URUS SE ಯು ಈಗಾಗಲೇ ಚಾಲ್ತಿಯಲ್ಲಿರುವ URUS ನ ಸುಧಾರಿತ ಆವೃತ್ತಿಯಾಗಿದ್ದು, ಅತ್ಯಂತ ವೇಗವಾದ ಪ್ರೀಮಿಯಮ್ SUV ಯ ಪ್ಲಗ್-ಇನ್ ಹೈಬ್ರಿಡ್ ರೂಪವಾಗಿದೆ.
ಲಂಬೋರ್ಗಿನಿ URUS SE: ಎಕ್ಸ್ಟೀರಿಯರ್ ಮತ್ತು ಇಂಟೀರಿಯರ್
ಈ ಉರುಸ್ SE ಯು ಮೊದಲಿಗಿಂತ ಹೆಚ್ಚು ಸ್ಪೋಟಿ೯ ಲುಕ್ ಹೊಂದಿದ್ದು , ಉತ್ತಮ ಕಾರ್ಯಕ್ಷಮತೆಗಾಗಿ ಸುಧಾರಿತ ಏರೋಡೈನಾಮಿಕ್ಗಳನ್ನು ಸಹಾ ಹೊಂದಿರುತ್ತದೆ. ಈ ಬದಲಿ ವಿನ್ಯಾಸವು ಕಾರಿನ ಹಿಂಭಾಗದಲ್ಲಿ ಡೌನ್ಫೋರ್ಸ್ ಮತ್ತು ಕೂಲಿಂಗ್ಸಾಮರ್ಥ್ಯಗಳನ್ನು ಇನ್ನಷ್ಟು ಸುಧಾರಿಸಲು ಕೇಂದ್ರೀತವಾಗಿದೆ ಹಾಗೂ ನವೀಕರಿಸಿದ ವಿನ್ಯಾಸದಿಂದ ವಾಹನದ ಶೇಪ್ ಮತ್ತಷ್ಟು ಕ್ರಿಯಾತ್ಮಕವಾಗಿರುತ್ತದೆ.
Lamborghini URUS SE ಯು ಕೆಲವು ಹೊಸ ಫೀಚರ್ಗಳನ್ನು ಹೊಂದಿದು ನಾವು ಇದರಲ್ಲಿ ಹೊಸ ಫ್ಲೋಟಿಂಗ್ ಬೊನೆಟ್, ಮೆಟ್ರಿಕ್ಸ್ LED ತಂತ್ರಜ್ಞಾನವುಳ್ಳ ಹೆಡ್ಲೈಟ್ ಕ್ಲಸ್ಟರ್ಗಳು, ಪುನರ್ ವಿನ್ಯಾಸಿತ ಬಂಪರ್ ಮತ್ತು ಮುಂಭಾಗ ಗ್ರಿಲ್, ಹೊಸ ಹಿಂಭಾಗ ಡಿಫ್ಯೂಸರ್, ಸ್ಪಾಯ್ಲರ್ ಮತ್ತು ಲಂಬೋರ್ಗಿನಿ ಸೂಪರ್ ಸ್ಪೋರ್ಟ್ಸ್ ಕಾರುಗಳು ಮೇಲೆ ಪ್ರೇರಿತವಾದ ಹೊಸ ತಲಂಪ್ ಗ್ರಿಲ್ ಅನ್ನು ಕಾಣಬಹುದಾಗಿರುತ್ತದೆ
ಇದರೊಂದಿಗೆ, ಇದು 21, 22 ಮತ್ತು 23 ಇಂಚುಗಳ ಹೊಸ ಚಕ್ರ ವಿನ್ಯಾಸಗಳ ಪಿರೆಲ್ಲಿ P ಜೀರೋ ಟೈರ್ಗಳನ್ನು ಹೊಂದಿರುತ್ತದೆ ಹಾಗೂ 12.3 ಇಂಚಿನ ಸೆಂಟರ್ ಸ್ಕ್ರೀನ್ ಹೊಸ ಟೆಲೆಮೆಟ್ರಿ ವ್ಯವಸ್ಥೆಯನ್ನು ಸಹಾ ಹೊಂದಿದ್ದು ಇದರ ಸಹಾಯದಿಂದ ಇಂಧನವು ಹೇಗೆ ಬಳಕೆಯಾಗುತ್ತದೆ ಎಂಬುದನ್ನು ಮಾನಿಟರ್ ಮಾಡಬಹುದಾಗಿರುತ್ತದೆ.

URUS SE ಅನ್ನು ಇನ್ನಷ್ಟು ವಿಭಿನ್ನವಾಗಿ ತಮ್ಮ ವೈಯಕ್ತಿಕ ಅಭಿರುಚಿಗೆ ತಕ್ಕಂತೆ ಕಸ್ಟಮೈಸ್ ಮಾಡಲು ಬಯಸಿದರೆ ಹೆಚ್ಚಿನ ಶ್ರೇಣಿಯ ಆಯ್ಕೆಗಳಿದ್ದು ನೀವು ನಿಮ್ಮ ವಿಶೇಷ ಶ್ರೇಣಿಯ ಮತ್ತು ರುಚಿಗೆ ತಕ್ಕಂತೆ ನಿಮ್ಮ ವಾಹನವನ್ನು ವೈಯಕ್ತಿಕಗೊಳಿಸಬಹುದು.
