ಹಿಂಭಾಗದ ಚಕ್ರದ ಸೈಜ್‌ 160/60 R17‌ ಗಳಾಗಿರುತ್ತದೆ.

ಈ ಬೈಕ್ 43mm ಟೆಲಿಸ್ಕೋಪಿಕ್ ಫೋರ್ಕ್ ಹೊಂದಿದ್ದು, ನಿಮಗೆ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುತ್ತದೆ, ಹಿಂಭಾಗದಲ್ಲಿ ಇದು ಪ್ರಿಲೋಡ್ ಅಡ್ಜಸ್ಟ್ ಮಾಡಬಹುದಾದ ಮೊನೊಶಾಕ್ ಅನ್ನು ಹೊಂದಿದೆ. ಇದು ಮುಂಭಾಗದಲ್ಲಿ 310mm ಡಿಸ್ಕ್ ಬ್ರೇಕ್ ಅನ್ನು ಡುಯಲ್-ಪಿಸ್ಟನ್ ಕ್ಯಾಲಿಪರ್‌ಗಳೊಂದಿಗೆ ಮತ್ತು ಹಿಂಭಾಗದಲ್ಲಿ 270mm ಡಿಸ್ಕ್ ಬ್ರೇಕ್ ಅನ್ನು ಸಿಂಗಲ್-ಪಿಸ್ಟನ್ ಕ್ಯಾಲಿಪರ್‌ನೊಂದಿಗೆ ಹೊಂದಿದೆ. ಜೊತೆಗೆ, ಇದು ಡುಯಲ್-ಚಾನಲ್ ABS ಅನ್ನು ಹೊಂದಿದ್ದು ನಿಮಗೆ ಹೆಚ್ಚುವರಿ ಭದ್ರತೆಯನ್ನು ನೀಡುತ್ತದೆ.

ಇದನ್ನೂ ಓದಿ: GT Force: “ಜಿಟಿ ಟೆಕ್ಸಾ” ಎಲೆಕ್ಟ್ರಿಕ್ ಬೈಕ್ ಅನ್ನು ರೂ 1.20 ಲಕ್ಷಕ್ಕೆ ಬಿಡುಗಡೆ ಮಾಡಿದೆ

Leave a Comment