Audi ಕ್ಯೂ5 ಬೋಲ್ಡ್ ಎಡಿಷನ್ನಲ್ಲಿ ಯಾವುದೇ ಮೆಕ್ಯಾನಿಕಲ್ ಚೇಂಜಸ್ ಇರುವುದಿಲ್ಲ, ಆದರೆ ಇದು ಕೆಲವೊಂದು ಕಾಸ್ಮಟಿಕ್ ಅಪ್ಗ್ರೇಡ್ ಗಳನ್ನುಒಳಗೊಂಡಿದೆ.
Audi India ತನ್ನ ಕ್ಯೂ5 ಬೋಲ್ಡ್ ಎಡಿಷನ್ ಕಾರು ಅನ್ನು ಪರಿಚಯಿಸಿದೆ, ಇದು ಕ್ಯೂ5 ನ ಹೊಸ ವಷ೯ನ್ ಆಗಿದೆ ಮತ್ತು ಇದು ನಿರ್ದಿಷ್ಟ ಸಮಯಕ್ಕೆ ಮಾತ್ರ ಲಭ್ಯವಿದ್ದು ಇದರ ಬೆಲೆ ₹72.30 ಲಕ್ಷ (ಎಕ್ಸ್-ಶೋರೂಮ್, ಇಂಡಿಯಾ) ಆಗಿರುತ್ತದೆ. ಕ್ಯೂ5 ಬೋಲ್ಡ್ ಎಡಿಷನ್ ಮೆಕ್ಯಾನಿಕಲ್ ಚೇಂಜಸ್ ಇರುವುದಿಲ್ಲ, ಆದರೆ ಕೆಲವು ಕಾಸ್ಮಟಿಕ್ ಅಪ್ಗ್ರೇಡ್ಗಳನ್ನು ಒಳಗೊಂಡಿದೆ. ಇದು ಟಾಪ್ ಎಂಡ್ ಕ್ಯೂ5 ಮಾಡೆಲ್ ಗೆ ಹೋಲಿಸಿದರೆ ಅದಕ್ಕಿಂತ ರೂ 1.50 ಲಕ್ಷಗಳಷ್ಟು ಹೆಚ್ಚು ಬೆಲೆಯದಾಗಿದೆ.
ಆಡಿ ಕ್ಯೂ5 ಬೋಲ್ಡ್ ಎಡಿಷನ್ ಫೀಚರ್ಗಳು
ಈ ಹೊಸ ಕಾರು ಹೆಚ್ಚು ಸ್ಟೈಲಿಷ್ ಆಗಿದ್ದು ಇದರಲ್ಲಿ ಆಡಿ ಲೊಗೋಗಳು, ವಿಂಡೂಸರೌಂಡ್ ಗಳು, ಫ್ರೊಂಟ್ ಗ್ರಿಲ್ ಮತ್ತು ರೂಫ್ ರೈಲ್ಸ್ ನಂತಹ ವಿಶೇಷ ಫೀಚರ್ ಗಳಿರುತ್ತವೆ. ಈ ವಿಶೇಷ SUV ಮಾಡೆಲ್ ಎಕ್ಸ್ಲೂಸಿವ್ ಆಗಿದ್ದು ನಿರ್ದಿಷ್ಟ ಸಮಯಕ್ಕೆ ಮಾತ್ರ ಲಭ್ಯವಿರುತ್ತದೆ. ಇದು ಗ್ಲೇಷಿಯರ್ ವೈಟ್, ನವ್ವಾರ್ ಬ್ಲೂ, ಮಿಥೋಸ್ ಬ್ಲಾಕ್, ಡಿಸ್ಟರಿಕ್ ಗ್ರೀನ್ ಮತ್ತು ಮನ್ನಹತ್ತನ್ ಗ್ರೆ, ಈ ಐದು ಬಣ್ಣಗಳಲ್ಲಿ ಲಭ್ಯವಿರುತ್ತದೆ.