ಉರುಸ್ SE ಯ ಒಳಗಿನ ವಿನ್ಯಾಸವು ಕಾರನ್ನು ಓಡಿಸುವಾಗ ವಿಮಾನದ ಫೈಲಟ್ ಅನುಭವವನ್ನು ನೀಡುವಂತಿದ್ದು, ಇದು ಕಾರಿನ ಡಿಜಿಟಲ್ ವ್ಯವಸ್ಥೆಯ ಬಳಕೆಯನ್ನು ಸುಧಾರಿಸುತ್ತದೆ, ಇಲಿ ನೀವು ಹೊಸ ಪ್ಯಾನಲ್ಗಳು ಮತ್ತು AC ವೆಂಟ್ಸ್ ಅನ್ನು ಕಾಣಬಹುದಾಗಿದ್ದು ಇವುಗಳಿಗಿಂತ ವಿಶೇಷವಾದ . ವೈಶಿಷ್ಟ್ಯವೆಂದರೆ ಹೊಸ 12.3 ಇಂಚಿನ ಸೆಂಟರ್ ಟಚ್ಸ್ಕ್ರೀನ್. ಇದು ಹಿಂದಿನ ಮಾದರಿಗಳ 10.1 ಇಂಚಿನ ಟಚ್ಸ್ಕ್ರೀನ್ ಗಿಂತ ದೊಡ್ಡದು. ಈ ಹೊಸ ಟಚ್ಸ್ಕ್ರೀನ್ ಲಂಬೋರೆಗಿನ್ನಿ ಶ್ರೇಣಿಯ ಇತ್ತೀಚಿನ ಲಾಂಬೋ ಸಾಫ್ಟ್ ವೇರ್ ನಿಂದ ಆಪರೇಟ್ ಮಾಡಲಾಗುತ್ತದೆ.
Lamborghini URUS SE: ಪವರ್ ಟ್ರೈನ್
ಲಂಬೋರ್ಗಿನಿ ಉರುಸ್ SE ಯ ಇತ್ತೀಚಿನ ಮಾದರಿಯು ಹೈಬ್ರಿಡ್ ಪವರ್ ಟ್ರೈನ್ ಅನ್ನು ಪರಿಚಯಿಸುತ್ತದೆ. 4.0-ಲೀಟರ್, ಟ್ವಿನ್-ಟರ್ಬೋಚಾರ್ಜ್ಡ್ V8 ಎಂಜಿನ್ ಮತ್ತು ಪ್ಲಗ್-ಇನ್ ಹೈಬ್ರಿಡ್ ಸೆಟಪ್ ಅನ್ನು ಹೊಂದಿರುವ ಈ ವಾಹನವು ಶಕ್ತಿ ಮತ್ತು ಕಾರ್ಯಕ್ಷಮತೆಯ ಮಿಶ್ರಣವಾಗಿರುತ್ತದೆ. ಇದು 25.9kWh ಲಿಥಿಯಂ-ಐಯಾನ್ ಬ್ಯಾಟರಿಯು ಮತ್ತು 8-ಸ್ಪೀಡ್ ಆಟೂಮೇಟಿಕ್ ಟ್ರಾನ್ಸಮಿಷನ್ ವಿದ್ಯುತ್ ಮಾದರಿ ಮೋಟಾರ್ ಒಳಗೊಂಡಿದ್ದು 800hp ಮತ್ತು 950Nm ಟಾರ್ಕ್ ಅನ್ನು ಉತ್ಪತ್ತಿ ಮಾಡುತ್ತದೆ, ಇದು ನಿಮಗೆ ಉಲ್ಲಾಸಕಾರಿ ಡ್ರೈವಿಂಗ್ ಅನುಭವವನ್ನು ನೀಡುತ್ತದೆ
ಲಂಬೋರ್ಗಿನಿಯ ಪ್ರಕಾರ, ಉರುಸ್ SE ಇಲೆಕ್ಟ್ರಿಕ್ ಪವರ್ ನಿಂದ ಸುಮಾರು 60 ಕಿ.ಮೀ. ದೂರವನ್ನು ಕ್ರಮಿಸುತ್ತದೆ.. ಈ SUV ಆಲ್ ವೀಲ್ ಡ್ರೈವ್ ಹೊಂದಿದ್ದು, 0 ರಿಂದ 100 kph 3.4 ಸೆಕೆಂಡುಗಳಲ್ಲಿ ಹೋಗಬಹುದು ಮತ್ತು 312 kph ಟಾಪ್ ಸ್ಪೀಡ್ ತಲುಪಬಹುದಾಗಿರುತ್ತದೆ. URUS SEಯು ನೂತನ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿರುವ ಕಾರಣ ಈ ಕಾರು , ಲಂಬೋರ್ಗಿನಿ URUS S( ಪ್ರಸ್ತುತ ₹ 4.18 ಕೋಟಿ )ಗಿಂತ ಹೆಚ್ಚು ದರವಾಗಿರಬಹುದು.
ಇದನ್ನೂ ಓದಿ: ಭಾರತದಲ್ಲಿ ವೆಸ್ಪಾ 946 ಡ್ರಾಗನ್ ಸ್ಕೂಟರ್ ಬಿಡುಗಡೆ, ಬೆಲೆ 14.27 ಲಕ್ಷ ರೂ