Q5 ಬೋಲ್ಡ್ ಎಡಿಷನ್ನಲ್ಲಿ 10.1-ಇಂಚು ಇನ್ಫೋಟೈನ್ಮೆಂಟ್ ಟಚ್ಸ್ಕ್ರೀನ್, 12.3-ಇಂಚು ಡಿಜಿಟಲ್ ಸಾಧನ ಕ್ಲಸ್ಟರ್, ವೈರ್ಲೆಸ್ ಚಾರ್ಜರ್, 19-ಬ್ಯಾಂಗ್ & ಓಲಫ್ಸೆನ್ ಆಡಿಯೋ ಸಿಸ್ಟಮ್, ಮೂರು-ಝೋನ್ ಕ್ಲೈಮೇಟ್ ಕಂಟ್ರೋಲ್, ಅಂಬಿಯಂಟ್ ಲೈಟಿಂಗ್, ಪ್ಯಾನೋರಾಮಿಕ್ ಸನ್ರೂಫ್ ಮತ್ತು ಇತರ ಫೀಚರ್ಗಳು ಲಭ್ಯವಿರುತ್ತವೆ. ಸುರಕ್ಷತೆ ದೃಷ್ಟಿಯಿಂದ, ಈ ಕಾರು 8 ಏರ್ಬ್ಯಾಗ್ಗಳನ್ನು, 360-ಡಿಗ್ರಿ ಕ್ಯಾಮೆರಾ, ESC ಮತ್ತು ಇತರ ಸೇಫ್ಟಿ ಫೀಚರ್ಗಳನ್ನು ಒದಗಿಸುತ್ತದೆ.

Audi Q5 Bold Edition: ಪವರ್ ಟ್ರೈನ್
ಕ್ಯೂ5 ಬೋಲ್ಡ್ ಎಡಿಷನ್ ಕಾರು 2.0-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿದೆ, ಇದು 261 ಹೆಚ್ಪಿಯ ಶಕ್ತಿಯನ್ನು ಮತ್ತು 370 Nm ಟಾರ್ಕ್ ಅನ್ನು ಉತ್ಪತ್ತಿ ಮಾಡುತ್ತದೆ. ಇದು 7- ಸ್ಪೀಡ್ ಡುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಅನ್ನು ಬಳಸುತ್ತದೆ, ಆಡಿಯು ಪ್ರಕಾರ, ಇದು 0 ರಿಂದ 100 kmph ನ್ನು ಕೇವಲ 6.1 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ ಹಾಗೂ ಸುಮಾರು 240 kmph ರಷ್ಟು ವೇಗವಾಗಿ ಚಲಿಸಬಹುದಾಗಿರುತ್ತದೆ.
ಆಡಿ ಇಂಡಿಯಾದ ಉಸ್ತುವಾರಿ ಬಾಲಬೀರ್ ಸಿಂಗ್ ಧಿಲ್ಲಾನ್ ರವರು ” ವಿಶೇಷ ಬೋಲ್ಡ್ ಎಡಿಷನ್ ಇಂದಿನ ದಿನಗಳಲ್ಲಿನ ಗ್ರಾಹಕರ ಯುನಿಕ್ ಬೇಡಿಕೆಗಳಿಗನುಗುಣವಾಗಿದ್ದು ಈ ಕಾರಿನಲ್ಲಿ ಪಸ೯ನಲೈಸ್ಡ್ ಟಚ್ಚಸ್ ಮತ್ತು ಟಾಪ್-ನಾಚ್ ಫೀಚರ್ಗಳನ್ನು ಪಡೆಯಬಹುದಾಗಿರುತ್ತದೆ, ಮತ್ತು ಆಡಿಯು ಕ್ಯೂ5 ಎಂದಿಗೂ ನಮ್ಮ ಟಾಪ್-ಸೆಲಿಂಗ್ ಮಾಡೆಲ್ಗಳಲ್ಲಿ ಒಂದಾಗಿದ್ದು, ಈ ಹೊಸ ಬೋಲ್ಡ್ ಎಡಿಷನ್ ಹೆಚ್ಚಿನ ಖರೀದಿದಾರರನ್ನು ಮತ್ತು ಬ್ರ್ಯಾಂಡ್ ಅಭಿಮಾನಿಗಳನ್ನು ಸೆಳೆಯುತ್ತದೆ “ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಲಂಬೋರ್ಗಿನಿಯು URUS SE ಅನ್ನು ಭಾರತದಲ್ಲಿ ಪರಿಚಯಿಸಲು ಸಿದ್ಧವಾಗಿದೆ